ಮಗನನ್ನು ಪರಿಚಯಿಸಿದ ನಟಿ ಮಹಾಲಕ್ಷ್ಮಿ: ಮೊದಲ ಪತಿಯೂ ಜೊತೆಯಲ್ಲಿ!

By Suvarna News  |  First Published Jun 23, 2023, 5:38 PM IST

ಸದಾ ಟ್ರೋಲ್​ ಆಗುತ್ತಿದ್ದಾರೆ ರವೀಂದ್ರ ಚಂದ್ರಶೇಖರನ್  ಮತ್ತು ಮಹಾಲಕ್ಷ್ಮಿ ದಂಪತಿ. ಇದೀಗ ಮಹಾಲಕ್ಷ್ಮಿ ತಮ್ಮ ಮೊದಲ ಪತಿಯಿಂದ ಹುಟ್ಟಿದ ಮಗನನ್ನು ಪರಿಚಯಿಸಿದ್ದಾರೆ.
 


ಕಳೆದ ಏಳೆಂಟು ತಿಂಗಳಿನಿಂದ  ಅತಿ ಹೆಚ್ಚು ಟ್ರೋಲ್​ಗೆ ಒಳಗಾಗಿರುವ ದಂಪತಿ ಎಂದರೆ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravindra Chandrasekaran) ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ ( Mahalakshmi). ಕಳೆದ ಸೆಪ್ಟೆಂಬರ್ 1ರಂದು ತಿರುಪತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಾಗಿನಿಂದಲೂ ಇವರ ಮದುವೆ ವಿಚಾರಕ್ಕೆ ಬಹಳಷ್ಟು ಟ್ರೋಲ್​ ಆಗುತ್ತಲೇ ಇದ್ದಾರೆ.  ಎಲ್ಲಿ ನೋಡಿದರೂ ಇವರದ್ದೇ ವಿಷಯ.  ಈ ಜೋಡಿ ಏನೇ ಮಾಡಲಿ ಅದರ ಚರ್ಚೆ ಭಾರಿ ಜೋರಾಗಿ ನಡೆಯುತ್ತದೆ. ಇದಕ್ಕೆ ಕಾರಣ ಈ ಜೋಡಿಯ ಲುಕ್​. ಅತ್ಯಂತ ಸುಂದರಿಯಾಗಿರುವ ಮಹಾಲಕ್ಷ್ಮಿ ಅವರು, ತೀರಾ ದಪ್ಪ ಇರುವ ರವೀಂದರ್​ ಜೊತೆ ಮದುವೆಯಾಗಿದ್ದಾರೆ ಎನ್ನುವ ಕಾರಣಕ್ಕೆ  ಬಾಹ್ಯ ರೂಪ ನೋಡಿ ಟ್ರೋಲ್​ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿಯೂ ಮದುವೆಯಾಗದ ಹುಡುಗರು ಈ ಜೋಡಿಯನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದರೆ, ಹುಡುಗಿಯರು ಈಕೆ ಹಣಕ್ಕಾಗಿಯೇ ಮದುವೆಯಾಗಿದ್ದಾರೆ ಎನ್ನುತ್ತಿದ್ದಾರೆ. ರವೀಂದರ್​​ ಅವರ  ಆಸ್ತಿ ನೋಡಿ ಮದುವೆಯಾಗಿದ್ದಾರೆ, ಈ ಜೋಡಿ ಒಟ್ಟಾಗಿ ಇರುವ ಚಾನ್ಸೇ ಇಲ್ಲ ಎಂದವರೇ ಹೆಚ್ಚು. 

ಅಷ್ಟಕ್ಕೂ, ಮಹಾಲಕ್ಷ್ಮಿ ಅವರಿಗೆ ಇದು ಎರಡನೆಯ ಮದುವೆ. ಮೊದಲನೆಯ ಪತಿಯಿಂದ ಓರ್ವ ಮಗ ಇದ್ದಾನೆ. ಇದೇ ಮೊದಲ ಬಾರಿಗೆ ನಟಿ ಮಹಾಲಕ್ಷ್ಮಿ, ಮೊದಲ ಮಗನ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಇದರ ಜೊತೆ ಅವರ ಮೊದಲ ಗಂಡ ಕೂಡ ಇದ್ದಾರೆ.  ಮಗನನ್ನು ನೋಡಿದ ನೆಟ್ಟಿಗರು ಇಷ್ಟು ದೊಡ್ಡ ಮಗನಾ ನಿಮಗೆ ಎಂದು ಉದ್ಘಾರ ತೆಗೆದಿದ್ದಾರೆ. ಮಹಾಲಕ್ಷ್ಮೀ ಅವರು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಫೋಟೋದಲ್ಲಿ ಮಗನ ಜೊತೆಗೆ ಆಕೆಯ ತಂದೆಯು ಸಹ ಇದ್ದಾರೆ. ಅಂದಹಾಗೆ ಮಹಾಲಕ್ಷ್ಮೀ ಅವರ ಮಗನ ಹೆಸರು ಸಚಿನ್​. ಮೊದಲ ಪತಿ ಅನಿಲ್​ ನೇರಡಿಮಿಲ್​ಗೆ ಜನಿಸಿದ ಮಗ. 2019ರಲ್ಲಿ ಮಹಾಲಕ್ಷ್ಮೀ ಮತ್ತು ಅನಿಲ್​ ಡಿವೋರ್ಸ್​ ಪಡೆದುಕೊಂಡರು. ಇದಾದ ಬಳಿಕ 2022ರಲ್ಲಿ ನಿರ್ಮಾಪಕ ರವೀಂದರ್​ ಚಂದ್ರಶೇಖರನ್​ ಅವರನ್ನು ಮಹಾಲಕ್ಷ್ಮೀ ಮದುವೆಯಾದರು.

Tap to resize

Latest Videos

ಮಹಾಲಕ್ಷ್ಮಿ-ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಇನ್​ಸ್ಟಾಗ್ರಾಮ್​ನಲ್ಲಿ ನಟಿ ಹೇಳಿದ್ದೇನು?

 ರವೀಂದರ್​ ಅವರು ಆಗರ್ಭ ಶ್ರೀಮಂತರೆಂದು ಮಹಾಲಕ್ಷ್ಮಿ ಮದುವೆಯಾಗಿದ್ದಾರೆ ಎಂದು ಹಲವರು ಅಂದುಕೊಳ್ಳುತ್ತಲೇ ಇದ್ದರೂ, ಅದಕ್ಕೆ ತಡೆ ಕೆಡಿಸಿಕೊಳ್ಳದ ಈ ಜೋಡಿ ಹಾಯಾಗಿ ಇದೆ. ಪತ್ನಿಗಾಗಿ ರವೀಂದರ್​ ಇದಾಗಲೇ ಚಿನ್ನದ ಮಂಚದಿಂದ (golden cot) ಹಿಡಿದು ಕೆಜಿಗಟ್ಟಲೆ ಚಿನ್ನ, ವಜ್ರ, ವೈಢೂರ್ಯಗಳನ್ನು ನೀಡಿದ್ದು, ಅದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದರು.  ತಮ್ಮನ್ನು ಕಂಡು ಹೊಟ್ಟೆ ಉರಿದುಕೊಳ್ಳುವವರ ಹೊಟ್ಟೆಗೆ ಇನ್ನಷ್ಟು ಕಿಚ್ಚು ಹೊತ್ತಿಸುತ್ತಲೇ ಇದ್ದಾರೆ.  ಪ್ರೀತಿಗೆ ಅಂದ, ರೂಪ, ಬಣ್ಣ ಮುಖ್ಯವಲ್ಲ, ನಿಷ್ಕಲ್ಮಶ ಹೃದಯ ಮುಖ್ಯ ಎಂಬುದು ಮಹಾಲಕ್ಷ್ಮಿ ಅವರ ಮಾತು. ಕಳೆದ  ಪ್ರೇಮಿಗಳ ದಿನಕ್ಕೆ ಜೋಡಿ ಪರಸ್ಪರ ವಿಶ್​ ಮಾಡಿಕೊಂಡಿತ್ತು.  ರವೀಂದರ್​ ಕೂಡ ಸಾಮಾಜಿಕ ಜಾಲತಾಣದಲ್ಲಿ ಪತ್ನಿಯ ಜೊತೆ ರೆಡ್ ಔಟ್​ಫಿಟ್​ನಲ್ಲಿರುವ (putfit) ಫೋಟೋ ಶೇರ್​ ಮಾಡಿಕೊಂಡು ವೆಲೈಂಟೈನ್ಸ್​ ಡೇಗೆ ಶುಭ ಕೋರಿದ್ದರು. ನಿನ್ನ ನಗುವಿನಲ್ಲಿಯೇ ನಾನು ಸ್ವರ್ಗ ಕಾಣುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಮಹಾಲಕ್ಷ್ಮಿ ಅವರು ಪ್ರತಿಕ್ರಿಯೆ ನೀಡಿ,  ‘ಧನ್ಯವಾದ ನನ್ನ ಪ್ರೀತಿಯೇ, ನನ್ನನ್ನು ಜಗತ್ತಿನ ಹೆಮ್ಮೆಯ ಪತ್ನಿಯನ್ನಾಗಿ ಮಾಡಿದಿರಿ’ ಎಂದಿದ್ದರು.

ಮಹಾಲಕ್ಷ್ಮಿ ಕೇವಲ ನಿರೂಪಕಿ ಜೊತೆ  ಕಿರುತೆರೆ ನಟಿ ಕೂಡ. ರವೀಂದರ್ ಅವರ ಜೊತೆಯಲ್ಲಿ  ಅನೇಕ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ರವೀಂದರ್ ನಿರ್ಮಾಣ ಮಾಡಿದ ಧಾರಾವಾಹಿಯಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ. ಸೆಟ್​ನಲ್ಲಿಯೇ  ಇವರ ಲವ್​ ಶುರುವಾಗಿ, ಮದುವೆಯವರೆಗೆ ಬಂದಿದೆ.   ಇದೇ ಸಂದರ್ಭದಲ್ಲಿ ದಂಪತಿಗಳು ಬೇರ್ಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮಹಾಲಕ್ಷ್ಮೀ ಮತ್ತು ರವೀಂದರ್​ ಒಟ್ಟಿಗೆ ಇರುವ ಫೋಟೋಗಳನ್ನು ಪೋಸ್ಟ್​ ಮಾಡುವ ಮೂಲಕ ಸುಳ್ಳು ಸುದ್ದಿ ಹರಡುವವರಿಗೆ ತಿರುಗೇಟು ನೀಡಿದ್ದಾರೆ. 

Valentine's Day: ಪತ್ನಿಗೆ ರವೀಂದರ್​ ಬರೆದ ಲವ್​ ಲೆಟರ್ ವೈರಲ್​

click me!