ಬಾಲಿವುಡ್‌ನಲ್ಲಿ ಧೂಮ್ ಚಿತ್ರ ಮೊದಲು ತೆರೆಗೆ ಬಂದಾಗ ಭಾರೀ ಹಲ್‌ಚಲ್ ಸೃಷ್ಟಿಸಿತ್ತು. ಮೊದಲ ಸಿನಿಮಾದಲ್ಲಿ ಪಡೆದ ಯಶಸ್ಸು ನೋಡಿ ನಿರ್ದೇಶಕ ಸಂಜಯ್ ಗಧ್ವಿ ಅವರು ಧೂಮ್ 2 ಹಾಗೂ ಧೂಮ್ 3 ಚಿತ್ರಗಳನ್ನು ಕೆಲವು ವರ್ಷಗಳ ಗ್ಯಾಪ್‌ನಲ್ಲಿ ತೆರೆಗೆ ತಂದಿದ್ದಾರೆ. ಧೂಮ್ ಚಿತ್ರದಷ್ಟು ಆ ಬಳಿಕ ಬಂದ ಧೂಮ್ ಸಿರೀಸ್ ಚಿತ್ರಗಳು ಸದ್ದು ಮಾಡದಿದ್ದರೂ, ಹಾಕಿರುವ ಹಣಕ್ಕೆ ಮೋಸವಾಗಿಲ್ಲ ಎನ್ನಲಾಗಿದೆ.
ಬಾಲಿವುಡ್‌ನಲ್ಲಿ ಧೂಮ್ ಸರಣಿ ಚಿತ್ರಗಳ ಮೂಲಕ ಖ್ಯಾತಿ ಪಡೆದಿದ್ದ ನಿರ್ದೇಶಕರಾದ ಸಂಜಯ್ ಗಧ್ವಿ ನಿಧನರಾಗಿದ್ದಾರೆ, 57 ವರ್ಷ ವಯಸ್ಸಿನ ನಿರ್ದೇಶಕ ಸಂಜಯ್ ಗಧ್ವಿ ಅವರು ಇಂದು (19 ನವೆಂಬರ್ 2023) ತೀವ್ರ ಹೃದಯಾಘಾತದಿಂದ ನಿಧನಹೊಂದಿದ್ದಾರೆ. ಮನುಭಾಯ್ ಗಧ್ವಿ ಮಗನಾಗಿದ್ದ ಸಂಜಯ್ ಗಧ್ವಿ ಅವರು ತಮ್ಮ 57 ವರ್ಷ ವಯಸ್ಸಿನಲ್ಲೇ ಮೃತರಾಗಿದ್ದು, ಬಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ.
ಇಂದು ಬೆಳಿಗ್ಗೆ ತೀವ್ರ ಹೃದಯಾಘಾತಕ್ಕೆ ಒಳಗಾದ ಸಂಜಯ್ ಗಧ್ವಿ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಧೂಮ್ ಚಿತ್ರಗಳನ್ನು ನಿರ್ದೇಶಿಸಿ ತೆರೆಗೆ ತಂದಿದ್ದ ಸಂಜಯ್ ಈ ಮೂಲಕ ದಶಕಗಳ ಹಿಂದೆ ಬಹಳಷ್ಟು ಖ್ಯಾತಿ ಪಡೆದವರಾಗಿದ್ದಾರೆ. ಅಭಿಷೇಕ್ ಬಚ್ಚನ್, ಜಾನ್ ಅಬ್ರಹಾಂ , ಉದಯ್ ಚೋಪ್ರಾ, ರಿಮಿ ಸೇನ್, ಹೃತಿಕ್ ರೋಶನ್, ಇಶಾ ಡಯೋಲ್, ಮನೋಜ್ ಜೋಶಿ ಮುಂತಾದವರು ಈ ಧೂಮ್ ಸರಳಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಪಾರ್ಕ್ ಮಾಡಿದ್ದ ಕಾರಿನೊಳಗೆ ಖ್ಯಾತ ನಟನ ಶವ ಪತ್ತೆ; ಸೌತ್ ಸಿನಿರಂಗಕ್ಕೆ ಬಿಗ್ ಶಾಕ್!
ಬಾಲಿವುಡ್‌ನಲ್ಲಿ ಧೂಮ್ ಚಿತ್ರ ಮೊದಲು ತೆರೆಗೆ ಬಂದಾಗ ಭಾರೀ ಹಲ್‌ಚಲ್ ಸೃಷ್ಟಿಸಿತ್ತು. ಮೊದಲ ಸಿನಿಮಾದಲ್ಲಿ ಪಡೆದ ಯಶಸ್ಸು ನೋಡಿ ನಿರ್ದೇಶಕ ಸಂಜಯ್ ಗಧ್ವಿ ಅವರು ಧೂಮ್ 2 ಹಾಗೂ ಧೂಮ್ 3 ಚಿತ್ರಗಳನ್ನು ಕೆಲವು ವರ್ಷಗಳ ಗ್ಯಾಪ್‌ನಲ್ಲಿ ತೆರೆಗೆ ತಂದಿದ್ದಾರೆ. ಧೂಮ್ ಚಿತ್ರದಷ್ಟು ಆ ಬಳಿಕ ಬಂದ ಧೂಮ್ ಸಿರೀಸ್ ಚಿತ್ರಗಳು ಸದ್ದು ಮಾಡದಿದ್ದರೂ, ಹಾಕಿರುವ ಹಣಕ್ಕೆ ಮೋಸವಾಗಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ, ಧೂಮ್ ಸಿರೀಸ್ ಚಿತ್ರಗಳು ಎಂದರೆ ಜನರಿಗೆ ಅದು ಚಿರಪರಿಚಿತ, ಗೂಗಲ್ ಮಾಡಿ ನೋಡುವ ಅಗತ್ಯವೇನಿಲ್ಲ ಎನ್ನಬಹುದು.
ಬಡ್ಡಿ ಸಮೇತ ವಿನಯ್‌ಗೆ ವಾಪಸ್ ಬರುತ್ತೆ; ಕಾರ್ತಿಕ್ ಕ್ಟಾಪ್ಟನ್ ಆದ್ಮೇಲೆ ಸಂಗೀತಾ ಮೈಂಡ್ ಗೇಮ್ ಶುರುನಾ?
ಧೂಮ್ ಚಿತ್ರದ ನಿರ್ದೇಶಕರಾದ ಸಂಜಯ್ ಗಧ್ವಿ ನಿಧನಕ್ಕೆ ಬಾಲಿವುಡ್‌ನ ಹಲವು ಖ್ಯಾತನಾಮರು ಸೇರಿದಂತೆ ಬಹಳಷ್ಟು ಜನರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಟರಾದ ಜಾನ್ ಅಬ್ರಹಾಂ, ಹೃತಿಕ್ ರೋಶನ್ ಸೇರಿದಂತೆ ಹಲವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಬರೆದುಕೊಂಡು ಸಂತಾಪ ವ್ಯಕ್ತಪಡಿಸಿದ್ದಾರೆ. ಸಂಜಯ್ ಅಕಾಲಿಕ ನಿಧನದಿಂದ ಬಾಲಿವುಡ್ ಒಬ್ಬ ಶ್ರೇಷ್ಠ ಬರಹಗಾರ ಹಾಗು ನಿರ್ದೇಶಕರನ್ನು ಕಳೆದುಕೊಂಡಂತಾಗಿದೆ ಎಂದು ಬಾಲಿವುಡ್ ಸಿನಿಮಾಮಂದಿ ಶೋಕ ವ್ಯಕ್ತಪಡಿಸಿದ್ದಾರೆ.