ಡ್ರಗ್ಸ್ ಮಾಫಿಯಾ: ಮುಂಬೈ, ಗೋವಾದ 7 ಪ್ರದೇಶಗಳಲ್ಲಿ ಎನ್‌ಸಿಬಿ ರೈಡ್..!

By Suvarna NewsFirst Published Sep 12, 2020, 12:27 PM IST
Highlights

ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಂಬಂಧ ಡ್ರಗ್ಸ್ ವಿಚಾರವಾಗಿ ತನಿಖೆ ನಡೆಸುತ್ತಿರುವ ಎನ್‌ಸಿಬಿ ರಿಯಾಳನ್ನು ಬಂಧಿಸಿದ ಬೆನ್ನಲ್ಲೇ ಪ್ರಮುಖ ಪ್ರದೇಶಗಳಿಗೆ ರೈಡ್ ಮಾಡಿದೆ.

ಮಾದಕ ವಸ್ತು ನಿಯಂತ್ರಣ ಮಂಡಳಿ(ಎನ್‌ಸಿಬಿ) ಶನಿವಾರ (ಸೆ.12)ರಂದು ಮುಂಬೈ ಹಾಗೂ ಗೋವಾದ 7 ಪ್ರದೇಶಗಳಲ್ಲಿ ರೈಡ್ ನಡೆಸಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಂಬಂಧ ಡ್ರಗ್ಸ್ ವಿಚಾರವಾಗಿ ತನಿಖೆ ನಡೆಸುತ್ತಿರುವ ಎನ್‌ಸಿಬಿ ರಿಯಾಳನ್ನು ಬಂಧಿಸಿದ ಬೆನ್ನಲ್ಲೇ ಪ್ರಮುಖ ಪ್ರದೇಶಗಳಿಗೆ ರೈಡ್ ಮಾಡಿದೆ. ಮುಂದಿನ ನಡೆಯ ಬಗ್ಗೆ ಚರ್ಚಿಸಲು ಎನ್‌ಸಿಬಿ ಶನಿವಾರ ಸಂಜೆ ಹೈಲೆವೆಲ್ ಮೀಟಿಂಗ್ ನಡೆಸಲಿರುವುದಾಗಿ ತಿಳಿದು ಬಂದಿದೆ.

ಡ್ರಗ್ಸ್ ಆಂಗಲ್‌ನಲ್ಲಿ ತನಿಖೆ ಮಾಡುತ್ತಿರುವ ಎನ್‌ಸಿಬಿ ತನಿಖೆಯ ಸದ್ಯದ ಬೆಳವಣಿಗೆಯಲ್ಲಿ ರಿಯಾ ಚಕ್ರವರ್ತಿ ಹಲವು ಪ್ರಮುಖರ ಹೆಸರು ಬಾಯಿಬಿಟ್ಟಿದ್ದಾರೆ. ಸಾರಾ ಅಲಿ ಖಾನ್, ರಾಕುಲ್ ಪ್ರೀತ್, ಡಿಸೈನರ್ ಸೈಮನ್ ಕಂಬಟ್ಟ, ಸುಶಾಂತ್ ಮಾಜಿ ಮ್ಯಾನೇಜರ್ ರೋಹಿಣಿ ಐಯರ್, ಮಖೇಶ್ ಛಬ್ರ ಡ್ರಗ್ಸ್ ಸೇವಿಸುತ್ತಿದ್ದರು ಎಂದು ನಟಿ ರಿಯಾ ವಿಚಾರಣೆಯಲ್ಲಿ ತಿಳಿಸಿದ್ದಾರೆ.

ಡ್ರಗ್ಸ್ ಜಾಲದಲ್ಲಿ ಸಿಲುಕಿ ಅರೆಸ್ಟ್ ಆದ ಟಾಪ್ ಸೆಲೆಬ್ರಿಟಿಗಳಿವರು..!

ಬಾಲಿವುಡ್‌ನ ಶೇ 80 ಸ್ಟಾರ್‌ಗಳು ಡ್ರಗ್ಸ್ ಸೇವಿಸುತ್ತಾರೆ ಎಂದು ರಿಯಾ ಹೇಳಿದ್ದಾರೆ. ಎನ್‌ಸಿಬಿ ತನಿಖೆಯ ಭಾಗವಾಗಿ ಸುಮಾರು 25 ಬಾಲಿವುಡ್ ಸ್ಟಾರ್‌ಗಳ ವಿಚಾರಣೆ ಮಾಡಲಿರುವುದಾಗಿ ತಿಳಿದು ಬಂದಿದೆ. ವಿಚಾರಣೆಯ ವೇಳೆ ಸುಶಾಂತ್‌ಗಾಗಿ ಡ್ರಗ್ಸ್ ಒದಗಿಸಿದ್ದು ಮತ್ತು ಆತನ ಹಣಕಾಸು ವ್ಯವಹಾರ ನೋಡಿಕೊಂಡಿದ್ದನ್ನು ನಟಿ ರಿಯಾ ಒಪ್ಪಿಕೊಂಡಿದ್ದಾರೆ.

ರಿಯಾ ಬಾಲಿವುಡ್ ಡ್ರಗ್ಸ್ ಬಳಕೆ ಬಗ್ಗೆ ಬಾಯ್ಬಿಟ್ಟಿದ್ದು, ಸುಮಾರು 15 ಬಾಲಿವುಡ್ ಸೆಲೆಬ್ರಟಿಗಳ ಮೇಲೆ ಈಗ ಎನ್‌ಸಿಬಿ ನಿಗಾ ಇರಿಸಿದೆ. ಇವರೆಲ್ಲರೂ ಬಿ ಕ್ಯಾಟಗರಿ ಕಲಾವಿದರೆಂದು ತಿಳಿದುಬಂದಿದೆ.

ಡ್ರಗ್ಸ್ ಕೇಸಿಗೆ ಇ.ಡಿ. ಪ್ರವೇಶ:: ಹವಾಲಾ ಹಣದ ಮೇಲೂ ಕಣ್ಣು..!

ಕೆಲವರು ಡ್ರಗ್ಸ್ ತಯಾರಿಸುತ್ತಿದ್ದು, ಇನ್ನೂ ಕೆಲವರು ಬಳಸುವವರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಲಾಕ್‌ಡೌನ್ ಸಮಯದಲ್ಲಿ ಸುಶಾಂತ್ ಮನೆಯಿಂದ ರಿಯಾ ಮನೆಗೆ ಶೋವಿಕ್ ಹಾಗೂ ದೀಪೇಶ್ ಡ್ರಗ್ಸ್ ಡೆಲಿವರಿ ಸೇವೆ ನೀಡುತ್ತಿದ್ದರು. ಡೆಲಿವರಿ ವ್ಯಕ್ತಿ ಇದನ್ನು ಲಾಕ್‌ಡೌನ್ ಸಂದರ್ಭ ದೀಪೇಶ್‌ನಿಂದ ಶೋವಿಕ್‌ಗೆ ತಲುಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಸುಶಾಂತ್ ಮನೆಯಿಂದ ದೀಪೇಶ್‌ ಕೈಯಿಂದ ಕೊರಿಯರ್ ಪಡೆದು ರಿಯಾ ಮನೆಯಲ್ಲಿ ಶೋವಿಕ್ ಕೈಗೆ ನೀಡಿದ್ದಾಗಿ ಈತ ಒಪ್ಪಿಕೊಂಡಿದ್ದಾನೆ. ಈ ಕೊರಿಯರ್‌ನಲ್ಲಿ ಸುಮಾರು ಅರ್ಧ ಕಿಲೋ ಡ್ರಗ್ಸ್ ಇತ್ತು.

CBI, ED ರಿಯಾ ಕೇಸ್ ಬಿಟ್ಟು, ನೀರವ್ ಮೋದಿ ಕಡೆ ನೋಡಲಿ ಎಂದ ನಟಿ ಸ್ವರಾ

ದೀಪೇಶ್ ಹಾಗೂ ಶೋವಿಕ್ ಮೊಬೈಲ್ ನಂಬರ್ ಡೆಲಿವರಿ ಬಾಯ್ ಮೊಬೈಲ್‌ನಲ್ಲಿ ಸೇವ್ ಆಗಿತ್ತು. ಅವರ ನಡುವಿನ ಕಾಲ್‌ ಡೀಟೇಲ್ಸ್ ಡ್ರಗ್ಸ್ ಸಾಗಾಟವನ್ನು ಖಚಿತಪಡಿಸಿದೆ.

click me!