ಹೃದಯಾಘಾತ ಜೀವನದ ಮೇಲೆ ಹೇಗೆ ಪರಿಣಾಮ ಬೀರಿತೆಂದು ಬಹಿರಂಗ ಪಡಿಸಿದ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್

Published : Jul 31, 2023, 01:17 PM IST
ಹೃದಯಾಘಾತ ಜೀವನದ ಮೇಲೆ ಹೇಗೆ ಪರಿಣಾಮ ಬೀರಿತೆಂದು ಬಹಿರಂಗ ಪಡಿಸಿದ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್

ಸಾರಾಂಶ

ಹೃದಯಾಘಾತವು ಜೀವನದ ಮೇಲೆ ಹೇಗೆ ಪರಿಣಾಮ ಬೀರಿತು ಎಂದು ನಟಿ,   ವಿಶ್ವ ಸುಂದರಿ ಸುಶ್ಮಿತಾ ಸೇನ್ ಬಹಿರಂಗ ಪಡಿಸಿದ್ದಾರೆ.  ಜಾಗರೂಕರಾಗಿರಲು ಕಲಿತಿರುವುದಾಗಿ ಹೇಳಿದ್ದಾರೆ. 

ಬಾಲಿವುಡ್ ಸ್ಟಾರ್ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರಿಗೆ ಹೃದಯಾಘಾತವಾಗಿದ್ದು ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಫಿಟ್ ಅಂಡ್ ಫೈನ್ ಆಗಿದ್ದ ನಟಿ ಸುಶ್ಮಿತಾ ಸೇನ್ ದಿಢೀರ್ ಅನಾರೋಗ್ಯಕ್ಕೆ ಒಳಗಾಗಿದ್ದು ಅವರ ಸಿನಿಮಾ ಜೀವನವೇ ಮುಗಿಯಿತು ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಚಾಲೆಂಜ್ ಆಗಿ ತೆಗೆದುಕೊಂಡ ಸುಶ್ಮಿತಾ ಮತ್ತೆ ಕಮ್ ಬ್ಯಾಕ್ ಮಾಡಿದರು. ಕೆಲವೇ ದಿನಗಳಲ್ಲಿ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಮೂಲಕ ಅಚ್ಚರಿ ಮೂಡಿಸಿದರು. ಆಂಜಿಯೋಪ್ಲ್ಯಾಸ್ಟಿ ಮಾಡಿಸಿದ ಬಳಿಕ ಸುಶ್ಮಿತಾ ತನ್ನ ಆರೋಗ್ಯದ ಬಗ್ಗೆ ಮಾಹಿತಿ ನೀಡಲು ಅಭಿಮಾನಿಗಳ ಮುಂದೆ ಬಂದರು. ಅಭಿಮಾನಿಗಳ ಕಾಳಜಿ ಮತ್ತು ಪ್ರೀತಿಗೆ ಧನ್ಯವಾದ ತಿಳಿಸಿದರು. 

ಸುಶ್ಮಿತಾ ಹೃದಯಾಘಾತದ ಬಳಿಕ ಆರ್ಯ 3 ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡರು. ಇದೀಗ ಸುಶ್ಮಿತಾ ಹೃದಯಾಘಾತವು ತನ್ನ ಜೀವನದ ಮೇಲೆ ಹೇಗೆ ಪರಿಣಾಮ ಬೀರಿತು ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. 

ನ್ಯೂಸ್ 18 ಜೊತೆ ಮಾತನಾಡಿದ ಸುಶ್ಮಿತಾ, ಹೃದಯಾಘಾತದ ನಂತರ  ಜಾಗರೂಕರಾಗಿರಲು ಕಲಿತಿರುವುದಾಗಿ ಹೇಳಿದ್ದಾರೆ. 'ಒಂದು ಹಂತ ಮತ್ತು ಅದು ಕಳೆದುಹೋಯಿತು. ನಾನು ತುಂಬಾ ಅದೃಷ್ಟಶಾಲಿ. ಇದು ನನಗೆ ಈಗ ಭಯವನ್ನುಂಟು ಮಾಡುವುದಿಲ್ಲ, ಬದಲಿಗೆ ನಾನು ಈಗ ಭರವಸೆಯ ಭಾವನೆಯನ್ನು ಹೊಂದಿದ್ದೇನೆ, ಎದುರುನೋಡಬಹುದು. ಜೀವನವನ್ನು ಹೊಸ ಗುತ್ತಿಗೆ ಪಡೆದಾಗ, ಅದನ್ನು ಗೌರವಿಸುತ್ತೀರಿ ಮತ್ತು ಹೆಚ್ಚು ಜಾಗರೂಕರಾಗಿರುತ್ತೀರಿ' ಎಂದು ಹೇಳಿದ್ದಾರೆ. 'ದೇವರ ದಯೆಯಿಂದ ನನ್ನ ಆರೋಗ್ಯ ಅದ್ಭುತವಾಗಿದೆ. ನಾನು ಚೆನ್ನಾಗಿ ತಿನ್ನುತ್ತಿದ್ದೇನೆ' ಎಂದು ಹೇಳಿದರು.

ಬೋಲ್ಡ್‌ ಆಗಿ ಕಾಣಿಸಿಕೊಂಡ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್; ಇಲ್ಲಿವೆ ಫೋಟೋಗಳು

ಮುಖ ಊದಿಕೊಂಡಿದೆ ಎಂದ ಫ್ಯಾನ್ಸ್ 

ಇತ್ತೀಚಿಗಷ್ಟೆ ಸುಶ್ಮಿತಾ ಫೋಟೋಗಳನ್ನು ಶೇರ್ ಮಾಡಿದ್ದರು. ಅದನ್ನು ನೋಡಿದ ಫ್ಯಾನ್ಸ್ ಮುಖ ಊದಿ ಕೊಂಡಿದೆ ಎಂದು ಹೇಳಿದ್ದರು. ಅಷ್ಟೆಯಲ್ಲದೆ ಸುಶ್ಮಿತಾ ಅಡಿಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರು 2014 ರಿಂದ ಸ್ಟೀರಾಯ್ಡ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದರು. ಹಾಗಾಗಿ ತೂಕ ಹೆಚ್ಚಾಗಿದೆ, ಊದಿಕೊಂಡ ಹಾಗೆ ಕಾಣಿಸುತ್ತಾರೆ ಎಂದು ಹೇಳಿದ್ದರು. 

ತೀವ್ರ ಹೃದಯಾಘಾತ

ಸುಶ್ಮಿತಾ ಸೇನ್ ಅವರಿಗೆ ತೀವ್ರ ಹೃದಯಾಘಾತವಾಗಿದ್ದು 95 ಪ್ರತಿಶತದಷ್ಟು ಬ್ಲಾಕ್ ಆಗಿತ್ತು. ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು. ಬಳಿಕ ಕೆಲವೇ ದಿನಗಳಲ್ಲಿ ಸುಶ್ಮಿತಾ ಚೇತರಿಸಿಕೊಂಡು ವಾಪಾಸ್ ಆದರು. ಸದ್ಯ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. 

'ಮಿಸ್​ ಯೂನಿವರ್ಸ್​'ಗೆ 29ರ ಸಂಭ್ರಮ: ಸುಷ್ಮಿತಾ ಸೇನ್​ ಗೆಲ್ಲಲು ಕಾರಣವಾಗಿತ್ತು ಈ ಉತ್ತರ

ಸುಶ್ಮಿತಾ ಸಿನಿಮಾಗಳು 

ಸುಶ್ಮಿತಾ ಸೇನ್ ಸದ್ಯ ಆರ್ಯ 3 ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.  ಆರ್ಯ ಜೊತೆಗೆ ನಟಿ ತಾಲಿ ಸರಣಿಯಲ್ಲಿ ಟ್ರಾನ್ಸ್ಜೆಂಡರ್ ಪಾತ್ರದಲ್ಲಿ ನಟಿಸಿದ್ದಾರೆ. ರವಿ ಜಾಧವ್ ನಿರ್ದೇಶನದ ಸಿನಿಮಾದಲ್ಲಿ ಗೌರಿ ಸಾವಂತ್ ಆಗಿ ಸುಶ್ಮಿತಾ ನಟಿಸಿದ್ದಾರೆ. ಈಗಾಗಲೇ ಫಸ್ಟ್ ಲುಕ್ ರಿಲೀಸ್ ಆಗಿದ್ದು ವೈರಲ್ ಆಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!
Sonali Bendre: 'ಅಡುಗೆಮನೆಗೆ ಹೋಗ್ಬೇಡ ನೀನು'.. ಅಂತ ಖಡಕ್ ಆಗಿ ಹೇಳಿದ್ರು ನನ್ ಅತ್ತೆ!