ವಂಚನೆ ಆರೋಪ; ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

Published : Apr 29, 2022, 10:36 AM ISTUpdated : Apr 29, 2022, 01:49 PM IST
ವಂಚನೆ ಆರೋಪ; ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

ಸಾರಾಂಶ

ವಂಚನೆ ಆರೋಪದಡಿ ಸ್ಯಾಂಡಲ್ ವುಡ್ ನಿರ್ದೇಶಕ ಅರವಿಂದ್ ಕೌಶಿಕ್(Aravind Kaushik) ಅವರನ್ನು ಬಂಧಿಸಲಾಗಿದೆ. ಬೆಂಗಳೂರಿನ ವೈಯಾಲಿಕಾವಲ್​ ಠಾಣೆ ಪೊಲೀಸರು(Vyalikaval police) ಬಂದಿಸಿದ್ದಾರೆ. ಧಾರಾವಾಹಿ ನಿರ್ಮಾಪಕನಿಂದ ಹಣ ಪಡೆದು ವಂಚನೆ ಮಾಡಿದ್ದಾರೆ ಎನ್ನುವ ಆರೋಪ ನಿರ್ದೇಶಕ ಅರವಿಂದ್ ವಿರುದ್ಧ ಕೇಳಿಬಂದಿದೆ.  

ವಂಚನೆ ಆರೋಪದಡಿ ಸ್ಯಾಂಡಲ್ ವುಡ್ ನಿರ್ದೇಶಕ ಅರವಿಂದ್ ಕೌಶಿಕ್(Aravind Kaushik) ಅವರನ್ನು ಬಂಧಿಸಲಾಗಿದೆ. ಬೆಂಗಳೂರಿನ ವೈಯಾಲಿಕಾವಲ್​ ಠಾಣೆ ಪೊಲೀಸರು(Vyalikaval police) ಬಂದಿಸಿದ್ದಾರೆ. ಧಾರಾವಾಹಿ ನಿರ್ಮಾಪಕನಿಂದ ಹಣ ಪಡೆದು ವಂಚನೆ ಮಾಡಿದ್ದಾರೆ ಎನ್ನುವ ಆರೋಪ ನಿರ್ದೇಶಕ ಅರವಿಂದ್ ವಿರುದ್ಧ ಕೇಳಿಬಂದಿದೆ. ಅರವಿಂದ ಕೌಶಿಕ್ ಕಿರುತೆರೆ, ಬೆಳ್ಳಿತೆರೆಯಲ್ಲೂ ನಿರ್ದೇಶನ ಮಾಡಿದ್ದರು. ನಮ್ ಏರಿಯಾಲ್ ಒಂದಿನ, ಹುಲಿರಾಯ, ಶಾರ್ದೂಲ, ತುಘಲಕ್​ ಸಿನಿಮಾಗಳಿಗೆ ಅರವಿಂದ್ ಕೌಶಿಕ್ ಆಕ್ಷನ್ ಕಟ್ ಹೇಳಿದ್ದರು.

ಸಿನಿಮಾ ಜೊತೆಗೆ ಅರವಿಂದ ಕೌಶಿಕ್ ಧಾರಾವಾಹಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ​ ಕಮಲಿ ಧಾರಾವಾಹಿಗೆ ಅರವಿಂದ್ ಕೌಶಿಕ್ ನಿರ್ದೇಶನ ಮಾಡಿದ್ದರು. ಅರವಿಂದ ಕೌಶಿಕ್​ ಈ ಧಾರಾವಾಹಿ ನಿರ್ದೇಶನ ಮಾಡುತ್ತಿದ್ದಾಗ ಈ ಧಾರಾವಾಹಿ ನಿರ್ಮಿಸಲು ನಿರ್ಮಾಪಕ ರೋಹಿತ್​ 73 ಲಕ್ಷ ಹಣ ಹೂಡಿದ್ದರು. 2018ರಲ್ಲಿ ಧಾರಾವಾಹಿ ನಿರ್ಮಾಣಕ್ಕೆ ರೋಹಿತ್ ಹಣ ಹೂಡಿದ್ದರು ಆದರೆ ಹಣ ಹಿಂದಿರುಗಿಸದೆ, ಲಾಭಾಂಶ ನೀಡದೆ ವಂಚಿಸಿದ್ದಾರೆ ಎಂದು ನಿರ್ಮಾಪಕ ರೋಹಿತ್ ವೈಯಾಲಿಕಾವಲ್​ ಠಾಣೆಗೆ ದೂರು ನೀಡಿದ್ದರು.

Gokak Murder Case: 9 ತಿಂಗಳ ಹಿಂದಿನ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್‌..!

ನಿರ್ದೇಶಕ ಅರವಿಂದ್ ವಿರುದ್ಧ​ ಐಪಿಸಿ ಸೆಕ್ಷನ್ 506, 420ರಡಿ ಪ್ರಕರಣ ದಾಖಲಿಸಿದ್ದು ಎಫ್ ಐ ಆರ್ ದಾಖಲಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್, 'ವೈಯಾಲಿಕಾವಲ್ ನಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ರೋಹಿತ್ ಎಂಬ ನಿರ್ಮಾಪಕರು ದೂರು ನೀಡಿದ್ದರು. ಖಾಸಗಿ ವಾಹಿನಿಯ ಧಾರಾವಾಹಿಯಲ್ಲಿ ಪ್ರೊಡಕ್ಷನ್ ಗೆ 75 ಲಕ್ಷ ರೂ ನೀಡಿದ್ದಾರೆ‌. ಅದರಿಂದ 1.36 ಕೋಟಿ ರೂ. ಹಣ ವಾಪಾಸ್ ಬರಬೇಕಿತ್ತು. ಈ ಸಂಬಂಧ ಮೂರು ಜನ ಆರೋಪಿಗಳು ಹಣ ವಾಪಾಸ್ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಲಾಭ ಕೊಡದೇ ವಂಚಿಸಿದ್ದಾರೆಂದು ಆರೋಪ ಮಾಡಿ ದೂರು ನೀಡಿದ್ದರು. ತನಿಖೆ ಮಾಡಿ ಸಾಕ್ಷಾದಾರ ಪರಿಶೀಲಿಸಿ ಓರ್ವರನ್ನು ಬಂಧಿಸಲಾಗಿದೆ. ಇನ್ನು ತನಿಖೆ ಮುಂದುವರೆದಿದೆ' ಎಂದು ಹೇಳಿದ್ದಾರೆ.

ಕಮಲಿ ಧಾರಾವಾಹಿ ಈಗಲೂ ಪ್ರಸಾರವಾಗುತ್ತಿದ್ದು ರಾಮ್ ಜಿ ನಿರ್ದೇಶನ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ ಕಮಲಿ ಧಾರಾವಾಹಿಗೆ ಅರವಿಂದ್ ಕೌಶಿಕ್ ಆಕ್ಷನ್ ಕಟ್ ಹೇಳಿದ್ದರು. ಅರವಿಂದ್ ಕೌಶಿಕ್ ಲಗ್ನಪತ್ರಿಕೆ ಎನ್ನುವ ಧಾರಾವಾಹಿಗೆ ಆಕ್ಷನ್ ಕಟ್ ಹೇಳಿದ್ದರು. ಆದರೆ ಈ ಧಾರಾವಾಹಿ ಕೂಡ ಪ್ರಾರಂಭದಲ್ಲೇ ನಿಂತು ಹೋಯಿತು. TRP ಇಲ್ಲದ ಕಾರಣ ಈ ಧಾರಾವಾಹಿಯನ್ನು ನಿಲ್ಲಿಸಲಾಯಿತು. ಈ ಧಾರಾವಾಹಿಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ  ಖ್ಯಾತಿಯ ಸಂಜನಾ ಮತ್ತು ಸೂಜರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆದರೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಈ ಧಾರಾವಾಹಿ ವಿಫಲವಾಯಿತು. ಸದ್ಯ ಅರವಿಂದ್ ಬಳಿ ಯಾವುದೇ ಪ್ರಾಜೆಕ್ಟ್ ವಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?