ಮದ್ವೆಯಾಗಿ ಏಕಾಏಕಿ ಶಾಕ್​ ಕೊಟ್ಟ ನಟಿ Swara Bhasker- ಯಾರೀ 'ನಿಗೂಢ' ಗಂಡ?

By Suvarna NewsFirst Published Feb 16, 2023, 6:56 PM IST
Highlights

ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನಿಗೂಢ ವ್ಯಕ್ತಿಯ ಜೊತೆ ಫೋಟೋ ಶೇರ್​  ಮಾಡಿ ಅವರ ಮುಖವನ್ನು ಮರೆಮಾಚಿದ್ದ ನಟಿ ಸ್ವರಾ ಭಾಸ್ಕರ್​ ಏಕಾಏಕಿ ಮದುವೆಯಾಗಿ ಶಾಕ್​  ಕೊಟ್ಟಿದ್ದಾರೆ. ಯಾರು ಅವರ ಪತಿ? 
 

ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhasker)  ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ವಿವಾದಿತ ಹೇಳಿಕೆಗಳ ಮೂಲಕವೇ ಹೆಚ್ಚು ಸದ್ದು ಮಾಡುವ ನಟಿ ಸ್ವರಾ ಭಾಸ್ಕರ್ ಇದೀಗ ನಿಗೂಢ ವ್ಯಕ್ತಿ ಜೊತೆ ಫೋಟೋ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದರು. ಫೋಟೋ ಜೊತೆಗೆ ಲವ್ ಇರಬಹುದಾ ಎಂದು ಕ್ಯಾಪ್ಷನ್ ನೀಡಿದ್ದರು. ಇತ್ತೀಚಿಗಷ್ಟೆ ನಟಿ ಸ್ವರಾ ಭಾಸ್ಕರ್ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿತ್ತು. ಸ್ವರಾ ಅವರನ್ನು ವ್ಯಕ್ತಿಯೊಬ್ಬರು ತಬ್ಬಿಕೊಂಡಿದ್ದರು. ಆದರೆ ಅವರ ಮುಖ ಕಾಣುತ್ತಿರಲಿಲ್ಲಲ್ಲ. ವ್ಯಕ್ತಿಯೊಬ್ಬರ ತೋಳಲ್ಲಿ ಬಂಧಿಯಾಗಿದ್ದರು. ಸ್ವರಾ ಹಾಸಿಗೆ ಮೇಲೆ ಮಲಗಿದ್ದು ವ್ಯಕ್ತಿಯೊಬ್ಬ ತೋಳಿನಿಂದ ಬಂಧಿಸಿದ್ದರು. 'ಇದು ಪ್ರೀತಿ ಆಗಿರಬಹುದು' ಎಂದು ಸ್ವರಾ ಪೋಸ್ಟ್‌ಗೆ ಕ್ಯಾಪ್ಷನ್ ನೀಡಿದ್ದರು. ಸ್ವರಾ ಭಾಸ್ಕರ್ ಪೋಸ್ಟ್ ಮಾಡಿದ ಕೂಡಲೇ, ಅಭಿಮಾನಿಗಳು ನಿಮ್ಮ ಬಾಯ್ ಪ್ರೆಂಡ್ ಹಾ ಎಂದು ಕಾಮೆಂಟ್ ಮಾಡುತ್ತಿದ್ದರು. 

ಇದೀಗ ಆ ವ್ಯಕ್ತಿಯ ಫೋಟೋ ರಿವೀಲ್​ ಆಗಿದೆ. ರಿವೀಲ್​ ಆಗಿರುವುದು ಇರಲಿ... ಸ್ವರಾ ಖುದ್ದು ಆ ವ್ಯಕ್ತಿಯ ಪಕ್ಕದಲ್ಲಿ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಹೌದು. ಇಬ್ಬರ ಮದುವೆಯಾಗಿದೆ. ಅದರ ಫೋಟೋ ಅನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್​ ಕೊಟ್ಟಿದ್ದಾರೆ.  ಟ್ವಿಟರ್‌ (Tweet) ಹಾಗೂ ಇನ್​ಸ್ಟಾಗ್ರಾಮ್​ನಲ್ಲಿ  ತಮ್ಮ ಮದುವೆ ವಿಚಾರ ತಿಳಿಸಿದ್ದಾರೆ. ಅಷ್ಟಕ್ಕೂ ಅವರನ್ನು ಕೈ ಹಿಡಿದಿರುವ ವರ ಎಂದರೆ  ರಾಜಕಾರಣಿ ಹಾಗೂ ಕಾರ್ಯಕರ್ತ ಫಹಾದ್ ಅಹ್ಮದ್.

Latest Videos

ಅಪ್ಪ-ಮಗ ಇಬ್ರನ್ನೂ ತಬ್ಬಿ ರೊಮಾನ್ಸ್​ ಮಾಡಿರೋ ಬಾಲಿವುಡ್​ ಬೆಡಗಿಯರಿವರು

 

ಈ ಸಂದರ್ಭದಲ್ಲಿ ಟ್ವಿಟರ್​ ಖಾತೆಯಲ್ಲಿ ತಾವು ಭೇಟಿಯಾಗಿರುವ ಸುಂದರ ದೃಶ್ಯಗಳ ತುಣುಕುಗಳನ್ನೂ ಶೇರ್​ ಮಾಡಿದ್ದಾರೆ. ಪ್ರತಿಭಟನೆಯೊಂದರಲ್ಲಿ ತಾವು ಭೇಟಿಯಾಗಿರುವ ವಿಷಯ ಹಂಚಿಕೊಂಡಿದ್ದಾರೆ. ಈ ಮೂಲಕ ಜನವರಿ 6, 2023 ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹವನ್ನು (Special Marriage Act) ನ್ಯಾಯಾಲಯದಲ್ಲಿ ನೋಂದಾಯಿಸಿಕೊಂಡಿದ್ದಾರೆ (Registered) ಎಂದು ತಿಳಿಸಿದ್ದಾರೆ.  ಸ್ವರಾ ತಮ್ಮ  ಪೋಷಕರೊಂದಿಗೆ ಹಾಜರಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಾಯಿಸಿದ ತನ್ನ ಕೋರ್ಟ್​ ಮ್ಯಾರೇಜ್​ನ ಲುಕ್ ನೀಡಿದರು. ಕೆಲವೊಮ್ಮೆ ಹತ್ತಿರವೇ ಇರುವವರನ್ನು ದೂರೆಲ್ಲೋ ಹುಡುಕುತ್ತೇವೆ. ಆದರೆ ಫಹಾದ್​ ಅವರು ಹತ್ತಿರದಲ್ಲಿಯೇ ಇದ್ದಾಗ ಅವರೇ ನನ್ನ ಪ್ರೀತಿ ಎನ್ನುವುದು ತಿಳಿಯಲು ಹೆಚ್ಚುಹೊತ್ತು ಬೇಕಾಗಲಿಲ್ಲ ಎಂದು ಸ್ವರಾ ಹೇಳಿದ್ದಾರೆ. ತಮ್ಮಿಬ್ಬರ ಸ್ನೇಹವು ಹಲವಾರು ಪ್ರತಿಭಟನೆಗಳಲ್ಲಿ ಭಾಗಿಯಾಗುವ ಮೂಲಕ ಆಗಿದೆ ಎಂದು ಫಹಾದ್​ ಕೂಡ ತಿಳಿಸಿದ್ದಾರೆ. ಫಹಾದ್ (Fahad Ahmad) ಅವರ  ಟ್ವಿಟರ್ ಹ್ಯಾಂಡಲ್ ಬಯೋ ಪ್ರಕಾರ ಅವರು ಸಮಾಜವಾದಿ ಪಕ್ಷದ ಯುವ ಘಟಕದ ಮಹಾರಾಷ್ಟ್ರ ಘಟಕದ ಅಧ್ಯಕ್ಷ. 

ಈ ಹಿಂದೆ, ಸ್ವರಾ ಭಾಸ್ಕರ್ ಅವರು ಬರಹಗಾರ ಹಿಮಾಂಶು ಶರ್ಮಾ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ವದಂತಿಗಳಿವೆ. ವರದಿಯ ಪ್ರಕಾರ, ಅವರು ಅದನ್ನು 2019 ರಲ್ಲಿ ತ್ಯಜಿಸಿದರು. ಸ್ವರಾ ಭಾಸ್ಕರ್​ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2009ರಲ್ಲಿ. ‘ತನು ವೆಡ್ಸ್​ ಮನು’, ‘ಪ್ರೇಮ್​ ರಥನ್​ ಧನ್​ ಪಾಯೋ’, ‘ಅನಾರ್ಕಲಿ ಆಫ್​ ಆರಾ’, ‘ವೀರೇ ದಿ ವೆಡ್ಡಿಂಗ್​’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರಿಗೆ ಹೇಳಿಕೊಳ್ಳುವಂತಹ ಅವಕಾಶಗಳು ಸಿಗುತ್ತಿಲ್ಲ. ಈ ಬಗ್ಗೆ ಕೂಡ ಸ್ವರಾ ಹೇಳಿಕೊಂಡಿದ್ದರು. ಆದರೂ ಕೆಲವು ಸಿನಿಮಾಗಳಲ್ಲಿ (Cinema) ಬ್ಯುಸಿಯಾಗಿದ್ದಾರೆ. ಸದ್ಯ ಮೂರ್ನಾಲ್ಕ ಸಿನಿಮಾಗಳು ಸ್ವರಾ ಕೈಯಲ್ಲಿವೆ. ಸಿನಿಮಾ ಜೊತೆಗೆ ಸ್ವರಾ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದರು.

ಗಂಡ ಜೈಲಿಗೆ ಹೋಗ್ತಿದ್ದಂತೆ ಬದ್ಧ ವೈರಿಯನ್ನು ತಬ್ಬಿ ಮುದ್ದಾಡಿದ ರಾಖಿ ಸಾವಂತ್​!

 

Sometimes you search far & wide for something that was right next to you all along. We were looking for love, but we found friendship first. And then we found each other!
Welcome to my heart It’s chaotic but it’s yours! ♥️✨🧿 pic.twitter.com/GHh26GODbm

— Swara Bhasker (@ReallySwara)
click me!