ಖ್ಯಾತ ನಟ ಮತ್ತು ಅವರ ತಂದೆ ಜೊತೆಯೂ ಮಲಗಿದ್ದಾಳೆ: ಪಾಕ್ ಪತ್ರಕರ್ತನ ವಿರುದ್ಧ ಸಿಡಿದೆದ್ದ ನಟಿ ಸೆಲಿನಾ, ದೂರು ದಾಖಲು

Published : Jul 31, 2023, 12:27 PM IST
ಖ್ಯಾತ ನಟ ಮತ್ತು ಅವರ ತಂದೆ ಜೊತೆಯೂ ಮಲಗಿದ್ದಾಳೆ: ಪಾಕ್ ಪತ್ರಕರ್ತನ ವಿರುದ್ಧ ಸಿಡಿದೆದ್ದ ನಟಿ ಸೆಲಿನಾ, ದೂರು ದಾಖಲು

ಸಾರಾಂಶ

ನಟ ಫರ್ದೀನ್ ಖಾನ್ ಮತ್ತು ಅವರ ತಂದೆ ಫಿರೋಜ್ ಖಾನ್ ಜೊತೆಯೂ ಮಲಗಿದ್ದಾಳೆ ಎಂದು ಹೇಳಿದ್ದ ಪಾಕ್ ಪತ್ರಕರ್ತ, ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಉಮೈರ್ ಸಂಧು ವಿರುದ್ಧ ನಟಿ ಸೆಲಿನಾ ಜೇಟ್ಲಿ ದೂರು ನೀಡಿದ್ದಾರೆ.   

ಪಾಕಿಸ್ತಾನ ಮೂಲದ ಪತ್ರಕರ್ತ, ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಉಮೈರ್ ಸಂಧು ಭಾರತೀಯ ಸೆಲೆಬ್ರಿಟಿಗಳ ವಿರುದ್ಧ ಟ್ವಿಟ್ಟರ್‌ನಲ್ಲಿ ಕಿಡಿ ಕಾರುತ್ತಿರುತ್ತಾರೆ. ಮಾನಹಾನಿಕರ ಪೋಸ್ಟ್ ಶೇರ್ ಮಾಡಿ ಭಾರತದ ಅನೇಕ ಸಿನಿ ಗಣ್ಯರನ್ನು ತೇಜೋವಧೆ ಮಾಡುತ್ತಿದ್ದ ಉಮೈರ್ ಸಂಧು ವಿರುದ್ಧ ಖ್ಯಾತ ನಟಿ ಸೆಲಿನಾ ಜೇಟ್ಲಿ ಸಿಡಿದೆದ್ದಿದ್ದಾರೆ. ಉಮೈರ್ ಸಂಧು ವಿರುದ್ಧ ದೂರು ದಾಖಲಿಸಿರುವ ಸೆಲೆನಾ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಶೇರ್ ಮಾಡಿದ್ದಾರೆ. 

ಉಮೈರ್ ಸಂಧು ತನ್ನ ಹೇಳಿಕೆಯಲ್ಲಿ ನಟಿ ಸೆಲೆನಾ ಜೇಟ್ಲಿ ಖ್ಯಾತ ನಟರಾದ ಫರ್ದೀನ್ ಖಾನ್ ಮತ್ತು ಅವರ ತಂದೆ ಫಿರೋಜ್ ಖಾನ್ ಜೊತೆಯೂ ಮಲಗಿದ್ದಾರೆ ಎಂದು ಹೇಳಿದ್ದರು. ಉಮೈರ್ ಹೇಳಿಕೆ ವಿರುದ್ಧ ಸಿಡಿದೆದ್ದಿರುವ ಸೆಲೆನಾ, ಹೊಸದಿಲ್ಲಿಯಲ್ಲಿರುವ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೈಕಮಿಷನ್‌ಗೆ ದೂರು ನೀಡಿದ್ದಾರೆ. ಉಮೈರ್ ಸಂಧು ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ತನಿಖೆ ಮಾಡಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ. ಇದರ ಪತ್ರವನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ ಸೆಲೆನಾ. 

ಉಮೈರ್ ಸಂಧು ಹೇಳಿದ್ದೇನು?

ಈ ವರ್ಷದ ಆರಂಭದಲ್ಲಿ ಉಮೈರ್ ಸಂಧು, 'ಬಾಲಿವುಡ್‌ನಲ್ಲಿ ಬಾಲಿವುಡ್‌ನಲ್ಲಿ ತಂದೆ (ಫಿರೋಜ್ ಖಾನ್) ಮತ್ತು ಮಗ (ಫರ್ದೀನ್ ಖಾನ್) ಇಬ್ಬರೊಂದಿಗೆ ಅನೇಕ ಬಾರಿ ಮಲಗಿದ ಏಕೈಕ ನಟಿ ಸೆಲಿನಾ ಜೇಟ್ಲಿ' ಎಂದು ಹೇಳಿದ್ದರು. ದಿವಂಗತ ನಟ, ನಿರ್ಮಾಪಕ ಫಿರೋಜ್ ಖಾನ್ ಅವರ ಜನಶೇನ್‌ನಲ್ಲಿ ಸಿನಿಮಾದಲ್ಲಿ ಸೆಲೆನಾ  ನಟಿಸಿದ್ದರು. ಆ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಫಿರೋಜ್ ಖಾನ್ ಪುತ್ರ ಫರ್ದೀನ್ ಜೊತೆ ಸೆಲೆನಾ ನಟಿಸಿದ್ದರು.

Yash: ಕೆಜಿಎಫ್ ಸ್ಟಾರ್ ವಿರುದ್ಧ ಕೆಟ್ಟದಾಗಿ ಟ್ವೀಟ್: ಸ್ವಯಂ ಘೋಷಿತ ವಿಮರ್ಶಕನ ಗ್ರಹಚಾರ ಬಿಡಿಸಿದ ಫ್ಯಾನ್ಸ್

ಸೆಲೆನಾ ಪೋಸ್ಟ್

ಸೆಲೆನಾ ಸಾಮಾಜಿಕ ಜಾಲತಾಣದಲ್ಲಿ, 'ಕೆಲವು ತಿಂಗಳ ಹಿಂದೆ, ಸ್ವಯಂ ಘೋಷಿತ ಹಿಂದಿ ಸಿನಿಮಾ ವಿಮರ್ಶಕ ಮತ್ತು ಪಾಕಿಸ್ತಾನದ ಪತ್ರಕರ್ತ ಉಮೈರ್ ಸಂಧು ಟ್ವಿಟರ್‌ನಲ್ಲಿ ನನ್ನ ಬಗ್ಗೆ ಭಯಾನಕವಾದ ಸುಳ್ಳು ಹೇಳಿಕೆಯನ್ನು ನೀಡಿದ್ದರು. ನನ್ನ ಗುರು ಫಿರೋಜ್ ಖಾನ್ ಮತ್ತು ಅವರ ಮಗ ಫರ್ದೀನ್ ಇಬ್ಬರೊಂದಿಗಿನ ನನ್ನ ಸಂಬಂಧವನ್ನು ಕೆಟ್ಟದಾಗಿ ಹೇಳಿದ್ದರು. ಜೊತೆಗೆ ಆಸ್ಟ್ರಿಯಾದಲ್ಲಿಯೂ ಸಹ ನನ್ನ ಮತ್ತು ನನ್ನ ಕುಟುಂಬದ ಸುರಕ್ಷತೆ ಮತ್ತು ಭದ್ರತೆಯನ್ನು ಗುರಿಯಾಗಿಸಿಕೊಂಡು ಹಕ್ಕು ಚಲಾಯಿಸಿದರು. ಅವರು ನನಗೆ ನೀಡಿದ ಅವರ ಕಿರುಕುಳ ಮತ್ತು ನಕಲಿ ಆರೋಪಗಳು ಪಾಕಿಸ್ತಾನದಲ್ಲಿ ವೈರಲ್ ಆಗಿತ್ತು. ಅವರ ನಡವಳಿಕೆಯಿಂದ ಗಾಬರಿಗೊಂಡ ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ ಲಕ್ಷಾಂತರ ಮಂದೆ ಟ್ವಿಟ್ಟರ್‌ನಲ್ಲಿ ಬೆಂಬಲ ನೀಡಿದರು' ಎಂದು ಹೇಳಿದ್ದಾರೆ.

ನಟಿ ಊರ್ವಶಿ ರೌಟೇಲಾ ಬಗ್ಗೆ ಬರೆದು ಪೇಚಿಗೆ ಸಿಲುಕಿದ ಪತ್ರಕರ್ತ: ಲೀಗಲ್​ ನೋಟಿಸ್​!

ಇಷ್ಟೆಯಲ್ಲದೇ ಉಮೈರ್ ಸಂಧು ಆನ್‌ಲೈನ್‌ನಲ್ಲಿ ತನ್ನ ಲೊಕೇಶನ್ ಅನ್ನು ಬದಲಾಯಿಸಿಕೊಂಡು ಪಾಕಿಸ್ತಾನದಲ್ಲಿ ಅಡಗಿಕುಳಿತಿದ್ದಾನೆ ಎಂದು ಸೆಲೆನಾ ಆರೋಪ ಮಾಡಿದ್ದಾರೆ. ಉಮೈರ್ ಸಂಧು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದು ಭಾರತೀಯ ಸೆಲೆಬ್ರಿಟಿಗಳ ತೇಜೋವದೆ ಮಾಡುತ್ತಿದ್ದಾರೆ. ಸದ್ಯ ಸೆಲೆನಾ ಸಿಡಿದೆದ್ದಿರುವ ಕಾರಣ ಇನ್ಮುಂದೆಯಾದರೂ  ಉಮೈರ್ ಸಂಧು ಸೈಲೆಂಟ್ ಆಗುತ್ತಾರಾ ಕಾದು ನೋಡಬೇಕಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!
Sonali Bendre: 'ಅಡುಗೆಮನೆಗೆ ಹೋಗ್ಬೇಡ ನೀನು'.. ಅಂತ ಖಡಕ್ ಆಗಿ ಹೇಳಿದ್ರು ನನ್ ಅತ್ತೆ!