ಕತ್ರೀನಾ ಕೈಫ್ ಸಾಮಾನ್ಯವಾಗಿ ಶಾಂತವಾಗಿ, ನಗುಮುಖದಿಂದಲೇ ಇರುತ್ತಾರೆ. ಇದರ ಕ್ರೆಡಿಟ್ಟನ್ನು ಪತಿ ವಿಕ್ಕಿ ಕೌಶಲ್‌ಗೆ ನೀಡುವ ಆಕೆ, ಎಲ್ಲ ಜೋಡಿಗಳಿಗೆ ಸಂಬಂಧದಲ್ಲಿ ಮುಖ್ಯವಾಗಿ ಬೇಕಾಗಿರುವಂಥ ಟಿಪ್ ಒಂದನ್ನು ನೀಡಿದ್ದಾರೆ.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ 2021ರಲ್ಲಿ ವಿವಾಹವಾಗುವವರೆಗೆ ಪರಸ್ಪರರ ಬಗ್ಗೆ ಒಂದು ಮಾತನ್ನೂ ಹೇಳಲಿಲ್ಲ. ಡೇಟಿಂಗ್ ಮಾಡುತ್ತಿರುವ ವಿಷಯವನ್ನೂ ಬಿಟ್ಟುಕೊಡಲಿಲ್ಲ. ಈಗ ವಿವಾಹದ ಬಳಿಕ ಇಬ್ಬರಿಗೂ ಒಬ್ಬರ ಬಗ್ಗೆ ಮತ್ತೊಬ್ಬರು ಮಾತಾಡದಿರಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ.
ಕತ್ರಿನಾ ಮತ್ತು ವಿಕ್ಕಿ ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದವರು. ವಿಕ್ಕಿಯೇ ಹೇಳುವಂತೆ ಅವರದು ಪರಾಟಾ ವೆಡ್ಸ್ ಪಾನ್‌ಕೇಕ್ ಸಂಬಂಧ. ಹಾಗಿದ್ದೂ ಇಬ್ಬರೂ ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗುತ್ತಿರುವ ರೀತಿ ಬಹಳ ಚೆನ್ನಾಗಿದೆ. ಐಡಿಯಲ್ ಕಪಲ್ ಎನ್ನುವಂತೆ ಇಬ್ಬರೂ ಬದುಕುತ್ತಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ ಈ ಜೋಡಿ ಹಾಲು ಜೇನಿನಂತೆ ಹೊಂದಿಕೊಂಡಿದ್ದಾರೆ.
undefined
ಈ ಮಧ್ಯೆ ಕತ್ರೀನಾ ಕೈಫ್ ವಿಕ್ಕಿಯ ಒಂದು ವಿಶೇಷ ಸ್ವಭಾವದ ಬಗ್ಗೆ ಹೇಳಿದ್ದು, ಪ್ರತಿ ಹುಡುಗಿಯೂ ತನಗೆ ಇಂಥದೇ ಪಾರ್ಟ್‌ನರ್ ಸಿಗಲಿ ಎಂದು ಬಯಸುವಂತಿದೆ.
ಗಂಡಾಗಿದ್ದ ನಾ ಹೆಣ್ಣಾಗಿ ಬದಲಾದರೂ ಐಶ್ವರ್ಯಾ ರೈ ಅದೇ ಗೌರವದಿಂದ ನಡೆಸಿಕೊಂಡರು: ಫ್ಯಾಷನ್ ಡಿಸೈನರ್ ಸೈಶಾ
ಹೌದು, ಅವರ ಮುಂಬರುವ ಚಲನಚಿತ್ರ 'ಮೆರ್ರಿ ಕ್ರಿಸ್‌ಮಸ್'ನ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ, ಕತ್ರಿನಾ ಕೈಫ್‌ಗೆ ಅಭಿಮಾನಿಯೊಬ್ಬರು ಆಸಕ್ತಿದಾಯಕ ಪ್ರಶ್ನೆಯನ್ನು ಕೇಳಿದರು- 'ನೀವು ಪ್ರತಿ ಬಾರಿಯೂ ತುಂಬಾ ಶಾಂತ ಮತ್ತು ಸಂಯೋಜಿತ ರೀತಿಯಲ್ಲಿರುತ್ತೀರಿ. ನಿಮ್ಮ ವರ್ತನೆ ಮತ್ತು ಶಾಂತತೆಯನ್ನು ಪ್ರತಿ ಬಾರಿ ಹೇಗೆ ಕಾಪಾಡಿಕೊಳ್ಳುತ್ತೀರಿ?' ಎಂದು.
ಇದಕ್ಕೆ ಕತ್ರೀನಾ ಕೊಂಚವೂ ಸಮಯ ತೆಗೆದುಕೊಳ್ಳದೆ ಹೇಳಿದಳು- 'ನೀವು ಈ ಪ್ರಶ್ನೆಯನ್ನು ವಿಕ್ಕಿಗೆ ಕೇಳಬೇಕು. ಇಡೀ ದಿನ ಸಾಕೋ ಸಾಕೆನಿಸುವಷ್ಟು ಕೆಲಸ ಮಾಡಿ ಮನೆಗೆ ಹೋದ ಬಳಿಕ ನಾನು 45 ನಿಮಿಷಗಳ ಕಾಲ ವಿಕ್ಕಿಯ ಬಳಿ ಅನಿಸಿದ್ದನ್ನೆಲ್ಲ ಮಾತನಾಡುತ್ತೇನೆ. ಮತ್ತು ಕೆಲವೊಮ್ಮೆ ಮಧ್ಯೆ ಮಧ್ಯೆ ಅವನು, ನೀನು ತುಂಬಾ ವೇಗವಾಗಿ ಮಾತನಾಡುತ್ತಿದ್ದಿ ಮತ್ತು ನಿನ್ನ ಇಂಗ್ಲಿಷ್ ಆ್ಯಕ್ಸೆಂಟ್ ನನಗೆ ಅರ್ಥವಾಗಲಿಲ್ಲ ಎನ್ನುತ್ತಾನೆ. ಕಡೆಗೂ ನಾನು ಎಲ್ಲವನ್ನೂ ವ್ಯಕ್ತಪಡಿಸುತ್ತೇನೆ ಮತ್ತು ಅವನು ತುಂಬಾ ಪ್ರಾಮಾಣಿಕತೆ ಮತ್ತು ಸಮಾಧಾನದಿಂದ ನಾನು ಹೇಳುವುದನ್ನೆಲ್ಲ ಕೇಳುತ್ತಾನೆ. ನನ್ನ ಎದೆಯ ಮೇಲಿನ ಭಾರವೆಲ್ಲ ಅಲ್ಲಿಗೆ ಕರಗಿ ಹೋಗುತ್ತದೆ. ನಂತರ ನಾನು ಅದನ್ನು ಮರೆತುಬಿಡುತ್ತೇನೆ ಮತ್ತು ನಾನು ಶಾಂತವಾಗಿರುತ್ತೇನೆ.'
ಲಕ್ಸುರಿ ಹೋಟೇಲೇ ಇವರ ಮನೆ; ದಿನಕ್ಕೆ 11 ಸಾವಿರ ರೂಪಾಯಿ ಬಾಡಿಗೆ ನೀಡುತ್ತೆ ಈ ಚೀನಿ ಕುಟುಂಬ
ಹೌದಲ್ಲವೇ? ಯಾವಾಗ ತಲೆಯಾಡಿಸಬೇಕು, ಯಾವಾಗ ಮಾತಾಡಬೇಕು, ಯಾವಾಗ ಹೂಂ ಅನ್ನಬೇಕು ಎಂಬಂಥ ಸಂಗಾತಿ ಇದ್ದರೆ ಅದಕ್ಕಿಂತ ಮತ್ತಿನ್ನೇನು ಬೇಕು?
ಸಿಂಪಲ್ ಎನಿಸಬಹುದು, ಆದರೆ, ಹೀಗೆ ತಾನು ಮಾತಾಡುವುದನ್ನು ಸಮಾಧಾನದಿಂದ ಕೇಳಿಸಿಕೊಳ್ಳುವ ಹುಡುಗ ಸುಲಭವಾಗಿ ಸಿಗುವುದಿಲ್ಲ. ನೀವು ಕೂಡಾ ನಿಮ್ಮ ಪ್ರೀತಿಯ ಜೀವನ ಸುಂದರಗೊಳಿಸಬೇಕೆಂದಿದ್ದರೆ ಮೊದಲು ನಿಮ್ಮ ಸಂಗಾತಿ ಮಾತಾಡುವ ಮಾತುಗಳಿಗೆ ಕಿವಿ ಕೊಡಿ. ಮತ್ತಿನ್ನೇನೂ ಮಾಡುವುದು ಬೇಡ. ಅವರು ಅವರ ಆಂತರಿಕ ಹತಾಶೆ ಮತ್ತು ಕ್ರೋಧವನ್ನು ಹೊರಹಾಕುತ್ತಾರೆ. ಆಗ ನೀವು ಕೇಳಿಸಿಕೊಳ್ಳುವುದೇ ಒಂದು ಚಿಕಿತ್ಸೆಯಂತೆ ಕೆಲಸ ಮಾಡುತ್ತದೆ. ಇಷ್ಟಕ್ಕೂ ಕೌನ್ಸೆಲರ್‌ಗಳು ಕೂಡಾ ಮಾಡುವುದು ಇದನ್ನೇ- ನೀವು ಹೇಳುವುದನ್ನು ಕಿವಿಗೊಟ್ಟು ಕೇಳುತ್ತಾರೆ. ಅದನ್ನೇ ಸಂಗಾತಿಯೇ ಮಾಡಿದರೆ ಯಾರಿಗೂ ಕೌನ್ಸೆಲಿಂಗ್ ಅಗತ್ಯವೇ ಬೀಳುವುದಿಲ್ಲ.