ಬಡ ವಿದ್ಯಾರ್ಥಿಗಳಿಗೆ ಸೋನು ಸ್ಕಾಲರ್ ಶಿಪ್..! ಯಾರು ಎಪ್ಲೈ ಮಾಡಬಹುದು..?

By Suvarna News  |  First Published Sep 12, 2020, 10:31 AM IST

ಸೋನು ಸೂದ್ ತಮ್ಮ ತಾಯಿಯ ಸ್ಮರಣಾರ್ಥ ಸ್ಕಾಲರ್‌ಶಿಪ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಮೂಲಕ ಕಲಿಕೆಯಲ್ಲಿ ಮುಂದಿರುವ ಬಡ ಮಕ್ಕಳಿಗೆ ಸೋನು ನೆರವಾಗಲಿದ್ದಾರೆ.


ಕಳೆದ ಕೆಲವು ತಿಂಗಳಲ್ಲಿ ಬಾಲಿವುಡ್ ನಟ ಸೋನು ಸೂದ್ ಬಹಳಷ್ಟು ಜನರಿಗೆ ವಿವಿಧ ರೀತಿಯಲ್ಲಿ ನೆರವಾಗಿದ್ದಾರೆ. ಶಿಕ್ಷಣ, ಸಾರಿಗೆ, ಚಿಕಿತ್ಸೆ ಹೀಗೆ ತಮ್ಮಿಂದಾಗುವಷ್ಟು ನೆರವು ನೀಡಿದ್ದಾರೆ. ಈಗ ವಿವಿಧ ಕ್ಷೇತ್ರಗಳಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿ ಸೋನು ಸ್ಕಾಲರ್ ಶಿಪ್ ನೀಡಲು ಮುಂದಾಗಿದ್ದಾರೆ.

ಹಲವಾರು ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಶಿಕ್ಷಣ ಆರಂಭಿಸಿರುವ ಹಿನ್ನೆಲೆಯಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಶುಲ್ಕ ಪಾವತಿಸಲಾಗದೆ ಸಂಕಷ್ಟದಲ್ಲಿದ್ದಾರೆ. ಇಂತಹ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್ ಎಟೆಂಡ್ ಮಾಡುವುದಕ್ಕೆ ಬೇರೆ ದಾರಿಯೂ ಇಲ್ಲ.

Tap to resize

Latest Videos

ಕಾರು ಖರೀದಿಸಿದ ಅಮಿತಾಭ್; ಸೋನು ಸೂದ್ ನೋಡಿ ಕಲೀರಿ ಎಂದ ನೆಟ್ಟಿಗರು

ಇದೀಗ ಸೋನು ಸೂದ್ ತಮ್ಮ ತಾಯಿಯ ಸ್ಮರಣಾರ್ಥ ಸ್ಕಾಲರ್‌ಶಿಪ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಮೂಲಕ ಕಲಿಕೆಯಲ್ಲಿ ಮುಂದಿರುವ ಬಡ ಮಕ್ಕಳಿಗೆ ಸೋನು ನೆರವಾಗಲಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ ಬಡ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಕಷ್ಟಪಡುವುದನ್ನು ನೋಡಿದ್ದೇನೆ.

ಹಲವಾರು ವಿದ್ಯಾರ್ಥಿಗಳಲ್ಲಿ ತರಗತಿ ಎಟೆಂಡ್ ಮಾಡಲು ಫೋನ್ ಕೂಡಾ ಇಲ್ಲ. ಇನ್ನೂ ಕೆಲವರಿಗೆ ಶುಲ್ಕ ಪಾವತಿಗೆ ಹಣವಿಲ್ಲ. ಹಾಗಾಗಿ ನಾನು ದೇಶಾದ್ಯಂತ ಇರುವ ವಿಶ್ವವಿದ್ಯಾಲಯಗಳ ಜೊತೆ ಸ್ಕಾಲರ್‌ಶಿಪ್ ಒದಗಿಸುವ ಒಪ್ಪಂದ ಮಾಡಿಕೊಂಡಿದ್ದೇನೆ.

iPhone ಕೊಡ್ಸಿ ಸರ್ ಎಂದವನಿಗೆ ನಟ ಸೋನು ಕೊಟ್ರು ಪರ್ಫೆಕ್ಟ್ ಆನ್ಸರ್..!

ನನ್ನ ತಾಯಿ ಪ್ರೊಫೆಸರ್ ಸರೋಜ್ ಸೂದ್ ಹೆಸರಲ್ಲಿ ಸ್ಕಾಲರ್‌ಶಿಪ್ ನೀಡಲಾಗುತ್ತದೆ. ಅವರು ಪಂಜಾಬ್‌ನ ಮೋಗದಲ್ಲಿ ಕಲಿಸುತ್ತಿದ್ದರು. ಅದೂ ಉಚಿತವಾಗಿ. ಆಕೆ ಆಕೆಯ ಕೆಲಸವನ್ನು ನಾನು ಮುಂದುವರಿಸುವಂತೆ ಕೇಳಿಕೊಂಡಿದ್ದರು. ಈಗ ಆ ಕೆಲಸ ಮಾಡಲು ಸೂಕ್ತ ಸಮಯ ಎಂದಿದ್ದಾರೆ.

ಒಲಿಂಪಿಕ್ಸ್‌ಗೆ ತಯಾರಾಗಲು ಆಥ್ಲೀಟ್‌ಗೆ ಶೂ ಕೊಡಿಸಿದ ಸೋನು ಸೂದ್

ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ರೊಬೋಟಿಕ್ಸ್ ಮತ್ತು ಅಟೊಮೇಷನ್, ಸೈಬರ್ ಸೆಕ್ಯುರಿಟಿ, ಡಾಟಾ ಸೈನ್ಸ್, ಫ್ಯಾಷನ್, ಪತ್ರಿಕೋದ್ಯಮ, ಬ್ಯುಸಿನೆಸ್ ಸ್ಟಡೀಸ್ ಸೇರಿ ಹಲವು ಕ್ಷೇತ್ರದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರುವವರು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು. ಅವರ ಎಲ್ಲ ಖರ್ಚುಗಳನ್ನು ನಾವು ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

Hindustaan Badhega Tabhi, Jab Padhenge Sabhi!
Launching full scholarships for students for higher education.I believe,financial challenges should not stop any one from reaching their goals.Send in ur entries at scholarships@sonusood.me (in next 10 days) & I will reach out to u🇮🇳 pic.twitter.com/JPBuUUF23s

— sonu sood (@SonuSood)

ಯುವಕರಿಗೆ ಸೋನು ಸೂದ್ ಸಹಕಾರದ‌ ಸಂದೇಶ 

"

click me!