1 ಗಂಟೆ ಊಟದ ಬ್ರೇಕ್, ನಿದ್ರೆ; ಸೌತ್ ಸಿನಿಮಾಗಳ ಶೂಟಿಂಗ್‌ ನೋಡಿ ಶಾಕ್ ಆಗಿದ್ದೆ ಎಂದ ಸೋನು ಸೂದ್

By Shruthi KrishnaFirst Published Mar 19, 2023, 2:31 PM IST
Highlights

ಸೌತ್ ಸಿನಿಮಾಗಳ ಶೂಟಿಂಗ್ ನಲ್ಲಿ 1 ಗಂಟೆ ಬ್ರೇಕ್ ಮತ್ತು ಎಲ್ಲರೂ ನಿದ್ರೆ ಮಾಡುತ್ತಾರೆ ಎಂದು ನಟ ಸೋನು ಸೂದ್ ಹೇಳಿದ್ದಾರೆ. 

ನಟ ಸೋನು ಸೂದ್ ಅನೇಕ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳ ಜೊತೆಗೆ ಹಿಂದಿಯಲ್ಲೂ ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾ ಜೊತೆಗೆ ಸೋನು ಸೂದ್ ಸಾಮಾಜಿಕ ಕೆಲಸದಲ್ಲೂ ಬ್ಯುಸಿಯಾಗಿದ್ದಾರೆ. ಕೊರೊನಾ ಬಳಿಕ ಸೋನು ಮಾಡಿದ ಸಹಾಯ ಅವರನ್ನು ರಿಯಲ್ ಹೀರೋ ಆಗಿ ಮಾಡಿದೆ. ಅಭಿಮಾನಿಗಳನ್ನು ಅವರನ್ನು ಪ್ರೀತಿಯಿಂದ ರಿಯಲ್ ಹೀರೋ ಅಂತನೆ ಕರಿಯುತ್ತಾರೆ. ಇಂದಿಗೂ ಅವರ ಸಾಮಾಜಿಕ ಕೆಲಸಗಳು ಮುಂದುವರೆದಿದೆ. ಕಷ್ಟ ಎಂದವರ ಪಾಲಿಗೆ ಸದಾ ನೆರವಾಗುತ್ತಾರೆ. ಒಂದಲ್ಲೊಂದು ವಿಚಾರಕ್ಕೆ ಸೋನು ಸೂದ್ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಸೋನು ಸೌತ್ ಸಿನಿಮಾಗಳ ಶೂಟಿಂಗ್ ಅನುಭವ ಬಿಚ್ಚಿಟ್ಟಿದ್ದಾರೆ.  ದಕ್ಷಿಣ ಭಾರತ ಸಿನಿಮಾಗಳ ಶೂಟಿಂಗ್ ಹೇಗಿರುತ್ತದೆ ಎಂದು ಸೋನು ಸೂದ್ ಬಹಿರಂಗ ಪಡಿಸಿದ್ದಾರೆ. 

ಊಟದ ಬ್ರೇಕ್, ನಿದ್ರೆ, ಶಿಸ್ತಿನ ಬಗ್ಗೆ ಸೋನು ಸೂದ್ ಮಾತನಾಡಿದ್ದಾರೆ. ಇತ್ತೀಚಿಗೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೋನು, ಸೌತ್ ಸ್ಟಾರ್‌ಗಳು ತುಂಬಾ ಶಿಸ್ತಿನವರು. ಸಮಯಕ್ಕಿಂತ ಮುಂಚಿತವಾಗಿ ಸೆಟ್‌ಗೆ ಆಗಮಿಸುತ್ತಾರೆ. ಇತರರ ಶ್ರಮವನ್ನು ಸಮಾನವಾಗಿ ಗೌರವಿಸುತ್ತಾರೆ. ಕೆಲಸ ಮಾಡುವುದನ್ನು ತುಂಬಾ ಎಂಜಾಯ್ ಮಾಡುತ್ತಾರೆ ಎಂದು ಹೇಳಿದರು. 

'ನಾನು ಶಾಕ್ ಆಗಿದ್ದೆ. ಒಂದು ಗಂಟೆ ಊಟದ ವಿರಾಮವಿರುತ್ತದೆ, ಅದರಲ್ಲಿ 20-25 ನಿಮಿಷದಲ್ಲಿ ಊಟ ಮಾಡಿ ಎಲ್ಲರೂ ಮೂಲೆ ಹುಡುಕಿ ಮಲಗುತ್ತಿದ್ದರು. ನಾನು ಮಧುರೈನಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ಕುರ್ಚಿಯ ಮೇಲೆ ಕುಳಿತಿದ್ದೆ ಆಗ ತಲೆಯೆತ್ತಿ ನೋಡಿದೆ ಎಲ್ಲರೂ ನಿದ್ರೆಗೆ ಜಾರಿದ್ರು. ನಾನು ಒಬ್ಬ ವ್ಯಕ್ತಿಯನ್ನು ಕೇಳಿದೆ ಎಲ್ಲರೂ ಏಕೆ ಮಲಗುತ್ತಿದ್ದಾರೆ ಎಂದು ಅವರು ನನಗೆ ಹೇಳಿದರು, ನಿದ್ರೆ ಮಾಡಿದ ನಂತರ ನಾವು ಫ್ರೆಶ್ ಆಗುತ್ತೇವೆ ಎಂದರು, ಅದು ಅಲ್ಲಿನ ಸಂಸ್ಕೃತಿ' ಎಂದು ಸೋನು ಹೇಳಿದರು. 

Khaby Lame ಜೊತೆ ಸೋನು ಸೂದ್ ರೀಲ್ಸ್: 21 ಮಿಲಿಯನ್‌ಗೂ ಹೆಚ್ಚು ಜನರಿಂದ ವೀಕ್ಷಣೆ

ಸಿನಿಮಾ ರಿಲೀಸ್ ಡೇಟ್ ಪ್ಲಾನ್ ಮಾಡುವ ಬಗ್ಗೆಯೂ ಮಾತನಾಡಿದರು. 'ನಾವು ಚಿತ್ರೀಕರಣವನ್ನು ಪ್ರಾರಂಭಿಸುವ ದಿನವೇ ಚಿತ್ರದ ಬಿಡುಗಡೆಯ ದಿನಾಂಕವನ್ನು ತಿಳಿಯುತ್ತೇವೆ. ನಿಮ್ಮ ಸಿನಿಮಾ ದಿನಾಂಕಗಳು ಲಾಕ್ ಆಗುತ್ತೆ. ಯಾವ ಸಮಯದಲ್ಲಿ ಕಾಣಿಸಿಕೊಳ್ಳಬೇಕು ಮತ್ತು ಯಾವ ಸಮಯದಲ್ಲಿ ಹೊರಡಬೇಕು ಎಂಬುದು ಎಲ್ಲಾ ಸರಿಯಾಗಿ ಪ್ಲಾನ್ ಆಗಿರುತ್ತದೆ. ಬಹುಶಃ ನಾನು ಅಂತ ಸಿನಿಮಾ ನಿರ್ಮಾಪಕರೊಂದಿಗೆ ಕೆಲಸ ಮಾಡಲು ತುಂಬಾ ಅದೃಷ್ಟಶಾಲಿಯಾಗಿದ್ದೆ' ಎಂದು ಹೇಳಿದ್ದಾರೆ. 

Humanitarian Award ದೇಗುಲ ನನಗಲ್ಲ, 350 ಕನ್ನಡಿಗರ ಕಣ್ಣೀರು ನನ್ನ ಗುರಿ ಬದಲಾಯಿಸಿತ್ತು: ಸೋನು ಸೂದ್

ಸನ್ ರೈಸ್ ಕಾಲ್ ಶೀಟ್ ಎಂದರೇನು?

ಸೋನು ಸೂದ್ ಸನ್ ರೈಸ್ ಕಾಲ್ ಶೀಟ್ ಬಗ್ಗೆ ಮಾತನಾಡಿದ್ದಾರೆ. ಸೌತ್ ಸಿನಿಮಾ ಶೂಟಿಂಗ್ ನಲ್ಲಿ ‘ಸನ್‌ರೈಸ್ ಕಾಲ್‌ಶೀಟ್’ಪರಿಕಲ್ಪನೆ ಕುತೂಹಲಕಾರಿಯಾಗಿದೆ ಎಂದು ಹೇಳಿದರು. ಸೂರ್ಯ ಉದಯಿಸಿದ ತಕ್ಷಣ ಮೊದಲ ಶಾಟ್ ತೆಗೆದುಕೊಳ್ಳಲು ತಂಡಗಳು ಹೆಚ್ಚು ಆದ್ಯತೆ ನೀಡುತ್ತವೆ ಎಂದು ಸೋನು ಬಹಿರಂಗಪಡಿಸಿದರು. 

click me!