ಯಾರ ಕೈವಾಡಕ್ಕೆ ಸಿಲುಕಿದ್ರು ಪರಮ ಸುಂದರಿ; ಸ್ಟಾರ್ ನಟಿಗೆ ಬೇಕಿತ್ತಾ ಅಂಥ ಚಟ!?

Published : Jan 21, 2024, 01:08 PM ISTUpdated : Jan 21, 2024, 01:20 PM IST
ಯಾರ ಕೈವಾಡಕ್ಕೆ ಸಿಲುಕಿದ್ರು ಪರಮ ಸುಂದರಿ; ಸ್ಟಾರ್ ನಟಿಗೆ ಬೇಕಿತ್ತಾ ಅಂಥ ಚಟ!?

ಸಾರಾಂಶ

ಬರೋಬ್ಬರಿ 23 ವರ್ಷಗಳ ಹಿಂದೆ, 2000 ಇಸವಿಯಲ್ಲಿ ಅಂದಿನ ಖ್ಯಾತ ನಟಿಯೊಬ್ಬರು ಹೀಗೆ ನೀಡಿದ್ದ ಹೇಳಿಕೆ ನಿಜವಾಗಿಯೂ ಅಂದು ಭಾರೀ ಸಂಚಲನ ಸೃಷ್ಟಿಸಿತ್ತು. ಕಾರಣ, ಅಂದು ಹೀರೋಗಳು ಮಾತ್ರ ಕುಡಿತದ ಚಟಕ್ಕೆ ಬೀಳುವುದು ಸಾಮಾನ್ಯ ಎಂಬ ವಾತಾವರಣವಿತ್ತು. 

'ನಾನು ಕುಡಿತದ ಚಟಕ್ಕೆ ಬಿದ್ದು ನಾನು ನನ್ನ ಜೀವನವನ್ನೇ ಹಾಳು ಮಾಡಿಕೊಂಡೆ' ಹೀಗೆಂದು ಸ್ಟಾರ್ ನಟಿಯೊಬ್ಬರು ಹೇಳಿಕೊಂಡಿದ್ದರು. ಬರೋಬ್ಬರಿ 23 ವರ್ಷಗಳ ಹಿಂದೆ, 2000 ಇಸವಿಯಲ್ಲಿ ಅಂದಿನ ಖ್ಯಾತ ನಟಿಯೊಬ್ಬರು ಹೀಗೆ ನೀಡಿದ್ದ ಹೇಳಿಕೆ ನಿಜವಾಗಿಯೂ ಅಂದು ಭಾರೀ ಸಂಚಲನ ಸೃಷ್ಟಿಸಿತ್ತು. ಕಾರಣ, ಅಂದು ಹೀರೋಗಳು ಮಾತ್ರ ಕುಡಿತದ ಚಟಕ್ಕೆ ಬೀಳುವುದು ಸಾಮಾನ್ಯ ಎಂಬ ವಾತಾವರಣವಿತ್ತು. ಆದರೆ, ನಟಿಯೊಬ್ಬರು, ಅದರಲ್ಲೂ ಪರಮಸುಂದರಿ, ಖ್ಯಾತ ನಟಿಯೊಬ್ಬರ ಈ ಹೇಳಿಕೆ ಸಿನಿಮಾರಂಗದವರು ಸೇರದಂತೆ ಎಲ್ಲರನ್ನೂ ದಂಗು ಬಡಿಸಿತ್ತು. 

ಹೌದು, 70-80ರ ದಶಕದ ನಾಯಕಿ ನಟಿ, 90ರ ದಶಕದ ಖ್ಯಾತ ಪೋಷಕಟ ನಟಿಯೊಬ್ಬರು ಹೀಗೆ ಹೇಳಿದ್ದರು. ಅದಕ್ಕೆ ಕಾರಣ ಅವರ ಗಂಡ ಎನ್ನುವುದು ಇನ್ನೂ ವಿಶೇಷ ಸಂಗತಿ. ಮಲಯಾಳಂ ನಟ ಮನೋಜ್ ಕೆ ಜಯನ್ ಅವರನ್ನು ಮದುವೆಯಾಗಿದ್ದ ಈ ಖ್ಯಾತ ನಟಿಗೆ ಅದೇ ಮುಳುವಾಗಿ ಬಿಟ್ಟಿತ್ತು. ಕಾರಣ, ಮನೋಜ್ ಫ್ಯಾಮಿಲಿಯಲ್ಲಿ ಎಲ್ಲರೂ ಕುಡಿತದ ಚಟಕ್ಕೆ ಬಿದ್ದಿದ್ದರು. ಗಂಡನ ಒತ್ತಾಯಕ್ಕೆ ಮಣಿದು ಈ ನಟಿ ಕೂಡ ಡ್ರಿಂಕ್ಸ್ ಶುರು ಮಾಡಿದರಂತೆ. ಆಮೇಲೆ ಅವರೆಲ್ಲರಂತೆ ಈಕೆ ಕೂಡ ಕುಡಿತದ ದಾಸಳಾಗಿ ಜೀವನವನ್ನೇ ನರಕ ಮಾಡಿಕೊಂಡರಂತೆ. 

ಈ ಖ್ಯಾತ ನಟಿ ಬೇರೆ ಯಾರೋ ಅಲ್ಲ, ಫೇಮಸ್ ನಟಿ ಊರ್ವಶಿ. ಸೌಂದರ್ಯಕ್ಕೆ ಇನ್ನೊಂದು ಹೆಸರು ಎಂಬಂತಿದ್ದ ಊರ್ವಶಿಗೆ ಗಂಡನ ಒತ್ತಾಯಕ್ಕೆ ಕಟ್ಟುಬಿದ್ದು ಮಾಡಿದ ಕುಡಿತವೇ ವೃತ್ತಿ ಜೀವನಕ್ಕೆ ಮುಳುವಾಯಿತಂತೆ. ಕುಡುಕಳಾದ ಬಳಿಕ ಆಕೆಗೆ ಬರುತ್ತಿದ್ದ ಅವಕಾಶಗಳು ಕಮ್ಮಿ ಆಗಿಬಿಟ್ಟವು. ಅವರು ಆ ಮೊದಲು ಅಭಿನಯಕ್ಕೆ, ಬಣ್ಣದ ಬದುಕಿನ ವೃತ್ತಿಜೀವನಕ್ಕೆ ಕೊಡುತ್ತಿದ್ದ ಮಹತ್ವವನ್ನು ಕೊಡಲು ಕುಡಿತದ ಕಾರಣಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ವೃತ್ತಿಜೀವನಕ್ಕೆ ಕಲ್ಲೇಟು ಬಿತ್ತು. ಅದು ಅವರಿಗೆ ಅರ್ಥವಾಗುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. 

ದಿನನಿತ್ಯ ಜಗಳ, ಮನಸ್ತಾಪಗಳಿಂದ ರೋಸಿ ಹೋದ ನಟಿ ಊರ್ವಶಿ 8 ವರ್ಷಗಳ ದಾಂಪತ್ಯ ಜೀವನದ ಬಳಿಕ 2008ರಲ್ಲಿ ಮನೋಜ್ ಕೆ ಜಯನ್ ಅವರಿಂದ ವಿಚ್ಛೇದನ ಪಡೆದುಕೊಂಡರು. ಬಳಿಕ ಮನೋಜ್ ಬೇರೆ ಮದುವೆಯಾದರು. ಆದರೆ, ನಟಿ ಊರ್ವಶಿ ಖಿನ್ನತೆಗೆ ಜಾರಿದರು. ನಟನೆಯಿಂದ ಗಳಿಸಿದ್ದ ಸರ್ವಸ್ವವನ್ನೂ ಕಳೆದುಕೊಂಡು ಒಬ್ಬಂಟಿಯಾಗಿ ಜೀವನ ಸಾಗಿಸುವಂತಾಯ್ತು!

ಅಹಂಕಾರಕ್ಕೆ ಉದಾಸೀನವೇ ಮದ್ದು; ಫೇಮಸ್ ಬಾಲನಟಿ, ಹರೆಯದಲ್ಲಿ ನಟನೆಯಿಂದಲೇ ಟಾಟಾ ಬೈಬೈ!

ಬಳಿಕ, 40ನೇ ವಯಸ್ಸಿನಲ್ಲಿ ಊರ್ವಶಿ ಶಿವಪ್ರಸಾದ್ ಎಂಬವರ ಜತೆ ಮದುವೆಯಾಗಿ ಮತ್ತೆ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ. ಅಂದಹಾಗೆ, ನಟಿ ಊರ್ವಶಿ ಅವರು ಕನ್ನಡದಲ್ಲಿ ಡಾ ರಾಜ್‌ಕುಮಾರ್, ವಿಷ್ಣುವರ್ಧನ್ ಹಾಗು ಅನಂತ್‌ನಾಗ್, ರಮೇಶ್ ಅರವಿಂದ್ ಮೊದಲಾದವರ ಜತೆ ಕೂಡ ನಟಿಸಿದ್ದಾರೆ. ಕಮಲ್ ಹಾಸನ್‌, ರಜನಿಕಾಂತ್ ಮೊದಲಾದ ದಿಗ್ಗಜರ ಜತೆ ಕೂಡ ನಟಿಸಿರುವ ನಟಿ ಊರ್ವಶಿ ಇದೀಗ ನಟನೆಯಿಂದ ಸ್ವಲ್ಪ ದೂರವೇ ಉಳಿದಿದ್ದಾರೆ. ಒಟ್ಟಿನಲ್ಲಿ ಕುಡಿತದ ಚಟಕ್ಕೆ ಬಿದ್ದು ಜೀವನ ಹಾಳು ಮಾಡಿಕೊಂಡವರ ಲಿಸ್ಟ್‌ಗೆ ಊರ್ವಶಿ ಸೇರಿಕೊಂಡಿದ್ದು ದುರಂತವೇ ಸರಿ ಎನ್ನಬಹುದು.

ಕಿಂಗ್ ಖಾನ್‌ರನ್ನು ಇತಿಹಾಸ ಪುಟ ಸೇರಿಸಿದ ಡಂಕಿ; ಶಾರುಖ್ ಫ್ಯಾನ್ಸ್‌ಗೆ ಆಯ್ತು ಅನಿರೀಕ್ಷಿತ ಶಾಕ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ಅರ್ಧ ವಯಸ್ಸಿನ ಹುಡುಗರು ಡೇಟಿಂಗ್‌ಗೆ ಕರೀತಿದ್ದಾರೆ.. 50 ಆದ್ರೂ ಮದುವೆಗೆ ರೆಡಿ: ನಟಿ ಅಮೀಶಾ ಪಟೇಲ್
ಬಾಲಯ್ಯರಿಂದ ಅನಿರೀಕ್ಷಿತ ಸರ್ಪ್ರೈಸ್.. ಅಖಂಡ 2 ಹೊಸ ರಿಲೀಸ್ ಡೇಟ್ ಫಿಕ್ಸ್: ಈ ಚಿತ್ರಗಳಿಗೆ ದೊಡ್ಡ ಹೊಡೆತ