Lust Stories 2: ಮದುವೆಗೂ ಮುನ್ನ ಟೆಸ್ಟ್ ಡ್ರೈವ್ ಬೇಡ್ವಾ ಎಂದ ನಟಿ ನೀನಾ ಸೆಕ್ಸ್​ ಬಗ್ಗೆ ಹೇಳಿದ್ದೇನು?

By Suvarna News  |  First Published Jun 23, 2023, 4:22 PM IST

ಇದೇ ಜೂನ್​ 29ರಂದು ಸ್ಟ್ರೀಮಿಂಗ್​ ಆಗಲಿರುವ ಲಸ್ಟ್​ ಸ್ಟೋರೀಸ್​ನಲ್ಲಿ ಅಜ್ಜಿಯ ಪಾತ್ರ ಮಾಡಿರುವ ನೀನಾ ಗುಪ್ತಾ ಸೆಕ್ಸ್​ ಬಗ್ಗೆ ಹೇಳಿದ್ದೇನು? 
 


ಬಹು ನಿರೀಕ್ಷಿತ ಲಸ್ಟ್ ಸ್ಟೋರೀಸ್ 2' ನ ಟ್ರೈಲರ್ ಮೊನ್ನೆ ಬಿಡುಗಡೆಯಾಗಿದೆ. ಲೈಂಗಿಕತೆ ಬಗೆಗಿನ ಬಣ್ಣದ ಕಥೆಗಳು ಇದರಲ್ಲಿವೆ. ಈ ಎರಡನೇ ಭಾಗವು ಹೊಸ ನಿರ್ದೇಶಕರಾಗಿರುವ  ಅಮಿತ್ ರವೀಂದ್ರನಾಥ್ ಶರ್ಮಾ, ಕೊಂಕಣ ಸೇನ್ ಶರ್ಮಾ, ಆರ್. ಬಾಲ್ಕಿ ಮತ್ತು ಸುಜೋಯ್ ಘೋಷ್ ಮತ್ತು ನಟರಲ್ಲಿ ಅಮೃತಾ ಶುಭಾಷ್, ಅಂಗದ್ ಬೇಡಿ, ಕಾಜೋಲ್, ಕುಮುದ್ ಮಿಶ್ರಾ, ಮೃಣಾಲ್ ಠಾಕೂರ್, ನೀನಾ ಗುಪ್ತಾ ಅವರನ್ನು ಒಳಗೊಂಡಿದ್ದರೆ, ದೊಡ್ಡ ತಾರಾ ಬಳಗವೇ ಇದೆ. ತಾರಾ ಬಳಗದಲ್ಲಿ  ತಮನ್ನಾ ಭಾಟಿಯಾ, ತಿಲ್ಲೋಟಮಾ ಶೋಮ್ ಮತ್ತು ವಿಜಯ್ ವರ್ಮಾ ಮುಂತಾದವರು ಇದ್ದಾರೆ.  ಇದಕ್ಕೆ ಈಗ ಹೆಚ್ಚು ಗಮನ ಸೆಳೆಯುತ್ತಿರುವ ನಟಿಯೆಂದರೆ  ನೀನಾ ಗುಪ್ತಾ.  'ಮದುವೆಗೂ ಮುನ್ನ ಟೆಸ್ಟ್ ಡ್ರೈವ್ ಯಾಕೆ ಮಾಡಬಾರದು' ಎಂದಿರುವ  ಹಿರಿಯ ನಟಿ ನೀನಾ ಗುಪ್ತಾ ಹೇಳಿರುವ ಡೈಲಾಗ್ ಸಖತ್ ವೈರಲ್ ಆಗುತ್ತಿದೆ.
 
ಮುಂದಿನ ವಾರ ಈ ವೆಬ್‌ಸೀರಿಸ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಬೋಲ್ಡ್​ ಕಥಾಹಂದರ ಹೊಂದಿರುವ ಈ ಸಿನಿಮಾ ಬಗ್ಗೆ ಸಿನಿಪ್ರಿಯರು ಕುತೂಹಲ ಇಟ್ಟುಕೊಂಡಿದ್ದಾರೆ. ಒಟಿಟಿಯಲ್ಲಿ ಇಂಥ ಚಿತ್ರಗಳು ಸಕತ್​ ಫೇಮಸ್​ ಆಗಲು ಕಾರಣ ಇಲ್ಲಿ  ಸೆನ್ಸಾರ್​ ಹಂಗಿಲ್ಲ. ಯಾವುದೇ ಬೋಲ್ಡ್​ ದೃಶ್ಯಗಳನ್ನಾದರೂ ನೇರಾನೇರ ತೋರಿಸಲಾಗುತ್ತದೆ. ಈ ಚಿತ್ರದಲ್ಲಿ ನಟಿ ತಮನ್ನಾ ಕೂಡ ಬೋಲ್ಡ್​ ಆಗಿಯೇ ಕಾಣಿಸಿಕೊಂಡಿದ್ದಾರೆ.  'ಲಸ್ಟ್ ಸ್ಟೋರಿಸ್' (Lust Stories) ಸೀಸನ್- 2ನಲ್ಲಿ ವಿಜಯ್ ವರ್ಮಾ ಜೊತೆ ತಮನ್ನಾ  ಲಿಪ್‌ ಲಾಕ್‌  (Liplock) ಮಾಡಿದ್ದಾರೆ.  ವಿಜಯ್ ವರ್ಮಾ (Vijay Verma) ಅವರ ಜೊತೆ ತಮನ್ನಾ ಡೇಟಿಂಗ್​ನಲ್ಲಿ ಇರೋ ತಮನ್ನಾ ಲಿಪ್​ ಲಾಕ್​ ಯಾರ ಜೊತೆನೂ ಮಾಡಲ್ಲ ಎಂದಿದ್ದರು. ಆದರೂ ಈ ಚಿತ್ರದಲ್ಲಿ ಆ ನಿಯಮ ಮೀರಿದ್ದಾರೆ. 

ತಮನ್ನಾ ತೊಡೆಮೇಲೆ ಬಾಯ್‌ಫ್ರೆಂಡ್ ವಿಜಯ್ ವರ್ಮಾ: ರೊಮ್ಯಾಂಟಿಕ್ ಫೋಟೋ ವೈರಲ್
 
 ಆದರೆ ಈ ಚಿತ್ರದಲ್ಲಿ ಅಜ್ಜಿಯಾಗಿ ನಟಿಸಿರುವ ನೀನಾ ಗುಪ್ತಾ ಹೈಲೈಟ್​ ಆಗುತ್ತಿದ್ದಾರೆ. ಅವರು ಹೇಳಿರುವ ಮಾತು ಸಕತ್​ ವೈರಲ್​ ಆಗುತ್ತಿದೆ. ಅವರು ಹೇಳಿದ್ದೇನೆಂದರೆ, ಶೃಂಗಾರದ ಬಗ್ಗೆ ಯುವಜನತೆ ತಿಳಿದುಕೊಳ್ಳುವುದು ಬಹಳ ಅಗತ್ಯ.  ಹುಡುಗಿಗೆ ಮುತ್ತು ಕೊಡುವುದರಿಂದ ಗರ್ಭಿಣಿ ಆಗುತ್ತಾರೆ ಅಂತ ನಾನು ಬಾಲ್ಯದಲ್ಲಿ ಅಂದುಕೊಂಡಿದ್ದೆ. ತಮ್ಮ ತಾಯಿ ಅಷ್ಟೊಂದು ಸ್ಟ್ರಿಕ್ಟ್ ಆಗಿದ್ದರು.   12- 13 ವರ್ಷ ವಯಸ್ಸಾದರೂ ಕುಟುಂಬದವರೆಲ್ಲರೂ ಒಟ್ಟಿಗೇ  ಮಲಗುತ್ತಿದ್ದೆವು. ಆಗ ಶೃಂಗಾರದ ಕುರಿತು ಏನೂ ಗೊತ್ತಿರಲಿಲ್ಲ. ಅಷ್ಟೇ ಅಲ್ಲ,   ಪೀರಿಯಡ್ಸ್ (Periods) ಅಂದರೆ ಏನು ಅಂತಲೂ ಅಮ್ಮ ಹೇಳಿರಲಿಲ್ಲ.  ಸ್ನೇಹಿತೆಯರ ಜೊತೆ ಸೇರಿ ಸಿನಿಮಾ ನೋಡೋಕೆ ಹೋಗಲು ಬಿಡುತ್ತಿರಲಿಲ್ಲ ಎಂದಿದ್ದಾರೆ ನೀನಾ. 

Tap to resize

Latest Videos

 'ಆದರೆ ಹಿಂದಿನ ಕಾಲದಲ್ಲಿ ಮದುವೆಗೂ ಮುನ್ನ ಹುಡುಗಿಯರಿಗೆ ಶೃಂಗಾರದ ಬಗ್ಗೆ ಕೊಂಚ ಮಾಹಿತಿ ನೀಡುತ್ತಿದ್ದುದು ಉಂಟು. ಫಸ್ಟ್‌ ನೈಟ್‌ನಲ್ಲಿ ಏನಾಗುತ್ತದೆ ಎಂದು ಹೇಳಿಕೊಡುತ್ತಿದದರು.  ಹುಡುಗಿಗೆ ಭಯವಾಗಬಾರದು,  ಹುಡುಗ ಓಡಿ ಹೋಗಬಾರದು ಎನ್ನುವ ಕಾರಣಕ್ಕೆ ಇಂತಹ ವಿಚಾರಗಳನ್ನು ಹೇಳುತ್ತಿದ್ದರು. ಮದುವೆಯಾಗುವವರಿಗೆ ಇದರ ಅರಿವು ಅಗತ್ಯ.  ಇದೆಲ್ಲದರ ಜೊತೆಗೆ ಮಹಿಳೆಯರಿಗೆ ಮಕ್ಕಳನ್ನು ಹೆರುವುದು ಅವರ ಕೆಲಸ, ಮತ್ತು ಪತಿ ಶೃಂಗಾರ ಬಯಸಿದಾಗ ಅದನ್ನು ಪೂರೈಸುವುದು ಅವರ ಕರ್ತವ್ಯ ಇವತ್ತಿಗೆ ಸಾಕಷ್ಟು ವಿಚಾರಗಳು ಹೀಗೆ ಇವೆ. ಯಾವುದು ಬದಲಾಗಲಿಲ್ಲ. ಹಾಗಾಗಿ 'ಲಸ್ಟ್ ಸ್ಟೋರಿಸ್'- 2 ವೆಬ್ ಸೀರಿಸ್ ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ ಎಂದಿದ್ದಾರೆ. ಅದಕ್ಕಾಗಿ  ಅಜ್ಜಿ (Grandma) ಪಾತ್ರದಲ್ಲಿ ನಟಿಸಲು ತಾವು ಒಪ್ಪಿರುವುದಾಗಿ ಹೇಳಿದ್ದಾರೆ. ಅಂದಹಾಗೆ, ಈ ವೆಬ್​ ಸರಣಿಯು ಜೂನ್ 29 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.

Liplock ಮಾಡಿ ಪೇಚಿಗೆ ಸಿಲುಕಿದ ನಟಿ ತಮನ್ನಾ ಭಾಟಿಯಾ
 

click me!