
ಮುಂಬೈ(ಅ.02) ನಟಿ-ನಟಿಯರು, ಸೆಲೆಬ್ರೆಟಿಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮದ ಮೂಲಕ ನೇರವಾಗಿ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಅಭಿಮಮಾನಿಗಳಿಗಾಗಿ ಪ್ರಶ್ನೋತ್ತರಗಳನ್ನು, ಅಭಿಮಾನಿಗಳ ಪ್ರಶ್ನೆಗಳಿಗೆ ಲೈವ್ ಉತ್ತರಿಸುವ ಪ್ರಯತ್ನ ಮಾಡುತ್ತಾರೆ. ಹೀಗೆ ಬಾಲಿವುಡ್ ನಟಿ ಅವನೀತ್ ಕೌರ್, ತಮ್ಮ ಅಭಿಮಾನಿಗಳ ಜೊತೆ ಇನ್‌ಸ್ಟಾಗ್ರಾಂ ಲೈವ್ ಆಯೋಜಿಸಿದ್ದಾರೆ. ಈ ವೇಳೆ ಅವನೀತ್ ಕೌರ್, ತಮ್ಮ ಫ್ಯಾನ್ ಪೇಜ್ ಆರಂಭಿಸಿದ ಅಭಿಮಾನಿ ಜೊತೆ ಮಾತನಾಡಿದ್ದಾರೆ. ಅವನೀತ್ ಕೌರ್ ಮಾತು ಮುಗಿಯುತ್ತಿದ್ದಂತೆ ಹಿಂಬದಿಯಿಂದ ಬಂದ ಯುವಕನ ತಾಯಿ, ಯಾರು ಆ ಹುಡುಗಿ ಎಂದು ಪ್ರಶ್ನಿಸಿ ಕಪಾಳಕ್ಕೆ ಭಾರಿಸದ ಘಟನೆ ನಡೆದಿದೆ. ಅವನೀತ್ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಅವನೀತ್ ಕೌರ್ ತಮ್ಮ ಇನ್‌ಸ್ಟಾಗ್ರಾಂ ಮೂಲಕ ಲೈವ್ ಮಾತುಕತೆ ಆಯೋಜಿಸಿದ್ದಾರೆ. ತಮ್ಮ ಅಪಾರ ಅಭಿಮಾನಿಗಳ ಜೊತೆ ಮಾತುಕತೆ, ಅವರ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬನ ಜೊತೆ ಲೈವ್ ಮಾತನಾಡಿದ ಅವನೀತ್ ಕೌರ್, ನನ್ನ ಫ್ಯಾನ್ ಪೇಜ್ ಕ್ರಿಯೇಟ್ ಮಾಡಿರುವುದಕ್ಕೆ ಧನ್ಯವಾದಗಳು ಎಂದಿದ್ದಾರೆ.ನನ್ನ ಫ್ಯಾನ್ ಪೇಜ್ ನನಗೆ ಅತೀವ ಸಂತಸ ತಂದಿದೆ. ದೇವರು ನಿಮಗೆ ಆಶೀರ್ವದಿಸಲಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ. ಧನ್ಯವಾದ ಎಂದು ಅವನೀತ್ ಕೌರ್ ಹೇಳಿದ್ದಾರೆ.
Avneet Kaur: ಮೇಲೆಲ್ಲಾ ಓಪನ್, ಕೆಳಗೆ ಗೌನ್ ಹಿಡಿಯಲು ಹೆಲ್ಪರ್: ಏನಮ್ಮಾ ನಿನ್ ಅವಸ್ಥೆ ಅಂತಿದ್ದಾರೆ ಫ್ಯಾನ್ಸ್!
ಅವನೀತ್ ಕೌರ್ ಮಾತಿನಿಂದ ಅಭಿಮಾನಿ ಪುಳಕಿತಗೊಂಡಿದ್ದಾನೆ. ನಗುಮುಖದಿಂದಲೇ ಅವನೀತ್ ಜೊತೆ ಮಾತನಾಡಿದ್ದಾನೆ. ಆದರೆ ಅವನೀತ್ ಅಂತಿಮವಾಗಿ ಧನ್ಯವಾದ ಹೇಳುತ್ತಿದ್ದಂತೆ ಅತ್ತ ಅಭಿಮಾನಿಯ ತಾಯಿ ಹಿಂಭಾಗದಲ್ಲಿ ಬಂದಿದ್ದಾರೆ. ಇನ್ನೇನು ಅವನೀತ್ ಕೌರ್ ಮಾತು ಮುಗಿಸಿ ಲೈವ್ ಅಂತ್ಯಗೊಳಿಸಬೇಕು ಅನ್ನುವಷ್ಟರಲ್ಲಿ ಹಿಂಭಾಗದಲ್ಲಿದ್ದ ಅಭಿಮಾನಿಯ ತಾಯಿ, ಯಾರು ಆ ಹುಡುಗಿ? ಎಂದು ಪ್ರಶ್ನಿಸಿ ಕಪಾಳಕ್ಕೆ ಭಾರಿಸಿದ್ದಾರೆ.
ತನ್ನ ಮಗ ಗರ್ಲ್‌ಫ್ರೆಂಡ್ ಜೊತೆ ಮಾತನಾಡುತ್ತಿದ್ದಾನೆ ಎಂದುಕೊಂಡ ತಾಯಿ ಭಾರಿಸಿದ್ದಾರೆ. ಇತ್ತ ಅಭಿಮಾನಿ ಹಿಂಭಾಗದಲ್ಲಿ ನಿಂತಿದ್ದ ತಾಯಿ ಹಾಗೂ ಆಕೆ ನಡೆಯನ್ನು ಕ್ಯಾಮೆರಾ ಕಣ್ಣಿನಿಂದ ತಪ್ಪಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ತಾಯಿ ಹೊಡೆದಿರುವ ವಿಡಿಯೋ ಕೂಡ ರೆಕಾರ್ಡ್ ಆಗಿದೆ. ಅತ್ತ ಲೈವ್‌ನಲ್ಲಿದ್ದ ಅವನೀತ್ ಕೌರ್ ಗಾಬರಿಯಾಗಿದ್ದಾರೆ.
21ರ ಅವನೀತ್ ಜೊತೆ 49ರ ನವಾಜುದ್ದೀನ್ ಸಿದ್ದಿಕ್ಕಿ ಲಿಪ್ ಕಿಸ್; ಕಂಗನಾ ಸಿನಿಮಾ ವಿರುದ್ಧ ನೆಟ್ಟಿಗರ ಆಕ್ರೋಶ
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಾರಿ ವೈರಲ್ ಆಗಿದೆ. ಈ ವಿಡಿಯೋಗೆ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.ಕೆಲವರು ಅವನೀತ್ ಕೌರ್ ಫ್ಯಾನ್ ಪೇಜ್ ಮಾಡಿದರೆ ಇದೇ ಗತಿ ಎಂದಿದ್ದಾರೆ. ಇನ್ನು ಕೆಲವರು ಯುವಕನ ಪರ ಕಣ್ಮೀರು ಸುರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.