30-72 ವಯಸ್ಸಾದರೇನು?; ಜೈಲರ್‌ನಲ್ಲಿ ರಜನಿಕಾಂತ್ ಜೊತೆ ವಯಸ್ಸಿನ ಟೀಕೆಗಳು: ಖಡಕ್ ಉತ್ತರ ಕೊಟ್ಟ ತಮನ್ನಾ!

By Vaishnavi ChandrashekarFirst Published Aug 1, 2023, 11:51 AM IST
Highlights

 72 ವರ್ಷದ ನಟನ ಜೊತೆ ರೊಮ್ಯಾನ್ಸ್‌ ಮಾಡಲು ನಾಚಿಕೆ ಆಗುತ್ತಿಲ್ವಾ? ಪ್ರಶ್ನೆ ಮಾಡಿದ ನೆಟ್ಟಿಗರಿಗೆ ಖಡಕ್ ಉತ್ತರ ಕೊಟ್ಟ ತಮನ್ನಾ....
 

ನೆಲ್ಸನ್ ದಿಲಿಪ್‌ ಕುಮಾರ್ ನಿರ್ದೇಶನ ಮಾಡಿರುವ ಜೈಲರ್ ಸಿನಿಮಾ ಆಗಸ್ಟ್‌ 10ರಂದು ರಿಲೀಸ್ ಆಗುತ್ತಿದೆ. ತಲೈವಾ ರಜನಿಕಾಂತ್ ಮತ್ತು ತಮನ್ನಾ ಭಾಟಿಯ ಜೋಡಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ಕನ್ನಡ ನಟ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ನಟಿಸಿದ್ದಾರೆ. ಹ್ಯಾಪೆನಿಂಗ್ ಮಾಸ್ಟರ್ ಅನಿರುದ್ಧ ರವಿಚಂದ್ರನ್ ಸಂಗೀತ ನಿರ್ದೇಶನ ಇರಲಿದೆ. ಅಲ್ಲದೆ ಕಾವಾಲಯಾ ಹಾಡು ಸಖತ್ ಹಿಟ್ ಆಗಿದ್ದು ತಮನ್ನಾ ಹಾಟ್‌ ಲುಕ್‌ಗೆ ಒಂದು ಕಡೆ ಮೆಚ್ಚುಗೆ ಹರಿದು ಬರುತ್ತಿದ್ದರೆ ಮತ್ತೊಂದು ಕಡೆ ವಯಸ್ಸಿನ ಅಂತರ ಇರುವುದಕ್ಕೆ ಟೀಕೆ ಎದುರಾಗುತ್ತಿದೆ. ಹೀಗಾಗಿ ತಮನ್ನಾ ಖಡಕ್ ಉತ್ತರ ಕೊಟ್ಟಿದ್ದಾರೆ.

33 ವರ್ಷದ ತಮನ್ನಾ 72 ವರ್ಷ ರಜನಿಕಾಂತ್ ಜೊತೆ ರೊಮ್ಯಾನ್ಸ್ ಮಾಡಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಪ್ಪ ಮಗಳು ವಯಸ್ಸಿನ ಅಂತರವಿದೆ ಹಾಗೆ ಹೀಗೆ ಎಂದು ಸಖತ್ ಟೀಕೆ ಎದುರಾಗುತ್ತಿದೆ. 'ಯಾಕೆ ಎಲ್ಲರು ವಯಸ್ಸಿನ ಅಂತ ನೋಡುತ್ತಿದ್ದಾರೆ? ಸಿನಿಮಾ ಅಂದ್ಮೇಲೆ ಎರಡು ವಿಭಿನ್ನ ಪಾತ್ರಗಳು ಎರಡು ವ್ಯಕ್ತಿತ್ವಗಳ ರೀತಿ ನೋಡಬೇಕು  ಅಷ್ಟೆ. ಎಲ್ಲರಂತೆ ನಾನು ವಯಸ್ಸಿನ ಬಗ್ಗೆ ಮಾತನಾಡಬೇಕು ಅಂದ್ರೆ ಟಾಮ್ ಕ್ರೂಸ್‌ ನೋಡಿ 60 ವರ್ಷ ಆದರೂ ಎಷ್ಟು ಸ್ಟಂಟ್ ಮಾಡುತ್ತಾರೆ ನಾನು ಕೂಡ ಅವರಷ್ಟು ವಯಸ್ಸಾದಾಗ ಆ ರೀತಿ ಡ್ಯಾನ್ಸ್‌ ಆಂಡ್ ಸ್ಟಂಟ್ ಮಾಡಲು ಇಷ್ಟ ಪಡುತ್ತೀನಿ' ಎಂದು ತಮನ್ನಾ ಹೇಳಿದ್ದಾರೆ. 

Latest Videos

'ಜೈಲರ್' ಆಡಿಯೋ ಲಾಂಚ್‌ನಲ್ಲಿ ತಮನ್ನಾ ಲುಕ್‌ಗೆ ಫ್ಯಾನ್ಸ್ ಫಿದಾ

ಮಲ್ಟಿ ಸ್ಟಾರ್‌ ಜೈಲರ್ ಸಿನಿಮಾ ಆಗಿದ್ದರೂ ನಾಯಕಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಚಿರಂಜೀವಿ ಜೊತೆ ಬೋಲಾ ಶಂಕರ್ ಚಿತ್ರಕ್ಕೆ ಸಹಿ ಮಾಡಿದ್ದಾರೆ.  

ಸೆನ್ಸರ್ ಶಾಕ್: 

ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಜೈಲರ್ ಸಿನಿಮಾಗೆ ಸೆನ್ಸಾರ್ ಆಗಿದ್ದು ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಅಂದಹಾಗೆ ಜೈಲರ್ ಸಿನಿಮಾ 2 ಗಂಟೆ 48 ನಿಮಿಷಾ 47 ಸೆಕೆಂಡ್ ಇದೆ. ಸದ್ಯ ಸೆನ್ಸಾರ್ ಬೋರ್ಡ್ ಸಿನಿಮಾದಿಂದ ಒಟ್ಟು 11 ದೃಶ್ಯಕ್ಕೆ ಕತ್ತರಿ ಹಾಕುವಂತೆ ಸೂಚಿಸಿದೆ. ಕೆಲವು ದೃಶ್ಯಗಳ ಅವಧಿ ಕಡಿಮೆ ಮಾಡಬೇಕು, ಹಿಂಸಾತ್ಮಕ ದೃಶ್ಯಗಳನ್ನು ತೆಗೆದು ಹಾಕಬೇಕು ಹಾಗೂ ಕೆಲವು ಪದಗಳನ್ನು ಮ್ಯೂಟ್ ಮಾಡುವಂತೆ ಸೆನ್ಸಾನ್ ಮಂಡಳಿ ಸಿನಿಮಾತಂಡಕ್ಕೆ ಸೂಚಿಸಿದೆ.

ರಜನಿಕಾಂತ್ 'ಜೈಲರ್' ಕರ್ನಾಟಕ ವಿತರಣೆ ಹಕ್ಕು ಸೋಲ್ಡ್ ಔಟ್: ಮತ್ತೆ ಜಯಣ್ಣ ಪಾಲಿನ ಆಪದ್ಬಾಂಧವ ಆಗ್ತಾರಾ ಶಿವಣ್ಣ?

ಮೋಹನ್ ಲಾಲ್ ಮಲಯಾಳಿ ವ್ಯಕ್ತಿಯಾಗಿಯೇ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಮೋಹನ್‌ಲಾಲ್ ಮಾತನಾಡುವ ಕೆಲವು ಮಲಯಾಳಂ ಪದಗಳಿಗನ್ನು ಮ್ಯೂಟ್ ಮಾಡುವಂತೆ ಸೆನ್ಸಾನ್ ಮಂಡಳಿ ಸೂಚಿಸಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ರಜನಿಕಾಂತ್ ಈ ಸಿನಿಮಾದಲ್ಲಿ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್‌ಲಾಲ್ ಮ್ಯಾಥ್ಯೂ ಪಾತ್ರಕ್ಕೆ ಬಣ್ಣ ಹಚ್ಚಿದ್ರೆ ಕನ್ನಡದ ಸ್ಟಾರ್ ಶಿವರಾಜ್ ಕುಮಾರ್ ನರಸಿಂಹ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂವರು ಸ್ಟಾರ್ ಕಲಾವಿದರ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೆನ್ಸಾರ್ ಮಂಡಳಿ ಹೇಳಿದೆ. ಅದರಲ್ಲೂ ಈ ಮೂವರು ಒಟ್ಟಿಗೆ ಸಿಗರೇಟು ಹಿಡಿದಿರುವ ದೃಶ್ಯ ತೆಗೆಯುವಂತೆ ಸೂಚಿಸಿದೆ ಎನ್ನುವ ಮಾಹಿತಿ ಹೇಳಿ ಬಂದಿದೆ. 

ರಜನಿಕಾಂತ್ ಮಾತು:

 'ಬಿಸ್ಟ್ ಸಿನಿಮಾ ಬಳಿಕ ನೆಲ್ಸನ್ ಜೊತೆ ಜೈಲರ್ ಸಿನಿಮಾ ಅನೌನ್ಸ್ ಮಾಡಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ನೆಲ್ಸನ್ ಅವರನ್ನು ಬದಲಾಯಿಸುವಂತೆ ಅನೇಕರು ಒತ್ತಡ ಹಾಕಿದರು. ನಿಂದನೆ ಎದುರಿಸಿದರು. ಆದರೆ ನಾನು ನನ್ನ ನಿರ್ಧಾರದ ಬಗ್ಗೆ ಸ್ಪಷ್ಟವಾಗಿದ್ದೆ. ಬಳಿಕ ಟ್ವಿಟ್ಟರ್ ನಲ್ಲಿ ಜೈಲರ್ ಪೋಸ್ಟರ್ ಅನ್ನು ಡಿಪಿ ಹಾಕಿದೆ' ಎಂದು ಹೇಳಿದರು. ರಜನಿಕಾಂತ್ ಅವರನ್ನು ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ. ಆದರೆ ಈ ಹೆಸರು ರಜನಿಕಾಂತ್ ಅವವರಿಗೆ ಯಾಕೋ ಇಷ್ಟವಾಗುತ್ತಿಲ್ಲ. ಈ ಹೆಸರನ್ನು ತೆಗೆದುಹಾಕುವಂತೆ ಸಿನಿಮಾತಂಡಕ್ಕೆ ತಲೈವಾ ಒತ್ತಾಯ ಮಾಡಿದ್ದರು. ಜೈಲರ್ ಸಿನಿಮಾದ ಹುಕುಂ ಮತ್ತು ಜುಜುಬಿ ಹಾಡನ್ನು ಬರೆದಿರುವ ಗೀತರಚನೆಕಾರ ಸೂಪರ್ ಸುಬು ಅವರನ್ನು ರಜನಿಕಾಂತ್ ಹೊಗಳಿದರು. ಅವರಿಗೆ ಹಾಡಿನ ಸಾಲಿನಲ್ಲಿದ್ದ ಸೂಪರ್ ಸ್ಟಾರ್ ಪದವನ್ನು ತೆಗೆದು ಹಾಕುವಂತೆ ಹೇಳಿದ್ದೆ. ಯಾಕೆಂದರೆ ಸೂಪರ್ ಸ್ಟಾರ್ ಪದ ಯಾವಾಗಲೂ ಸಮಸ್ಯೆಯಾಗಿದೆ ಎಂದು ಹೇಳಿದರು. 

click me!