Anushka Sharma: ಟಾಪ್​ ನಟಿಯಾಗಲು ಕಾರಣ ಫೆಂಗ್ ಶೂಯಿ ಆಮೆ! ಗುಟ್ಟು ರಟ್ಟು ಮಾಡಿದ ಅನುಷ್ಕಾ ಶರ್ಮಾ

Published : Apr 23, 2025, 05:08 PM ISTUpdated : Apr 23, 2025, 05:17 PM IST
Anushka Sharma: ಟಾಪ್​ ನಟಿಯಾಗಲು ಕಾರಣ ಫೆಂಗ್ ಶೂಯಿ ಆಮೆ! ಗುಟ್ಟು ರಟ್ಟು ಮಾಡಿದ ಅನುಷ್ಕಾ ಶರ್ಮಾ

ಸಾರಾಂಶ

ಅನುಷ್ಕಾ ಶರ್ಮಾ ತಮ್ಮ ಯಶಸ್ಸಿಗೆ ಫೆಂಗ್ ಶೂಯಿ ಆಮೆ ಕಾರಣ ಎಂದಿದ್ದಾರೆ. ತಾಯಿ ಆಶಿಮಾ ಶರ್ಮಾ, ಯಶ್ ರಾಜ್ ಫಿಲ್ಮ್ಸ್‌ನಲ್ಲಿ ನಟಿಸುವ ಅನುಷ್ಕಾ ಆಸೆಯನ್ನು ಫೆಂಗ್ ಶೂಯಿ ಆಮೆಯಲ್ಲಿ ಬರೆದಿಟ್ಟಿದ್ದರಂತೆ. "ರಬ್ ನೆ ಬನಾ ದಿ ಜೋಡಿ" ಚಿತ್ರಕ್ಕೆ ಆಯ್ಕೆಯಾದ ಬಳಿಕ ಈ ವಿಷಯ ಅನುಷ್ಕಾಗೆ ತಿಳಿದಿದೆ. ಚೀನೀ ಫೆಂಗ್ ಶೂಯಿ ಮತ್ತು ವಾಸ್ತುಶಾಸ್ತ್ರದಲ್ಲಿ ಆಮೆಯನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.

ವಾಸ್ತು ಶಾಸ್ತ್ರದ ಆಧಾರದ ಮೇಲೆ ಹಲವರು ಹಲವಾರು ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಅದರಲ್ಲಿಯೂ ಸೆಲೆಬ್ರಿಟಿಗಳು, ಉದ್ಯಮಿಗಳು ಇದನ್ನು ತುಂಬಾ  ನಂಬುತ್ತಾರೆ. ಇದು ಭಾರತದಲ್ಲಿ ಮಾತ್ರವಲ್ಲದೇ ಚೀನಾದಲ್ಲಿಯೂ ಸಕತ್​ ಫೇಮಸ್​. ಭಾರತದಲ್ಲಿ ವಾಸ್ತು ವಿಜ್ಞಾನ ಎಂದು ಹೇಳಿದರೆ  ಚೀನಾದಲ್ಲಿ ಇದಕ್ಕೆ ಫೆಂಗ್‌ ಶೂಯಿ ಎನ್ನುತ್ತಾರೆ. ಹಾಗೆ ನೋಡಿದರೆ,  ಫೆಂಗ್‌ ಎಂದರೆ ಗಾಳಿ, ಶೂಯಿ ಎಂದರೆ ನೀರು ಎಂದರ್ಥ. ಹೇಗೆ ಗಾಳಿ ಮತ್ತು ನೀರು ಜೀವನದ ಮುಖ್ಯ ಆಧಾರವಾಗಿವೆಯೋ ಹಾಗೆಯೇ ಫೆಂಗ್​ ಶೂಯಿ ಕೂಡ ಎನ್ನಲಾಗುತ್ತದೆ.  ಇವು ಮನೆಗೆ ಸಕಾರಾತ್ಮಕ  ಶಕ್ತಿ ತರುವ ವಸ್ತುಗಳಾಗಿವೆ. ಇದೇ  ಕಾರಣಕ್ಕೆ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಹಲವು ದೇಶಗಳಲ್ಲಿ ಫೆಂಗ್‌ ಶೂಯಿ ನಂಬುತ್ತಾರೆ.  ಫೆಂಗ್‌ ಶೂಯಿ ಸಲಹೆಗಳನ್ನು ಅನುಸರಿಸಿದರೆ ಜೀವನದಲ್ಲಿ ಒಳಿತಾಗುತ್ತದೆ. ಬದುಕು ಸುಂದರವಾಗಿರುತ್ತದೆ ಎಂದು ನಂಬಲಾಗಿದೆ.  ಇದರ ಬಗ್ಗೆಯೇ ಇದೀಗ ನಟಿ ಅನುಷ್ಕಾ  ಶರ್ಮಾ ಕೂಡ ಮಾತನಾಡಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಅನುಷ್ಕಾ ಶರ್ಮಾ ಬಾಲಿವುಡ್​ನ ಟಾಪ್​ ನಾಯಕಿಯಲ್ಲಿ ಒಬ್ಬರಾಗಿದ್ದಾರೆ. ಈಚೆಗೆ ಈಕೆ ಇನ್ನು  ಎರಡನೆಯ ಮಗುವಿನ  ಅಮ್ಮ ಕೂಡ ಆಗಿದ್ದಾರೆ.  2021ರಲ್ಲಿ ಅನುಷ್ಕಾ ಶರ್ಮಾ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಹೆಣ್ಣು ಮಗುವಿಗೆ ವಮಿಕಾ ಎಂದು ಹೆಸರಿಡಲಾಗಿದೆ.  ಜನವರಿ 11ರಂದು ಕೊಹ್ಲಿ ದಂಪತಿ ವಮಿಕಾಳ 3ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಕಳೆದ  ಫೆಬ್ರವರಿ 15 ರಂದು ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 5 ದಿನಗಳ ಬಳಿಕ ಕೊಹ್ಲಿ 2ನೇ ಬಾರಿಗೆ ತಂದೆಯಾಗಿರುವ ಸಂತಸ ಹಂಚಿಕೊಂಡಿದ್ದರು. ಇದೇ ವೇಳೆ 2ನೇ ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದಾರೆ.ವಿ ರುಷ್ಕಾ ದಂಪತಿ ಎರಡನೇ ಮಗುವಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ. ಟರ್ಕಿ ಮೂಲದ ಪದ ಹುಡುಕಿ ವಿರುಷ್ಕಾ ದಂಪತಿ 2ನೇ ಮಗುವಿಗೆ ಹೆಸರಿಟ್ಟಿದ್ದಾರೆ. ಟರ್ಕಿಯಲ್ಲಿ ಅಕಾಯ್ ಎಂದರೆ ಹೊಳೆಯುತ್ತಿರುವ ಚಂದ್ರ ಎಂದರ್ಥವಾಗಿದೆ. ಮಗ ಹೊಳೆಯುವ ಚಂದ್ರನಂತೆ ಅನ್ನೋ ಅರ್ಥದಲ್ಲಿ ಮುದ್ದಾದ ಹೆಸರನ್ನು ವಿರುಷ್ಕಾ ದಂಪತಿ ತಮ್ಮ ಮಗುವಿಗೆ ಇಟ್ಟಿದ್ದಾರೆ. 

ಜ್ಯೋತಿಷಿಗೇ ಸುಳ್ಳು ಹೇಳಿ ಸಿಕ್ಕಾಕ್ಕೊಂಡು ಬಿದ್ದೆ: ಅಂದು ನಡೆದ ರೋಚಕ ಪ್ರಸಂಗ ವಿವರಿಸಿದ ಮಾಸ್ಟರ್ ಆನಂದ್​​

ಮಗುವಿಗೆ ಇಂಥ ವಿಶೇಷ ಅರ್ಥದ ಹೆಸರು ಇಟ್ಟಿರುವ ಅನುಷ್ಕಾ, ಇದೀಗ ತಾವು ಬಾಲಿವುಡ್​ನ ಸ್ಟಾರ್​ ಆಗಿದ್ದ ಹಿಂದೆ ಇರುವುದು ಫೆಂಗ್ ಶೂಯಿ ಆಮೆ ಎಂದು ಹೇಳಿದ್ದಾರೆ. ನನಗೆ ಯಶ್​ ರಾಜ್​ ಫಿಲ್ಮ್​ನಲ್ಲಿ ನಟಿಸುವ ಅವಕಾಶ ಸಿಕ್ಕಾಗ ನಾನು ಅದನ್ನು ನಂಬಲು ಸಾಧ್ಯವೇ ಆಗಿರಲಿಲ್ಲ. ಆದರೆ ಕೊನೆಗೆ ತಿಳಿಯಿತು ನನ್ನ ಅಮ್ಮ ಆಶಿಮಾ ಶರ್ಮಾ, ಫೆಂಗ್ ಶೂಯಿ ಆಮೆಯಲ್ಲಿ ಈ ಇಚ್ಛೆಯನ್ನು ಚೀಟಿಯಲ್ಲಿ ಬರೆದು ಇಟ್ಟಿದ್ದರು ಎಂದು. ನನ್ನ ಮಗಳಿಗೆ ಯಶ್​ ರಾಜ್​ ಫಿಲ್ಮ್​ನಲ್ಲಿ ನಟಿಸುವ ಅವಕಾಶ ಸಿಗಬೇಕು ಎಂದು ಬರೆದು ಇಟ್ಟಿದ್ದರು. ಆದರೆ ಅದು ನನಗೆ ತಿಳಿದಿರಲಿಲ್ಲ. ಸಿನಿಮಾಕ್ಕೆ ಅವಕಾಶ ಸಿಕ್ಕಾಗ ಅಮ್ಮನಿಗೆ ಕಾಲ್ ಮಾಡಿ ಹೇಳಿದೆ. ಮನೆಗೆ ಹೋದಾಗ ಅಮ್ಮ ಅಲ್ಲಿ ಇಟ್ಟಿರುವ ಚೀಟಿಯನ್ನು ತೋರಿಸಿದರು. ನಿಜಕ್ಕೂ ನನಗೆ ಶಾಕ್​ ಆಗಿ ಹೋಯಿತು. ನಾನು ಟಾಪ್​ ನಟಿಯಾಗುವ ನನ್ನ ಮತ್ತು ಅಮ್ಮನ ಆಸೆಯನ್ನು ಫೆಂಗ್ ಶೂಯಿ ಆಮೆ ನೆರವೇರಿಸಿತ್ತು ಎಂದು ಸಂದರ್ಶನದಲ್ಲಿ ನಟಿ ತಿಳಿಸಿದ್ದಾರೆ. 
  
ಇದರ ಅರಿವು ಇಲ್ಲದೆಯೇ ನಾನು ಆಡಿಷನ್​ಗೆ ಹೋಗಿದ್ದೆ.  ಶಾರುಖ್ ಖಾನ್ ಎದುರು ಯಶ್ ರಾಜ್ ಫಿಲ್ಮ್ಸ್‌ನ "ರಬ್ ನೆ ಬನಾ ದಿ ಜೋಡಿ" ಯಲ್ಲಿ  ಚೊಚ್ಚಲ ಪಾತ್ರಕ್ಕಾಗಿ ಆಯ್ಕೆಯಾದೆ. ಆಗ ಅಮ್ಮನಿಗೆ ಕರೆ ಮಾಡಿದಾಗಲೇ ನನಗೆ ವಿಷಯ ತಿಳಿದದ್ದು ಎಂದರು.  ಇನ್ನು ಅನುಷ್ಕಾ ‘ಜೀರೋ’ ಸಿನಿಮಾ ತೆರೆಕಂಡ ಬಳಿಕ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ.  ಎರಡನೇ ಮಗು ಪಡೆಯುವ ಉದ್ದೇಶದಿಂದಲೇ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ ಎಂಬುದು ಹಲವರ ಊಹೆಯಾಗಿತ್ತು. ಕೊನೆಗೂ ಅದು ನಿಜವಾಗಿತ್ತು. ಅಷ್ಟಕ್ಕೂ ಚೀನೀಯರ ಫೆಂಗ್ ಶೂಯಿ ಮತ್ತು ವಾಸ್ತು ಶಾಸ್ತ್ರವು ಆಮೆಯನ್ನು ಅದೃಷ್ಟದ ಸಂಕೇತ ಎಂಬುದನ್ನು ಪ್ರತಿಪಾದಿಸುತ್ತದೆ. 

ವಿರಾಟ್-ಅನುಷ್ಕಾ ತಮ್​​ ಫೋನ್​ನಲ್ಲಿ ಪರಸ್ಪರ ಹೆಸ್ರನ್ನು ಹೀಗೆ ಸೇವ್​ ಮಾಡಿಕೊಂಡಿದ್ದಾರಂತೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್