ಐಶ್ವರ್ಯ ರೈ ಮಿಸ್‌ ಇಂಡಿಯಾ ಗೆಲ್ಲಲು ಅರ್ಹರಲ್ಲ; ಸುಶ್ಮಿತಾ ಸೇನ್ ಶಾಕಿಂಗ್ ಹೇಳಿಕೆ

By Vaishnavi Chandrashekar  |  First Published Feb 9, 2023, 3:00 PM IST

2005ರಲ್ಲಿ ನಡೆದ ಸಂದರ್ಶನದಲ್ಲಿ ಕರಣ್ ಜೋಹಾರ್‌ ಕೇಳಿದ ಪ್ರಶ್ನೆಗೆ ಸುಶ್ಮಿತಾ ಸೇನ್ ಕೊಟ್ಟ ಶಾಕಿಂಗ್ ಉತ್ತರ. ಐಶ್ವರ್ಯ ರೈ ಯಾಕೆ ಗೆಲ್ಲಲು.... 


1994ರಲ್ಲಿ ನಡೆದ ಮಿಸ್ ಇಂಡಿಯಾ ಪೇಜೆಂಟ್‌ನಲ್ಲಿ ಸುಶ್ಮಿತಾ ಸೇನ್ ಮತ್ತು ಐಶ್ವರ್ಯ ರೈ ಸ್ಪರ್ಧಿಸಿದ್ದರು. ಅಲ್ಲಿಂದ ಇಬ್ಬರೂ ಮಿಸ್‌ ಯೂನಿವರ್ಸ್‌ ಮತ್ತು ಮಿಸ್‌ ವರ್ಲ್ಡ್‌ನಲ್ಲಿ ಸ್ಪರ್ಧಿಸಿ ತಮ್ಮ ಕಿರೀಟ ಪಡೆದುಕೊಂಡರು. ಈ ವಿಚಾರದ ಬಗ್ಗೆ 2005ರಲ್ಲಿ ಕರಣ್ ಜೋಹಾರ್ ನಡೆಸಿದ ಸಂದರ್ಶನದಲ್ಲಿ ಸುಶ್ಮಿತಾ ಸೀನ್‌ಗೆ ಪ್ರಶ್ನೆ ಮಾಡುತ್ತಾರೆ. ಸುಶ್ಮಿತಾ ಬದಲು ಐಶ್ವರ್ಯ ರೈ ಕಿರೀಟ ಧರಿಸಿದ್ದರೆ ಹೇಗಿತ್ತು? ಸುಶ್ಮಿತಾ ಕಿರೀಟ ಪಡೆದ ಕಾರಣ ಐಶ್ವರ್ಯ ಹೇಗೆ ರಿಯಾಕ್ಟ್‌ ಮಾಡಿದ್ದರು? ಎಂದು.

'ನಾನು ಐಶ್ವರ್ಯ ರೈಗಿಂತ ಬೆಟರ್‌ ಎಂದು ನನಗೆ ಕಿರೀಟ ಸಿಕ್ಕಿಲ್ಲ ನಾನು ಐಶ್ವರ್ಯಗಿಂತ ಬೆಸ್ಟ್‌ ಎಂದು ಕಿರೀಟ ಪಡೆದಿರುವುದು' ಎಂದು ಸುಶ್ಮಿತಾ ಸೇನ್ ಹೇಳಿದ್ದಾರೆ. ಈ ವಿಚಾರವನ್ನು ವಿವರಿಸಿ ಹೇಳಬಹುದಾ ಎಂದು ಮರು ಪ್ರಶ್ನೆ ಮಾಡಿದಾಗ ಮಿಸ್‌ ಇಂಡಿಯಾ ಪೇಜೆಂಟ್‌ ಬಗ್ಗೆ ಸಂಪೂರ್ಣ ವಿವರ ಕೊಟ್ಟಿದ್ದಾರೆ. ಐಶ್ವರ್ಯ ಫಸ್ಟ್‌ ರನ್ನರ್‌ ಅಪ್‌ ಪಡೆದುಕೊಂಡರು. 

Tap to resize

Latest Videos

'ಖಂಡಿತಾ ಮಿಸ್‌ ಇಂಡಿಯಾ ಪೇಜೆಂಟ್‌ ನಾನು ಗೆಲ್ಲುವ ಎಲ್ಲಾ ಕ್ವಾಲಿಟಿ ಹೊಂದಿದ್ದೆ. ಐಶ್ವರ್ಯ ನೀಡಿದ ಪರ್ಫಾರ್ಮೆನ್ಸ್‌ ಜೊತೆ ನನ್ನ ಪರ್ಫಾರ್ಮೆನ್ಸ್‌ನ ಕಂಪೇರ್ ಮಾಡಿಕೊಳ್ಳುವುದಿಲ್ಲ. ವೇದಿಕೆ ಮೇಲೆ ಐಶ್ವರ್ಯ ಪ್ಯಾಬುಲೆಸ್‌ ಆಗಿದ್ದರು. ನಾನು ಎರಡು ವಿಚಾರದಲ್ಲಿ ಹೆಚ್ಚಿನ ನಂಬಿಕೆ ಹೊಂದಿರುವೆ. ಒಂದು ಪೇಜೆಂಟ್‌ ಶೋ ನಡೆದ ರಾತ್ರಿ ನಾನು ನನ್ನ ಬೆಸ್ಟ್‌ ನೀಡಿರುವೆ ಹೀಗಾಗಿ ಕಿರೀಟ ನಾನು ಗೆದ್ದೆ. ಮತ್ತೊಬ್ಬರಿಗಿಂತ ನಾನು ಚೆನ್ನಾಗಿದ್ದೀನಿ ಎಂದು ಗೆದ್ದಿಲ್ಲ ನನ್ನಲ್ಲಿ ಗೆಲ್ಲುವ ಕ್ವಾಲಿಟಿ ಇತ್ತು ಎಂದು ಗೆದ್ದಿರುವುದು' ಎಂದು ಸುಶ್ಮಿತಾ ಸೇನ್ ಮಾತನಾಡಿದ್ದಾರೆ.

ಲಲಿತ್‌ ಮೋದಿ ಬಿಟ್ಟು ಮತ್ತೆ ಮಾಜಿ ಬಾಯ್‌ಫ್ರೆಂಡ್‌ ಹಿಂದೆ ಬಿದ್ದ ಸುಶ್ಮಿತಾ ಸೇನ್; ಮದುವೆ ಫೋಟೋ ವೈರಲ್?

' ಅಲ್ಲಿ ಎನು ನಡೆಯಿತ್ತು ಎಂದು ಗೊತ್ತಿಲ್ಲದವರು ನನ್ನ ಲಕ್‌ನಿಂದ ಗೆದ್ದಿರುವುದು ಎಂದುಕೊಂಡಿದ್ದಾರೆ. ನನ್ನ ಶೂಟಿಂಗ್ ಸ್ಟಾರ್ ಅಂದು ನನ್ನ ತಲೆಯ ಮೇಲಿತ್ತು. ನನ್ನ ಸಮಯ ಚೆನ್ನಾಗಿತ್ತು ಅಂದು ಕಾರ್ಯಕ್ರಮದಲ್ಲಿ ನಾನು ಗೆದ್ದಿರುವೆ. ಇದರಲ್ಲಿ ಹಾರ್ಡ್‌ ವರ್ಕ್‌ ಒಂದನೇ ನಂಬಲು ಆಗುವುದಿಲ್ಲ ಏಕೆಂದರೆ 20 ರಿಂದ 30 ಹುಡುಗಿಯರು ನಮ್ಮಷ್ಟೇ ಸಮವಾಗಿ ಪರಿಶ್ರಮ ಹಾಕುತ್ತಾರೆ. ನನ್ನ ಜೀವನದಲ್ಲಿ ಲಕ್ ಅನ್ನುವುದು ಆ ರಾತ್ರಿ ನನ್ನ ಕೈಯಲ್ಲಿತ್ತು' ಎಂದು ಸುಶ್ಮಿತಾ ಹೇಳಿದ್ದಾರೆ. 

ಸುಶ್ಮಿತಾ ಜರ್ನಿ: 

1994ರಲ್ಲಿ ಭಾರತಕ್ಕಾಗಿ ಮೊದಲ ಬಾರಿಗೆ ಸುಶ್ಮಿತಾ ಸೇನ್ (Sushmita Sen) ಗೆದ್ದಿದ್ದರು. ಅವರ ನಂತರ  ಲಾರಾ ದತ್ತಾ 2000 ರಲ್ಲಿ ಮಿಸ್ ಯೂನಿವರ್ಸ್ (Lara Dutta) ಆದರು. ಮಿಸ್ ಯೂನಿವರ್ಸ್ ಸ್ಪರ್ಧೆಗೆ ಆಯ್ಕೆಯಾಗಲು  ಸುಶ್ಮಿತಾ ಸೇನ್ ಐಶ್ವರ್ಯಾ ರೈ ಅವರನ್ನು ಸೋಲಿಸಿದ್ದರು. ವಾಸ್ತವವಾಗಿ, ಆ ವರ್ಷ ಮಿಸ್‌ ಇಂಡಿಯಾ ಸ್ಪರ್ಧೆಯ ಕೊನೆಯಲ್ಲಿ, ಸುಶ್ಮಿತಾ ಸೇನ್ ಐಶ್ವರ್ಯಾ ರೈ ಅವರೊಂದಿಗೆ ಸ್ಪರ್ಧಿಸುತ್ತಿದ್ದರು. ಈ ವೇಳೆ ಇಬ್ಬರಿಗೂ ಒಂದು ಸಾಮಾನ್ಯ ಪ್ರಶ್ನೆ ಕೇಳಲಾಗಿದ್ದು, ಅದರಲ್ಲಿ ಸುಶ್ಮಿತಾ ನೀಡಿದ ಉತ್ತರ ತೀರ್ಪುಗಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಸಿನಿಮಾಗಳಿಗಿಂತ ಪ್ರೇಮ ಪ್ರಕರಣಗಳಿಗೇ ಫೇಮಸ್‌ ಸುಶ್ಮಿತಾ ಸೇನ್ ಅವರ ಲೈಫ್‌

ಸಾಮಾನ್ಯ ಪ್ರಶ್ನೆಯಲ್ಲಿ, ಸುಶ್ಮಿತಾ ಮತ್ತು ಐಶ್ವರ್ಯಾ ರೈಗೆ ನೀವು ಯಾವುದೇ ಐತಿಹಾಸಿಕ ಘಟನೆಯನ್ನು ಬದಲಾಯಿಸಲಾರಿರಿ, ಅದು ಏನು ಎಂದು ಕೇಳಲಾಯಿತು. ಇದಕ್ಕೆ ಐಶ್ವರ್ಯಾ ಅವರ ಉತ್ತರ - ಅವರು ಹುಟ್ಟಿದ ಸಮಯ ಎಂದು ಉತ್ತರಿಸಿದರು. ಆದರೆ ಸುಶ್ಮಿತಾ ಸೇನ್ ಅವರು ಹೇಳಿದರು - 'ಇಂದಿರಾ ಗಾಂಧಿಯವರ ಸಾವು' ಎಂದು ಉತ್ತರ ನೀಡಿದ್ದರು.
 

click me!