ಮಗಳು ಹುಟ್ಟಿದ ಬಳಿಕ ಹಿಂದು-ಮುಸ್ಲಿಂ ಬಗ್ಗೆ ಸ್ವರಾ ಭಾಸ್ಕರ್ ಬಾಯಿಂದ ಬಂದ ನುಡಿ ಮುತ್ತು!

By Shriram BhatFirst Published Oct 2, 2023, 6:32 PM IST
Highlights

ನಾವು ನಮ್ಮ ಮಗಳ 6 ದಿನಗಳ ಹುಟ್ಟುಹಬ್ಬವನ್ನು ಗ್ರಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದೇವೆ. ಈ ವೇಲೆ ನಾನು ನಾನು ಹುಟ್ಟಿರುವ ಹಿಂದೂ ಕುಟುಂಬ ಹಾಗೂ ನನ್ನ ಗಂಡ ಹುಟ್ಟಿರುವ ಮುಸ್ಲಿಂ ಕುಟುಂಬ ಎರಡೂ ಕಡೆಯವರಲ್ಲಿ 'ಸಾಮಾನ್ಯ' ಎನ್ನುವ ಹಲವು ಪದ್ಧತಿಗಳನ್ನು ಕಂಡುಕೊಂಡಿದ್ದೇನೆ. 

ನಟಿ, ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಗುರುತಿಸಿಕೊಂಡಿರುವ ಸ್ವರಾ ಭಾಸ್ಕರ್, ಇತ್ತೀಚೆಗೆ ಒಂದು ಹೇಳಿಕೆ ಹರಿಬಿಟ್ಟಿದ್ದಾರೆ. ಅದೇನೆಂದರೆ, "ಹಿಂದು ಮತ್ತು ಮುಸ್ಲಿಂರಲ್ಲಿ ಒಂದೇ ರೀತಿ ಎನ್ನಬಹುದಾದ ಹಲವು ಸಾಂಸ್ಕೃತಿಕ ಪದ್ಧತಿಗಳಿವೆ. ನನ್ನ ಮದುವೆ ಬಳಿಕ, ನನಗೆ ಮಗಳು ಹುಟ್ಟಿದ ಮೇಲೆ ನಾನು ಈ ಬಗ್ಗೆ ಅರಿತುಕೊಂಡಿದ್ದೇನೆ" ಎಂದಿದ್ದಾರೆ ನಟಿ ಸ್ವರಾ ಭಾಸ್ಕರ್. ಮಗಳ ಹುಟ್ಟುಹಬ್ಬದ ಸಂದರ್ಭದಲ್ಲಿ ತಾವು ಮಾಡಿರುವ ಹಲವು ಸಾಂಸ್ಕೃತಿಕ ಪದ್ಧತಿಗಳನ್ನು ವಿವರಿಸುವ ಮೂಲಕ ಅವರು ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. 

ಸ್ವರಾ ಭಾಸ್ಕರ್ ಹಾಗೂ ಫಹಾದ್ ಅಹಮದ್ ಜೋಡಿಗೆ ಹುಟ್ಟಿರುವ ಹೆಣ್ಣು ಮಗುವಿಗೆ ಕಳೆದ ತಿಂಗಳು 'ರಾಬಿಯಾ' ಎಂದು ನಾಮಕರಣ ಮಾಡಲಾಗಿದೆಯಂತೆ. ಆಗ ಅವರು ತಮ್ಮ ಮಗಳ ಹುಟ್ಟುಹಬ್ಬವನ್ನು ಹೇಗೆ ಆಚರಸಿದರು ಎಂಬ ಬಗ್ಗೆ ಹೇಳಿರುವ ಸ್ವರಾ, 'ನಾವು ನಮ್ಮ ಮಗಳ 6 ದಿನಗಳ ಹುಟ್ಟುಹಬ್ಬವನ್ನು ಗ್ರಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದೇವೆ. ಈ ವೇಲೆ ನಾನು ನಾನು ಹುಟ್ಟಿರುವ ಹಿಂದೂ ಕುಟುಂಬ ಹಾಗೂ ನನ್ನ ಗಂಡ ಹುಟ್ಟಿರುವ ಮುಸ್ಲಿಂ ಕುಟುಂಬ ಎರಡೂ ಕಡೆಯವರಲ್ಲಿ 'ಸಾಮಾನ್ಯ' ಎನ್ನುವ ಹಲವು ಪದ್ಧತಿಗಳನ್ನು ಕಂಡುಕೊಂಡಿದ್ದೇನೆ.

ಬೀದಿಗೆ ಬಂದಿರುವ 'ಲಕ್ಷಣ' ಶಕುಂತಲಾ ದೇವಿ ಸಂಸಾರ ಟ್ರೋಲ್‌ ಮೇಲೆ ಟ್ರೋಲ್! 

ಬೇಬಿಗೆ ನಾನು 'ಮಿಶ್ ಮಾಶ್' ಎಂದು ಕರೆಯುತ್ತೇನೆ. ಏಕೆಂದರೆ, ಅವಳು ನಮ್ಮಿಬ್ಬರ 'ಮಿಕ್ಸ್ಡ್ ಚೈಲ್ಡ್. ನಮ್ಮಿಬ್ಬರ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಅವಳು ಹೊತ್ತು ಸಾಗಬೇಕಿದೆ. ಅವಳು ಉತ್ತರ ಪ್ರದೇಶ, ಬಿಹಾರ ಹಾಗೂ ಆಂಧ್ರ ಪ್ರದೇಶಗಳ ಸಂಗಮ. ಅವಳಲ್ಲಿ ಮೂರು ರಾಜ್ಯಗಳ  ಸಂಪ್ರದಾಯ-ಪರಂಪರೆ ಸಮ್ಮಿಲನವಾಗಿದೆ. ಹೀಗಾಗಿ ನಾನು ಅವಳನ್ನು ಹೆಚ್ಚು ಖುಷಿಯಿಂದ ಬೆಳೆಸಲಿದ್ದೇನೆ. ನಾನು ಮನುಷ್ಯರು ಯಾವುದೇ ವಿಭಿನ್ನತೆಯಿಂದ ಬಂದಿದ್ದರೂ ನಮ್ಮಲ್ಲಿ ಪ್ರೀತಿ ಮತ್ತು ಖುಷಿ ವಿಷಯದಲ್ಲಿ ಬೇಧವಿಲ್ಲ" ಎಂದಿದ್ದಾರೆ ಸ್ವರಾ ಭಾಸ್ಕರ್. 

ವೇದಾಂತ್ ಸ್ಕೆಚ್ ನೋಡಿ ಬಿದ್ದು ಬಿದ್ದು ನಕ್ಕ ಆರತಿ; ಅಮೂಲ್ಯ ಮಾಡಿದ್ದೇನು ನೋಡಿ..!

 

 
 
 
 
 
 
 
 
 
 
 
 
 
 
 

A post shared by Swara Bhasker (@reallyswara)

 

click me!