ಕ್ಯಾಮೆರಾಕ್ಕೆ ಬೆನ್ನು ಮಾಡಿ ಡ್ರೆಸ್ ಸರಿ ಮಾಡಿಕೊಂಡ ಅನನ್ಯಾ ಪಾಂಡೆ ವಿಡಿಯೋ ವೈರಲ್ ಆಗಿದ್ದು, ಸಕತ್ ಟ್ರೋಲ್ಗೆ ಒಳಗಾಗುತ್ತಿದ್ದಾರೆ ನಟಿ.
ಚಿತ್ರ ನಟಿಯರು ಎಂದರೆ ಹಾಗೆ ಅಲ್ವೆ? ಫಂಕ್ಷನ್ಗಳಿಗೆ ಹೋಗುವಾಗ ರೆಡ್ ಕಾರ್ಪೆಟ್ ಮೇಲೆ ನಡೆಯುವಾಗ ಅವರ ಭಾರಿ ಡ್ರೆಸ್ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರುತ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು. ಇಲ್ಲವೇ ಭಾರಿ ಡ್ರೆಸ್ ಧರಿಸಿ ಹಲವು ಸಲ ನಟಿಯರು ಪೇಚಿಗೆ ಸಿಲುಕುವುದು, ಎಡವಿ ಬೀಳುವುದು ಇಲ್ಲವೇ ಅವರ ಡ್ರೆಸ್ ಹಾರಿ ಹೋಗಿ ಅಂಗಾಂಗಗಳ ಪ್ರದರ್ಶನವಾಗುವುದು ಎಲ್ಲವೂ ಮಾಮೂಲಿ ಆಗಿದೆ. ಕೆಲವೊಮ್ಮೆ ಹೀಗೆ ಆದರೆ ಟ್ರೋಲ್ ಆಗಿ ಸಕತ್ ಸುದ್ದಿಯಾಗುತ್ತದೆ ಎನ್ನುವ ಕಾರಣಕ್ಕೆ ಇಂಥ ಡ್ರೆಸ್ಗಳನ್ನು ನಟಿಯರು ಧರಿಸಿ ಬರುತ್ತಾರೆ ಎನ್ನುವ ಆರೋಪಗಳೂ ಇವೆ. ಡ್ರೆಸ್ ಜಾರಿ ಹೋಗುತ್ತಿದ್ದರೂ ದೇಹದ ಮೇಲೆ ಅರಿವೇ ಇಲ್ಲದಂತೆ ನಟಿಯರು ನಡೆಯುವಾಗ ಇದು ಹೌದೇನೋ ಅನ್ನಿಸುವುದು ಉಂಟು.
ಈಗ ನಟಿ ಅನನ್ಯಾ ಪಾಂಡೆಗೂ ಹಾಗೆಯೇ ಆಗಿದೆ. ಸದಾ ಹಾಟ್, ಬೋಲ್ಡ್ ಲುಕ್ನಿಂದಲೇ ಫೇಮಸ್ ಆಗಿರೋ ನಟಿ ಅನನ್ಯಾ ಪಾಂಡೆ, ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ್ಗೆ ತಮ್ಮ ಬೋಲ್ಡ್ ಫೋಟೋಶೂಟ್ಗಳನ್ನು ಶೇರ್ ಮಾಡಿ ಹಲವು ಬಾರಿ ಟ್ರೋಲ್ಗೆ ಒಳಗಾಗುವುದೂ ಇದೆ. ಅನನ್ಯಾ ಪಾಂಡೆ ಬಾಲಿವುಡ್ ಹಿರಿಯ ನಟ ಚಂಕಿ ಪಾಂಡೆ ಮಗಳಾಗಿದ್ದು, ಸ್ಟಾರ್ ಕಿಡ್ ಆಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟವರು. ಕಡಿಮೆ ಸಮಯದಲ್ಲಿಯೇ ನಟಿ ಫೇಮಸ್ ಆದವರು. ನೆಪೊಟಿಸಂ ಪ್ರಾಡಕ್ಟ್ ಆಗಿರುವ ಕಾರಣಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದ್ದರೂ ಸಹ ಬಾಲಿವುಡ್ನಲ್ಲಿ ಅನನ್ಯಾಗೆ ಅವಕಾಶಗಳಿಗೇನೂ ಕೊರತೆ ಇಲ್ಲ. ಕರಣ್ ಜೋಹರ್ ಸೇರಿದಂತೆ ಹಲವು ಗಾಡ್ಫಾದರ್ಗಳು ಅನನ್ಯಾಗೆ ಇರುವುದೇ ಇದಕ್ಕೆ ಕಾರಣ ಎನ್ನುವ ಮಾತುಗಳೂ ಇವೆ.
ರಣಬೀರ್ ಇನ್ನೊಬ್ಬಳ ಜೊತೆ ಮಲಗಿರೋ ಸುದ್ದಿ ಕೇಳಿ ಹೊಡೆದು ತಪ್ಪು ಮಾಡಿದೆ: ಬಿಕ್ಕಿ ಬಿಕ್ಕಿ ಅತ್ತ ರಶ್ಮಿಕಾ ಮಂದಣ್ಣ
ಇವುಗಳ ನಡುವೆಯೇ ನಟಿ ಮಿನಿ ಡ್ರೆಸ್ ಹಾಕಿಕೊಂಡು ಕಾರಿನಿಂದ ಇಳಿದಿದ್ದಾರೆ. ಇನ್ನು ಪಾಪರಾಜಿಗಳು ಕೇಳಬೇಕೆ? ನಟಿಯರು ಬರುತ್ತಿದ್ದಂತೆಯೇ ಓಡಿ ಹೋಗಿ ವಿಡಿಯೋ ಮಾಡುತ್ತಾರೆ. ಆದರೆ ಅನನ್ಯಾಗೆ ತನ್ನ ಡ್ರೆಸ್ ಯಾಕೋ ಕನ್ಫರ್ಟ್ ಎನಿಸಲಿಲ್ಲ. ಇದೇ ಕಾರಣಕ್ಕೆ ಸರಿ ಮಾಡಿಕೊಳ್ಳಲು ಶುರು ಮಾಡಿದರು. ನಂತರ ಕ್ಯಾಮೆರಾ ಇರುವುದು ಅರಿತು ಎಡವಟ್ಟು ಆಗಬಾರದು ಎಂದು ಹಿಂದೆ ಮುಖ ಮಾಡಿ ಮೇಲೆ ಎಳೆದುಕೊಳ್ಳಲು ಶುರು ಮಾಡಿದ್ರು. ಇತ್ತ ಕ್ಯಾಮೆರಾ ಕಣ್ಣಿಗೇನೋ ಅದು ಕಾಣಿಸಲಿಲ್ಲ. ಆದರೆ ಹೇಳಿ ಕೇಳಿ ಅದು ರಸ್ತೆ. ಅತ್ತ ಕಡೆಯಿಂದ ಬರುತ್ತಿರುವವರು ಅನನ್ಯಾಳನ್ನೇ ದಿಟ್ಟಿಸಿ ನೋಡುತ್ತಿದ್ದು ಇದರ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋಗೆ ಸಕತ್ ಕಮೆಂಟ್ಸ್ ಬಂದಿವೆ. ನಟಿಯನ್ನು ಟ್ರೋಲ್ ಮಾಡಲಾಗುತ್ತಿದೆ. ಇಂಥ ಡ್ರೆಸ್ ಹಾಕಿಕೊಂಡು ಬರಬೇಕು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಇದೆಲ್ಲಾ ಪಬ್ಲಿಸಿಟಿ ಸ್ಟಂಟ್ ಎನ್ನುತ್ತಿದ್ದಾರೆ. ಕೆಲ ದಿನಗಳ ಹಿಂದೆ ಹೆಬ್ಬಾವಿನ ಜೊತೆ ಫೋಟೋಗೆ ನಗು ನಗುತ್ತಾ ಪೋಸ್ ಕೊಟ್ಟು ಪೇಚಿಗೆ ಸಿಲುಕಿದ್ದರು ನಟಿ. ಮುಖೇಶ್ ಅಂಬಾನಿಯವರ ಮೊಮ್ಮಕ್ಕಳಾದ ಆದಿಯಾ ಮತ್ತು ಕೃಷ್ಣ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಇಶಾ ಹಾವಿನ ಜೊತೆ ಪೋಸ್ ಕೊಟ್ಟಿದ್ದರು. ಇದರಿಂದ ಅವರ ಮೇಲೆ ಕೇಸ್ ಕೂಡ ದಾಖಲಾಗಿತ್ತು. ನಂತರ ಫೋಟೋ ಡಿಲೀಟ್ ಮಾಡಿದ್ದರು.
ಮುಂದಿನ ತಿಂಗಳು ರಶ್ಮಿಕಾ ಜತೆ ನಿಶ್ಚಿತಾರ್ಥ ನಿಜನಾ? ಕೊನೆಗೂ ಮೌನ ಮುರಿದ ವಿಜಯ್ ದೇವರಕೊಂಡ!
ಕೆಲ ವರ್ಷಗಳಿಂದ ನಟ ಆದಿತ್ಯ ರಾಯ್ ಕಪೂರ್ (Aditya Roy Kapur) ಸಂಬಂಧದಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇಬ್ಬರೂ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಸಂಬಂಧದಲ್ಲಿದ್ದಾರೆ ಎನ್ನುವುದು ಈಗ ಹಳೆಯ ಸುದ್ದಿಯಾಗಿದೆ. ಕಳೆದ ವರ್ಷ ಇವರು ವಿಜಯ್ ದೇವರಕೊಂಡ ಜೊತೆ ಲೈಗರ್ ಸಿನಿಮಾದಲ್ಲಿ ನಟಿಸಿದ್ದರು. ಸೌತ್ ಸಿನಿಮಾ ಇಂಡಸ್ಟ್ರಿಯ ಅದೃಷ್ಟ ಪರೀಕ್ಷೆಯಲ್ಲೂ ಅನನ್ಯಾ ಪಾಂಡೆ ಫೇಲ್ ಆಗಿದ್ದು, ಬೋಲ್ಡ್ ಫೋಟೋಶೂಟ್ ಮಾಡಿಸುತ್ತಾ, ಫೇಮಸ್ ಆಗುತ್ತಿದ್ದಾರೆ.