ನಟಿ ಮಹಾಲಕ್ಷ್ಮಿ ಪತಿ ರವೀಂದರ್ ಚಂದ್ರಶೇಖರ್ ಅವರನ್ನು ಐಸಿಯುಗೆ ದಾಖಲು ಮಾಡಲಾಗಿದೆ. ಅವರಿಗೆ ಏಕಾಏಕಿ ಆಗಿದ್ದೇನು?
ಅತಿ ಹೆಚ್ಚು ಟ್ರೋಲ್ಗೆ ಒಳಗಾಗಿರುವ ದಂಪತಿ ಎಂದರೆ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravindra Chandrasekaran) ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ (Mahalakshmi). ಈಚೆಗಷ್ಟೇ ಇವರು ತಮ್ಮ ಪ್ರಥಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಮೊದಲ ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿ ಇರುವಾಗಲೇ ಈ ಜೋಡಿಗೆ ಶಾಕಿಂಗ್ ಎದುರಾಗಿತ್ತು. ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರನ್ನು ಇದಾಗಲೇ ಪೊಲೀಸರು ಅರೆಸ್ಟ್ ಮಾಡಿದ್ದು ಅವರು ಬಂಧನದಲ್ಲಿದ್ದರು. ಇವರ ವಿರುದ್ಧ ವಂಚನೆ ಆರೋಪ ದಾಖಲಾಗಿದೆ. ರವೀಂದರ್ ಚಂದ್ರಶೇಖರ್ ವಿರುದ್ಧ ಕೇಂದ್ರ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ. 15.83 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರವೀಂದರ್ ಚಂದ್ರಶೇಖರ್ ಪೊಲೀಸ್ ಅವರನ್ನು ಬಂಧಿಸಿದ್ದರು. ರವೀಂದರ್ ಅವರನ್ನು ಮದ್ರಾಸ್ ಹೈಕೋರ್ಟ್ ಐದು ಕೋಟಿ ರೂಪಾಯಿ ಶ್ಯೂರಿಟಿಯೊಂದಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಅವರೀಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಇದರ ಬೆನ್ನಲ್ಲೇ ಇದೀಗ ರವೀಂದರ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ತೀವ್ರ ಅನಾರೋಗ್ಯದಿಂದ ಅವರು ಬಳಲುತ್ತಿರುವ ಹಿನ್ನೆಲೆಯಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಕಳೆದೊಂದು ವಾರದಿಂದ ಅವರು ಐಸಿಯುನಲ್ಲಿಯೇ ಇರುವುದಾಗಿ ಹೇಳಲಾಗುತ್ತಿದೆ. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಉಸಿರಾಡಲು ರವೀಂದರ್ ಅವರಿಗೆ ಕಷ್ಟವಾಗುತ್ತಿದೆ. ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಅವರು ಮಾತನಾಡುತ್ತಿರುವ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಐದು ವರ್ಷ ಹಿರಿಯ ಬಾರ್ ಡ್ಯಾನ್ಸರ್, ನೈಟ್ ಗರ್ಲ್ ಜೊತೆ ಆರ್ಯನ್ ಡೇಟಿಂಗ್? ಈಕೆ ಬಾಲಿವುಡ್ ಹಾಟ್ ನಟಿ!
ರವೀಂದರ್ ಅವರ ತೂಕ ಹೆಚ್ಚಿರುವ ಕಾರಣ, ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಉಸಿರಾಡೋಕೆ ಕಷ್ಟವಾಗುತ್ತಿದೆ ಎಂದು ವರದಿಯಾಗಿದೆ. ಆಕ್ಸಿಜನ್ ಮಾಸ್ಕ್ ಸಮೇತ ಇರುವ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಅವರನ್ನು ಜೈಲಿನಲ್ಲಿ ಇಟ್ಟ ಸಮಯದಲ್ಲಿ, ಅಲ್ಲಿಯೂ ನೆಲದ ಮೇಲೆ ಕುಳಿತುಕೊಳ್ಳಲಾರದೇ ಉಸಿರಾಟದ ಸಮಸ್ಯೆ ಎದುರಿಸಿದ್ದರು. ಈ ಬಗ್ಗೆ ಮಹಾಲಕ್ಷ್ಮಿ ಮೀಡಿಯಾಗಳ ಮುಂದೆ ಹೇಳಿಕೊಂಡು ಕಣ್ಣೀರಿಟ್ಟಿದ್ದರು. ದೇಹದ ತೂಕದ ಕಾರಣ ರವೀಂದರ್ ಸಾಮಾನ್ಯರಂತೆ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ನೆಲದ ಮೇಲೆ ಕುಳಿತುಕೊಳ್ಳಲು ಸಹ ಸಾಧ್ಯವಿಲ್ಲ. ಹೀಗಾಗಿ ಜೈಲಿನಲ್ಲಿ ಸಾಕಷ್ಟು ಕಷ್ಟ ಕೂಡ ಅನುಭವಿಸಿದ್ದಾರೆ ಎಂದು ಖುದ್ದು ರವೀಂದರ್ ಅವರೇ ಹೇಳಿಕೊಂಡಿದ್ದು ಇದೆ, ಈ ಬಗ್ಗೆ ಮಹಾಲಕ್ಷ್ಮಿ ಕೂಡ ನೋವು ತೋಡಿಕೊಳ್ಳುತ್ತಲೇ ಇದ್ದಾರೆ.
ಅಂದಹಾಗೆ, ಈ ಜೋಡಿ 2022ರ ಸೆಪ್ಟೆಂಬರ್ನಲ್ಲಿ ಮದುವೆಯಾಗಿದೆ. ಇಬ್ಬರಿಗೂ ಇದು ಎರಡನೇ ಮದುವೆ ಆಗಿದೆ, ಮದುವೆಯಾದ ದಿನದಿಂದಲೂ ಈ ಜೋಡಿ ಸಕತ್ ಸದ್ದು ಮಾಡುತ್ತಲೇ ಇದೆ. ಸುಂದರಿಯಾಗಿರುವ ಮಹಾಲಕ್ಷ್ಮಿ, ಕಿರುತೆರೆ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಒರು ಕೈ ಒಸೈ, ವಾಣಿ ರಾಣಿ, ಆಫೀಸ್, ಚೆಲ್ಲಮೇ, ಉಥಿರಿಪೂಕ್ಕಳ್ ಇವರಿಗೆ ತುಂಬಾ ಹೆಸರು ತಂದುಕೊಟ್ಟಿವೆ. ಸದ್ಯ ಅವರ ಮಹಾರಸಿ ಎಂಬ ಧಾರಾವಾಹಿ ಕೂಡ ಪ್ರಸಾರವಾಗುತ್ತಿದೆ. ರವೀಂದರ್ ಚಂದ್ರಶೇಖರನ್ ಅವರು ‘ನಟ್ಪುನ ಎನ್ನಡು ಥೆರಿಯುಮ’, ‘ಮುರುಂಗೈಕೈ ಚಿಪ್ಸ್’, ‘ವಿಡಿಯುಮ್ ವಾರೈ ಕಾಥಿರು’ ಮುಂತಾದ ಸಿನಿಮಾಗಳನ್ನು ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಗಂಡಸ್ರಿಗೆ ಹೆಂಡ್ತಿಗಿಂತ ಬೇರೆಯವಳೇ ಬುದ್ಧಿವಂತೆ ಅನಿಸತ್ತಂತೆ! ಸತ್ಯ ಸೀರಿಯಲ್ ಲಕ್ಷ್ಮಣ ಹೇಳ್ತಿರೋದೇನು?