ಸಂಗೀತ ಲೋಕದ ದಿಗ್ಗಜ, ಸಂಗೀತ ಮಾಂತ್ರಿಕ ಇಳಯರಾಜ ಹಾಗೂ ಕಾಲಿವುಡ್ ನಟ ಕಮಲ್ ಹಾಸನ್(Kamal Haasan and Iayaraja) ಕೆಜಿಎಫ್-2 ಸಿನಿಮಾವನ್ನು ಒಟ್ಟಿಗೆ ಕುಳಿತು ವೀಕ್ಷಿಸಿದ್ದಾರೆ. ಚೆನ್ನೈನಲ್ಲಿ ಇಬ್ಬರು ಸಿನಿಮಾ ನೋಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ಯಾನ್ ಇಂಡಿಯಾ ಸ್ಟಾರ್ ರಾಕಿಂಗ್ ಸ್ಟಾರ್ ಯಶ್(Yash) ಅಭಿನಯದ ಕೆಜಿಎಫ್-2(KGF 2) ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿ ಬೀಗುತ್ತಿರುವ ಕೆಜಿಎಫ್-2 1000 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಭಾರತದ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾಗಳ ಲಿಸ್ಟ್ ಸೇರಿದೆ. ಸದ್ಯ ಸಿನಿಮಾ ಬಿಡುಗಡೆಯಾಗಿ 16 ದಿನಗಳಾಗಿದ್ದು ಈಗಲೂ ಅಭಿಮಾನಿಗಳು ಮುಗಿಬುದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಸಿನಿಮಾ ರಿಲೀಸ್ ಆಗಿ ಇಷ್ಟು ದಿನವಾದರೂ ಅಭಿಮಾನಿಗಳಲ್ಲಿ ಮಾತ್ರ ಸಿನಿಮಾದ ಕ್ರೇಜ್ ಇನ್ನೂ ಕಡಿಮೆ ಆಗಿಲ್ಲ.
ಕೆಜಿಎಫ್-2 ಸಿನಿಮಾ ನೋಡಲು ಸಿನಿ ಪ್ರೇಕ್ಷಕರು ಥಿಯೇಟರ್‌ನತ್ತ ಮುಖ ಮಾಡುತ್ತಿದ್ದಾರೆ. ಇನ್ನು ಕೆಜಿಎಫ್-2 ಸಿನಿಮಾ ನೋಡಿ ಅನೇಕ ಗಣ್ಯರು ಹಾಡಿಹೊಗಳಿದ್ದಾರೆ. ಪರಭಾಷೆಯ ಸಿನಿ ಸ್ಟಾರ್ ಗಳಿಂದನೂ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಮ್ ಚರಣ್, ಅಲ್ಲು ಅರ್ಜುನ್, ಪ್ರಭಾಸ್ ಸೇರಿದಂತೆ ಅನೇಕ ಗಣ್ಯರು ಸಿನಿಮಾ ನೋಡಿ ಹೊಗಳಿದ್ದಾರೆ. ಇದೀಗ ಸಂಗೀತ ಲೋಕದ ದಿಗ್ಗಜ, ಸಂಗೀತ ಮಾಂತ್ರಿಕ ಇಳಯರಾಜ ಹಾಗೂ ಕಾಲಿವುಡ್ ನಟ ಕಮಲ್ ಹಾಸನ್(Kamal Haasan and Iayaraja) ಕೆಜಿಎಫ್-2 ಸಿನಿಮಾವನ್ನು ಒಟ್ಟಿಗೆ ಕುಳಿತು ವೀಕ್ಷಿಸಿದ್ದಾರೆ.
ಗುಣಮಟ್ಟದ ಸಿನಿಮಾ ಮಾಡಿ, KGF 2 ಹಾಗೆ ಚೆನ್ನಾಗಿ ಓಡುತ್ತೆ; ಚಿತ್ರರಂಗಕ್ಕೆ ಸಿಎಂ ಬೊಮ್ಮಾಯಿ ಸಲಹೆ
ಇಳಿಯರಾಜ ಮತ್ತು ಕಮಲ್ ಹಾಸನ್ ಅವರಿಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಚೆನ್ನೈನಲ್ಲಿ ಇಬ್ಬರು ಒಟ್ಟಿಗೆ ಕುಳಿತು ರಾಕಿಂಗ್ ಸ್ಟಾರ್ ನಟನೆಯ ಕೆಜಿಎಫ್-2 ಸಿನಿಮಾ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಇಬ್ಬರು ಒಟ್ಟಿಗೆ ಕುಳಿತು ಸಿನಿಮಾ ವೀಕ್ಷಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
KGF 2 ಬಳಿಕ ಮತ್ತೊಂದು ಸೌತ್ ಸ್ಟಾರ್ ಸಿನಿಮಾದಲ್ಲಿ ಅಧೀರ; ದಕ್ಷಿಣದಲ್ಲಿ ಹೆಚ್ಚಿದ ಸಂಜಯ್ ದತ್ ಬೇಡಿಕೆ
ಅಂದಹಾಗೆ ಈ ಮೊದಲು ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ವೀಕ್ಷಿಸಿ ಮೆಚ್ಚಿಕೊಂಡಿದ್ದರು. ಅಲ್ಲದೇ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದರು. ಇದೀಗ ಕಮಲ್ ಹಾಸನ್ ಮತ್ತು ಇಳಿಯರಾಜ ಒಟ್ಟಿಗೆ ಸಿನಿಮಾ ವೀಕ್ಷಿಸಿ ರಾಕಿ ಭಾಯ್‌ನನ್ನು ತೆರೆಮೇಲೆ ನೋಡಿ ಎಂಜಾಯ್ ಮಾಡಿದ್ದಾರೆ.
Maestro & watched at a special screening in pic.twitter.com/q85exz4nYD
— Sreedhar Pillai (@sri50)ಕೆಜಿಎಫ್-2 ಹಿಂದಿಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಕೆಜಿಎಫ್-2 ಕಲೆಕ್ಷನ್‌ಗೆ ಬಾಲಿವುಡ್ ಮಂದಿ ಕಂಗಾಲಾಗಿದ್ದಾರೆ. ಬಾಲಿವುಡ್ ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ದಕ್ಷಿಣ ಮೊದಲ ಸಿನಿಮಾ ಎನ್ನುವ ಖ್ಯಾತಿ ಸಹ ಗಳಿಸಿದೆ. ಅಲ್ಲದೆ ಘಟಾನುಘಾಟಿ ಸ್ಟಾರ್ ನಟರನ್ನು ಹಿಂದಿಕ್ಕಿ ಕೆಜಿಎಫ್-2 ಬಾಲಿವುಡ್ ನಲ್ಲಿ ಗೆದ್ದು ಬೀಗುಚ್ಚಿದೆ. ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ, ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. 2 ವಾರದ ಬಳಿಕವೂ ಕೆಜಿಎಫ್2 ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ.