ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ರಾಕಿಂಗ್ ಸ್ಟಾರ್ ಯಶ್ ಮುಂಬರುವ 'ಟಾಕ್ಸಿಕ್' ಸಿನಿಮಾದಲ್ಲಿ ಬಾಲಿವುಡ್ ನಾಯಕಿಯೊಬ್ಬರು ಜತೆಯಾಗುತ್ತಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಟಾಕ್ಸಿಕ್ ಸಿನಿಮಾವನ್ನು ಮಲಯಾಳಂ ನಟಿ, ನಿರ್ದೇಶಕಿ ನೀತು ಮೋಹನ್‌ದಾಸ್ ಅವರು ನಿರ್ದೇಶನ ಮಾಡಲಿದ್ದು, ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಈ ಚಿತ್ರದಲ್ಲಿನ ಸಾಹಸ ದೃಶ್ಯಗಳನ್ನು ಹಾಲಿವುಡ್ ಜನಪ್ರಿಯ ಸಾಹಸ ನಿರ್ದೇಶಕ ಜೆಜೆ ಪೆರ್ರಿ ನಿರ್ದೇಶಿಸಲಿದ್ದಾರೆ. ಇವೆಲ್ಲ ಈಗಾಗಲೇ ಫಿಕ್ಸ್ ಆಗಿದ್ದು, ಇದೀಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.
ಹೌದು, ಬಾಲಿವುಡ್ ಜನಪ್ರಿಯ ನಟಿಯೊಬ್ಬರು ಟಾಕ್ಸಿಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಹಿರಿಯ ನಟಿ ಕರೀನಾ ಕಪೂರ್ ಯಶ್ ಜತೆ ಟಾಕ್ಸಿಕ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಬಂದಿದ್ದು, ಇದಕ್ಕೆ ಪುಷ್ಟಿ ಕೊಡುವಂತ ಸಂಗತಿ ನಡೆದಿದೆ. ಅದೇನೆಂದರೆ, ಇತ್ತೀಚೆಗೆ ಟಾಕ್ ಶೋ ಒಂದರಲ್ಲಿ ನಟಿ ಕರೀನಾ ಕಪೂರ್, 'ನನಗೆ ಯಶ್ ಎಂದರೆ ಇಷ್ಟ. ಆತನ ಎನರ್ಜಿ, ಪ್ರತಿಭೆ ನನ್ನನ್ನು ತುಂಬಾ ಇಂಪ್ರೆಸ್ ಮಾಡಿದೆ. ಆತನೊಟ್ಟಿಗೆ ನಟಿಸಲು ನನಗೆ ಆಸಕ್ತಿಯಿದೆ' ಎಂದಿದ್ದರು. ಅದೇ ಮಾತು ನಿಜವಾಗುವಂತೆ ಇದೀಗ ಕರೀನಾ ಕಪೂರ್ ಹೆಸರು ಕೇಳಿ ಬರುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಎಡವಿದವರು; ಲಿಸ್ಟ್ ಸೇರಕೊಂಡವರ ಪಾಡು ಏನಾಗಬಹುದು!?
ಆದರೆ, ನಟಿ ಕರೀನಾ ಕಪೂರ್ ಅವರು ಯಶ್‌ಗೆ ನಾಯಕಿಯಾಗಿ ನಟಿಸುತ್ತಾರಾ ಅಥವಾ ಮುಖ್ಯ ಪೋಷಕ ಪಾತ್ರದಲ್ಲಿ ನಟಿಸುತ್ತಾರಾ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಏಕೆಂದರೆ, ಯಶ್ ಜತೆ ನಾಯಕಿಯಾಗಿ ನಟಿಸಲು ಪೂಜಾ ಹೆಗ್ಡೆ ಹಾಗೂ ಸಾಯಿ ಪಲ್ಲವಿ ಈ ಇಬ್ಬರು ನಟಿಯರ ಹೆಸರು ಕೇಳಿ ಬರುತ್ತಿದೆ. ಹೀಗಾಗಿ ಸಹಜವಾಗಿಯೇ ನಟಿ ಕರೀನಾ ಕಫುರ್ ಅವರು ನಾಯಕಿಯಾಗಿ ನಟಿಸುತ್ತಿಲ್ಲ ಎನ್ನಬಹುದು. ಆದರೆ, ನಟಿಸಲಿರುವುದು ಪಕ್ಕಾ ಎನ್ನುವುದಾದರೆ ಅದು ಮುಖ್ಯ ಪೋಷಕ ಪಾತ್ರದಲ್ಲೇ ಆಗಿರುತ್ತದೆ ಎನ್ನಬಹುದು.
ಖುಷಿ ಮಾತಾಡುವುದು ಕಡಿಮೆ, ಕ್ಯಾಮೆರಾ ಎದುರು ಹೀಗ್ಮಾಡೋದಾ ಅಂದೇಬಿಟ್ರು ಜಾಹ್ನವಿ ಕಪೂರ್!
ಯಶ್ ನಟನೆಯ ಕೆಜಿಎಫ್ ಚಿತ್ರದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ನಟಿಸಿದ್ದರು. ಬಾಲಿವುಡ್ ನಟ ಸಂಜಯ್ ದತ್ ಕೂಡ ಮುಖ್ಯ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಸ್ಯಾಂಡಲ್‌ವುಡ್ ಹೊರತಾಗಿಯೂ ಯಶ್ ಸಿನಿಮಾದಲ್ಲಿ ಪರಭಾಷೆಯ ನಟಿನಟರು ಕಾಣಿಸಿಕೊಳ್ಳುವುದು ಪಕ್ಕಾ. ಹೀಗಿರುವಾಗ ನಟಿ ಕರೀನಾ ಕಪೂರ್ ನಟಿಸುತ್ತಾರೆ ಎಂದರೆ ಆ ಸುದ್ದಿಯನ್ನು ನಂಬಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.