Kolkata rape and murder case: ಕೊಲ್ಕತ್ತಾ ಪ್ರಕರಣದ ನಂತ್ರ 6 ವರ್ಷದ ಮಗಳನ್ನು ನೆನೆದು ಒಂದು ಗಂಟೆ ಕಣ್ಣೀರಿಟ್ಟ ನಟ

Published : Aug 23, 2024, 11:07 AM ISTUpdated : Aug 23, 2024, 01:15 PM IST
Kolkata rape and murder case: ಕೊಲ್ಕತ್ತಾ ಪ್ರಕರಣದ ನಂತ್ರ 6 ವರ್ಷದ ಮಗಳನ್ನು ನೆನೆದು ಒಂದು ಗಂಟೆ ಕಣ್ಣೀರಿಟ್ಟ ನಟ

ಸಾರಾಂಶ

ಕೊಲ್ಕತ್ತಾದಲ್ಲಿ ನಡೆದ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ದೇಶವನ್ನೇ ಆತಂಕಕ್ಕೆ ತಳ್ಳಿದೆ. ಬಾಲಿವುಡ್ ಸ್ಟಾರ್ಸ್ ತಮ್ಮ ಆಕ್ರೋಶವನ್ನು ಹೊರ ಹಾಕ್ತಿದ್ದಾರೆ. ಈ ಮಧ್ಯೆ ನಟ ನೀಲ್ ನಿತಿನ್ ಮುಖೇಶ್, ಘಟನೆ ನೆನೆದು ಕಣ್ಣೀರಿಟ್ಟಿದ್ದಾರೆ.  

ಕೋಲ್ಕತ್ತಾ (Kolkata) ದಲ್ಲಿ ಯುವ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ (Rape and murder) ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿವರೆಗೆ ಎಲ್ಲರೂ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಲ್ಲದೆ, ಇಂಥ ಘಟನೆ ಮರುಕಳಿಸದಂತೆ ಸೂಕ್ತ ಕ್ರಮಕ್ಕೆ ಆಗ್ರಹ ಮಾಡ್ತಿದ್ದಾರೆ. ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿರುವುದು ಹೆಣ್ಣು ಹೆತ್ತ ಪಾಲಕರಲ್ಲಿ ಭಯ ಹುಟ್ಟುಹಾಕಿದೆ. ಹೆಣ್ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸಲು ಹೆದರುವ ಸ್ಥಿತಿ ಇದೆ.

ಕೊಲ್ಕತ್ತಾ ಘಟನೆಯನ್ನು ಬಾಲಿವುಡ್ ಸೆಲೆಬ್ರಿಟಿಗಳಾದ ಹೃತಿಕ್ ರೋಷನ್, ಕಂಗನಾ ರನೌತ್, ಆಲಿಯಾ ಭಟ್, ಅನುಷ್ಕಾ ಶರ್ಮಾ ಸೇರಿದಂತೆ ಅನೇಕ ಕಲಾವಿದರು ಖಂಡಿಸಿದ್ದಾರೆ. ಇದೀಗ ಈ ಬಗ್ಗೆ ನಟ ನೀಲ್ ನಿತಿನ್ ಮುಖೇಶ್ (Neil Nitin Mukesh) ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಲ್ಲದೆ ಅವರ ಆರು ವರ್ಷದ ಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನಟ ನೀಲ್ ನಿತಿನ್ ಮುಖೇಶ್, ಬುಜೋಕಾ ಸಂದರ್ಶನದ ವೇಳೆ  ಕೋಲ್ಕತ್ತಾದಲ್ಲಿ ನಡೆದ ಭೀಕರ ಘಟನೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮಗಳು ಮತ್ತೆ ಪತ್ನಿ ಮಾವನ ಮನೆಗೆ ಹೋಗಿದ್ದ ಸಮಯದಲ್ಲಿ ನೀಲ್ ನಿತಿನ್ ಮುಖೇಶ್ ಅವರಿಗೆ ಈ ಘಟನೆ ಬಗ್ಗೆ ಗೊತ್ತಾಗಿತ್ತು. ಮನೆಯಲ್ಲಿ ಒಬ್ಬರೇ ಇದ್ದ ಅವರು ಒಂದು ಗಂಟೆಗಳ ಕಾಲ ಅತ್ತಿದ್ದರು.

jitendra kumar : ಒಟಿಟಿ ಸೆನ್ಸೇಷನ್, ಐಐಟಿ ಪಾಸ್ ಪಂಚಾಯತ್ ನಟನ ನೆಟ್ ವರ್ತ್ ಎಷ್ಟು ಗೊತ್ತಾ?

ಕೊಲ್ಕತ್ತಾ ವೈದ್ಯ ಮೇಲೆ ಅತ್ಯಾಚಾರ ಹಾಗೂ ಹತ್ಯೆ ಸುದ್ದಿ ಕೇಳಿದ ನಾನು ಸಂಪೂರ್ಣ ಕುಸಿದು ಹೋಗಿದ್ದೆ. ನನ್ನನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗ್ಲಿಲ್ಲ. ಕಣ್ಣಲ್ಲಿ ನೀರು ಬರ್ತಾ ಇತ್ತು. ಈ ಆಘಾತದಿಂದ ಹೊರಗೆ ಬರಲು ಒಂದು ಗಂಟೆ ಬೇಕಾಯ್ತು. ಪತ್ನಿಗೆ ಕರೆ ಮಾಡಿ, ಅವಳ ಜೊತೆ ಮಾತನಾಡುವ ಪ್ರಯತ್ನ ಮಾಡಿದ್ದೆ ಎಂದು ನೀಲ್ ನಿತಿನ್ ಮುಖೇಶ್ ಹೇಳಿದ್ದಾರೆ. 

ನೀಲ್ ಒಬ್ಬ ತಂದೆಯಾಗಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ನಾನು ಭಾವನಾತ್ಮಕ ವ್ಯಕ್ತಿ. ಇತರ ತಂದೆಯಂತೆ ಮಗಳ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದೇನೆ. ಘಟನೆಯ ನಂತರ ನನ್ನ ಮಗಳು ನೂರ್ವಿಯ ಭವಿಷ್ಯದ ಬಗ್ಗೆ ಭಯಗೊಂಡಿದ್ದೆನೆ ಎಂದು ನೀಲ್ ಹೇಳಿದ್ದಾರೆ. ನನಗೆ ಮಗಳೆಂದ್ರೆ ಪ್ರಾಣ. ಅವಳ ಜೊತೆ ರೀಲ್ಸ್ ಮಾಡ್ತಿರುತ್ತೇನೆ. ಕೊಲ್ಕತ್ತಾ ಘಟನೆ ಕೇಳ್ತಿದ್ದಂತೆ ನನಗೆ ಮಗಳು ನೆನಪಾದ್ಲು. ಮುಂದೆ ಅವಳ ಭವಿಷ್ಯವೇನು, ಅವಳು ಏನಾಗ್ತಾಳೆ ಎಂಬ ಆತಂಕ ಕಾಡಿತ್ತು ಎಂದು ನೀಲ್ ನಿತಿನ್ ಹೇಳಿದ್ದಾರೆ. 

ಬಾಲಿವುಡ್ ನಟ ನೀಲ್ ನಿತಿನ್ ಮುಖೇಶ್, 2017ರಲ್ಲಿ ರುಕ್ಮಿಣಿ ಸಹಾಯ್ ಅವರನ್ನು ವಿವಾಹವಾಗಿದ್ದಾರೆ. ಸೆಪ್ಟೆಂಬರ್ 20, 2018 ರಂದು ಅವರಿಗೆ ಹೆಣ್ಣು ಮಗು ಜನಿಸಿದೆ. ನೀಲ್ ತಮ್ಮ ಮಗಳಿಗೆ ನೂರ್ವಿ ಎಂದು ಹೆಸರಿಟ್ಟಿದ್ದಾರೆ. ಮಗಳ ಜೊತೆ ಅನೇಕ ಫೋಟೋಗಳನ್ನು ನೀಲ್ ಹಂಚಿಕೊಳ್ತಿರುತ್ತಾರೆ. ಮಗಳ  ಮೇಲೆ ತಮಗಿರುವ ಪ್ರೀತಿಯನ್ನು ಅವರು ಸದಾ ವ್ಯಕ್ತಪಡಿಸ್ತಿರುತ್ತಾರೆ. ಸದ್ಯ 42ನೇ ವರ್ಷಕ್ಕೆ ಕಾಲಿಟ್ಟಿರುವ ನೀಲ್ ನಿತಿನ್, ಈವರೆಗೆ ಹತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಆದ್ರೂ ನೀಲ್ ಶ್ರೀಮಂತ ನಟರಲ್ಲಿ ಒಬ್ಬರು. ಅವರ ಒಟ್ಟು ನಿವ್ವಳ ಆದಾಯ ಆರು ಮಿಲಿಯನ್ ಡಾಲರ್ ಇದೆ. 11 ಕೋಟಿ ರೂಪಾಯಿ ಬೆಲೆ ಬಾಳುವ ಮನೆಯಲ್ಲಿ ಅವರು ವಾಸವಾಗಿದ್ದಾರೆ.

ಮಲಯಾಳಂ ಇಂಡಸ್ಟ್ರಿ ಕೊಳೆತು ಹೋಗಿಲ್ಲ ನಾವು ಒಳಗಿನಿಂದ ಚೆನ್ನಾಗಿದ್ದೀವಿ; 'ಮಿಲನಾ' ನಟಿ ಪಾರ್ವತಿ ಹೇಳಿಕೆ

ಕೊಲ್ಕತ್ತಾದಲ್ಲಿ ನಡೆದ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಮಾಹಿತಿ ಹೊರ ಬರ್ತಿದೆ. ಇದ್ರ ಜೊತೆ ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಅತ್ಯಾಚಾರ ನಿರಂತರವಾಗಿ ಹೆಚ್ಚಾಗ್ತಿದೆ. ಚಿಕ್ಕ ಬಾಲಕಿಯರಿಂದ ಹಿಡಿದು ವೃದ್ಧೆಯನ್ನು ಕೂಡ ಕಾಮುಕರು ಬಿಡ್ತಿಲ್ಲ. ಇದು ದೇಶದ ಜನರನ್ನು ಆತಂಕಕ್ಕೆ ತಳ್ಳಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?