ಪಾಕ್ ಡಿಸೈನರ್ ಲೆಹಂಗಾದಲ್ಲಿ ಮಿಂಚಿದ ನಟಿ ಸ್ವರಾ ಭಾಸ್ಕರ್; ಆರತಕ್ಷತೆ ಫೋಟೋ ವೈರಲ್

By Shruthi KrishnaFirst Published Mar 20, 2023, 10:32 AM IST
Highlights

ನಟಿ ಸ್ವರಾ ಭಾಸ್ಕರ್ ಮದುವೆ ಆರತಕ್ಷತೆಯಲ್ಲಿ ಪಾಕ್ ವ್ಯಕ್ತಿ ಡಿಸೈನ್ ಮಾಡಿದ ಲೆಹಂಗಾದಲ್ಲಿ ಮಿಂಚಿದ್ದಾರೆ. ಫೋಟೋ ವೈರಲ್ ಆಗಿದೆ.

ಬಾಲಿವುಡ್ ಖ್ಯಾತ ನಟಿ  ಸ್ವರಾ ಭಾಸ್ಕರ್ ಮದುವೆ ಸಂಭ್ರಮ ಇನ್ನೂ ಮುಗಿದಿಲ್ಲ. ಕಳೆದ ಒಂದು ವಾರದಿಂದ  ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹಮ್ಮದ್ ಮದುವೆ ಸಮಾರಂಭ ಅದ್ದೂರಿಯಾಗಿ ನಡೆಯುತ್ತಿದೆ.   ಇತ್ತೀಚಿಗಷ್ಟೆ ದೆಹಲಿಯಲ್ಲಿ ಅದ್ದೂರಿಯಾಗಿ ಮದುವೆಯಾದ ಸ್ವರಾ ಮತ್ತು ಫಹಾದ್ ಇದೀಗ ಮತ್ತೊಂದು ಆರತಕ್ಷತೆಯನ್ನು ಹಮ್ಮಿಕೊಂಡಿದ್ದರು. ದೆಹಲಿಯಲ್ಲಿ ಮದುವೆ ಆರತಕ್ಷತೆ ಬಳಿಕ ಇದೀಗ ಕುಟುಂಬದವರಿಗಾಗಿ ಅದ್ದೂರಿ ಆರತಕ್ಷತೆ ಹಮ್ಮಿಕೊಳ್ಳಲಾಗಿತ್ತು. ಸ್ವರಾ ಮತ್ತು ಫಹಾದ್ ಮದುವೆ ಆರತಕ್ಷತೆಯಲ್ಲಿ ಕುಟುಂಬದವರು, ಸ್ನೇಹಿತರು ಭಾಗಿಯಾಗಿದ್ದರು. 

ಆರತಕ್ಷತೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಶೇಷ ಎಂದರೆ ಸ್ವರಾ ಆರತಕ್ಷತೆಯಲ್ಲಿ ಧರಿಸಿದ್ದ ಲೆಹಂಗಾ ಗಮನ ಸೆಳೆಯುತ್ತಿದೆ. ಹೆವಿ ಎಂಬ್ರಾಯಿಡರಿ ವರ್ಕ್ ಇರುವ ಲೆಹಂಗಾ ಧರಿಸಿದ್ದರು. ಸ್ವರಾ ಧರಿಸಿದ್ದ ಲೆಹಂಗಾವನ್ನು ಪಾಕಿಸ್ತಾನದ ಪ್ರಸಿದ್ಧ ಡಿಸೈನರ್ ಒಬ್ಬರು ಡಿಸೈನ್ ಮಾಡಿದ ಲೆಹಂಗಾವಾಗಿದೆ. ಮೂಗಿಗೆ ದೊಡ್ಡ ರಿಂಗ್ ಧರಿಸಿದ್ದರು. ಇನ್ನು ಸ್ವರಾ ಪತಿ ಫಹಾದ್ ಬಿಳಿ ಮತ್ತು ಗೋಲ್ಡನ್ ಬಣ್ಣದ ಕರ್ತಾದಲ್ಲಿ ಕಾಣಿಸಿಕೊಂಡಿದ್ದರು.  

ಸ್ವರಾ ಮತ್ತು ಫಹಾದ್ ಜೋಡಿಗೆ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಅಂದಹಾಗೆ ಸ್ವರಾ ತನ್ನ ಆರತಕ್ಷತೆಯ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋ ಜೊತೆಗೆ ಲೆಹಂಗಾ ಮತ್ತು ಮೇಕಪ್ ಆರ್ಟಿಸ್ಟ್ ಬಗ್ಗೆ ಹೊಗಳಿದ್ದಾರೆ. ಅದ್ಭುತವಾದ ಲೆಹಂಗಾ ಸ್ಟೆಟ್‌ಗಾಗಿ ಪಾಕ್ ಡಿಸೈನರ್ ಗೆ ಧನ್ಯವಾದ ತಿಳಿಸಿದ್ದಾರೆ. 

ಸ್ವರಾ ಭಾಸ್ಕರ್ ಮದುವೆ ಮದುವೆ ಆದಾಗಿನಿಂತ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಕಳೆದ ತಿಂಗಳು ಫಹಾದ್ ಮತ್ತು ಸ್ವರಾ ಇಬ್ಬರೂ ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡಿಸಿದ್ದರು. ಅಲ್ಲಿಂದ ಸಿಕ್ಕಾಪಟ್ಟೆ ಟೀಕೆ ಎದುರಿಸುತ್ತಿದ್ದಾರೆ. ಲವ್ ಜಿಹಾದ್, ಫ್ರಿಜ್ಡ್ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಇದೀಗ ಪಾಕ್ ಡಿಸೈನರ್ ವಿನ್ಯಾಸಗೊಳಿಸಿದ ಲೆಹಂಗಾ ಧರಿಸಿ ಮತ್ತೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Many congratulations, Fahad bhai and Swara Ji

Wishing you a blessed and happy life ahead. pic.twitter.com/apHXfXts0f

— Suhaib Ansari (Mannu) (@Suhaibansarii)

ಅಮ್ಮನ ಮನೆಗೆ ವಿದಾಯ ಹೇಳುವಾಗ ಬಿಕ್ಕಿ ಬಿಕ್ಕಿ ಅತ್ತ ಸ್ವರಾ; ತುಂಬಾ ಕಷ್ಟದ ಕ್ಷಣ ಎಂದ ತಂದೆ, ವಿಡಿಯೋ ವೈರಲ್

ಸ್ವರಾ ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮದ ಸಂಪ್ರದಾಯದ ಪ್ರಕಾರ ಮದುವೆಯಾದರು. ಶಾಸ್ತ್ರೋಕ್ತವಾಗಿ ಸ್ವರಾ ಮತ್ತು ಫಹಾದ್ ದಾಂಪತ್ಯಕ್ಕೆ ಕಾಲಿಟ್ಟರು. ಮೊನ್ನೆಯಷ್ಟೆ ಸ್ವರಾ ಅಮ್ಮನ ಮನೆಗೆ ವಿದಾಯ ಹೇಳಿ ಗಂಡನ ಮನೆಗೆ ಹೋಗುವಾಗ ಬಿಕ್ಕಿ ಬಿಕ್ಕಿ ಅಳುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ಶೇರ್ ಮಾಡಿ ಸ್ವರಾ ತಂದೆ ಕೂಡ ಭಾವುಕರಾಗಿದ್ದರು. ಸ್ವರಾ ಕಣ್ಣೀರಾಕುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.   

ನಟಿ ಸ್ವರಾ-ಫಹಾದ್ ದಂಪತಿಗೆ ಸಂಗೀತ, ಹಳದಿ ಶಾಸ್ತ್ರದ ಸಂಭ್ರಮ; ಸೀರೆಯಲ್ಲಿ ಮಿಂಚಿದ ಫೋಟೋ ವೈರಲ್

ತೆಲುಗು ಶೈಲಿಯ ಮಂಗಲಸೂತ್ರ

ತೆಲುಗು ಸಂಪ್ರದಾಯದ ಪ್ರಕಾರ ಮದುವೆಯಾದ ಸ್ವರಾ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿತ್ತು. ತೆಲುಗು ಸಂಸ್ಕೃತಿಯನ್ನು ಸಂಕೇತಿಸುವ ವಿಶೇಷ ಮಂಗಲಸೂತ್ರವನ್ನು ಧರಿಸಿದ್ದಾರೆ. ಸ್ವರಾ ತಾಯಿ ಇರಾ ಭಾಸ್ಕರ್ ಬಿಹಾರದವರು  ಆದರೆ ಅವರ ತಂದೆ ಸಿ ಉದಯ್ ಭಾಸ್ಕರ್ ತೆಲುಗು ಮೂಲದವರು. ಹಾಗಾಗಿ ಸ್ವರಾ ತೆಲುಗು ಶೈಲಿಯ ಸಮಾರಂಭದಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಮಂಗಲಸೂತ್ರ ಧರಿಸಿರುವ ಸ್ವರಾ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಅಭಿಮಾನಿಗಳು ಸ್ವರಾ ಜೋಡಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. 

click me!