Case Against Samantha: ಸಮಂತಾ ಡ್ಯಾನ್ಸ್ ವಿರುದ್ಧ ಪುರುಷರ ಸಂಘದಿಂದ ಕೇಸ್

By Suvarna News  |  First Published Dec 13, 2021, 12:59 PM IST

Case Againts Samantha: ಸಮಂತಾ ರುಥ್ ಪ್ರಭು ವಿರುದ್ಧ ಕೇಸ್ ದಾಖಲಿಸಲಾಗಿದೆ. ಹೌದು. ಪುಷ್ಪ ಸಿನಿಮಾದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ ನಟಿಗೆ ಈಗ ತೊಂದರೆ ಶುರುವಾಗಿದೆ.


ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್(Allu Arjun) ಮತ್ತು ರಶ್ಮಿಕಾ ಮಂದಣ್ಣ(Rashmika Mandanna) ಅಭಿನಯದ ಬಹುನಿರೀಕ್ಷಿತ ಸಿನಿಮಾ ಪುಷ್ಪ: ದಿ ರೈಸ್ ಡಿಸೆಂಬರ್ 17 ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಸಿನಿಮಾ ಕೆಲವು ಕೆಟ್ಟ ಕಾರಣಗಳಿಂದಾಗಿ ಈಗ ಮುಖ್ಯಾಂಶಗಳಲ್ಲಿ ಸುದ್ದಿಯಾಗುತ್ತಿದೆ. ವರದಿಗಳ ಪ್ರಕಾರ ಪುರುಷರ ಸಂಘದಿಂದ ಸಮಂತಾ ಅವರ ಸ್ಪೆಷಲ್ ಡ್ಯಾನ್ಸ್ ನಂಬರ್ ಊ ಅಂತಾವಾ ವಿರುದ್ಧ ಕೇಸ್(Case) ದಾಖಲಿಸಲಾಗಿದೆ. ವರದಿಯ ಪ್ರಕಾರ ಅದರ ಸಾಹಿತ್ಯ ಮತ್ತು ದೃಶ್ಯಗಳ ಮೂಲಕ ಪುರುಷರನ್ನು ಕಾಮಪ್ರಚೋದಕವಾಗಿ ಚಿತ್ರಿಸುವುದಕ್ಕಾಗಿ ಹಾಡಿನ ವಿರುದ್ಧ ಮೊಕದ್ದಮೆ ಹೂಡಲಾಗಿದೆ.

ಪುರುಷರ ಸಂಘವು ಆಂಧ್ರಪ್ರದೇಶದ(Aandhra Pradesh) ನ್ಯಾಯಾಲಯದಲ್ಲಿ ಹಾಡನ್ನು ನಿಷೇಧಿಸುವಂತೆ ಒತ್ತಾಯಿಸಿದ್ದು, ನ್ಯಾಯಾಲಯವು ಪ್ರಕರಣವನ್ನು ಇತ್ಯರ್ಥಪಡಿಸಲು ಬಾಕಿಯಿದೆ. ಇದು ಸಮಂತಾ ರುತ್ ಪ್ರಭು ಅವರ ಮೊದಲ ಸ್ಪೆಷಲ್ ಡ್ಯಾನ್ಸ್. ದುರದೃಷ್ಟವಶಾತ್, ಅದರ ಸಾಹಿತ್ಯ ಮತ್ತು ದೃಶ್ಯಗಳಿಂದಾಗಿ ಇದು ವಿವಾದಕ್ಕೆ ಸಿಲುಕಿದೆ.

Tap to resize

Latest Videos

undefined

ಬಹು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಹಾಡನ್ನು ದೇವಿ ಶ್ರೀ ಪ್ರಸಾದ್ ರಚಿಸಿದ್ದು, ಸಾಹಿತ್ಯವನ್ನು ವಿವೇಕ ಮತ್ತು ಚಂದ್ರಬೋಸ್ ಬರೆದಿದ್ದಾರೆ.

ಪುಷ್ಪ ಚಿತ್ರದ ಸ್ಪೆಷಲ್ ಹಾಡಿಗೆ ಹಾಟ್ ಆಗಿ ಸೊಂಟ ಬಳುಕಿಸಿದ ಸಮಂತಾ

ಪುಷ್ಪ: ದಿ ರೈಸ್ ಅನ್ನು ಮುತ್ತಂಶೆಟ್ಟಿ ಮೀಡಿಯಾ ಸಹಯೋಗದಲ್ಲಿ ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದೆ. ಮಲಯಾಳಂ ಹಾರ್ಥ್ರೋಬ್ ಫಹಾದ್ ಫಾಸಿಲ್ ಮುಖ್ಯ ವಿಲನ್ ಆಗಿ ನಟಿಸಿದ್ದಾರೆ. ಪುಷ್ಪಾ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ದೂರದ ಭಾಗಗಳಲ್ಲಿ ಕೆಂಪು ಚಂದನದ ಕಳ್ಳಸಾಗಣೆಯ ಕುರಿತಾದ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದೆ.

ಇದೇ ಡಿಸೆಂಬರ್ 17 ರಂದು ಬಿಡುಗಡೆಯಾಗಲಿರುವ ಈ ಸಿನಿಮಾದ ಐಟಂ ಸಾಂಗ್ ಬಿಡುಗಡೆಯಾಗಿದೆ. ಅದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ 'ಊ ಅಂತಾವಾ ಮಾವಾ.. ಊಊ ಅಂತಾವಾ ಮಾವಾ' (Oo Antava..Oo Oo Antava) ಎಂಬ ಸಾಲಿನ ಲಿರಿಕಲ್ ಹಾಡು ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 2 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದು ಮುನ್ನುಗುತ್ತಿದೆ.

ಈ  ಐಟಂ ಸಾಂಗ್​ಗೆ ಸಿನಿಮಂದಿಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಟಾಲಿವುಡ್ ನಟಿ ಸಮಂತಾ (Samantha) ನೀಲಿ ಬಣ್ಣದ ಉಡುಗೆ ತೊಟ್ಟು ಸಖತ್ ಆಗಿ ಸೊಂಟ ಬಳುಕಿಸಿದ್ದಾರೆ. ವಿಶೇಷವಾಗಿ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಸೆಟ್‌ನಲ್ಲಿ ಈ ವರ್ಷದ ರಾಕಿಂಗ್ ಹಾಡಿಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಸಮಂತಾ ಹೆಜ್ಜೆ ಹಾಕಿದ್ದಾರೆ. ಈ ಪೆಪ್ಪಿ ಹಾಡಿಗೆ ಬಾಲಿವುಡ್‌ನ ಹೆಸರಾಂತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ (Ganesh Acharya) ನೃತ್ಯ ಸಂಯೋಜಿಸಿದ್ದಾರೆ. ಇಂದ್ರಾವತಿ ಚೌಹಾಣ್ (Indravathi Chauhan) ದನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಚಂದ್ರಬೋಸ್ (Chandrabose) ಸಾಹಿತ್ಯ ಬರೆದಿದ್ದಾರೆ. ದೇವಿ ಶ್ರೀ ಪ್ರಸಾದ್‌ (Devi Sri Prasad) ಸಂಗೀತದ ಕಿಕ್ ಈ ಪೆಪ್ಪಿ ಹಾಡಿಗಿದೆ.

ನಾಗ ಚೈತನ್ಯ ಅವರಿಂದ ವಿಚ್ಚೇದನೆ ಪಡೆದು ಲಾಂಗ್ ಗ್ಯಾಪ್ ಕೊಟ್ಟ ನಂತರ ನಟಿ ಬ್ಯಾಕ್ ಟು ವರ್ಕ್ ಆಗಿದ್ದಾರೆ. ಹೌದು. ವಿಚ್ಚೇದನೆ ನಂತರ ನಟಿ ಚಾರ್ ದಮ್ ಯಾತ್ರಾ, ದುಬೈ ಟ್ರಿಪ್ ಅಂತ ವೆಕೇಷನ್‌ನಲ್ಲಿ ಬ್ಯುಸಿಯಾಗಿದ್ದರು. ಆದರೆ ಈಗ ಮತ್ತೆ ಕೆಲಸ ಶುರುಮಾಡಿದ್ದಾರೆ. ನಟಿ ಹರಿ ಹಾಗೂ ಹರೀಶ್ ಜೊತೆ ತಮ್ಮ ಮುಂದಿನ ಬಹುಭಾಷಾ ಸಿನಿಮಾ ಓಕೆ ಮಾಡಿದ್ದು ಇದಕ್ಕೆ ಯಶೋದ ಎಂಬ ಟೈಟಲ್ ಕೂಡಾ ಓಕೆ ಮಾಡಲಾಗಿದೆ. ಈ ಪ್ಯಾನ್ ಇಂಡಿಯಾ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿಯಲ್ಲಿ ಬಿಡುಗಡೆಯಾಗುತ್ತಿದೆ.

"

click me!