
ಕಂಗನಾ ರಣಾವತ್(Kangana Ranaut) ನವವಿವಾಹಿತ ಜೋಡಿ ಕತ್ರಿನಾ ಕೈಫ್(Katrina Kaif) ಮತ್ತು ವಿಕ್ಕಿ ಕೌಶಲ್ ಅವರಿಂದ ಸಿಹಿತಿಂಡಿಗಳ ಬಾಕ್ಸ್ ಸ್ವೀಕರಿಸಿದ್ದಾರೆ. ನಟಿ ತನ್ನ ಇನ್‌ಸ್ಟಾಗ್ರಾಮ್(Instagram) ಸ್ಟೋರೀಸ್‌ಯಲ್ಲಿ ಪ್ಯಾಕ್ ಮಾಡಿದ ಸಿಹಿತಿಂಡಿಗಳು, ಹೂವುಗಳು ಮತ್ತು ಅವಳ ಹೆಸರನ್ನು ಬರೆದಿರುವ ಟಿಪ್ಪಣಿಯನ್ನು ಒಳಗೊಂಡಿರುವ ಉಡುಗೊರೆ ಪೆಟ್ಟಿಗೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮಣಿಕರ್ಣಿಕಾ ನಟಿ ಪೆಟ್ಟಿಗೆಯಲ್ಲಿ ತುಪ್ಪದ ಲಡ್ಡೂಗಳಿರುವುದನ್ನು ಬಹಿರಂಗಪಡಿಸಿದ್ದಾರೆ. ಫೋಟೋವನ್ನು ಹಂಚಿಕೊಂಡ ಕಂಗನಾ, ನವವಿವಾಹಿತರಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರಿಂದ ರುಚಿಕರವಾದ ದೇಸಿ ತುಪ್ಪದ ಲಡ್ಡೂ ಸಿಕ್ಕಿದೆ. ಧನ್ಯವಾದಗಳು. ಶುಭಾಶಯಗಳು ಎಂದು ಬರೆದಿದ್ದಾರೆ.
ವಿಕ್ಕಿ ಮತ್ತು ಕತ್ರಿನಾ ಡಿಸೆಂಬರ್ 9 ರಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕತ್ರಿನಾ ಮತ್ತು ವಿಕ್ಕಿ ತಮ್ಮ ವಿವಾಹ ಸಮಾರಂಭದ ಚಿತ್ರಗಳನ್ನು ಒಂದೇ ರೀತಿಯ ಟಿಪ್ಪಣಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಕ್ಷಣಕ್ಕೆ ನಮ್ಮನ್ನು ಕರೆತಂದ ಎಲ್ಲದಕ್ಕೂ ನಮ್ಮ ಹೃದಯದಲ್ಲಿ ಪ್ರೀತಿ ಮತ್ತು ಕೃತಜ್ಞತೆ ಮಾತ್ರ ತುಂಬಿದೆ. ನಾವು ಈ ಹೊಸ ಪ್ರಯಾಣವನ್ನು ಒಟ್ಟಿಗೆ ಪ್ರಾರಂಭಿಸುತ್ತಿರುವಾಗ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದವನ್ನು ಬಯಸುತ್ತೇವೆ ಎಂದು ಅವರು ಬರೆದಿದ್ದರು.
ಕತ್ರೀನಾ ಮದುವೆ ಬಗ್ಗೆ ಕಂಗನಾ ಮಾತು, ನಿಮ್ಮದ್ಯಾವಾಗ ಎಂದ ಫ್ಯಾನ್ಸ್
ಕಂಗನಾ ಅವರು ತಮಗಿಂತ ಚಿಕ್ಕ ವಯಸ್ಸಿನ ಪುರುಷರನ್ನು ಮದುವೆಯಾಗುವ ಮೂಲಕ 'ಸೆಕ್ಸಿಸ್ಟ್ ರೂಢಿಗಳನ್ನು ಮುರಿಯುತ್ತಿರುವ ಸಿನಿಮಾ ಉದ್ಯಮದ ಶ್ರೀಮಂತ ಮತ್ತು ಯಶಸ್ವಿ ನಾಯಕಿಯರನ್ನು ಶ್ಲಾಘಿಸಿ ಟಿಪ್ಪಣಿ ಬರೆದಿದ್ದರು.
ಅವರು ಕತ್ರಿನಾ ಮತ್ತು ವಿಕ್ಕಿ ಹೆಸರನ್ನು ಉಲ್ಲೇಖಿಸದಿದ್ದರೂ, ಅವರು ಐದು ವರ್ಷಗಳ ವಯಸ್ಸಿನ ಅಂತರವನ್ನು ಹಂಚಿಕೊಂಡ ಕಾರಣ ದಂಪತಿಗಳನ್ನು ಉಲ್ಲೇಖಿಸುತ್ತಿರುವಂತೆ ತೋರುತ್ತಿದೆ. ಸಕ್ಸಸ್‌ಫುಲ್ ಶ್ರೀಮಂತ ಪುರುಷರು ತಮಗಿಂತ ಹೆಚ್ಚು ವಯಸ್ಸು ಚಿಕ್ಕವರಾದ ಮಹಿಳೆಯರನ್ನು ಮದುವೆಯಾಗುವ ಅನೇಕ ಕಥೆಗಳನ್ನು ನಾವು ಕೇಳಿದ್ದೇವೆ. ಮಹಿಳೆಯರು ತಮ್ಮ ಪತಿಗಿಂತ ಹೆಚ್ಚು ಯಶಸ್ವಿಯಾಗುವುದು ದೊಡ್ಡ ಚರ್ಚೆ ವಿಷಯ ಎಂದು ನೋಡಲಾಗಿದೆ. ನಿರ್ದಿಷ್ಟ ವಯಸ್ಸಿನ ನಂತರ ಕಿರಿಯ ಪುರುಷನನ್ನು ಮದುವೆಯಾಗುವುದೇನೂ ಹೆಣ್ಮಕ್ಕಳ ಮದುವೆಯೇ ಇಲ್ಲ ಎಂಬಂತಿತ್ತು. ಭಾರತೀಯ ಚಲನಚಿತ್ರೋದ್ಯಮದ ಶ್ರೀಮಂತ, ಯಶಸ್ವಿ, ಪ್ರಮುಖ ಮಹಿಳೆಯರು ಸೆಕ್ಸಿಸ್ಟ್ ರೂಢಿಗಳನ್ನು ಮುರಿಯುವುದನ್ನು ನೋಡುವುದಕ್ಕೆ ಸಂತೋಷವಾಗುತ್ತದೆ. ಲಿಂಗ ಸ್ಟೀರಿಯೊಟೈಪ್‌ಗಳನ್ನು ಪುರುಷರು ಮತ್ತು ಮಹಿಳೆಯರು ಮರುವ್ಯಾಖ್ಯಾನಿಸುತ್ತಿದ್ದಾರೆ ಎಂದು ವಿಕ್ಕಿ ಮತ್ತು ಕತ್ರಿನಾ ಮದುವೆಗೆ ಕೇವಲ ಒಂದು ದಿನ ಮುಂಚಿತವಾಗಿ ಕಂಗನಾ ಅವರು ತಮ್ಮ ಇನ್‌ಸ್ಟಾಗ್ರಾಮ್(Instagram) ಸ್ಟೋರಿಯಲ್ಲಿ ಬರೆದಿದ್ದಾರೆ. 38 ವರ್ಷದ ಕತ್ರಿನಾ ಕೈಫ್ ಡಿಸೆಂಬರ್ 9 ರಂದು 33 ವರ್ಷದ ವಿಕ್ಕಿ ಕೌಶಲ್ ಅವರನ್ನು ಮದುವೆಯಾಗುತ್ತಿದ್ದಾರೆ ಎಂದು ಅವರು ಬರೆದಿದ್ದರು.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇಂದು ರಾಜಸ್ಥಾನದ ರಾಜಮನೆತನದ ಕೋಟೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಅದ್ಧೂರಿ ವಿವಾಹ ಈಗಾಗಲೇ ಚರ್ಚೆಯ ವಿಷಯ. ಅವರ ಮದುವೆಯ ಬಗ್ಗೆ ಸಾಕಷ್ಟು ದೃಢೀಕರಿಸದ ಸುದ್ದಿಗಳು ಬರುತ್ತಲೇ ಇವೆ. ನಟಿ ಮದುವೆಯ ಒಟ್ಟ ವೆಚ್ಚದಲ್ಲಿ 75 ಶೇಕಡ ಪಾವತಿಸುತ್ತಿದ್ದಾರೆ ಎನ್ನಲಾಗಿದೆ.
ವರದಿಯ ಪ್ರಕಾರ, ರಾಜಸ್ಥಾನದ ಸವಾಯಿ ಮಾಧೋಪುರದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಮದುವೆಯ ಸ್ಥಳವನ್ನು ಉಚಿತವಾಗಿ ನೀಡಲಾಗಿದೆ ಎಂದು ಹೇಳಲಾಗುತ್ತದೆ. ಈ ಹೈ ಪ್ರಫೈಲ್ ಮದುವೆಯಿಂದ ಮುಂಚಿನ ವರ್ಷಗಳಲ್ಲಿ ಸಿಗುವ ಪ್ರಚಾರದ ಬಗ್ಗೆ ಮಾಲೀಕರು ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಇದು ರೆಸಾರ್ಟ್ ಲಾಭಕ್ಕೆ ಉತ್ತೇಜನಕ್ಕೆ ಕಾರಣವಾಗುತ್ತದೆ. ಆದರೂ ಕತ್ರಿನಾ ಎಲ್ಲಾ ಅತಿಥಿಗಳ ಪ್ರಯಾಣ ವೆಚ್ಚ, ಭದ್ರತಾ ವ್ಯವಸ್ಥೆಗಳು ಮತ್ತು ಇತರ ಅನುಬಂಧಗಳು ಸೇರಿದಂತೆ ಉಳಿದ ವೆಚ್ಚಗಳಿಗೆ ಹೆಚ್ಚಿನ ಚೆಕ್‌ಗಳಿಗೆ ಸಹಿ ಹಾಕುತ್ತಿದ್ದಾರೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.