ನಟ ಸುಶಾಂತ್ ಸಿಂಗ್ ರಜಪೂತ್ ಅವರ ಹುಟ್ಟುಹಬ್ಬವಿಂದು. ಸಾವಿನ ಕುರಿತು ಹಿಂದೊಮ್ಮೆ ಅವರು ಸಂದರ್ಶನದಲ್ಲಿ ಹೇಳಿದ್ದೇನು? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಟ್ರೇಡ್ ವಿಶ್ಲೇಷಕ...
ನಟ ಸುಶಾಂತ್ ಸಿಂಗ್ ರಜಪೂತ್ (Sushanth Singh Rajpooth) ಜಗತ್ತಿಗೆ ವಿದಾಯ ಹೇಳಿ ಎರಡೂವರೆ ವರ್ಷಗಳು ಕಳೆದಿವೆ. 2020ರ ಜೂನ್ 14 ರಂದು ಅವರ ಮೃತದೇಹ ಅವರು ವಾಸಿಸುತ್ತಿದ್ದ ಮುಂಬೈನ ಬಾಂದ್ರಾ ಅಪಾರ್ಟ್ಮೆಂಟ್ನಲ್ಲಿ ಸಿಕ್ಕಿತ್ತು. ಅಲ್ಲಿಂದ ಇಲ್ಲಿಯವರೆಗೂ ಇದು ಕೊಲೆಯೋ, ಆತ್ಮಹತ್ಯೆಯೋ ಎಂಬ ನಿಜ ಬಗೆಹರಿದಿಲ್ಲ. ಕೆಲವರು ಇದು ಆತ್ಮಹತ್ಯೆ ಎನ್ನುತ್ತಿದ್ದರೆ, ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯೇ ಅಲ್ಲ ಎಂದು ಇದಾಗಲೇ ಹಲವರು ನುಡಿದಿದ್ದಾರೆ. ಇವರ ಸಾವಿನ ನಂತರ ಚಿತ್ರರಂಗದಲ್ಲಿನ ಡ್ರಗ್ಸ್ ಮಾಫಿಯಾದ (Drugs Mafia) ಬಗ್ಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿ ಹಲವಾರು ತಾರೆಗಳ ನೈಜ ಮುಖಗಳು ಬೆಳಕಿಗೆ ಬಂದರೂ, ಸುಶಾಂತ್ ಅವರ ಸಾವಿನ ನೈಜ ಚಿತ್ರಣ ಮಾತ್ರ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಇವರದ್ದು ಆತ್ಮಹತ್ಯೆ ಎಂದು ಬಿಂಬಿತವಾಗಿದ್ದರೂ, ಇದು ಕೊಲೆ ಎಂಬ ಕುರಿತು ಸುಶಾಂತ್ ಸಿಂಗ್ ಅವರ ಮರಣೋತ್ತರ ಪರೀಕ್ಷೆ ಮಾಡಿದ್ದ ಕೂಪರ್ ಆಸ್ಪತ್ರೆ ಸಿಬ್ಬಂದಿ ಸ್ಫೋಟಕ ಹೇಳಿಕೆ ನೀಡಿದ್ದರು. ಸುಶಾಂತ್ ಅವರದ್ದು ಆತ್ಮಹತ್ಯೆಯಲ್ಲ, ಇದು ಕೊಲೆ ಎಂದು ಕೂಪರ್ ಆಸ್ಪತ್ರೆಯ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ರೂಪಕುಮಾರ್ ಶಾ ಆರೋಪಿಸಿದ್ದರು. ಸುಶಾಂತ್ ಶವ ಪತ್ತೆಯಾದಾಗ ಅವರ ದೇಹದ ಮೇಲೆ ಗಾಯಗಳಿದ್ದವು ಮತ್ತು ಅವರ ದೇಹವನ್ನು ಥಳಿಸಲಾಗಿತ್ತು ಎಂದಿದ್ದ ರೂಪಕುಮಾರ್ ಶಾ, ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಪರೀಕ್ಷೆ (Post mortum) ನಡೆಯುವಾಗ ನಾನು ಅಲ್ಲಿಯೇ ಇದ್ದೆ. ಇದು ಆತ್ಮಹತ್ಯೆಯಲ್ಲ ಕೊಲೆ (murder) ಎಂದು ವೈದ್ಯರಿಗೆ ಹೇಳಿದ್ದೆ. ಆದರೆ ಯಾರೂ ನನ್ನತ್ತ ಗಮನ ಹರಿಸಲಿಲ್ಲ ಎಂಬ ಹೇಳಿಕೆ ನೀಡಿದ್ದು ಇಡೀ ಘಟನೆ ತಿರುವು ಪಡೆದುಕೊಂಡಿತ್ತು.
ರೂಪಕುಮಾರ್ ಶಾ ಕೂಪರ್ ಆಸ್ಪತ್ರೆಯ (Kooper hospital) ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದರು. ಈ ಹೇಳಿಕೆ ನೀಡುವ ಒಂದೂವರೆ ತಿಂಗಳ ಹಿಂದೆ ನಿವೃತ್ತರಾಗಿದ್ದರು. ಶಾ ಅವರ ಹೇಳಿಕೆ ಬಳಿಕ ವೈದ್ಯರ ಮೇಲೆಯೇ ಅನುಮಾನ ಶುರುವಾಗಿತ್ತು. ಮರಣೋತ್ತರ ಪರೀಕ್ಷೆ ವೇಳೆ ವೈದ್ಯರೇ ಸತ್ಯವನ್ನು ಮುಚ್ಚಿಟ್ಟಿದ್ದಾರಾ ಎಂಬ ಪ್ರಶ್ನೆ ಮೂಡಿತ್ತು. ಅದೇನೇ ಇದ್ದರೂ ಇವರ ಸಾವಿನ ಬಗ್ಗೆ ಇದುವರೆಗೂ ಅನುಮಾನದ ಹುತ್ತ ಸುತ್ತುತ್ತಲೇ ಇದೆ. ಸಾವಿಗೆ ಸಂಬಂಧಿಸಿದಂತೆ ಇವರ ಸ್ನೇಹಿತೆ ರಿಯಾ ಚಕ್ರವರ್ತಿಯ ಮೇಲೂ ಅನುಮಾನವಿತ್ತು. ಅವರೂ ಜೈಲು ಸೇರಿದ್ದರು. ಇಂದಿಗೂ ಅಭಿಮಾನಿಗಳು ಸುಶಾಂತ್ ಅವರನ್ನು ನೆನೆದು ಭಾವುಕರಾಗುತ್ತಾರೆ.
'ಪಠಾಣ್' ವೀಕ್ಷಿಸಲು ಆಗದಿದ್ರೆ ಸಾಯ್ತೇನೆ: ವಿಡಿಯೋ ಮಾಡಿದ್ದಾನೆ ಈ ಯುವಕ!
ಸುಶಾಂತ್ ಬದುಕಿರುತ್ತಿದ್ದರೆ, ಇಂದು (ಜನವರಿ 21) ರಂದು ನಟನ 37 ನೇ ಜನ್ಮದಿನ (Birthday) ಆಚರಿಸಿಕೊಳ್ಳುತ್ತಿದ್ದರು. 1986ರ ಜನವರಿ 21 ರಂದು ಬಿಹಾರದ ಪಟ್ನಾದಲ್ಲಿ ಜನಿಸಿದ್ದ ಸುಶಾಂತ್ ಎಂಬ ಹುಡುಗ, ಮಾಯಾನಗರಿ ಮುಂಬೈಗೆ ಬಂದು ಟಿವಿಯಲ್ಲಿ ಹೆಸರು ಮಾಡಿದರು. ಬಾಲಿವುಡ್‌ಗೆ ಪದಾರ್ಪಣೆ ಮಾಡಿ ಅಲ್ಲಿಯೂ ಸಾಕಷ್ಟು ಮೆಚ್ಚುಗೆ ಗಳಿಸಿದರು. ಸುಶಾಂತ್ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಯಶಸ್ಸನ್ನು ಗಳಿಸಿದವರಲ್ಲಿ ಒಬ್ಬರು. ಅವರು ಎಷ್ಟು ಚುರುಕಾಗಿದ್ದಾರೋ ಅಷ್ಟೇ ಬುದ್ಧಿವಂತನಾಗಿದ್ದರು ಕೂಡ.
ಆದರೆ ಈ ಹುಟ್ಟುಹಬ್ಬದಂದು ಒಂದು ಸ್ಫೋಟಕ ಮಾಹಿತಿಯನ್ನು ಟ್ರೇಡ್ ವಿಶ್ಲೇಷಕ ಕೋಮಲ್ ನಹತಾ (Komal Nahata) ಬಿಚ್ಚಿಟ್ಟಿದ್ದಾರೆ. ಸುಶಾಂತ್ ಅವರ ಸಾವು ಕೊಲೆ ಇರಬಹುದು ಎಂಬ ಬಗ್ಗೆ ಇದಾಗಲೇ ಗುಮಾನಿ ಇರುವುದರಿಂದ ಇವರ ಈ ಹೇಳಿಕೆ ಕೂಡ ಅದಕ್ಕೆ ಇನ್ನಷ್ಟು ಆಧಾರ ನೀಡುವಂತಿದೆ. ಅಷ್ಟಕ್ಕೂ ಕೋಮಲ್ ಅವರು ಹೇಳಿದ್ದೇನೆಂದರೆ, 'ಸುಶಾಂತ್ ಯಾವುದಕ್ಕೂ ಹೆದರದ ವ್ಯಕ್ತಿಯಂತೆ. ಆದರೆ ಅವರಿಗೆ ಇದ್ದ ಒಂದೇ ಒಂದು ಭಯವೆಂದರೆ ಅದು ಸಾವು. ಸಾವು ಎಂಬ ಶಬ್ದಕ್ಕೆ ಸುಶಾಂತ್ ತುಂಬಾ ಹೆದರುತ್ತಿದ್ದರಂತೆ. ಎಲ್ಲಿಯಾದರೂ ಸಾವಿನ ವಿಷಯ ಬಂದರೆ ಆ ಶಬ್ದ ಕೇಳಿದರೆ ಅವರು ಭಯಬೀಳುತ್ತಿದ್ದರಂತೆ' ಎಂದಿದ್ದಾರೆ.
ಸರೋಗಸಿ ಮೂಲಕ ಮಗು ಪಡೆದಿದ್ಯಾಕೆ? ಕೊನೆಗೂ ಮೌನ ಮುರಿದ ಪ್ರಿಯಾಂಕಾ
ಹಿಂದೆ ಒಮ್ಮೆ, ಕೋಮಲ್ ನಹತಾ ಅವರು ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಂದರ್ಶನ ಮಾಡಿದ್ದರು. ಆಗ ಸುಶಾಂತ್ ಅವರೇ ನೀಡಿದ್ದ ಹೇಳಿಕೆಯ ಬಗ್ಗೆ ಕೋಮಲ್ ವಿವರಿಸಿದ್ದಾರೆ. 'ನೀವು ಯಾವುದಕ್ಕೆ ಹೆಚ್ಚು ಹೆದರುತ್ತೀರಿ ಎಂದು ನಾನು ಕೇಳಿದ್ದೆ. ಆಗ ಅವರು, 'zನನಗೆ ಸಾವಿನ ಭಯ ಹೆಚ್ಚು. ನನ್ನ ಸುತ್ತಲೂ ಏನೋ ಒಂದು ನಡೆಯುತ್ತಿದೆ ಎನಿಸುತ್ತಿದೆ. ಇದು ತುಂಬಾ ಭಯಾನಕವಾಗಿದೆ. ನನಗೆ ಸಾವು ಎಂದರೆ ತುಂಬಾ ಭಯ. ಯಾರೋ ಏನೋ ಮಾಡಿದಂತೆ ಅನ್ನಿಸುತ್ತಿದೆ" ಎಂದು ಸುಶಾಂತ್ ಸಿಂಗ್ ಹೇಳಿದ್ದರು. ಹೀಗಿದ್ದ ಮೇಲೆ ಅವರಿಗೆ ಸಾವಿನ ಮುನ್ಸೂಚನೆ ಸಿಕ್ಕಿದ್ದಿರಬಹುದು ಎನ್ನಿಸುತ್ತದೆ. ಸಾವಿಗೆ ಇಷ್ಟು ಹೆದರುವ ರಜಪೂತ್ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ ಎಂದರೆ ನಂಬುವುದು ಕಷ್ಟ' ಎಂದು ಹೇಳಿದ್ದಾರೆ. ಅದೇನೇ ಇದ್ದರೂ ತನಿಖೆಯಿಂದ ಇನ್ನಷ್ಟು ವಿಷಯ ಬೆಳಕಿಗೆ ಬರಬೇಕಿದೆ.