
ಹಲವಾರು ಸೂಪರ್ ಮಾಡೆಲ್‌ಗಳು ನಟಿಯರಾಗುವ ಅಸೆಯಿಂದ ಬಾಲಿವುಡ್‌ನತ್ತ ಬಂದಿದ್ದಾರೆ. ಅವರಲ್ಲಿ ಹಲವರು ತಮ್ಮನ್ನು ತಾವು ಸ್ಥಾಪಿಸಿಕೊಂಡರು. ಇತರರಿಗೆ ಅದು ಸಾಧ್ಯವಾಗಲಿಲ್ಲ. ಆಕೆ ಮಿಸ್ ವರ್ಲ್ಡ್ ಆಗಿದ್ದಳು. ಪ್ರಸಿದ್ಧ ಮಾಡೆಲ್ ಅನಿಸಿಕೊಂಡಳು. ಬಾಲಿವುಡ್‌ನ ಅತಿ ಎತ್ತರದ ನಟಿ ಅನ್ನಿಸಿಕೊಂಡಿದ್ದಳು. ಆಕೆ ನಟಿಸಿದ ಫಿಲಂಗಳು ಯಾವುದೂ ಹಿಟ್ ಆಗಲಿಲ್ಲ. ಬಾಲಿವುಡ್‌ನಲ್ಲಿ ಅವರ ವೃತ್ತಿಜೀವನ ಎಂದಿಗೂ ಆರಕ್ಕೇರಲಿಲ್ಲ. ಬೇಸತ್ತು ನಟನೆ ತ್ಯಜಿಸಿದಳು. ಅವಳ ವೈಯಕ್ತಿಕ ಜೀವನ ಹಲವು ಏರಿಳಿತಗಳಿಗೆ ಸಾಕ್ಷಿಯಾಯಿತು, ಮುಖ್ಯವಾಗಿ ಪ್ರೀತಿಯ ವಿಷಯದಲ್ಲಿ. 2008ರಲ್ಲಿ ವಿವಾಹವಾದಳು. 2013ರಲ್ಲಿ ವಿಚ್ಛೇದನ ಪಡೆದಳು.
ನಾವು ಹೇಳುತ್ತಿರುವುದು ಮಾಡೆಲ್ ಕಂ ನಟಿ ಕಂ ಮಿಸ್ ವರ್ಲ್ಡ್ ವಿಜೇತೆ ಯುಕ್ತಾ ಮುಖಿ ಬಗ್ಗೆ. ಯುಕ್ತಾ ಅಕ್ಟೋಬರ್ 7, 197 ರಂದು ಬೆಂಗಳೂರಿನಲ್ಲಿ ಸಿಂಧಿ ಕುಟುಂಬದಲ್ಲಿ ಜನಿಸಿದಳು. ಆಕೆಗೆ 7 ವರ್ಷ ತುಂಬುವವರೆಗೂ ಕುಟುಂಬ ದುಬೈನಲ್ಲಿ ವಾಸಿಸುತ್ತಿದ್ದರು. ನಂತರ ಅವಳ ಪೋಷಕರು ಮುಂಬೈಗೆ ಮರಳಿದರು. ಭಾರತಕ್ಕೆ ಮರಳಿದ ನಂತರ, ಯುಕ್ತಾಳ ತಾಯಿ ಅರೂನಾ ಸಾಂತಾಕ್ರೂಜ್‌ನಲ್ಲಿ ಗ್ರೂಮಿಂಗ್ ಸಲೂನ್ ಅನ್ನು ಪ್ರಾರಂಭಿಸಿದರು. ಅವಳ ತಂದೆ ಇಂದರ್ಲಾಲ್ ಮುಖಿ, ಬಟ್ಟೆ ಬ್ರಾಂಡ್ ಒಂದರ ಮಾಜಿ ಎಂಡಿ ಆಗಿ ಸೇವೆ ಸಲ್ಲಿಸಿದರು. ಯುಕ್ತಾ ಪ್ರಾಣಿಶಾಸ್ತ್ರವನ್ನು ಅಧ್ಯಯನ ಮಾಡಿದಳು ಮತ್ತು ಆಪ್ಟೆಕ್‌ನಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಡಿಪ್ಲೊಮಾ ಪಡೆದಳು. ಆಕೆ ಮೂರು ವರ್ಷಗಳ ಕಾಲ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಅಧ್ಯಯನ ಮಾಡಿದ್ದಾಳೆ.
1999ರಲ್ಲಿ, ಯುಕ್ತಾ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದಳು. ಅದೇ ವರ್ಷ ಮಿಸ್ ಇಂಡಿಯಾ ವರ್ಲ್ಡ್ ಪ್ರಶಸ್ತಿಯನ್ನು ಪಡೆದಳು. ಈ ಗೆಲುವಿನೊಂದಿಗೆ ಯುಕ್ತಾ ಮಿಸ್ ವರ್ಲ್ಡ್‌ನಲ್ಲಿ ಭಾಗವಹಿಸಲು ಗ್ರೀನ್ ಕಾರ್ಡ್ ಪಡೆದಳು. 1999ರಲ್ಲಿ, ಲಂಡನ್‌ನ ಒಲಿಂಪಿಯಾದಲ್ಲಿ 49ನೇ ಆವೃತ್ತಿಯ ಮಿಸ್ ವರ್ಲ್ಡ್ ಸ್ಪರ್ಧೆ ನಡೆದಾಗ, ಯುಕ್ತಾ ಮಿಸ್ ವರ್ಲ್ಡ್ ಆದಳು.
ಪ್ರಶಸ್ತಿಯನ್ನು ಗೆದ್ದ ನಂತರ ಯುಕ್ತಾ ಬಾಲಿವುಡ್‌ನಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಿದಳು. 2002ರಲ್ಲಿ ಪ್ಯಾಸಾ ಚಿತ್ರದ ಮೂಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಳು. ಎ. ಮುತ್ತು ನಿರ್ದೇಶಿಸಿದ ಈ ಚಿತ್ರದಲ್ಲಿ ಅಫ್ತಾಬ್ ಶಿವದಾಸನಿ ಮತ್ತು ಜುಲ್ಫಿ ಸೈಯದ್ ಅವರಂತಹ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ದುರದೃಷ್ಟವಶಾತ್ ಆ ಚಿತ್ರ ದೊಡ್ಡ ಸೋಲನ್ನು ಕಂಡಿತು. ಅದರ ಹೊರತಾಗಿಯೂ ಯುಕ್ತಾ ತನ್ನ ಅದೃಷ್ಟವನ್ನು ಮತ್ತೆ ಮತ್ತೆ ಪರೀಕ್ಷಿಸಿದಳು. ಆದರೆ ಎಂದಿಗೂ ಯಶಸ್ವಿಯಾಗಲಿಲ್ಲ.
ಇದಕ್ಕೆ ಕಾರಣವನ್ನು ಹಲವರು ಆಕೆಯ ಎತ್ತರದಲ್ಲಿ ಊಹಿಸುತ್ತಾರೆ. ಯುಕ್ತಾ ಬಾಲಿವುಡ್‌ನ ಅತ್ಯಂತ ಎತ್ತರದ ನಟಿ ಎಂದು ನಿಮಗೆ ಗೊತ್ತಾ? ಮಾಧ್ಯಮ ವರದಿಗಳ ಪ್ರಕಾರ, ಅವಳ ಎತ್ತರ 5'9″. ಇಷ್ಟು ಎತ್ತರದ ಹೀರೋಯಿನ್ ಅನ್ನು ಹೀರೋಗಳು ಒಪ್ಪಿಕೊಳ್ಳುವುದೇ ಕಷ್ಟ. ಬಾಲಿವುಡ್‌ನಲ್ಲಿ ಜಾನ್ ಅಬ್ರಾಹಂ ಮತ್ತು ಹೃತಿಕ್ ರೋಶನ್ ಬಿಟ್ಟರೆ ಎತ್ತರದ ಹೀರೋಗಳೇ ಇಲ್ಲ. ಎತ್ತರದ ಹೀರೋಯಿನ್ ಮುಂದೆ ಕುಳ್ಳಗೆ ಕಾಣಲು ಯಾವ ಹೀರೋ ತಾನೆ ಇಷ್ಟಪಡುತ್ತಾನೆ?
Anushka Sharma: ಟಾಪ್ ನಟಿಯಾಗಲು ಕಾರಣ ಫೆಂಗ್ ಶೂಯಿ ಆಮೆ! ಗುಟ್ಟು ರಟ್ಟು ಮಾಡಿದ ಅನುಷ್ಕಾ ಶರ್ಮಾ
2008ರಲ್ಲಿ ಯುಕ್ತಾ ನ್ಯೂಯಾರ್ಕ್ ಮೂಲದ ಉದ್ಯಮಿ ಮತ್ತು ಹಣಕಾಸು ಸಲಹೆಗಾರ ಪ್ರಿನ್ಸ್ ತುಲಿ ಎಂಬಾತನನ್ನು ವಿವಾಹವಾದಳು. ನವೆಂಬರ್ 2 ರಂದು ಸಾಂಪ್ರದಾಯಿಕ ಸಿಖ್ ಸಮಾರಂಭದಲ್ಲಿ ನಡೆಯಿತು. ಆದರೆ ಇವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಮದುವೆಯಾದ ಸ್ವಲ್ಪ ಸಮಯದ ನಂತರ, ಇಬ್ಬರಿಗೂ ಒಬ್ಬ ಮಗ ಜನಿಸಿದ. ಗಂಡ ಈಕೆಯನ್ನು ಹಿಂಸಿಸುತ್ತಿದ್ದ. ದೌರ್ಜನ್ಯ ನಡೆಸುತ್ತಿದ್ದ. ಅಸಹಜ ಸೆಕ್ಸ್‌ಗೆ ಒತ್ತಾಯಿಸುತ್ತಿದ್ದ. ಹೀಗಾಗಿ ಆಕೆ ಅವನ ಮೇಲೆ ಕೇಸು ದಾಖಲಿಸಿದಳು. ಅವರ ಮದುವೆ ಉಳಿಯಲಿಲ್ಲ. 2013ರಲ್ಲಿ ನಟಿ ತನ್ನ ಪತಿಯೊಂದಿಗಿನ ಸಂಬಂಧವನ್ನು ಮುರಿದಳು. ಬಾಲಿವುಡ್‌ನಲ್ಲಿ ಕಠಿಣ ದಿನಗಳನ್ನು ಎದುರಿಸಿದ ಬಳಿಕ ಯುಕ್ತಾ ನಟನೆಯನ್ನು ತೊರೆದು ಸಮಾಜ ಸೇವಾ ಕಾರ್ಯಕರ್ತೆಯಾಗಿ ಕೆಲಸ ಮಾಡಿದಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.