Dhanush enters Hollywood: ದಿ ಗ್ರೇ ಮ್ಯಾನ್ ಚಿತ್ರದಲ್ಲಿ ತಮಿಳು ನಟ ಧನುಷ್!

Suvarna News   | Asianet News
Published : Dec 13, 2021, 02:38 PM IST
Dhanush enters Hollywood: ದಿ ಗ್ರೇ ಮ್ಯಾನ್ ಚಿತ್ರದಲ್ಲಿ ತಮಿಳು ನಟ ಧನುಷ್!

ಸಾರಾಂಶ

ಅವೆಂಜರ್ಸ್: ಎಂಡ್‌ಗೇಮ್ ಚಿತ್ರದ ನಿರ್ದೇಶಕರ ಜೊತೆ ಹಾಲಿವುಡ್ ಸಿನಿಮಾ ಮಾಡುತ್ತಿರುವ ನಟ ಧನುಷ್. ಸೌತ್‌ ಸಿನಿ ಕ್ಷೇತ್ರಕ್ಕೆ ಹೆಮ್ಮೆ....

ತಮಿಳು ಚಿತ್ರರಂಗದ ಸರಳ ನಟ ಧನುಷ್ (Danush) ಹಲವು ವರ್ಷಗಳಿಂದ ಫಾರಿನ್ ಭಾಷೆ (Foreign Language) ಸಿನಿಮಾಗಳಲ್ಲಿ ಕೆಲಸ ಮಾಡಬೇಕು ಎಂದು ಕನಸು ಕಟ್ಟಿ ಕೊಂಡಿದ್ದರು. ಕನಸು ಇಷ್ಟು ಬೇಗ ನನಸು ಆಗುತ್ತದೆ ಎಂದು ಗೊತ್ತಿರಲಿಲ್ಲ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ. ಅವೆಂಜರ್ಸ್: ಎಂಡ್‌ಗೇಮ್ (Avengers: Endgame) ಚಿತ್ರದ ನಿರ್ದೇಶಕ ಆಂಥೋನಿ ಮತ್ತು ಜೋ ರುಸ್ಸೋ ಜೊತೆ ಕೆಲಸ ಮಾಡುವುದನ್ನು ಸಂತೋಷ ತಂದಿದೆ ಎಂದಿದ್ದಾರೆ.

ಇಡೀ ಓಟಿಟಿ (OTT) ಕ್ಷೇತ್ರ ಸಿನಿ ಪ್ರೇಮಿಗಳು ವೀಕ್ಷಿಸಲು ಬಯಸುತ್ತಿರುವ ದಿ ಗ್ರೇ ಮ್ಯಾನ್ (The Grey Man) ಹಾಲಿವುಡ್‌ ಸೀರಿಸ್‌ನಲ್ಲಿ ಧನುಷ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಧನುಷ್ ಸಮಗ್ರ ಪಾತ್ರ ವರ್ಗದ ಭಾಗವಾಗಿದ್ದಾರೆ. ರಿಯಾನ್ ಗೊಸ್ಲಿಂಗ್, ಕ್ರಿಸ್ ಇವಾನ್ಸ್‌, ಅನಾ ಡಿ ಅಮಾರ್ಸ್‌, ರೆಗೆ-ಜೀನ್ ಪೇಜ್, ಜೆಸ್ಸಿಕಾ ಹೆನ್ವಿಕ್, ಬಿಲ್ಲಿ ಬಾಬ್ ಥಾರ್ನ್‌ಟನ್ ಮತ್ತು ವ್ಯಾಗ್ನರ್ ಮೌರಾ ಈ ಚಿತ್ರದಲ್ಲಿ ನಟಿಸಲಿದ್ದಾರೆ. 

ಕೇವಲ 22 ವರ್ಷದ ಹುಡುಗನನ್ನು ಅಳಿಯನನ್ನಾಗಿ ಮಾಡಿಕೊಂಡ ರಜನಿಕಾಂತ್; ಕಾರಣ ಕೇಳಿ ಶಾಕ್!

'ಅತ್ರಂಗಿ ರೇ' (Atrangi Re) ಬಾಲಿವುಡ್ ಸಿನಿಮಾ ಪ್ರಚಾರಕ್ಕೆಂದು ಮುಂಬೈನಲ್ಲಿ (Mumbai) ಕಾಣಿಸಿಕೊಂಡಿರುವ ಧನುಷ್ ದಿ ಗ್ರೇ ಮ್ಯಾನ್ ಸಿನಿಮಾದ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ. 'ಈಗ ದಿ ಗ್ರೇ ಮ್ಯಾನ್ ಸಿನಿಮಾದ ಬಗ್ಗೆ ಮಾತನಾಡುವುದು ಕಷ್ಟ, ತುಂಬಾ ಬೇಗ ಮಾತನಾಡಿದಂತೆ ಅಗುತ್ತದೆ. ಆ ಟೀಂನೊಟ್ಟಿಗೆ ಕೆಲಸ ಮಾಡುವುದಕ್ಕೆ ಸಂತೋಷವಿದೆ. ಅವರೊಟ್ಟಿಗೆ ಎಷ್ಟೋ ಹೊಸ ವಿಚಾರಗಳನ್ನು ಕಲಿಯುತ್ತಿರುವೆ,' ಎಂದು ಪಿಟಿಐ ಜೊತೆ ಧನುಷ್ ಮಾತನಾಡಿದ್ದರು. 

ಎರಡು ಬಾರಿ ನ್ಯಾಷನಲ್ ಅವಾರ್ಡ್‌ (National Award Winner) ಪಡೆದುಕೊಂಡಿರುವ ನಟ ಧನುಷ್ ಈ ರೀತಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು ಎಂದು ಪ್ರಶ್ನೆ ಮಾಡಿದಾಗ ಕಲಾವಿದನಾಗಿ ಹೊಸ ಪ್ರಯತ್ನಗಳನ್ನು ಮಾಡಲು ಇಷ್ಟ ಪಡುವೆ, ಎಂದಿದ್ದರು. 'ಒಬ್ಬ ನಟನಾಗಿ ನಾನು ಸದಾ ಹೊಸ territoriesನ ಎಕ್ಸ್‌ಪ್ಲೋರ್ ಮಾಡಲು ಇಷ್ಟಪಡುತ್ತೇನೆ. ಆದರೆ ದಿ ಗ್ರೇ ಮ್ಯಾನ್ ಆಗುವುದರ ಬಗ್ಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಇದೊಂದು ಇಂಟ್ರೆಸ್ಟಿಂಗ್ ಅವಕಾಶ, ಇದರಿಂದ ನನಗೆ ಹೊಸ ಬಾಗಿಲುಗಳು ತೆರೆಯುತ್ತವೆ,' ಎಂದು ಧನುಷ್ ಹೇಳಿದ್ದಾರೆ. 

ಅಮಲಾ ಪೌಲ್‌ ವಿಚ್ಛೇದನಕ್ಕೆ ನಟ ಧನುಷ್ ಕಾರಣ!

'ನಾನು ನನ್ನ ವೃತ್ತಿ (Career) ಜೀವನವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿರುವೆ. ಆದರೆ ಅದು ಎಲ್ಲಿಗೆ ನಡೆಸಿಕೊಂಡು ಹೋಗುತ್ತದೋ, ಎಂದು ಆ ದೇವರಿಗೆ (God) ಬಿಟ್ಟಿದ್ದು.  ದೇವರು ಎಲ್ಲಿಗೆ ಕರೆದುಕೊಂಡು ಹೋಗುತ್ತಾನೋ ನಾನು ಅಲ್ಲಿಗೆ ಹೋಗುವೆ. ನನ್ನ ಕೈಯಲ್ಲಿ ಏನಿರುತ್ತವೆಯೋ ನಾನು ಅದನ್ನು ತುಂಬಾನೇ ಶ್ರದ್ಧೆಯಿಂದ ಮಾಡುವೆ. ನಾನು ಮಾಡುವುದರ ಪರಿಣಾಮ ಬೇರೆ ಇದ್ದರೆ, ನಾನು ಜೀವನದಲ್ಲಿ ಒಂದೇ ರೀತಿಯ ಫ್ಲೋನಲ್ಲಿ ಹೋಗುವೆ,' ಎಂದಿದ್ದರು ಧನುಷ್.

'ರುಸ್ಸೋ ಸಹೋದರರು ತುಂಬಾನೇ ದೊಡ್ಡ ಯಶಸ್ಸು ಕಂಡಿದ್ದಾರೆ. ಅವರು ಮಾಡಿರುವ ಕೆಲಸ ತುಂಬಾನೇ ಗ್ರೇಟ್. ಅವರ ಜೊತೆ ಕೆಲಸ ಮಾಡುವುದಕ್ಕೆ ನಾನು ಸದಾ ರೆಡಿಯಾಗಿರುವೆ,' ಎಂದು ಹೇಳಿರುವ ಧನುಷ್ ತಮ್ಮ ಬಾಲಿವುಡ್ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ ಎಂದಿದ್ದಾರೆ. ಅತ್ರಾಂಗಿ ರೇ ಸಿನಿಮಾ ಪ್ರಚಾರದಲ್ಲಿ ಸಾರಾ ಅಲಿ ಖಾನ್ ಮತ್ತು ಧನುಷ್ ಬ್ಯುಸಿಯಾಗಿದ್ದಾರೆ. ಧನುಷ್ ಸೋಷಿಯಲ್ ಮೀಡಿಯಾ ಬಳಸುವುದು ಕಡಿಮೆಯೇ. ಆದರೆ ಸಾರಾ ಅಲಿ ಖಾನ್ (Sara Ali Khan) ಮಾತ್ರ ಸಣ್ಣ ಪುಟ್ಟ ವಿಚಾರಗಳನ್ನು ಬಿಡದೇ ಪ್ರಚಾರ ಮಾಡುತ್ತಿದ್ದಾರೆ. ಧನುಷ್, ಸಾರಾ ಮತ್ತು ಅಕ್ಷಯ್ ಕುಮಾರ್ (Akshay Kumar) ಒಟ್ಟಿಗೆ ನಟಿಸಿದ್ದಾರೆ, ಈ ಸಿನಿಮಾ ಡಿಸೆಂಬರ್ 24ರಂದು ಬಿಡುಗಡೆಯಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?