ಉದ್ಯಮಿ ಲಲಿತ್ ಮೋದಿ ಜೊತೆ ಸುಷ್ಮಿತಾ ಸಂಬಂಧ? ಕೊನೆಗೂ ಮೌನ ಮುರಿದ ನಟಿ ಹೇಳಿದ್ದೇನು?

By Suvarna News  |  First Published Nov 19, 2023, 4:24 PM IST

ಉದ್ಯಮಿ ಲಲಿತ್ ಮೋದಿ ಜೊತೆ ಸುಷ್ಮಿತಾ ಸೇನ್​ ಸಂಬಂಧದಲ್ಲಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು? 
 


ಮಾಜಿ ಮಿಸ್ ಯೂನಿವರ್ಸ್‌, ಬಾಲಿವುಡ್ ನಟಿ ಸುಶ್ಮಿತಾ ಸೇನ್‌ (Sushmita Sen)ತನ್ನ ರಿಲೆಷನ್‌ಶಿಪ್‌ಗಳ ಕಾರಣದಿಂದ ಸುದ್ದಿಯಾಗುವುದು ಹೊಸದೇನಲ್ಲ. ಈಗ ಮತ್ತೆ ಸುಶ್ಮಿತಾ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಅವರ ಮತ್ತು ಅವರ ಮಾಜಿ ಪ್ರೇಮಿ  ರೋಹ್ಮನ್ ಶಾಲ್ (Rohman Shawl) ಅವರ ವೀಡಿಯೋ ಒಂದು ವೈರಲ್‌ ಆಗಿದ್ದು ಮತ್ತೆ ಇವರಿಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ವರದಿಯಾಗುತ್ತಿದೆ. ಸುದೀರ್ಘ ಸಂಬಂಧದ ನಂತರ,  ಡಿಸೆಂಬರ್ 2021 ರಲ್ಲಿ ಸುಶ್ಮಿತಾ ಸೇನ್‌ ರೋಹ್ಮನ್ ಶಾಲ್‌ ಅವರೊಂದಿಗೆ ಬ್ರೇಕಪ್‌ ಆಗಿರವ ವಿಷಯ ಘೋಷಿಸಿದ್ದರು. ಅವರ ಬ್ರೇಕಪ್‌ ನಂತರವೂ ಇಬ್ಬರು ಸ್ನೇಹಿತರಾಗಿ ಮುಂದುವರೆದರು. ರೋಹ್ಮನ್ ಅವರು ಹೆಚ್ಚಾಗಿ ಸೇನ್ ಕುಟುಂಬದೊಂದಿಗೆ ಕಾಣಿಸಿಕೊಂಡರು. ಆದರೆ ಇತ್ತೀಚಿನ ವೀಡಿಯೊವೊಂದರಲ್ಲಿ ಇಬ್ಬರು ಮತ್ತೆ ಒಂದಾಗಿರುವಂತೆ ಕಾಣುತ್ತಿದೆ. ಪಾಪರಾಜಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಸುಷ್ಮಿತಾ ಅವರ ಇತ್ತೀಚಿನ ಸರಣಿಯ ಆರ್ಯ 3 ಪ್ರಚಾರಗಳಿಗಾಗಿ ರೋಹ್ಮನ್ ಹೋಗುವುದನ್ನು ಗುರುತಿಸಲಾಗಿದೆ.

ಆದರೆ ಇದರ ನಡುವೆಯೇ, ಐಪಿಎಲ್ ಸಂಸ್ಥಾಪಕ,  ಉದ್ಯಮಿ ಲಲಿತ್ ಮೋದಿ ತನ್ನ 59 ವಯಸ್ಸಿನಲ್ಲಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಭಾರತದ ಸೂಪರ್‌ ಮಾಡೆಲ್‌, ಮಾಜಿ ವಿಶ್ವ ಸುಂದರಿ ಹಾಗೂ ಬಾಲಿವುಡ್​ ನಟಿ ಸುಷ್ಮಿತಾ ಸೇನ್​ ಜೊತೆ ಡೇಟಿಂಗ್‌ನಲ್ಲಿದ್ದಾರೆಂಬ ಬಗ್ಗೆ ಸುದ್ದಿ ಹಬ್ಬಿದೆ. ಅದಕ್ಕೆ ಸರಿಯಾಗಿ ಫೋಟೋ ವೈರಲ್ ಆಗಿವೆ. ಐಪಿಎಲ್ ಸಂಸ್ಥಾಪಕ ಮತ್ತು ಸಂಕಷ್ಟದಲ್ಲಿರುವ ಉದ್ಯಮಿ ಲಲಿತ್ ಮೋದಿ ಕಳೆದ ವರ್ಷ ಬಾಲಿವುಡ್‌ ನಟಿ ಸುಶ್ಮಿತಾ ಸೇನ್ ಅವರೊಂದಿಗಿನ ಸ್ನೇಹಶೀಲ ಚಿತ್ರಗಳನ್ನು ಪೋಸ್ಟ್ ಮಾಡಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದರು. ಜೊತೆಗೆ  ಸುಶ್ಮಿತಾ ಮೇಲಿನ ಪ್ರೀತಿಯನ್ನು ಹೇಳಿಕೊಂಡಿದ್ದರು. ಇನ್ನೇನು ಇವರಿಬ್ಬರ ಮದುವೆಯೇ ಆಗಿ ಹೋಗಿದೆ ಎಂದು ಸುದ್ದಿಯಾಗಿತ್ತು. ಈ ವಿಷಯದ ಬಗ್ಗೆ ಸುಶ್ಮಿತಾ ಮೌನ ವಹಿಸಿದ್ದರೂ, ಲಲಿತ್ ಮೋದಿ ಒಂದು ದಿನದವರೆಗೂ ಸಾಮಾಜಿಕ ಮಾಧ್ಯಮದಲ್ಲಿ ಪ್ರೀತಿಯ ಪೋಸ್ಟ್ ಇತ್ತು. ಇನ್ನೂ ಕೂಡ ಪೋಸ್ಟ್ ಹಾಗೆಯೇ ಇದೆ. 

Tap to resize

Latest Videos

ಶುಗರ್ ಡ್ಯಾಡಿ ಅಂತೆ, ಗೋಲ್ಡ್ ಡಿಗ್ಗರ್ ಅಂತೆ, ಏನಿದೆಲ್ಲಾ?

 ಲಲಿತ್ ಮೋದಿ ಜೊತೆ ಡೇಟ್ ಮಾಡುವಾಗ ಅನೇಕರು ಸುಷ್ಮಿತಾ ಸೇನ್ ಅವರು ಟೀಕೆ ಮಾಡಿದ್ದರು. ಹಣಕ್ಕಾಗಿಯೇ ಅವರು ಲಲಿತ್ ಮೋದಿ ಜೊತೆ ಸುತ್ತಾಟ ನಡೆಸುತ್ತಿದ್ದಾರೆ ಎಂದು ಗೋಲ್ಡ್​ ಡಿಗ್ಗರ್​ (Gold Digger) ಎಂದು ಅನೇಕರು ಟೀಕಿಸಿದ್ದರು.  ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ಲಲಿತ್ ಮೋದಿಯವರನ್ನು ಮದುವೆ ಆಗುವ ಆಲೋಚನೆ ನನಗೆ ಇಲ್ಲ.  ನಾನು ಇನ್​ಸ್ಟಾಗ್ರಾಮ್​ನಲ್ಲಿ  ಇಬ್ಬರ ಫೋಟೋ  ಹಾಕಲು ಒಂದು ಕಾರಣ ಇದೆ. ಕೆಲವೊಮ್ಮೆ ಜನರು ಮೌನವಾಗಿದ್ದಾಗ ಅವರ ಮೌನವನ್ನು ದೌರ್ಬಲ್ಯ ಎಂದು ತಪ್ಪಾಗಿ ಭಾವಿಸುತ್ತೇನೆ. ನಾನು ನಗುತ್ತಿದ್ದೇನೆ ಎಂದು ಜನರಿಗೆ ತಿಳಿಸಲು ಒಂದು ಪೋಸ್ಟ್ ಹಾಕಿದೆ. ಅದು ಅಲ್ಲಿಗೆ ಮುಗಿದಿದೆ ಎಂದು ಅವರು ಹೇಳಿದ್ದಾರೆ. ಅಲ್ಲಿಗೆ ತಾವು ಲಲಿತ್​ ಮೋದಿ ಜೊತೆ ರಿಲೇಷನ್​ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಂದಹಾಗೆ, ಸುಷ್ಮಿತಾ ಸೇನ್​ಗೆ 47 ವರ್ಷ ವಯಸ್ಸು. ಅವರು ಇದೀಗ ಡೇಟಿಂಗ್​ ನಡೆಸುತ್ತಿದ್ದಾರೆ ಎನ್ನಲಾದ ರೋಹ್ಮನ್​ ಶಾಲ್​ಗೆ 32ರ ಪ್ರಾಯ. ಸುಷ್ಮಿತಾಗಿಂತಲೂ ರೋಹ್ಮನ್​ 15 ವರ್ಷ ಕಿರಿಯರು.  ಅದೇ ಇನ್ನೊಂದೆಡೆ ಲಲಿತ್​ ಮೋದಿಯವರು,  90 ರ ದಶಕದ ಮತ್ತೊಂದು ಭಾರತದ ಪ್ರಸಿದ್ದ ರೂಪದರ್ಶಿ  ಉಜ್ವಲಾ ರಾವುತ್‌ ಜೊತೆ  ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಲಲಿತ್​ ಮೋದಿಯವರಿಗೆ ಈಗ 59 ವರ್ಷ ವಯಸ್ಸು!

ಮತ್ತೆ ಒಂದಾದ ಮಾಜಿ ಪ್ರೇಮಿಗಳು? ಸುಷ್ಮಿತಾ ಸೇನ್ ರೋಹ್ಮನ್ ಶಾಲ್ ವೀಡಿಯೋ ವೈರಲ್‌

click me!