ಈ ಸೂಪರ್‌ಸ್ಟಾರ್ ನಟ. ಬಾಕ್ಸಾಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಗಿರೋ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಈ ನಟ ಹೆಸರಾಂತ ಪ್ರಶಸ್ತಿ ಪಡೆದುಕೊಳ್ಳಲು ಹಣ ನೀಡಲು ಮುಂದಾಗಿದ್ದರಂತೆ. ಈ ಬಗ್ಗೆ ಸ್ವತಃ ಆ ಖ್ಯಾತ ನಟನೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಯಾರು ಆ ನಟ?
ಬಾಲಿವುಡ್‌ನಲ್ಲಿ ಹಲವಾರು ಸೂಪರ್‌ಸ್ಟಾರ್ ನಟ-ನಟಿಯರಿದ್ದಾರೆ. ತಮ್ಮ ಅದ್ಭುತ ಅಭಿನಯದಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಆದರೆ ಸಿನಿರಂಗವೇ ಅಂಥದ್ದು ಇಲ್ಲಿ ಉತ್ತಮ ಆಕ್ಟಿಂಗ್ ಮಾಡೋ ಎಲ್ಲರಿಗೂ ಮನ್ನಣೆ ಸಿಗೋದಿಲ್ಲ. ಸ್ಟಾರ್ ಕಿಡ್, ಗ್ಲಾಮರ್, ಬ್ಯಾಕ್‌ಗ್ರೌಂಡ್ ಹೀಗೆ ಎಲ್ಲಾ ವಿಚಾರಗಳು ಸಹ ಮುಖ್ಯವಾಗುತ್ತವೆ. ಅವಾರ್ಡ್‌ಗಳು ಸಹ ಅಷ್ಟೆ. ಅವುಗಳ ಮಾನದಂಡ ಹಲವು ಬಾರಿ ಅರ್ಥವಾಗುವುದಿಲ್ಲ. ಅತ್ಯುತ್ತಮ ಅಭಿನಯ ನೀಡಿದವರು ಗುರುತಿಸಲ್ಪಡದೆ ತೆರೆಮರೆಗೆ ಸರಿಯೋದು ಸಾಮಾನ್ಯ.
ನಟನೆಯೇ ತಿಳಿದಿಲ್ಲದವರು ಸುಲಭವಾಗಿ ಪ್ರಶಸ್ತಿಯನ್ನು ಬಾಚಿಕೊಳ್ಳುತ್ತಾರೆ. ಹೀಗಾಗಿಯೇ ಕೆಲವೊಬ್ಬ ನಟ-ನಟಿಯರು ಪ್ರಶಸ್ತಿ ಗಿಟ್ಟಿಸಲು ಹಣ ಪಾವತಿಸುವುದೂ ಇದೆ. ಹಾಗೆಯೇ ಬಾಲಿವುಡ್‌ನ ಈ ಸೂಪರ್‌ಸ್ಟಾರ್ ನಟ ಪ್ರಶಸ್ತಿ ಪಡೆದುಕೊಳ್ಳಲು ಹಣ ನೀಡಲು ಮುಂದಾಗಿದ್ದರಂತೆ. ಈ ಬಗ್ಗೆ ಸ್ವತಃ ಆ ಖ್ಯಾತ ನಟನೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಯಾರು ಆ ನಟ?
ಮದ್ವೆ ಅಂದ್ರೆ ಸುಮ್ನೆನಾ: 32 ವರ್ಷಗಳ ನಂತರವೂ ಪತ್ನಿ ರೂಲ್ಸ್‌ನ ಚಾಚುತಪ್ಪದೇ ಪಾಲಿಸ್ತಾರೆ ನಟ ಶಾರುಖ್ ಖಾನ್
ಅತ್ಯುತ್ತಮ ನಟ ಪ್ರಶಸ್ತಿಗೆ ಹಣ ನೀಡಲು ಸಿದ್ಧವಾಗಿದ್ದ ನಟ
ಪ್ರಶಸ್ತಿ ಎಂದರೆ ಕಲಾವಿದನಿಗೆ ಸಿಗುವ ಮನ್ನಣೆ. ಚಲನಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರೂ ತಮ್ಮ ಕೆಲಸ ಗುರುತಿಸಲ್ಪಟ್ಟಾಗ ಖುಷಿ ಪಡುತ್ತಾರೆ. .ಆದರೆ ಅವಾರ್ಡ್ ವಿಷಯದಲ್ಲಿ ಹಲವು ಬಾರಿ ತಾರತಮ್ಯ ಆಗಿದ್ದಿದೆ. ಇಂಥಾ ಪ್ರಶಸ್ತಿ ಸಮಾರಂಭಗಳ ಬಗ್ಗೆ ನಟರು ಹಲವಾರು ಬಾರಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಒಬ್ಬ ನಟ ತನಗಾಗಿ ಪ್ರಶಸ್ತಿಗಳನ್ನು ಖರೀದಿಸಿದ ಆರೋಪಕ್ಕೆ ಗುರಿಯಾದ ಉದಾಹರಣೆಗಳಿವೆ. ನಾನು ಸಹ ಹೀಗೆ ಪ್ರಶಸ್ತಿಯನ್ನು ಪಡೆಯಲು ಹಣವನ್ನು ನೀಡಲು ಮುಂದಾಗಿದ್ದೆ ಎಂದು ಬಾಲಿವುಡ್‌ನ ಬಾದ್‌ಷಾ ಶಾರೂಕ್ ಖಾನ್ ಈ ಹಿಂದೆ ಹೇಳಿದ್ದರು.
ಹೌದು, 2023ರಲ್ಲಿ ಮೂರು ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ ಭಾರತೀಯ ಚಿತ್ರರಂಗದ ದೊಡ್ಡ ಸೂಪರ್‌ಸ್ಟಾರ್, ಒಮ್ಮೆ ತಾನು ಎಡಿಟರ್‌ಗೆ ಹೋಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆಯಲು ಲಂಚ ನೀಡಿದ್ದೇನೆ ಎಂದು ಒಪ್ಪಿಕೊಂಡಿದ್ದರು. 90 ರ ದಶಕದ ಆರಂಭದಲ್ಲಿ, ಶಾರೂಕ್ ಖಾನ್ ರಜತ್ ಶರ್ಮಾ ಅವರ ಆಪ್ ಕಿ ಅದಾಲತ್‌ನಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡರು. ವೈರಲ್ ಕ್ಲಿಪ್‌ನಲ್ಲಿ, ಶಾರುಖ್ ಖಾನ್ ಅವರನ್ನು ಪ್ರಶಸ್ತಿ ಖರೀದಿಸಲು ನೀವು ಹಣವನ್ನು ನೀಡಿದ್ದೀರಾ ಎಂದು ಕೇಳಲಾಯಿತು. ಆಗ ನಟ ಹೌದು ಎಂದು ಒಪ್ಪಿಕೊಂಡರು.
ಇತಿಹಾಸ ಸೃಷ್ಟಿಸಿದ ಶಾರುಖ್ ಡಂಕಿ: ಯುರೋಪ್‌ನ ಅತಿದೊಡ್ಡ ಥಿಯೇಟರ್ನಲ್ಲಿ ಬಿಡುಗಡೆ- ವಿಡಿಯೋ ವೈರಲ್
ಹಣ ನೀಡಿಯಾದರೂ ಪ್ರಶಸ್ತಿ ಪಡೆಯಲು ಹೊರಟಿದ್ದ ಕಿಂಗ್‌ಖಾನ್
'ಒಬ್ಬ ವ್ಯಕ್ತಿ ಯಾವುದನ್ನಾದರೂ ಪಡೆಯಬೇಕೆಂದು ಬಯಸಿದರೆ ಅದಕ್ಕಾಗಿ ಕೆಟ್ಟ ದಾರಿಯನ್ನು ಸಹ ಹಿಡಿಯಲು ಹಿಂಜರಿಯುವುದಿಲ್ಲ' ಎಂದು ಶಾರೂಕ್ ಹೇಳಿದರು. 'ನಾನು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆಯಲು ತುಂಬಾ ಉತ್ಸುಕನಾಗಿದ್ದೆ. ಏಕೆಂದರೆ ನಾನು ಅದಕ್ಕೆ ಅರ್ಹನಿದ್ದೇನೆ ಎಂದು ನನಗೆ ತಿಳಿದಿತ್ತು. ಆದರೆ ನನಗೆ ಪ್ರಶಸ್ತಿ ಸಿಗುವುದಿಲ್ಲ ಎಂದು ನನಗೆ ಗೊತ್ತಾಯಿತು. ಹೀಗಾಗಿ ನಾನು ಸಂಪಾದಕರಿಗೆ ಹಣ ನೀಡಿಯಾದರೂ ಪ್ರಶಸ್ತಿ ಪಡೆಯಬೇಕು ಎಂದು ಭಾವಿಸಿದೆ' ಎಂದು ಶಾರೂಕ್ ತಿಳಿಸಿದರು.
ಅದೃಷ್ಟವಶಾತ್, ಘಟನೆಯ ನಂತರ, ಶಾರೂಕ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದರು. ಸಾರ್ವಜನಿಕವಾಗಿ ಸಂಪಾದಕರಲ್ಲಿ ಕ್ಷಮೆಯಾಚಿಸಿದರು. ಇತ್ತೀಚಿಗೆ ಶಾರೂಕ್ ಖಾನ್ ಡುಂಕಿಯಲ್ಲಿ ನಟಿಸಿದ್ದು, ಚಿತ್ರ ಬಾಕ್ಸಾಫೀಸಿನಲ್ಲಿ ಉತ್ತಮ ಗಳಿ ಮಾಡುತ್ತಿದೆ. ಇದಕ್ಕೂ ಮೊದಲು ಕಿಂಗ್ ಖಾನ್ ನಟಿಸಿದ ಜವಾನ್ ಮತ್ತು ಪಠಾನ್ ಸಿನಿಮಾ ಬ್ಲಾಕ್‌ಬಸ್ಟರ್ ಆಗಿತ್ತು.