
ಭೋಜ್‌ಪುರಿ ನಟ ಕೇಸರಿ ಲಾಲ್ ಯಾದವ್ (Khesari Lal Yadav) ಅವರು ಚಲನಚಿತ್ರಗಳೊಂದಿಗೆ ಸಂಗೀತ ಆಲ್ಬಮ್‌ಗಳಿಗೂ ಪ್ರಸಿದ್ಧರಾಗಿದ್ದಾರೆ. ಇತ್ತೀಚೆಗೆ ಅವರು ಮತ್ತು ಕಾಜಲ್ ರಾಘವಾನಿ ನಡುವಿನ ರೊಮಾಂಟಿಕ್ ಹಾಡನ್ನು ಅಭಿಮಾನಿಗಳು ಹುಚ್ಚೆದ್ದು ಪ್ರೀತಿಸಿದ್ದರು. ಇವರ ಸಿನಿಮಾ ಆಗಿರಲಿ ಅಥವಾ ಮ್ಯೂಸಿಕ್ ವೀಡಿಯೋ ಆಗಿರಲಿ ಜನರು ಬಹಳ ಖುಷಿಯಿಂದ ನೋಡುತ್ತಾರೆ. ಕಾಜಲ್ ಮತ್ತು ಕೇಸರಿ ಹಾಡುಗಳು ಬಿಡುಗಡೆಯಾದ ತಕ್ಷಣ ಲಕ್ಷಗಟ್ಟಲೆ ವೀಕ್ಷಣೆಗಳನ್ನು ಪಡೆಯುತ್ತವೆ. ಇಷ್ಟೇ ಅಲ್ಲ, ಅವರ ಹಾಡುಗಳು ಹೆಚ್ಚಾಗಿ ಯೂಟ್ಯೂಬ್‌ನಲ್ಲಿ ಟ್ರೆಂಡ್ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಕಾಜಲ್ ಮತ್ತು ಕೇಸರಿ ಇಬ್ಬರ ಸೂಪರ್ ರೊಮ್ಯಾಂಟಿಕ್ ಹಾಡು ಸಾಕಷ್ಟು ಕೇಳಿಬರುತ್ತಿದೆ. ಈ ಹಾಡು ಕೋಟಿಗಟ್ಟಲೆ ವೀಕ್ಷಣೆ ಪಡೆದಿದೆ. ಆ ಹಾಡು 'ಮಸ್ಕಿ ಮಾರ್ ಕೆ ಜೆ ಬೋಲಾ ಲಾ ಕರೆಜಾವು'. ಇದರಲ್ಲಿ ಕಾಜಲ್ ಸೀರೆಯಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಇಬ್ಬರ ಜೋಡಿಯನ್ನು ಜನ ಮೆಚ್ಚಿಕೊಂಡಿದ್ದಾರೆ. 'ಮಸ್ಕಿ ಮಾರ್ ಕೆ ಜೆ ಬೋಲಾ ಲಾ ಕರೆಜಾವು' ಹಾಡು 45 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ನೋಡಲ್ಪಟ್ಟಿದೆ. ಕೇಸರಿ ಮತ್ತು ಕಾಜಲ್ ಮೇಲೆ ಚಿತ್ರೀಕರಿಸಲಾದ ಈ ಹಾಡನ್ನು ಪ್ರಿಯಾಂಕಾ ಸಿಂಗ್ ಮತ್ತು ಕೇಸರಿಸ್ವತಃ ಹಾಡಿದ್ದಾರೆ. ಇದರ ಸಂಗೀತವನ್ನು ರಜನೀಶ್ ಮಿಶ್ರಾ ಸಂಯೋಜಿಸಿದ್ದಾರೆ.
ಈಗ ಅವರ ಇನ್ನೊಂದು ಮ್ಯೂಸಿಕ್ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರ ಜೊತೆ ನಟಿ ಮೇಘಾಶ್ರೀ (Meghashree) ಕೂಡ ಕಾಣಿಸಿಕೊಂಡಿದ್ದಾರೆ. ಕೇಸರಿ ಲಾಲ್ ಯಾದವ್ ಮತ್ತು ಮೆಗಾ ಶ್ರೀ ಅವರ ಕುಚ್ ದ ನಾ ಜವಾನಿ ಹಮರ್ ಲೋಧಾ ಸೇ... ಹಾಡು ಸಾಕಷ್ಟು ರೋಮ್ಯಾಂಟಿಕ್ ಆಗಿದೆ. ಇದರಲ್ಲಿ ಇಬ್ಬರ ನಡುವೆ ಬೆಡ್ ರೂಮ್ ನಲ್ಲಿ ಭರ್ಜರಿ ಕೆಮಿಸ್ಟ್ರಿ ಕಾಣಿಸುತ್ತಿದೆ. ಕೇಸರಿ ಲಾಲ್ ಯಾದವ್ ಅವರ ಮ್ಯೂಸಿಕ್ ಟ್ರ್ಯಾಕ್ ತುಂಬಾ ಇಷ್ಟವಾಗುತ್ತಿದೆ. ಇದರಲ್ಲಿ ಅವರು ಮೇಘಾಶ್ರೀ ಅವರಿಂದ ಲಿಪ್ ಕಿಸ್ ಕೇಳುತ್ತಿದ್ದಾರೆ.ಲಿಪ್ ಕಿಸ್ ಸಿಗದಿದ್ದಾಗ ಕೇಸರಿ ಲಾಲ್ ಯಾದವ್ ಕೋಪಗೊಳ್ಳುತ್ತಾರೆ ಮತ್ತು ಮೇಘಶ್ರೀ ಅವರೊಂದಿಗೆ ಲಿಪ್ ಕಿಸ್ ಮಾಡಲು ಪ್ರಯತ್ನಿಸುತ್ತಾರೆ. ಮೇಘಾ ಶ್ರೀ ನೀಲಿ ಸೀರೆಯಲ್ಲಿ ತನ್ನ ಮಾದಕ ನಡೆಗಳಿಂದ ಕೇಸರಿಲಾಲ್‌ನನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ನಂತರ ಕೇಸರಿಲಾಲ್ ಯಾದವ್ ಮೇಘ ಶ್ರೀಯನ್ನು ತನ್ನ ತೋಳುಗಳಲ್ಲಿ ತೆಗೆದುಕೊಂಡು ಅವಳನ್ನು ಚುಂಬಿಸಲು ಪ್ರಯತ್ನಿಸುತ್ತಾರೆ.
ಪತಿ ಆದಿಲ್ ಖಾನ್ಗೆ ರಾಖಿ ಸಾವಂತ್ ಕ್ಷಮಾಪಣೆ! ರಂಜಾನ್ ಬರ್ತಿದೆ, ರಿಲೀಸ್ ಮಾಡಿ ಎಂದ ನಟಿ
ಈ ಹಾಡಿಗೆ ಅಭಿಮಾನಿಗಳು ಸಕತ್ ಕಮೆಂಟ್ಸ್ ಮಾಡುತ್ತಿದ್ದಾರೆ. ಹಾಡಿನಲ್ಲಿ ಕೇಸರಿಲಾಲ್ ಯಾದವ್ ಮತ್ತು ಮೇಘಾ ಶ್ರೀ ನಡುವಿನ ಕೆಮಿಸ್ಟ್ರಿ ನೋಡಿ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ. ಪಡ್ಡೆ ಹುಡುಗರ ನಿದ್ದೆಯನ್ನು ನೀವು ಕದ್ದಿರುವುದಾಗಿ ಹಲವರು ಹೇಳಿದ್ದಾರೆ. ಕೇಸರಿಲಾಲ್ ಯಾದವ್ ಭೋಜ್‌ಪುರಿ (Bhojpuri) ಚಲನಚಿತ್ರೋದ್ಯಮದಲ್ಲಿ ನಟನಾಗಿ ಮಾತ್ರವಲ್ಲದೆ ಗಾಯನಕ್ಕಾಗಿಯೂ ಗುರುತಿಸಲ್ಪಟ್ಟಿದ್ದಾರೆ.
ಇತ್ತೀಚೆಗೆ ಇವರ ಮತ್ತು ರಾಣಿ ಚಟರ್ಜಿ (Rani Chatarjee) ರೊಮಾನ್ಸ್ ವಿಡಿಯೋ ಕೂಡ ಸಾಕಷ್ಟು ಹಲ್ಚಲ್ ಸೃಷ್ಟಿಸಿತ್ತು. ಈ ಜೋಡಿ ಹಿರಿತೆರೆಯಲ್ಲಿ ಕಾಣಿಸಿಕೊಂಡಿದ್ದು, ಸಕತ್ ಫೇಮಸ್ ಆಗಿದೆ. ಭೋಜ್‌ಪುರಿ ಚಿತ್ರ ಜಾನಂ ಚಿತ್ರದ 'ಪಾತರ್ ಪಾಟರ್ ಪಿಯಾವಾ ಕೆ' ಹಾಡು ಯೂಟ್ಯೂಬ್‌ನಲ್ಲಿ ಮತ್ತೊಮ್ಮೆ ಟ್ರೆಂಡಿಂಗ್ ಆಗಿದೆ. ಈ ಹಾಡಿನಲ್ಲಿ, ರಾಣಿ ಚಟರ್ಜಿ ಅವರು ನಟ ಕೇಸರಿ ಲಾಲ್ ಯಾದವ್ ಅವರನ್ನು ತಮ್ಮ ಮೋಡಿಮಾಡುವ ಚಲನೆಗಳಿಂದ ಮಂತ್ರಮುಗ್ಧರನ್ನಾಗಿಸಿದ್ದಾರೆ. ಮಧ್ಯರಾತ್ರಿಯ ಸಮಯದ ಕುರಿತು ಚಿತ್ರೀಕರಿಸಲಾಗಿರುವ ಈ ಹಾಡಿನಲ್ಲಿ ಕೇಸರಿಲಾಲ್ ಮತ್ತು ರಾಣಿ ಚಟರ್ಜಿ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದಾರೆ. ಇವರ ಪ್ರೀತಿ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ.
Divya Shridhar: ಲವ್ ಜಿಹಾದ್ಗೆ ಸಿಲುಕಿದ ಕನ್ನಡದ ಖ್ಯಾತ ನಟಿ, ತುಂಬು ಗರ್ಭಿಣಿಯಾದರೂ ತಪ್ಪಿಲ್ಲ ಕಷ್ಟ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.