ಅಮ್ಮನ ಮನೆಗೆ ವಿದಾಯ ಹೇಳುವಾಗ ಬಿಕ್ಕಿ ಬಿಕ್ಕಿ ಅತ್ತ ಸ್ವರಾ; ತುಂಬಾ ಕಷ್ಟದ ಕ್ಷಣ ಎಂದ ತಂದೆ, ವಿಡಿಯೋ ವೈರಲ್

Published : Mar 19, 2023, 03:41 PM IST
ಅಮ್ಮನ ಮನೆಗೆ ವಿದಾಯ ಹೇಳುವಾಗ ಬಿಕ್ಕಿ ಬಿಕ್ಕಿ ಅತ್ತ ಸ್ವರಾ; ತುಂಬಾ ಕಷ್ಟದ ಕ್ಷಣ ಎಂದ ತಂದೆ, ವಿಡಿಯೋ ವೈರಲ್

ಸಾರಾಂಶ

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅಮ್ಮನ ಮನೆಗೆ ವಿದಾಯ ಹೇಳಿ ಗಂಡನ ಮನೆಗೆ ಹೋಗುವಾಗ ಕಣ್ಣೀರಿಟ್ಟಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಬಾಲಿವುಡ್ ಖ್ಯಾತ ನಟಿ  ಸ್ವರಾ ಭಾಸ್ಕರ್ ಇತ್ತೀಚಿಗಷ್ಟೆ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  ರಾಜಕಾರಣಿ ಫಹಾದ್ ಅಹ್ಮದ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸ್ವರಾ ಭಾಸ್ಕರ್ ಫೋಟೋಗಳು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದಹಾಗೆ ಇಬ್ಬರೂ ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡಿಸಿದ್ದರು. ಇದೀಗ ಸ್ವರಾ ಮತ್ತು ಫಹಾದ್ ದಂಪತಿ ಶಾಸ್ತ್ರೋಕ್ತವಾಗಿ ಮತ್ತೆ ಮದುವೆಯಾಗಿದ್ದಾರೆ. 

ನಟಿ ಸ್ವರಾ ಭಾಸ್ಕರ್ ಕೆಂಪು ಬಣ್ಣದ ಲೆಹಂಗಾದಲ್ಲಿ ಕಂಗೊಳಿಸುತ್ತಿದ್ದರು. ಮದುವೆ ಬಳಿಕ ಗಂಡನ ಮನೆಗೆ ಹೊರಡುವಾಗ ಸ್ವರಾ ಭಾಸ್ಕರ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸ್ವರಾ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುಂಬಾ ಕಷ್ಟದ ಕ್ಷಣವಾಗಿತ್ತು ಎಂದು ಸ್ವರಾ ತಂದೆ ಕೂಡ ಭಾವುಕರಾಗಿದ್ದಾರೆ. ಸ್ವರಾ ಪಕ್ಕದಲ್ಲಿ ತಾಯಿ ಇರಾ ಭಾಸ್ಕರ್ ಹಾಗೂ ಪತಿ ಫಹಾನ್ ನಿಂತಿದ್ದರು. ಒಬ್ಬರು ಕವನವನ್ನು ಓದು ಹೇಳುತ್ತಿದ್ದರು. ಆಗ ಸ್ವರಾ ಭಾವುಕರಾಗಿದ್ದಾರೆ, ಕಣ್ಣೀರಿಟ್ಟಿದ್ದಾರೆ. ತನ್ನ ತಾಯಿ ಮನೆಗೆ ವಿದಾಯ ಹೇಳಿ ಗಂಡನ ಮನೆಗೆ ಹೋಗುವ ಕ್ಷಣ ಅದು. ಸ್ವರಾ ಭಾಸ್ಕರ್ ಭಾವುಕರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ನಟಿ ಸ್ವರಾ-ಫಹಾದ್ ದಂಪತಿಗೆ ಸಂಗೀತ, ಹಳದಿ ಶಾಸ್ತ್ರದ ಸಂಭ್ರಮ; ಸೀರೆಯಲ್ಲಿ ಮಿಂಚಿದ ಫೋಟೋ ವೈರಲ್

ವಿಡಿಯೋಗೆ ಸ್ವರಾ ತಂದೆ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸ್ವರಾ ತಂದೆ ಉದಯ್ ಭಾಸ್ಕರ್, 'ತುಂಬಾ ಕಷ್ಟದ ಕ್ಷಣ' ಎಂದು ಹೇಳಿದ್ದಾರೆ. ತಂದೆಗೂ ತುಂಬಾ ಭಾವುಕ ಕ್ಷಣ ಎಂದು ಹೇಳಿದ್ದಾರೆ. ಹೋಳಿ ಹಬ್ಬದ ಬಳಿಕ ಸ್ವರಾ ಮತ್ತು ಫಹಾದ್ ಅವರ ಮದುವೆ ಸಮಾರಭಗಳು ಪ್ರಾರಂಭವಾದವು. ಹಳದಿ, ಸಂಗೀತ, ಮೆಹಂದಿ, ಆರತಕ್ಷತೆ ಹೀಗೆ ಅದ್ದೂರಿಯಾಗಿ ಮದುವೆ ಸಮಾರಂಭ ನೆರವೇರಿತು. ಅನೇಕ ಗಣ್ಯರು ಸಹ ಹಾಜರಾಗಿ ಶುಭಾಶಯ ತಿಳಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಹಾಜರಾಗಿದ್ದರು.

ಸ್ವರಾ ಭಾಸ್ಕರ್ ಆರತಕ್ಷತೆಯಲ್ಲಿ ರಾಹುಲ್ ಗಾಂಧಿ, ಕೇಜ್ರಿವಾಲ್ ಸೇರಿ ಹಲವು ರಾಜಕೀಯ ನಾಯಕರು!

ತೆಲುಗು ಶೈಲಿಯ ಮಂಗಲಸೂತ್ರ

ತೆಲುಗು ಶೈಲಿಯಲ್ಲಿ ಸ್ವರಾ ಮದುವೆಯಾಗಿದ್ದಾರೆ. ತೆಲುಗು ಸಂಸ್ಕೃತಿಯನ್ನು ಸಂಕೇತಿಸುವ ವಿಶೇಷ ಮಂಗಲಸೂತ್ರವನ್ನು ಧರಿಸಿದ್ದಾರೆ. ಸ್ವರಾ ತಾಯಿ ಇರಾ ಭಾಸ್ಕರ್ ಬಿಹಾರದವರು  ಆದರೆ ಅವರ ತಂದೆ ಸಿ ಉದಯ್ ಭಾಸ್ಕರ್ ತೆಲುಗು ಮೂಲದವರು. ಹಾಗಾಗಿ ಸ್ವರಾ ತೆಲುಗು ಶೈಲಿಯ ಸಮಾರಂಭದಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಮಂಗಳಸೂತ್ರ ಧರಿಸಿರುವ ಸ್ವರಾ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಸ್ವರಾ ಜೋಡಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?