ನಾಗಚೈತನ್ಯ ಜೊತೆ ಡೇಟಿಂಗ್ ರೂಮರ್ ನಡುವೆಯೇ ಭಾವಿ ಪತಿ ಹೇಗಿರಬೇಕು ಎಂದು ನಟಿ ಶೋಭಿತಾ ಹೇಳಿದ್ದಾರೆ. ಅವರು ಹೇಳಿದ್ದೇನು?
ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ಮೂಲಕ ಸದ್ದು ಮಾಡಿದ್ದ ನಟಿ ಶೋಭಿತಾ ಧೂಲಿಪಾಲ ಈ ಹಿಂದೆ ಡೇಟಿಂಗ್ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದರು. ಅದರಲ್ಲೂ ನಟ ನಾಗ ಚೈತನ್ಯ (Naga Chaitanya) ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ಹಲವು ಅನುಮಾನಗಳನ್ನೂ ಮೂಡಿಸಿತ್ತು. ಸಮಂತಾ (Samantha) ಜೊತೆಗಿನ ಬಾಂಧವ್ಯ ಕಡಿದುಕೊಂಡ ನಂತರ ನಾಗ ಚೈತನ್ಯ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದ್ದು, ಈ ವೇಳೆಯಲ್ಲಿ ಗೆಳೆತನಕ್ಕೆ ಸಿಕ್ಕವರೇ ಶೋಭಿತಾ ಎಂದು ಹೇಳಲಾಗುತ್ತಿದೆ. ಶೋಭಿತಾ ಜೊತೆ ಪ್ರೀತಿಯಲ್ಲಿ ಬಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಿದೆ. ಇಬ್ಬರೂ ಆಗಾಗ ಪ್ರವಾಸ, ಔಟಿಂಗ್ ಅಂತ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಒಂದೆರಡು ಬಾರಿ ಕ್ಯಾಮರಾ ಕಣ್ಣಿಗೂ ಸೆರೆಯಾಗಿದ್ದರು. ಆಗ ನಾಗಚೈತನ್ಯ ಅವರಿಗೆ ಸೀಕ್ರೆಟ್ ಕ್ರಶ್ ಯಾರು ಎಂದು ಕೇಳಿದಾಗ ಹಲವರು ಶೋಭಿತಾ ಹೆಸರು ಹೇಳಬಹುದು ಎಂದುಕೊಂಡಿದ್ದರು. ಆದರೆ ನಾಗಚೈತನ್ಯ ಅವರು 'ನಾನು ಈಚೆಗೆ ಬ್ಯಾಬಿಲೋನ್’ ದ ಇಂಗ್ಲಿಷ್ ಸಿನಿಮಾ ನೋಡಿದೆ. ನಟಿ ಮಾರ್ಗಾಟ್ ರಾಬಿ (Margot Robbie) ಈ ಚಿತ್ರದಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ. ಆಕೆಯ ಅಭಿನಯ ನನಗೆ ತುಂಬಾ ಇಷ್ಟವಾಗಿದ್ದು, ಇದೀಗ ಆಕೆಯೇ ನನ್ನ ಸೀಕ್ರೇಟ್ ಕ್ರಶ್‘ ಎಂದು ಹೇಳಿದ್ದರು.
ಈ ನಡುವೆ ನಟಿ ಶೋಭಿತಾ ಧೂಲಿಪಾಲ (Shobhita Dhulipala) ಭಾರೀ ಸುದ್ದಿಯಾಗಿದ್ದಾರೆ. ಮೊದಲ ಬಾರಿಗೆ ಮದುವೆ ಬಗ್ಗೆ ಮಾತಾಡಿದ ನಟಿ ಶೋಭಿತಾ, ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಹೇಳಿದ್ದಾರೆ. ದಿ ನೈಟ್ ಮ್ಯಾನೇಜರ್ 2 ಸಿನಿಮಾದ ಪ್ರಚಾರದ ವೇಳೆ ನಟಿ ತಮ್ಮ ಕನಸಿನ ರಾಜಕುಮಾರನ ಕುರಿತು ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ. ತಾವು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಹೋಗಿದ್ದಾರೆ. ಇದೀಗ ದಿ ನೈಟ್ ಮ್ಯಾನೇಜರ್ 2 ಚಿತ್ರದ ಪ್ರಚಾರದಲ್ಲಿ ಭಾಗವಹಿಸಿದ್ದ ಶೋಭಿತಾ ಧೂಲಿಪಾಲ, ತಮ್ಮ ಭಾವಿ ಪತಿ ಹೇಗಿರಬೇಕು ಎಂಬ ಬಗ್ಗೆ ಮಾತಾಡಿದ್ದು, ಶೋಭಿತಾ ಧೂಲಿಪಾಲ ಶೀಘ್ರದಲ್ಲೇ ಮದುವೆ ಆಗಲಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.
Naga Chaitanya: ಸೀಕ್ರೆಟ್ ಕ್ರಶ್ ಬಗ್ಗೆ ಕೊನೆಗೂ ಬಾಯ್ಬಿಟ್ಟ ನಟಿ ಸಮಂತಾ ಮಾಜಿ ಪತಿ!
ಅಷ್ಟಕ್ಕೂ ಶೋಭಿತಾ ಹೇಳಿದ್ದೇನೆಂದರೆ, ನನ್ನ ಗಂಡನಾಗುವವ ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಏರಿದ್ರೂ ಇತರರಿಗೆ ದಯೆ ತೋರಬೇಕು ಎಂದರು. ತುಂಬಾ ಸರಳ ವ್ಯಕ್ತಿ ಆಗಿರಬೇಕು. ಅದರಲ್ಲೂ ಸಣ್ಣ, ಸಣ್ಣ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವಂತೆ ಇರಬೇಕು ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಶೋಭಿತಾ ಅವರಿಗೆ ನಾಗಚೈತನ್ಯ ಕುರಿತಾಗಿಯೂ ಪ್ರಶ್ನೆ ಎದುರಾಗಿದೆ. ಅದಕ್ಕೆ ಶೋಭಿತಅ, ನಾಗ ಚೈತನ್ಯ ಅವರೊಂದಿಗಿನ ಸೀಕ್ರೆಟ್ ಸಂಬಂಧದ ಬಗ್ಗೆಯೂ ಪರೋಕ್ಷವಾಗಿ ಮಾತನಾಡಿದ್ದಾರೆ. ತಮ್ಮ ವಿರುದ್ಧ ನಡೆಯುತ್ತಿರುವ ಅಪಪ್ರಚಾರಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಅದೇ ಇನ್ನೊಂದೆಡೆ, ಈ ಹಿಂದೆ ನಾಗಚೈತನ್ಯ ಕೂಡ ಈ ರೂಮರ್ಸ್ ವಿರುದ್ಧ ಮಾತನಾಡಿದ್ದರು. ‘ಡಿವೋರ್ಸ್ (Divorce) ಬಳಿಕ ತಾವು ಯಾವತ್ತೂ ಖಿನ್ನತೆಗೆ ಒಳಗಾಗಿಲ್ಲ, ಎಲ್ಲವೂ ಪಾಠ. ಅದರ ಬಗ್ಗೆ ನನಗೆ ಯಾವುದೇ ಪಶ್ಚಾತಾಪವಿಲ್ಲ ಎಂದಿದ್ದರು ನಾಗ ಚೈತನ್ಯ. ಅಲ್ಲದೇ ಶೋಭಿತಾ ಡೇಟಿಂಗ್ ವಿಚಾರದ ಬಗ್ಗೆ ತಮಗೇನೂ ಗೊತ್ತಿಲ್ಲ. ಆ ಕುರಿತು ಮಾತನಾಡಲಾರೆ ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದರು. ಇದೇ ವೇಳೆ ಕಿಸ್ಸಿಂಗ್ ಬಗ್ಗೆಯೂ ಪ್ರಶ್ನಿಸಲಾಗಿತ್ತು. ನೀವೂ ಎಷ್ಟು ಜನರಿಗೆ ಕಿಸ್ ಮಾಡಿದ್ದೀರಿ ಎಂಬ ಪ್ರಶ್ನೆಗೆ ನಾಗಚೈತನ್ಯ ಕೌಂಟ್ ಮಾಡುವಂತೆ ನಟಿಸಿ, 'ಅಬ್ಬಾ ನನಗೆ ಗೊತ್ತಿಲ್ಲಪ್ಪ. ನಾನು ಎಣಿಕೆ ಮಾಡಿಲ್ಲ' ಎನ್ನುವ ಮೂಲಕ ಕೌಂಟ್ಲೆಸ್ ಎಂದು ನಕ್ಕಿದ್ದಾರೆ. ಅರ್ಥಾತ್ ಲೆಕ್ಕವಿಲ್ಲದಷ್ಟು ಬಾರಿ ಅವರು ಕಿಸ್ (Kiss) ಮಾಡಿರುವುದಾಗಿ ಹೇಳಿದ್ದರು. ಆದರೆ ಶೋಭಿತಾ ಕುರಿತು ತುಟಿಕ್ ಪಿಟಿಕ್ ಎಂದಿರಲಿಲ್ಲ.
ಸಮಂತಾರಿಂದ ದೂರವಾದ್ಮೇಲೆ KISS ಕೊಟ್ಟವರೆಷ್ಟು? ನಾಗಚೈತನ್ಯ ಬಾಯಿಬಿಟ್ಟ ರಹಸ್ಯ