ಈ ಸಿನಿಮಾಗಾಗಿ ಎಲ್ಲಾ ಆಸ್ತಿ ಅಡ ಇಟ್ಟೆ, ಇದು ನನಗೆ ಪುನರ್ಜನ್ಮ...: ನಟಿ ಕಂಗನಾ ರಣಾವತ್

By Shruthi Krishna  |  First Published Jan 21, 2023, 12:15 PM IST

ಬಾಲಿವುಡ್ ನಟಿ ಕಂಗನಾ ರಣಾವತ್ ಎಮರ್ಜೆನ್ಸಿ ಸಿನಿಮಾಗಾಗಿ ಎಲ್ಲಾ ಆಸ್ತಿ ಅಡ ಇಟ್ಟೆ ಎಂದು ಬಹಿರಂಗ ಪಡಿಸಿದ್ದಾರೆ. 


ಬಾಲಿವುಡ್ ನಟಿ ಕಂಗನಾ ರಣಾವತ್ ಸದ್ಯ ಬಹಿನೀರಕ್ಷೆಯ ಎಮರ್ಜೆನ್ಸಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಕಂಗನಾ ನಟನೆಯ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಕಂಗನಾ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಶೂಟಿಂಗ್ ಮುಗಿಸಿದ ಬಗ್ಗೆ ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದರು.

ಇದೀಗ ಎಮರ್ಜೆನ್ಸಿ ಸಿನಿಮಾಗಾಗಿ ಎಲ್ಲಾ ಆಸ್ತಿಯನ್ನು ಅಡ ಇಟ್ಟಿರುವುದಾಗಿ ಹೇಳಿದ್ದಾರೆ. ಕಷ್ಟಪಟ್ಟು ಸಿನಿಮಾ ಮಾಡಿರುವ ಬಗ್ಗೆ ಕಂಗನಾ ಬಹಿರಂಗ ಪಡಿಸಿದರು. ಅಂದಹಾಗೆ ಸಿನಿಮಾದಲ್ಲಿ ಕಂಗನಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದಿರಾ ಗಾಂಧಿ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋಗಳನ್ನು ಕಂಗನಾ ಶೇರ್ ಮಾಡಿದ್ದಾರೆ. ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ ಎಂದು ಹೇಳಿದ್ದಾರೆ. ಚಿತ್ರಕ್ಕಾಗಿ ಆಸ್ತಿ ಅಡ ಇಟ್ಟೆ, ಡೇಂಗ್ಯೂ ಬಂತು ಎಲ್ಲವನ್ನು ಎದುರಿಸಿ ಈ ಸಿನಿಮಾ ಮುಗಿಸಿರುವುದಾಗಿ ಹೇಳಿದ್ದಾರೆ. ಜೊತೆಗೆ ಈಗ ಸುರಕ್ಷಿತ ಸ್ಥಳದಲ್ಲಿ ಇರುವುದಾಗಿ ಬಹಿರಂಗ ಪಡಿಸಿದ್ದಾರೆ.   

Tunisha Sharma death; ಬಹುಪತ್ನಿತ್ವ ವಿರುದ್ಧ ಕಠಿಣ ಕಾನೂನು ತರಬೇಕು; ಮೋದಿಗೆ ನಟಿ ಕಂಗನಾ ಮನವಿ

Tap to resize

Latest Videos

'ನಾನು ನಟಿಯಾಗಿ ಎಮರ್ಜೆನ್ಸಿ ಮುಗಿಸುತ್ತಿದ್ದೇನೆ. ನನ್ನ ಜೀವನದ ಒಂದು ಅದ್ಭುತ ಹಂತ ಸಂಪೂರ್ಣವಾಗಿ ಕೊನೆಯಾಗುತ್ತಾ ಬರ್ತಿದೆ. ನನ್ನ ಎಲ್ಲಾ ಆಸ್ತಿಯನ್ನು ಅಡ ಇಡುವುದರಿಂದ ನಾನು ಡೇಂಗ್ಯೂ ರೋಗಕ್ಕೆ ಒಳಗಾಗಿದ್ದು, ಕಡಿಮೆ ರಕ್ತ ಕಣಗಳ ನಡುವೆಯೂ ಚಿತ್ರೀಕರಣ ಮಾಡಿದ್ದೇವೆ.  ನಾನು ಇಲ್ಲಿ (ಸಾಮಾಜಿಕ ಮಾಧ್ಯಮ) ನನ್ನ ಭಾವನೆಗಳ ಬಗ್ಗೆ ತುಂಬಾ ಮುಕ್ತವಾಗಿ ಹೇಳಿದ್ದೇನೆ. ನಾನು ಅಲ್ಲಿ ಎಲ್ಲವನ್ನೂ ಶೇರ್ ಮಾಡಿಲ್ಲ. ಯಾಕೆಂದರೆ ಪ್ರಾಮಾಣಿಕವಾಗಿ ಕಾಳಜಿ ವಹಿಸುವ ಜನರು ಅನಗತ್ಯವಾಗಿ ಚಿಂತುವುದನ್ನು ನಾನು ಬಯಸುವುದಿಲ್ಲ ಹಾಗೂ ನಾನು ಬೀಳುವುದನ್ನು ನೋಡಲು  ಬಯಸುವವರು, ನನ್ನನ್ನು ನೋಯಿಸಲು ಎಲ್ಲವನ್ನೂ ಮಾಡುತ್ತಿರೋರಿಗೆ ನನ್ನ ನೋವಿನ ಸಂತೋಷ ನೀಲು ಬಯಸುವುದಿಲ್ಲ' ಎಂದು ಹೇಳಿದ್ದಾರೆ. 

'ಇದು ನನಗೆ ಪುನರ್ಜನ್ಮವಾಗಿದೆ ಮತ್ತು ನಾನು ಹಿಂದೆಂದಿಗಿಂತಲೂ ಜೀವಂತವಾಗಿದ್ದೇನೆ. ನನ್ನ ಅದ್ಭುತವಾದ ಪ್ರತಿಭಾವಂತ ತಂಡಕ್ಕೆ ಧನ್ಯವಾದಗಳು. ನನ್ನ ಬಗ್ಗೆ ಕಾಳಜಿ ವಹಿಸುವ ಎಲ್ಲರಿಗೂ ನಾನು ಸುರಕ್ಷಿತ ಸ್ಥಳದಲ್ಲಿದ್ದೇನೆ ಎಂದು ಹೇಳುತ್ತೇನೆ. ಇಲ್ಲದಿದ್ದರೆ ನಾನು ಇದನ್ನೆಲ್ಲ ಹಂಚಿಕೊಳ್ಳುತ್ತಿರಲಿಲ್ಲ. ದಯವಿಟ್ಟು ಚಿಂತಿಸಬೇಡಿ, ನನಗೆ ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಮಾತ್ರ ಬೇಕು' ಎಂದು ಹೇಳಿದ್ದಾರೆ.

ಹಣಕ್ಕಾಗಿ ಮದುವೆ, ಪಾರ್ಟಿಗಳಲ್ಲಿ ಡಾನ್ಸ್ ಮಾಡಲ್ಲ; ನಟಿ ಕಂಗನಾ ರಣಾವತ್

ನಟಿ ಕಂಗನಾ 2021 ರಲ್ಲಿ ಎಮರ್ಜೆನ್ಸಿ ಸಿನಿಮಾ ಘೋಷಿಸಿದರು. ರಿತೇಶ್ ಶಾ ಬರೆದಿದ್ದಾರೆ. ಕಂಗನಾ ಕೊನೆಯ ಚಿತ್ರ ಧಾಕಡ್ ಚಿತ್ರವನ್ನು ಸಹ ಬರೆದಿದ್ದರು ಆದರೆ ಆ ಸಿನಿಮಾ ಹೀನಾಯ ಸೋಲು ಕಂಡಿತ್ತು. ಈ ಸಿನಿಮಾದಲ್ಲಿ ಅನುಪಮ್ ಖೇರ್, ಮಿಲಿಂದ್ ಸೋಮನ್, ಮಹಿಮಾ ಚೌಧರಿ, ಸತೀಶ್ ಕೌಶಿಕ್ ಮತ್ತು ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
 

click me!