Tamannaah Bhatia ಸನ್ಯಾಸ ಸ್ವೀಕರಿಸಿದ್ರಾ? ಮಿಲ್ಕಿ ಬ್ಯೂಟಿಯ ಹೊಸ ಅವತಾರಕ್ಕೆ ಫ್ಯಾನ್ಸ್​ ಶಾಕ್​!

By Suvarna News  |  First Published Feb 9, 2023, 1:47 PM IST

ಸದಾ ಬಿಕಿನಿ, ಸ್ಕರ್ಟ್​, ಮಿನಿ ಎಂದೆಲ್ಲಾ ಡ್ರೆಸ್​ ಮಾಡುತ್ತಾ ಫ್ಯಾನ್ಸ್​ ಹೃದಯ ಕದಿಯುತ್ತಿದ್ದ ನಟಿ ತಮನ್ನಾ ಭಾಟಿಯಾ ಏಕಾಏಕಿ ಖಾವಿ ತೊಟ್ಟು ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇದೆಲ್ಲಿ?
 


ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ತಮನ್ನಾ ಭಾಟಿಯಾ (Tamanna Bhatia ) ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿ. ಮಿಲ್ಕಿ ಗ್ಲಾಮರ್‌ನಿಂದ ಈ ಮುಂಬೈ ಬೆಡಗಿ ಎಬ್ಬಿಸಿದ ಹವಾ ಅಷ್ಟಿಷ್ಟಲ್ಲ. ಪ್ರಮುಖವಾಗಿ ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಇವರು ಕೆಲ ಹಿಂದಿ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಕನ್ನಡದಲ್ಲಿ `ಜಾಗ್ವಾರ್' ಮತ್ತು `ಕೆಜಿಎಫ್' ಚಿತ್ರಗಳ ಐಟಂ ಹಾಡುಗಳಿಗೆ (Item song) ನೃತ್ಯ ಮಾಡಿದ್ದಾರೆ. ಕೊಂಚಂ ಇಷ್ಟಂ ಕೊಂಚಂ ಕಷ್ಟಂ', ಪೈಯ್ಯ, 100 %  ಲವ್, ಬದ್ರಿನಾಥ್  ಮುಂತಾದ ಚಿತ್ರಗಳು ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ತಮನ್ನಾಗೆ ಭದ್ರವಾದ ತಳಪಾಯ ಹಾಕಿದವು. ಹಿಂದಿಯಲ್ಲಿ ಹಿಮ್ಮತ್ತವಾಲಾ, ಎಂಟರ್​ಟೇನ್​ಮೆಂಟ್​  ಮುಂತಾದ ಚಿತ್ರಗಳಲ್ಲಿ ನಟಿಸಿದರೂ,  ಎರಡು ಭಾಗಗಳಲ್ಲಿ ತೆರೆಕಂಡ ಬಾಹುಬಲಿ ಚಿತ್ರ ಇವರಿಗೆ ಸಕತ್​ ಬೇಡಿಕೆಯನ್ನು ತಂದುಕೊಟ್ಟಿತು.  'ಪಯ್ಯಾ' ಸಿನಿಮಾ ನಂತರ ಭಾರೀ ಕ್ರೇಜ್ ಸೃಷ್ಟಿಸಿಕೊಂಡ ನಂತರ ಚಿತ್ರರಂಗದಲ್ಲಿ ಸ್ವಲ್ಪ ದೂರವೇ ಉಳಿದಿರೋ ತಮನ್ನಾ ಇದೀಗ ದಿಢೀರ್​ ಆಗಿ ಕಾವಿ ಬಟ್ಟೆ  ತೊಟ್ಟಿದ್ದಾರೆ. ಬಿಕಿನಿ (Bikini) ದೃಶ್ಯಗಳಲ್ಲಿ ನಟಿಸಿ ಪಡ್ಡೆ ಹುಡುಗರ ನಿದ್ದೆ ಕದ್ದ ತಮನ್ನಾ, ಈಗ  ಕಾವಿ ಬಟ್ಟೆ ತೊಟ್ಟು ಲಿಂಗ ಭೈರವಿ ಪೂಜೆ ಮಾಡಿದ್ದಾರೆ. ಅದರ ವಿಡಿಯೋ ಈಗ ವೈರಲ್​ ಆಗಿದ್ದು, ಅಭಿಮಾನಿಗಳು ಶಾಕ್​ ಆಗಿದ್ದಾರೆ. 

33 ವರ್ಷದ ಈ ಚೆಲುವೆ ಇಂದಿಗೂ ಅವಿವಾಹಿತೆಯೇ (Unmarried). ಮದುವೆಯಾದರೆ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ ತಮನ್ನಾ ಈಗ ಇದ್ದಕ್ಕಿದ್ದಂತೆಯೇ ಕಾವಿ  ಧಿರಿಸಿ ಶಾಕ್​  ನೀಡಿದ್ದಾರೆ. ಸ್ಕರ್ಟ್, ಜೀನ್ಸ್, ಶಾರ್ಟ್ಸ್, ಜಿಮ್ ಸೂಟ್, ಬಿಕಿನಿ ತೊಟ್ಟು ವಿದೇಶದ ಟೂರ್​ಗಳಲ್ಲಿ (Tour) ಇರುತ್ತಿರೋ ನಟಿ,   ದೇವಸ್ಥಾನ ದರ್ಶನದಲ್ಲಿ ಬ್ಯುಸಿ ಆಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಈಕೆ  ಹಿಮಾಲಯಕ್ಕೆ ತೆರಳಿ ವೈಷ್ಣವಿ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಸಾಮಾಜಿಕ ಜಾಲತಾಣದಲ್ಲಿ ಅದರ  ಫೋಟೊಗಳನ್ನು ಶೇರ್​ ಮಾಡಿದ್ದರು. ಇದೀಗ  ಇಶಾ ಯೋಗ ಸೆಂಟರ್​ಗೆ ಹೋಗಿದ್ದು,  ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬರೀ ಪೂಜೆ ಸಲ್ಲಿಸಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಆದರೆ  ದೀಕ್ಷೆ ಪಡೆದು ಪೂಜೆ ನೆರವೇರಿಸಿದ್ದಾರೆ ಎನ್ನಲಾಗಿದೆ. 

Tap to resize

Latest Videos

Ajay Devagan, Tabu: ಅಜಯ್​ ದೇವಗನ್​- ಟಬು ರೊಮಾನ್ಸ್ ವೈರಲ್; ಫೋಟೋ ಶೇರ್​ ಮಾಡಿದ ನಟ!

ಹೊಸ ವರ್ಷದ ಸಂಭ್ರಮದಲ್ಲಿ ತಮನ್ನಾ ಅಫೇರ್‌ ಬಗ್ಗೆ ಗುಸುಗುಸು ಶುರುವಾಗಿತ್ತು. ಬಾಲಿವುಡ್ ಪೋಷಕ ನಟ ವಿಜಯ್ ವರ್ಮಾ ಜೊತೆ ಮಿಲ್ಕಿಬ್ಯೂಟಿ ಡೇಟಿಂಗ್ (Dating) ಮಾಡ್ತಿದ್ದಾರೆ. ಇಬ್ಬರು ಒಟ್ಟಿಗೆ ನ್ಯೂ ಇಯರ್ ಸೆಲೆಬ್ರೇಟ್ ಮಾಡಿದ್ದಾರೆ. ಇಬ್ಬರು ಕಿಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ ಎಂದು ಸುದ್ದಿಯಾಗಿತ್ತು. ಇವರ ಮದುವೆ ಸುದ್ದಿ ಯಾವಾಗ ಬರುತ್ತದೆ ಎಂದು ಫ್ಯಾನ್ಸ್ ಕಾಯುತ್ತಿದ್ದರೆ ಮಿಲ್ಕಿ ಬ್ಯೂಟಿ ಹೀಗೆ ಶಾಕ್​ ಕೊಟ್ಟಿದ್ದಾರೆ. ಬೇಗ ಮದುವೆಯಾಗಲಿ ಎನ್ನುವ ಕಾರಣಕ್ಕೆ ಇವರು ಪೂಜೆ ಸಲ್ಲಿಸುತ್ತಿರಬಹುದು ಎಂದೂ ಅಭಿಮಾನಿಗಳು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. ಆದರೂ ಇನ್ನು ಹಲವರು ಈಕೆ ಸಂಸಾರದ ಬಂಧವೇ ಬೇಡವೆಂದು ಸನ್ಯಾಸ ಸ್ವೀಕರಿಸಿದ್ದಿರಬಹುದು ಎಂದುಕೊಳ್ಳುತ್ತಿದ್ದಾರೆ. 

ಅದೇ ಇನ್ನೊಂದೆಡೆ ಕೊಯಮತ್ತೂರಿಗೆ ಭೇಟಿ ಕೊಟ್ಟಿರುವ ಬಗ್ಗೆ ಖುದ್ದು ತಮನ್ನಾ ವಿಡಿಯೋದಲ್ಲಿ (Vedio) ಹೇಳಿಕೊಂಡಿದ್ದಾರೆ.  'ಕೊಯಮತ್ತೂರಿನ ಇಶಾ ಯೋಗ ಸೆಂಟರ್​ನಿಂದ  ಆಹ್ವಾನ ಬಂದಿತ್ತು. ನನಗೆ ಇದನ್ನು ಕೇಳಿ ತುಂಬಾ ಸಂತೋಷವಾಯಿತು.  ಲಿಂಗ ಭೈರವಿ ದೇವಿಯ ದರ್ಶನ ಮಾಡುವ ಅವಕಾಶ ಸಿಕ್ಕಿತು. ಅದರಿಂದ  ಮನಸ್ಸಿಗೆ ಬಹಳ ಚೈತನ್ಯ ತುಂಬಿದೆ.  ಜೀವನದಲ್ಲಿ ಭಯ, ಸೋಲಿನ ಬಗ್ಗೆ ಹಲವು  ಆತಂಕ ಇದ್ದವು. ಅವೆಲ್ಲವೂ ದೂರವಾಗಿವೆ. ಲಿಂಗ ಭೈರವಿ (Linga Bairavi) ವಿಗ್ರಹವನ್ನು ಮನೆಗೆ ಕೊಂಡೊಯ್ಯುತ್ತಿದ್ದೇನೆ.  ಇಲ್ಲಿನ ಪರಿಸರ, ಲಿಂಗ ಭೈರವಿ ಮೂರ್ತಿ ನೋಡುತ್ತಿದ್ದಂತೆ ಏನೋ ಗೊತ್ತಿಲ್ಲದ ಆಧ್ಯಾತ್ಮಿಕ ಅನುಭೂತಿ ದೊರೆಕುತ್ತದೆ' ಎಂದಿದ್ದಾರೆ. ಒಟ್ಟಿನಲ್ಲಿ ಕಾವಿ ಬಟ್ಟೆ ತೊಟ್ಟದ್ದು ಏಕೆ? ಇಶಾ ಯೋಗ ಕೇಂದ್ರಕ್ಕೆ ಮಾಮೂಲಿ ಡ್ರೆಸ್​ನಲ್ಲಿಯೇ ಹೋಗಿ ಪೂಜೆ ಮಾಡಬಹುದಿತ್ತಲ್ಲವೆ ಎಂದು ಅಭಿಮಾನಿಗಳು ಪ್ರಶ್ನೆ ಕೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ನಟಿಯೇ ಉತ್ತರಿಸಬೇಕಿದೆ. 

 

Pawan Kalyan: ಮೂರು ಮದ್ವೆಯಾದೆ, ಆತ್ಮಹತ್ಯೆಗೆ ಟ್ರೈ ಮಾಡಿದ್ದೆ... ಗುಟ್ಟು ಬಿಚ್ಚಿಟ್ಟ ನಟ ಪವನ್​ ಕಲ್ಯಾಣ್

 

click me!