DDLJ: ಕಾಜೋಲ್ ಎತ್ತಿಕೊಂಡ ಶಾರುಖ್‌ಗೆ ರಟ್ಟೆ ನೋವು ಬಂದಿತ್ತಂತೆ! ಘಟನೆ ವಿವರಿಸಿದ ನಟಿ

By Suvarna NewsFirst Published Jul 31, 2023, 3:34 PM IST
Highlights

'ದಿಲ್​ವಾಲೆ  ದುಲ್ಹನಿಯಾ ಲೇ ಜಾಯೇಂಗೆ' ಚಿತ್ರದಲ್ಲಿ ಶಾರುಖ್​ ಖಾನ್​ ಅವರು ತಮ್ಮ ಭುಜದ ಮೇಲೆ ಕಾಜೋಲ್​ ಅವರನ್ನು ಎತ್ತಿಕೊಂಡಾಗ ಅವರ ಸ್ಥಿತಿ ಹೇಗಿತ್ತು?
 

ಶಾರುಖ್ ಖಾನ್ (Shahrukh Khan) ಮತ್ತು ಕಾಜೋಲ್ ಅವರ ಬ್ಲಾಕ್ಬಸ್ಟರ್ 'ದಿಲ್​ವಾಲೆ  ದುಲ್ಹನಿಯಾ ಲೇ ಜಾಯೇಂಗೆ' (DDLJ) ಬಿಡುಗಡೆಯಾಗಿ 28 ವರ್ಷಗಳೇ ಕಳೆದಿವೆ. 1995ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಇಂದಿಗೂ ಜನಮಾನಸದಲ್ಲಿ ನೆನಪಿನಲ್ಲಿ ಉಳಿದಿದೆ. ಶಾರುಖ್​ ಮತ್ತು ಕಾಜೋಲ್​  ಅಭಿಮಾನಿಗಳು ಇದನ್ನು ಇನ್ನೂ ಪ್ರೀತಿಸುತ್ತಾರೆ. ಅವರ ಅಭಿಮಾನಿಗಳು ಇಂದಿಗೂ ಈ ಚಿತ್ರವನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಈ ಚಿತ್ರ ತೆರೆಗೆ ಬಂದಾಗ ಗಲ್ಲಾಪೆಟ್ಟಿಗೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿತ್ತು.  ರಾಜ್ ಮತ್ತು ಸಿಮ್ರನ್ ಪಾತ್ರ (Raj and Simran) ಜನರನ್ನು ಹುಚ್ಚರನ್ನಾಗಿ ಮಾಡಿತ್ತು.  ಈ ಚಿತ್ರವು ಬೆಳ್ಳಿ ಪರದೆಯನ್ನು ದೀರ್ಘಕಾಲ ಆಳಿತ್ತು.  ಒಂದು ಸಿನಿಮಾ ಮಾಡುವಾಗ ಜನರನ್ನು ರಂಜಿಸಲು ಹಾಗೂ ಸಿನಿಮಾ ಸಿನಿಪ್ರಿಯರ ಮನಸ್ಸನ್ನು ಗೆಲ್ಲಲು ತಾರೆಯರು ಸಾಕಷ್ಟು ಬೆವರಿಳಿಸಬೇಕಾಗಿರುತ್ತದೆ. ಅಂಥ ಸಂದರ್ಭಗಳಲ್ಲಿ ಸಾಕಷ್ಟು ನೋವನ್ನು ಅನುಭವಿಸುವುದೂ ಉಂಟು. ಈಗ 'ದಿಲ್​ವಾಲೆ  ದುಲ್ಹನಿಯಾ ಲೇ ಜಾಯೇಂಗೆ' ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ನಟಿ ಕಾಜೋಲ್​ ಬಹಿರಂಗಗೊಳಿಸಿದ್ದಾರೆ.

ಇದರಲ್ಲಿ  ಸಿನಿಪ್ರಿಯರ ಮನಸ್ಸನ್ನು ಗೆದ್ದ ಸೀನ್​ಗಳಲ್ಲಿ ಒಂದು  ಶಾರುಖ್ ಖಾನ್ ಅವರ ಭುಜದ ಮೇಲೆ ಕಾಜೋಲ್​ (Kajol)ನಗುತ್ತಿರುವ ದೃಶ್ಯ.  ಸಿನಿಮಾಗಳಲ್ಲಿ ನಾಯಕರು ನಾಯಕಿಯರನ್ನು ಸುಲಭದಲ್ಲಿ ಎತ್ತಿಬಿಡುವಂತೆ ಕಾಣಿಸುತ್ತದೆ. ಇದು ಹೇಳುವಷ್ಟು ಸುಲಭದ ಕೆಲಸವಲ್ಲ. ಎಷ್ಟೋ ಸಂದರ್ಭದಲ್ಲಿ ನಾಯಕಿಯನ್ನು ಎತ್ತಿಕೊಳ್ಳುವಾಗ ನಾಯಕರು ಪೇಚಿಗೆ ಸಿಲುಕಿರುವುದು ಉಂಟು. ಅಂಥದ್ದೇ ಒಂದು ಘಟನೆಯನ್ನು ನಟಿ ಕಾಜೋಲ್​  ಮೆಲುಕು ಹಾಕಿದ್ದಾರೆ. ಶಾರುಖ್ ಖಾನ್ ಅವರ ಭುಜದ ಮೇಲೆ ತಾವು ಇದ್ದ ಒಂದು ದೃಶ್ಯದ ಶೂಟಿಂಗ್​ ಬಳಿಕ ಶಾರುಖ್​ ಖಾನ್​ ಭುಜ ಅಲುಗಾಡಿಸಲು ಆಗಿರಲಿಲ್ಲ. ರಕ್ತ ಹೆಪ್ಪುಗಟ್ಟು ಹೋಗಿತ್ತು ಎಂದಿದ್ದಾರೆ. ಈ ದೃಶ್ಯವನ್ನು ಪೋಸ್ಟರ್​ ಆಗಿ ಮಾಡಲಾಗಿತ್ತು. ಮೊದಲಿಗೆ ಅವರು ನನ್ನನ್ನು ಎತ್ತಿದಾಗ, ಶಾರುಖ್​ ಅವರು ಹೆಚ್ಚು ಭಾರ ಎನಿಸಿರಲಿಲ್ಲ ಎಂದಿದ್ದರು. ಆ ನಂತರ ನಾನು ಶಾರುಖ್‌ಗಾಗಿ ತುಂಬಾ ಚಿಂತಿತಳಾಗಬೇಕಾಗಿ ಬಂತು ಎಂದಿದ್ದಾರೆ.

Latest Videos

DDLJ: ಕಾಜೋಲ್​ ಸ್ಕರ್ಟ್​ ನೋಡಿ ಕಣ್​ಕಣ್​ ಬಿಟ್ಟಿದ್ರಂತೆ ನಿರ್ದೇಶಕ, ಅಷ್ಟಕ್ಕೂ ಆಗಿದ್ದೇನು?

ಕಾಜೋಲ್ ಮತ್ತು ಶಾರುಖ್ ಅವರು ಹಲವಾರು ಹಿಟ್ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.  ಬಾಜಿಗರ್, ಕುಚ್ ಕುಚ್ ಹೋತಾ ಹೈ, ಮೈ ನೇಮ್ ಈಸ್ ಖಾನ್, ಕಭಿ ಖುಷಿ ಕಭಿ ಗಮ್ ಮತ್ತು ದಿಲ್ವಾಲೆ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಅವರ ಅತ್ಯಂತ ಪ್ರೀತಿಯ  ಚಿತ್ರವಾಗಿದೆ. ಶಾರುಖ್ ತನ್ನ ಭುಜದ ಮೇಲೆ ಕಾಜೋಲ್ ಅನ್ನು ಎತ್ತುತ್ತಿರುವ DDLJ ಪೋಸ್ಟರ್ ಅತ್ಯಂತ ಸಾಂಪ್ರದಾಯಿಕ ಪೋಸ್ಟರ್‌ಗಳಲ್ಲಿ ಒಂದಾಗಿದೆ, ಇದು ಕೆಲವು ದೊಡ್ಡ ಚಲನಚಿತ್ರ ಮನೆಗಳ ಗೋಡೆಗಳ ಮೇಲೂ ಕಂಡುಬರುತ್ತದೆ. ಈ ಪೋಸ್ಟರ್​ ನೋಡಿದಾಗಲೆಲ್ಲ ತಮ್ಮ ಮನಸ್ಸಿಗೆ ಏನು ಹೊಳೆಯುತ್ತದೆ ಎಂದು ಹೇಳಿರುವ ಕಾಜೋಲ್​,  'ಈ ಪೋಸ್ಟರ್​ ನೋಡಿದಾಗ ನನ್ನ ಮನಸ್ಸಿಗೆ ಬರುವ ಒಂದು ವಿಷಯವೆಂದರೆ ನಾನು ಆ ಸ್ಥಾನಕ್ಕೆ ಹೇಗೆ ಬಂದೆ ಎಂಬುದು ಎಂದಿದ್ದಾರೆ. 

 ಈ ಹಿಂದೆ ಇದೇ ಸಿನಿಮಾದ 'ಮೇರೆ ಖ್ವಾಬೋನ್ ಮೇ ಜೋ ಆಯೆ' ಹಾಡಿಗೆ ಮಿನಿ ಸ್ಕರ್ಟ್​ ಕುರಿತು ಕಾಜೋಲ್​ ವಿವರಿಸಿದ್ದರು.  ಈ ಹಾಡಿನ ಒಂದು ದೃಶ್ಯದಲ್ಲಿ, ಕಾಜೋಲ್ ಬಿಳಿ ಬಣ್ಣದ ಶಾರ್ಟ್ ಸ್ಕರ್ಟ್ ಧರಿಸಿ ಮಳೆಯಲ್ಲಿ ಮೈ ಚಳಿ ಬಿಟ್ಟು ನೃತ್ಯ ಮಾಡಿದ್ದಾರೆ.  ಆದರೆ ಈ ಹಾಡಿನ ಚಿತ್ರೀಕರಣದ ಮೊದಲು, ಕಾಜೋಲ್ ಅವರ ಸ್ಕರ್ಟ್ ಅನ್ನು ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ತುಂಬಾ ಚಿಕ್ಕದಾಗಿ ಕತ್ತರಿಸಿದ್ದರಂತೆ.   ನಿರ್ದೇಶಕ ಆದಿತ್ಯ ಚೋಪ್ರಾ ಕೂಡ ಅದನ್ನು ನೋಡಿರಲಿಲ್ಲ. ನಂತರ ಕಾಜೋಲ್​ (Kajol) ಅದನ್ನು ಧರಿಸಿದಾಗ ಅವರಿಗೆ ಅಚ್ಚರಿಯಾಯಿತಂತೆ! ಈ ಡ್ರೆಸ್​ ನೋಡಿ ಸ್ವತಃ ಕಾಜೋಲ್ ಕೂಡ ತುಂಬಾ ಬೇಸರಗೊಂಡಿದ್ದರು. ಆದರೆ ಅವರಿಗೆ ಬೇರೆ ದಾರಿಯೇ ಇರಲಿಲ್ಲ, ಹಾಗಾಗಿ ಕಾಜೋಲ್ ಬಲವಂತದ ಮೇರೆಗೆ ಅದೇ ಸ್ಕರ್ಟ್ ಧರಿಸಬೇಕಾಯಿತು. ಇದನ್ನು ಮನೀಷ್ ಮಲ್ಹೋತ್ರಾ ಅವರೇ ಒಮ್ಮೆ ಜೂಮ್ ಜೊತೆ ಮಾತನಾಡುವಾಗ ಬಹಿರಂಗಪಡಿಸಿದ್ದಾರೆ. ಆದಾಗ್ಯೂ, ನಂತರ ಈ ಲುಕ್ ಮತ್ತು ಕಾಜೋಲ್ ಅವರ ಹಾಡು ಎರಡೂ ತುಂಬಾ ಇಷ್ಟವಾಯಿತು ಎಂದಿದ್ದಾರೆ. 

Allu Arjun ಒಂದೇ ಒಂದು ಫೋಟೋಗೆ ಹೊಡೆಯಿತು ಲಾಟರಿ: ಇತಿಹಾಸ ಸೃಷ್ಟಿಸಿದ ನಟ

click me!