ಫ್ಲಾಪ್ ನಟನಾದ ಸೂಪರ್‌ಸ್ಟಾರ್ ಮಗ, 12ನೇ ವಯಸ್ಸಿನಲ್ಲಿಯೇ ಡ್ರಗ್ಸ್ ದಾಸ, ಈಗ ಕನ್ನಡದ ನಟಿ ಜೊತೆ ಸ್ಕ್ರೀನ್ ಶೇರ್

By Mahmad Rafik  |  First Published Dec 4, 2024, 6:44 PM IST

ಒಬ್ಬ ಸೂಪರ್‌ಸ್ಟಾರ್‌ನ ಮಗ, 12ನೇ ವಯಸ್ಸಿನಲ್ಲಿ ಮಾದಕ ವ್ಯಸನಿಯಾಗಿದ್ದ, ಈಗ ಕನ್ನಡ ನಟಿಯೊಂದಿಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಾಯಿಯನ್ನು ಕಳೆದುಕೊಂಡ ನಂತರ ಮಾದಕ ವ್ಯಸನಿಯಾದ ಈ ನಟ, ಪುನರ್ವಸತಿ ಕೇಂದ್ರಕ್ಕೂ ಹೋಗಿದ್ದರು.


ಮುಂಬೈ: ಬಣ್ಣದ ಲೋಕದಲ್ಲಿ ಸ್ಟಾರ್ ಮಕ್ಕಳಿಗೆ ಒಂದು ಹಂತದವರೆಗೆ ಸಿನಿಮಾ ಅವಕಾಶಗಳು ಸಿಗುತ್ತವೆ. ನಂತರ ತಮ್ಮ ಪ್ರತಿಭೆ ಮೂಲಕವೇ ಬೆಳೆಯಬೇಕು. ಆ ರೀತಿ ಬೆಳೆದ ಕಲಾವಿದರು ನಮ್ಮ ಮುಂದಿದ್ದಾರೆ. ಇಂದು ನಾವು ನಿಮಗೆ ಸೂಪರ್‌ಸ್ಟಾರ್ ಮಗ ಫ್ಲಾಪ್ ನಟನಾಗಿದ್ದು, ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು 12ನೇ ವಯಸ್ಸಿನಲ್ಲಿಯೇ ಮಾದಕ ವ್ಯಸನಿಯಾಗಿದ್ದನು. 12ನೇ ವಯಸ್ಸಿನಲ್ಲಿಯೇ ಡ್ರಗ್ಸ್ ದಾಸನಾಗಿದ್ದರಿಂದ ಎರಡು ಬಾರಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ತಂದೆ ಮೇಲೆ ಮುನಿಸಿಕೊಂಡಿದ್ದರಿಂದ ಹೆಸರಿನ ಪಕ್ಕದಲ್ಲಿದ್ದ ಅಪ್ಪನ ಹೆಸರು ಸಹ ತೆಗೆದು ಹಾಕಿರೋ ನಟ, ಇದೀಗ ಕನ್ನಡದ ನಟಿ ನಟಿಸುತ್ತಿರುವ ಬಹು ನಿರೀಕ್ಷೆಯ ಸಿನಿಮಾದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಇದರ ಜೊತೆ ಓಟಿಟಿ ವೆಬ್ ಸಿರೀಸ್‌ಗಳಲ್ಲಿಯೂ ಈ ನಟ ನಟಿಸುತ್ತಿದ್ದಾರೆ. 

ದಮ್ ಮಾರೋ ದಮ್, ಧೋಬಿ ಘಾಟ್, ಆರಕ್ಷಣ್, ಬಾಘಿ 2, ಚಿಚೋರೆ, ದಿ ಪವರ್, ದರ್ಬಾರ್ ಸಿನಿಮಾಗಳಲ್ಲಿ ನಟಿಸಿರುವ ನಟ ಪ್ರತೀಕ್ ಓರ್ವ ಸೂಪರ್ ಸ್ಟಾರ್ ಮಗ.  ಪ್ರತೀಕ್ ತಂದೆಯ ಹೆಸರನ್ನು ಎಲ್ಲಿಯೂ ಬಳಸಿಕೊಂಡಿಲ್ಲ. ಬಾಲಿವುಡ್ ಸೂಪರ್ ಸ್ಟಾರ್ ರಾಜ್ ಬಬ್ಬರ್ ಅವರ ಮೊದಲ  ಪತ್ನಿಯ ಮಗನೇ ಪ್ರತೀಕ್ ಬಬ್ಬರ್.  ಪ್ರತೀಕ್ ತಾಯಿ ಸ್ಮಿತಾ ಬಬ್ಬರ್ ತಮ್ಮ 31ನೇ ವಯಸ್ಸಿನಲ್ಲಿಯೇ ನಿಧನರಾಗುತ್ತಾರೆ. 12ನೇ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಪ್ರತೀಕ್ ಒಂಟಿಯಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ. ಒಂಟಿಯಾದ ಪ್ರತೀಕ್ ಮದ್ಯ, ಡ್ರಗ್ಸ್‌ ದಾಸರಾಗಿದ್ದರಿಂದ ಚಿಕಿತ್ಸೆಗಾಗಿ  ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. 

Tap to resize

Latest Videos

 ಅಜ್ಜಿ ಆಶ್ರಯದಲ್ಲಿ ಬೆಳೆದ ಪ್ರತೀಕ್ ಕೌಟುಂಬಿಕ ಕಲಹಗಳಿಂದಾಗಿ ತಂದೆಯನ್ನು ದ್ವೇಷಿಸಲು ಆರಂಭಿಸಿದರು. ಈ ದ್ವೇಷದ ಪ್ರಭಾವವು ಪ್ರತೀಕ್ ತಮ್ಮ ಹೆಸರಿನಿಂದ ತಂದೆಯ ಉಪನಾಮವನ್ನು ಸಹ ತೆಗೆದಿದ್ದಾರೆ.  38 ವರ್ಷದ ಪ್ರತೀಕ್ ಬಬ್ಬರ್ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದರೂ ದೊಡ್ಡ ಮಟ್ಟದ ಸಕ್ಸಸ್ ಇನ್ನೂ ಸಿಕ್ಕಿಲ್ಲ. 

ಇದನ್ನೂ ಓದಿ:  4 ಗಂಟೆ 15 ನಿಮಿಷದ ಸಿನಿಮಾ: 14 ಹೀರೋ, 10 ಹೀರೋಯಿನ್, ಆದರೂ ಫ್ಲಾಪ್?

'ಜಾನೆ ತೂ ಯಾ ಜಾನೇ ನಾ' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಬಂದ ಪ್ರತೀಕ್ ಒಂದು ದೊಡ್ಡ ಸಕ್ಸಸ್‌ಗಾಗಿ ಕಾಯುತ್ತಿದ್ದಾರೆ. ಸಿನಿಮಾ ಮಾತ್ರವಲ್ಲದೇ  ವೆಬ್ ಸರಣಿ ಅವಕಾಶಗಳನ್ನು ಬಳಸಿಕೊಂಡು ತಮ್ಮ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ. ಇದೀಗ ಕನ್ನಡತಿ ರಶ್ಮಿಕಾ ಮಂದಣ್ಣ-ಸಲ್ಮಾನ್ ಖಾನ್ ನಟಿಸುತ್ತಿರೋ 'ಸಿಕಂದರ್' ಸಿನಿಮಾದಲ್ಲಿ ಖಳನಟನಾಗಿ ಪ್ರತೀಕ್ ಬಬ್ಬರ್ ನಟಿಸುತ್ತಿದ್ದಾರೆ. ನಿರ್ದೇಶಕ ಮಧುರ್ ಭಂಡಾರ್ಕರ್ ಅವರ 'ಲಾಕ್‌ಡೌನ್ ಇಂಡಿಯಾ',  ಅರ್ಷದ್ ಸೈಯದ್ ನಿರ್ದೇಶನದ 'ವೋ ಲಡ್ಕಿ ಹೈ ಕಹಾನ್' ಚಿತ್ರಗಳು ಪ್ರತೀಕ್ ಕೈಯಲ್ಲಿವೆ. 

ಇದನ್ನೂ ಓದಿ: ಇದು 2024ರ ಅತಿದೊಡ್ಡ ಕ್ರೈಮ್ ಥ್ರಿಲ್ಲರ್ ಸಿನಿಮಾ; ವಿದೇಶಗಳಲ್ಲಿಯೂ ಮೊದಲ ದಿನವೇ ಬ್ಲಾಕ್‌ಬಸ್ಟರ್ ಓಪನಿಂಗ್

click me!