ಹಾವು ಮುಂಗುಸಿಯಂತಿದ್ದ ನಟಿಯರಾದ ರಾಖಿ ಸಾವಂತ್ ಮತ್ತು ಶೆರ್ಲಿನ್ ಚೋಪ್ರಾ, ಆದಿಲ್ ಖಾನ್ ಜೈಲಿಗೆ ಹೋಗುತ್ತಿದ್ದಂತೆಯೇ ಅಪ್ಪಿ ಮುದ್ದಾಡಿಕೊಂಡಿದ್ದಾರೆ. ಏಕೆ?
ರಾಖಿ ಸಾವಂತ್ (Rakhi Sawant) ಕಳೆದೆರಡು ತಿಂಗಳುಗಳಿಂದ ಭಾರಿ ಸುದ್ದಿಯಲ್ಲಿರುವ ನಟಿ. ಆದಿಲ್ ಖಾನ್ ದುರ್ರಾನಿ ಅವರ ಜೊತೆಗಿನ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್ ಖಾನ್ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ ಪಾರ್ಟ್-2 ರೀತಿಯಲ್ಲಿ ಇನ್ನೊಂದು ಹೊಸ ವರಸೆ ಶುರುವಾಯಿತು. ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್ (Adil Khan Durrani) ವಿರುದ್ಧ ಎಫ್ಐಆರ್ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಅತ್ತ ಪತಿ ಜೈಲಿಗೆ ಹೋಗುತ್ತಿದ್ದಂತೆಯೇ ಇತ್ತ ರಾಖಿ ತನ್ನ ಆಜನ್ಮ ಶತ್ರುವೆಂದು ಪರಿಗಣಿಸುತ್ತಿದ್ದ ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಅವರನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ಈ ರಾಖಿ ಮತ್ತು ಶೆರ್ಲಿಂಗ್ ಹಾವು- ಮುಂಗುಸಿ ಥರ ಇಷ್ಟು ದಿನ ಇದ್ದವರು. ಅಶ್ಲೀಲ ಸಿನಿಮಾ ನಿರ್ಮಾಣದಲ್ಲಿ ಶೆರ್ಲಿನ್ ಚೋಪ್ರಾ ಅವರು ತೊಡಗಿಕೊಂಡಿದ್ದರು ಎಂಬ ಆರೋಪ ಇದೆ. ಹಾಗೆಯೇ ಅವರು ಈ ಹಿಂದೆ ನಿರ್ದೇಶಕ ಸಾಜಿದ್ ಖಾನ್ ಮೇಲೆ ಮೀ ಟೂ ಆರೋಪ ಹೊರಿಸಿದ್ದರು. ಸಾಜಿದ್ ಖಾನ್ ಅವರನ್ನು ಸಲ್ಮಾನ್ ಖಾನ್ ರಕ್ಷಿಸುತ್ತಿದ್ದಾರೆ ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದರು. ಈ ವಿಚಾರದಲ್ಲಿ ತಲೆ ಹಾಕಿದ್ದ ರಾಖಿ ಸಾವಂತ್ ಅವರು ಶೆರ್ಲಿನ್ ವಿರುದ್ಧ ಮಾತನಾಡಿದ್ದರು. ಆಗ ರಾಖಿ ವಿರುದ್ಧ ಶೆರ್ಲಿನಾ ಚೋಪ್ರಾ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ರಾಖಿ ಸಾವಂತ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಶೆರ್ಲಿನ್ ನೀಡಿದ್ದ ದೂರಿನ ಅನ್ವಯ ರಾಖಿ ಸಾವಂತ್ ಅವರ ಬಂಧನ ಆಗಿತ್ತು.
ಹಣ ಪೀಕಲು ರಾಖಿ ಮೊದಲ ಗಂಡಂಗೂ ಹೀಗೆ ಮಾಡಿದ್ಲು ಎಂದ ಆದಿಲ್ ಲಾಯರ್!
ಇವೆಲ್ಲವುಗಳ ನಡುವೆ ಇದೀಗ ನಾಟಕೀಯ ಬೆಳವಣಿಗೆ ನಡೆದಿದ್ದು, ಇಬ್ಬರೂ ಫ್ರೆಂಡ್ಸ್ ಆಗಿದ್ದಾರೆ. ಇದಕ್ಕೆ ಕಾರಣ, ಆದಿಲ್ ಖಾನ್ ಅವರನ್ನು ಜೈಲಿಗೆ ಅಟ್ಟಿದ್ದು ಸರಿಯಿದೆ ಎಂದು ರಾಖಿ ಸಾವಂತ್ ಅವರನ್ನು ಶೆರ್ಲಿನ್ ಬೆಂಬಲಿಸಿದ ಕಾರಣಕ್ಕೆ! ಈ ಹಿನ್ನೆಲೆಯಲ್ಲಿ ಇವರಿಬ್ಬರು ಹಲವು ಬಾರಿ ಒಬ್ಬರನ್ನೊಬ್ಬರು ತಬ್ಬಿಕೊಂಡು, ಕೆನ್ನೆಗೆ ಮುತ್ತಿಟ್ಟು, ಕೇಕ್ ಕಟ್ ಮಾಡಿ ತಮ್ಮ ಸ್ನೇಹವನ್ನು ಸಂಭ್ರಮಿಸಿರುವ ವಿಡಿಯೋ ವೈರಲ್ ಆಗಿದೆ. ಆದಿಲ್ ತನ್ನ ಒಪ್ಪಿಗೆಯಿಲ್ಲದೆ ತನ್ನ ಹಣವನ್ನು ತೆಗೆದುಕೊಂಡಿದ್ದಾನೆ, ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳವನ್ನು ಆರೋಪಿಸಿ ರಾಖಿ ಆದಿಲ್ ವಿರುದ್ಧ ಎಫ್ಐಆರ್ ದಾಖಲಿದ್ದು ಸರಿಯಿದೆ ಎಂದು ಶೆರ್ಲಿನ್ ಹೇಳಿದ್ದಾರೆ. ನೆನಪಿರಲಿ... ಇದೇ ಶೆರ್ಲಿನ್, ಕೆಲ ದಿನಗಳ ಹಿಂದೆ ರಾಖಿಯ ಚೇಷ್ಟೆಗಳಿಗೆ ಆದಿಲ್ ಬಲಿಯಾದ ಎಂದು ಹೇಳಿದ್ದರು. ಈಗ ಯೂ ಟರ್ನ್ ಹೊಡೆದಿದ್ದು ಸಂತೋಷ ಪಡುತ್ತಿದ್ದಾರೆ. ಇಬ್ಬರೂ ತಬ್ಬಿ ಮುದ್ದಾಡಿದ ಬಳಿಕ ರಾಖಿ, 'ಶೆರ್ಲಿನ್ ನನ್ನ ತುಂಬಾ ಹಳೆಯ ಸ್ನೇಹಿತೆ. ನಿಸ್ಸೇಂದಹವಾಗಿಯೂ ನಮ್ಮ ವಿರುದ್ಧ ಸ್ವಲ್ಪ ಸ್ವಲ್ಪ ಏನೋ ಭಿನ್ನಾಭಿಪ್ರಾಯ ಬಂದಿತ್ತು. ನಾನು ಈ ವಿಚಾರದಲ್ಲಿ ನನ್ನ ಸಹೋದರ ಬಳಿ ಕ್ಷಮೆ ಕೋರುತ್ತೇನೆ' ಎಂದಿದ್ದಾರೆ.
ಶೆರ್ಲಿನ್ ಕೂಡ ಪ್ರತಿಕ್ರಿಯೆ (response) ನೀಡಿ, 'ನಿನ್ನ ಕನಸಿನ ರಾಜಕುಮಾರನನ್ನು ಪಡೆದ ನಂತರವೂ ನೀನು ಏಕೆ ಸಂತೋಷವಾಗಿಲ್ಲ ಎಂದು ನೋಡಿ ನನಗೆ ಆಶ್ಚರ್ಯವಾಗಿತ್ತು. ಆದರೆ ನಿನ್ನ ಜೀವನದ ರಾಜಕುಮಾರನು (Prince) ಜನರನ್ನು ಮೂರ್ಖರನ್ನಾಗಿ ಮಾಡುವ, ಅವರನ್ನು ವಂಚಿಸುವ ವಿಶ್ವದ ಅತಿದೊಡ್ಡ ವಂಚಕನಾಗಿದ್ದಾನೆ ಎಂದು ಕೊನೆಗೆ ನನಗೆ ತಿಳಿಯಿತು. ಮೈಸೂರಿನಲ್ಲಿ ಇರಾನಿನ ಹುಡುಗಿಯೊಬ್ಬಳನ್ನು ಬಲೆಗೆ ಹಾಕಿಕೊಂಡು ಲೈಂಗಿಕ ದೌರ್ಜನ್ಯ ಎಸಗಿರುವ ಮಹಾವಂಚಕ. ಆತನನ್ನು ಜೈಲಿಗೆ ಕಳುಹಿಸಿರುವುದು ಸೂಕ್ತವಾಗಿದೆ' ಎಂದಿದ್ದಾರೆ.
ಪತಿಯಂದಿರ ಟಾರ್ಚರ್ ಸಹಿಸಿಕೊಂಡ ಬಾಲಿವುಡ್ ನಟಿಯರು