ಸುಶಾಂತ್ ಸಿಂಗ್ ಜನ್ಮದಿನ: ಚಂದ್ರನ ಮೇಲೆ ಭೂಮಿ ಖರೀದಿಸಿದ ಮೊದಲ ನಟನ ಇಂಟರೆಸ್ಟಿಂಗ್​ ಮಾಹಿತಿ ಇಲ್ಲಿದೆ...

By Suvarna NewsFirst Published Jan 21, 2024, 1:17 PM IST
Highlights

ನಿಗೂಢವಾಗಿ ಸಾವನ್ನಪ್ಪಿದ ನಟ ಸುಶಾಂತ್ ಸಿಂಗ್ ಜನ್ಮದಿನವಿಂದು:  ಚಂದ್ರನ ಮೇಲೆ ಭೂಮಿ ಖರೀದಿಸಿದ ಮೊದಲ ನಟನ ಇಂಟರೆಸ್ಟಿಂಗ್​ ಮಾಹಿತಿ ಇಲ್ಲಿದೆ... 
 

ನಟ ಸುಶಾಂತ್ ಸಿಂಗ್ ರಜಪೂತ್ (Sushanth Singh Rajpooth) ಜಗತ್ತಿಗೆ ವಿದಾಯ ಹೇಳಿ ಮೂರೂವರೆ ವರ್ಷಗಳು ಕಳೆದಿವೆ. 2020ರ ಜೂನ್ 14 ರಂದು ಅವರ ಮೃತದೇಹ ಅವರು ವಾಸಿಸುತ್ತಿದ್ದ ಮುಂಬೈನ ಬಾಂದ್ರಾ ಅಪಾರ್ಟ್​ಮೆಂಟ್​ನಲ್ಲಿ ಸಿಕ್ಕಿತ್ತು. ಅಲ್ಲಿಂದ ಇಲ್ಲಿಯವರೆಗೂ ಇದು ಕೊಲೆಯೋ, ಆತ್ಮಹತ್ಯೆಯೋ ಎಂಬ ನಿಜ ಬಗೆಹರಿದಿಲ್ಲ. ಕೆಲವರು ಇದು ಆತ್ಮಹತ್ಯೆ ಎನ್ನುತ್ತಿದ್ದರೆ, ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯೇ ಅಲ್ಲ ಎಂದು ಇದಾಗಲೇ ಹಲವರು ನುಡಿದಿದ್ದಾರೆ. ಇವರ ಸಾವಿನ ನಂತರ ಚಿತ್ರರಂಗದಲ್ಲಿನ ಡ್ರಗ್ಸ್​ ಮಾಫಿಯಾದ (Drugs Mafia) ಬಗ್ಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿ ಹಲವಾರು ತಾರೆಗಳ ನೈಜ ಮುಖಗಳು ಬೆಳಕಿಗೆ ಬಂದರೂ, ಸುಶಾಂತ್​ ಅವರ ಸಾವಿನ ನೈಜ ಚಿತ್ರಣ ಮಾತ್ರ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಇವರದ್ದು ಆತ್ಮಹತ್ಯೆ ಎಂದು ಬಿಂಬಿತವಾಗಿದ್ದರೂ, ಇದು ಕೊಲೆ ಎಂಬ ಕುರಿತು ಸುಶಾಂತ್ ಸಿಂಗ್ ಅವರ ಮರಣೋತ್ತರ ಪರೀಕ್ಷೆ ಮಾಡಿದ್ದ ಕೂಪರ್​ ಆಸ್ಪತ್ರೆ  ಸಿಬ್ಬಂದಿ ಸ್ಫೋಟಕ ಹೇಳಿಕೆ ನೀಡಿದ್ದರು. ಸುಶಾಂತ್ ಅವರದ್ದು ಆತ್ಮಹತ್ಯೆಯಲ್ಲ, ಇದು ಕೊಲೆ ಎಂದು  ಕೂಪರ್ ಆಸ್ಪತ್ರೆಯ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ರೂಪಕುಮಾರ್ ಶಾ ಆರೋಪಿಸಿದ್ದರು. ಸುಶಾಂತ್ ಶವ ಪತ್ತೆಯಾದಾಗ ಅವರ ದೇಹದ ಮೇಲೆ ಗಾಯಗಳಿದ್ದವು ಮತ್ತು ಅವರ ದೇಹವನ್ನು ಥಳಿಸಲಾಗಿತ್ತು ಎಂದಿದ್ದ ರೂಪಕುಮಾರ್ ಶಾ, ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಪರೀಕ್ಷೆ (Post mortum) ನಡೆಯುವಾಗ ನಾನು ಅಲ್ಲಿಯೇ ಇದ್ದೆ. ಇದು ಆತ್ಮಹತ್ಯೆಯಲ್ಲ ಕೊಲೆ (murder) ಎಂದು ವೈದ್ಯರಿಗೆ ಹೇಳಿದ್ದೆ. ಆದರೆ ಯಾರೂ ನನ್ನತ್ತ ಗಮನ ಹರಿಸಲಿಲ್ಲ ಎಂಬ ಹೇಳಿಕೆ ನೀಡಿದ್ದು ಇಡೀ ಘಟನೆ ತಿರುವು ಪಡೆದುಕೊಂಡಿತ್ತು. 

ಸುಶಾಂತ್​ ಸಿಂಗ್​ ಅವರು ಬದುಕಿದ್ದರೆ, ಇಂದು ಅಂದರೆ ಜನವರಿ 21 ಅವರು 38ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಇಂದು ಅವರ ಹುಟ್ಟುಹಬ್ಬದ ನಿಮಿತ್ತ ಅವರ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಸೇರಿದಂತೆ ಕುಟುಂಬಸ್ಥರು ಭಾವುಕ ಪೋಸ್ಟ್​ ಮಾಡಿದ್ದಾರೆ. ಅಷ್ಟಕ್ಕೂ ಸುಶಾಂತ್​ ಅವರು,  ಅತಿ ಕಡಿಮೆ ಸಮಯದಲ್ಲಿ ತೆರೆಯ ಮೇಲೆ ತಮ್ಮ ನಟನಾ ಕೌಶಲವನ್ನು ಸಾಬೀತು ಪಡಿಸಿದ ನಟ. ಅವರು ತಮ್ಮ ನಟನಾ ವೃತ್ತಿಯನ್ನು ಟಿವಿ ಧಾರಾವಾಹಿಗಳೊಂದಿಗೆ ಪ್ರಾರಂಭಿಸಿದ್ದರು.  

ಕೇದಾರನಾಥ ಚಿತ್ರಕ್ಕೆ 5 ವರ್ಷ: ನೀಲಿ ಬಣ್ಣಕ್ಕೆ ತಿರುಗಿದ್ದ ಸುಶಾಂತ್​ ಸಿಂಗ್! ಶೂಟಿಂಗ್​ ತಲ್ಲಣಗಳ ವಿವರಿಸಿದ ಸಾರಾ ಅಲಿ

ಸುಶಾಂತ್​ ಅವರ ಕುರಿತು ಕೆಲವೇ ಜನರಿಗೆ ತಿಳಿದಿರುವ ಕೆಲವೊಂದು ಆಸಕ್ತ ವಿಷಯಗಳು ಇಲ್ಲಿವೆ. ಸುಶಾಂತ್​,  ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದರು. ಇದಕ್ಕಾಗಿ ಅವರು ಕೇವಲ 3 ವರ್ಷಗಳ ಕಾಲ ಅಧ್ಯಯನ ಮಾಡಿದರು. ಆದರೆ ನಟನೆಗೆ ಬರಲು ತಮ್ಮ ಅಧ್ಯಯನವನ್ನು ತೊರೆದರು. ಅಷ್ಟೇ ಅಲ್ಲ, ಇವರು ಭೌತಶಾಸ್ತ್ರದ ರಾಷ್ಟ್ರೀಯ ಒಲಿಂಪಿಯಾಡ್ ವಿಜೇತರೂ ಆಗಿದ್ದರು. ಅವರು ಸುಮಾರು 11 ಇಂಜಿನಿಯರಿಂಗ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರು. ಇವರು ಚಂದ್ರನ ಮೇಲೆ ಭೂಮಿ ಖರೀದಿಸಿದ ಮೊದಲ ನಟ ಕೂಡ ಹೌದು. ಇವರು  ಖಗೋಳಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ಅವರು ಅನೇಕ ಸುಧಾರಿತ ದೂರದರ್ಶಕಗಳನ್ನು ಹೊಂದಿದ್ದರು. ಇದೇ ಕಾರಣಕ್ಕೆ ಚಂದ್ರನ ಮೇಲೆ ನಿವೇಶನ ಖರೀದಿ ಮಾಡಿದ್ದರು. ಇವರು ಸದಾ  ಹೊಸ ವಿಷಯಗಳನ್ನು ಕಂಡುಹಿಡಿಯಲು ಇಷ್ಟಪಡುತ್ತಿದ್ದರು.  ಅವರ ಬಳಿ ಒಂದು ದಿನಚರಿ ಇತ್ತು, ಅದರಲ್ಲಿ ಅವರು ತಮ್ಮ ಕನಸುಗಳ ಬಗ್ಗೆ ಬರೆಯುತ್ತಿದ್ದರು.

 ನಟ, ಏಕ್ತಾ ಕಪೂರ್​  ಅವರ ಸೀರಿಯಲ್​  'ಪವಿತ್ರ ರಿಶ್ತಾ' ದಿಂದ ವೃತ್ತಿಜೀವನ ಪ್ರಾರಂಭವಾಯಿತು. ಆದರೆ ಅದಕ್ಕೂ ಮುನ್ನ ಅವರು  ‘ಕಿಸ್ ದೇಶ್ ಮೇ ಹೈ ಮೇರಾ ದಿಲ್’ನಲ್ಲಿ  ಚಿಕ್ಕ ಪಾತ್ರ ಮಾಡಿದ್ದರು. ಆದರೆ ಪವಿತ್ರ ರಿಶ್ತಾದಲ್ಲಿ ಅವರ ಮತ್ತು ಈಗ ಬಿಗ್​ಬಾಸ್​ನಲ್ಲಿ ಹಲ್​ಚಲ್​ ಸೃಷ್ಟಿಸುತ್ತಿರುವ ಅಂಕಿತಾ ಲೋಖಂಡೆ ಜೋಡಿ ಜನರಿಗೆ ಇಷ್ಟವಾಗಿತ್ತು. ಇದಾದ ಬಳಿಕ ಸುಶಾಂತ್​ ಅವರು ಹಿರಿ ತೆರೆಗೂ ಪದಾರ್ಪಣೆ ಮಾಡಿದರು. ಹೃತಿಕ್ ರೋಷನ್ ಮತ್ತು ಐಶ್ವರ್ಯಾ ರೈ ಅವರ ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ವೃತ್ತಿಜೀವನವನ್ನು ಚಲನಚಿತ್ರಗಳಲ್ಲಿ ಪ್ರಾರಂಭಿಸುವ ಮೊದಲು ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸ ಮಾಡಿದರು. ಅವರು ನೃತ್ಯವನ್ನು ತುಂಬಾ ಇಷ್ಟಪಡುತ್ತಿದ್ದರು. 2006 ರಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಐಶ್ವರ್ಯಾ ರೈ ಅವರ ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿ ಕಾಣಿಸಿಕೊಂಡರು. ಇಷ್ಟೇ ಅಲ್ಲ, ಅವರು 'ಧೂಮಧು 2' ಚಿತ್ರದಲ್ಲಿ ಹೃತಿಕ್ ರೋಷನ್ ಅವರೊಂದಿಗೆ ಹಿನ್ನೆಲೆ ನೃತ್ಯಗಾರರಾಗಿ ಕೆಲಸ ಮಾಡಿದ್ದಾರೆ.

ಸುಶಾತ್​ ಸಿಂಗ್​ಗೆ ಸಾವಿನ ಸುಳಿವು ಸಿಕ್ಕಿತ್ತಾ? ಸಂದರ್ಶನದಲ್ಲಿ ಅಂದು ಹೇಳಿದ್ದೇನು?

 ಅಷ್ಟಕ್ಕೂ ಸುಶಾಂತ್ ಸಿಂಗ್ ಅವರ ಕುತೂಹಲದ ವಿಷಯ ಏನೆಂದರೆ, ಇವರು ಸದಾ  ತಮ್ಮ ಮುಖವನ್ನು ಮರೆಮಾಚಿಕೊಂಡೇ ಚಿತ್ರಮಂದಿರಗಳಿಗೆ ಹೋಗುತ್ತಿದ್ದರು!  ಈ ವಿಷಯ ವಾಸ್ತವವಾಗಿ, ಅವರ ಯಾವುದೇ ಚಿತ್ರಗಳು ಬಿಡುಗಡೆಯಾದಾಗ, ಅವರು ಅದನ್ನು ವೀಕ್ಷಿಸಲು ಚಿತ್ರಮಂದಿರಕ್ಕೆ ಹೋಗುತ್ತಿದ್ದರು. ಆದರೆ ತಮ್ಮ ಮುಖವನ್ನು ಮರೆಮಾಚಿಕೊಂಡರು. ಚಿತ್ರ  ಮುಗಿದ ತಕ್ಷಣ ಅಭಿಮಾನಿಗಳ ಮುಖಾಂತರ ತಮ್ಮ ಮುಖವನ್ನು ಬಹಿರಂಗಪಡಿಸುತ್ತಿದ್ದರು. ಇದು ಅವರ ವಿಶೇಷತೆ ಆಗಿತ್ತು.  ರಾಷ್ಟ್ರೀಯ ಒಲಿಂಪಿಯಾಡ್‌ನ ವಿಜೇತರಾಗಿರುವ ಸುಶಾಂತ್​ ಅವರು,  ಅವರು ನಟನೆಯ ಜೊತೆಗೆ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು ಎಂಬುದು ಗಮನಾರ್ಹ.
 

click me!