ತಮಿಳುನಾಡಿನಲ್ಲಿ ಅತೀ ಹೆಚ್ಚು ಆದಾಯ ತೆರಿಗೆ ಪಾವತಿಸುವ ನಟ ರಜನಿಕಾಂತ್; ತೆರಿಗೆ ಇಲಾಖೆ ಸನ್ಮಾನ

Published : Jul 25, 2022, 11:16 AM IST
ತಮಿಳುನಾಡಿನಲ್ಲಿ ಅತೀ ಹೆಚ್ಚು ಆದಾಯ ತೆರಿಗೆ ಪಾವತಿಸುವ ನಟ ರಜನಿಕಾಂತ್; ತೆರಿಗೆ ಇಲಾಖೆ ಸನ್ಮಾನ

ಸಾರಾಂಶ

ಮನರಂಜನೆ ಕ್ಷೇತ್ರದಲ್ಲಿ ಅತೀ ಹೆಚ್ಚು ತೆರಿಗೆ ಕಟ್ಟುವ ನಟ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್.  ಬಾಲಿವುಡ ಕಿಲಡಿಗೆ ಆದಾಯ ತೆರಿಗೆ ಇಲಾಖೆ ಸಮ್ಮಾನ್ ಪತ್ರ ಪ್ರಮಾಣಪತ್ರ ನೀಡಿ ಗೌರವಿಸಿದೆ. ಇನ್ನು ತಮಿಳುನಾಡಿನಲ್ಲಿ ಅತೀ ಹೆಚ್ಚು ತೆರಿಗೆ ಕಟ್ಟುವ ನಟ ಸೂಪರ್ ಸ್ಟಾರ್ ರಜನಿಕಾಂತ್. ಆದಾಯ ತೆರಿಗೆ ಇಲಾಖೆ ತಲೈವಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದೆ. 

ಮನರಂಜನೆ ಕ್ಷೇತ್ರದಲ್ಲಿ ಅತೀ ಹೆಚ್ಚು ತೆರಿಗೆ ಕಟ್ಟುವ ನಟ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್. ಬಾಲಿವುಡ ಕಿಲಾಡಿಗೆ ಆದಾಯ ತೆರಿಗೆ ಇಲಾಖೆ ಸಮ್ಮಾನ್ ಪತ್ರ ಪ್ರಮಾಣಪತ್ರ ನೀಡಿ ಗೌರವಿಸಿದೆ. ಇನ್ನು ತಮಿಳುನಾಡಿನಲ್ಲಿ ಅತೀ ಹೆಚ್ಚು ತೆರಿಗೆ ಕಟ್ಟುವ ನಟ ಸೂಪರ್ ಸ್ಟಾರ್ ರಜನಿಕಾಂತ್. ಆದಾಯ ತೆರಿಗೆ ಇಲಾಖೆ ತಲೈವಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದೆ. ಮಗಳು ಐಶ್ವರ್ಯಾ ರಜನಿಕಾಂತ್ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ. ಜುಲೈ 24 ರಂದು ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ಆದಾಯ ತೆರಿಗೆ ಇಲಾಖೆ ಸನ್ಮಾನಿಸಿತು.  ಸಮಾರಂಭದಲ್ಲಿ ಅವರ ಪುತ್ರಿ ಐಶ್ವರ್ಯಾ ಅವರು ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ರಜನಿಕಾಂತ್ ಅವರು ಹಲವಾರು ವರ್ಷಗಳಿಂದ ತಮಿಳುನಾಡಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಗೂ ಅತೀ ಹೆಚ್ಚು ತೆರಿಗೆ ಪಾವತಿ ಮಾಡುವ ನಟರಾಗಿದ್ದಾರೆ. 

ಅವರ ಪರವಾಗಿ ಅವರ ಪುತ್ರಿ ಮತ್ತು ಚಲನಚಿತ್ರ ನಿರ್ಮಾಪಕಿ ಐಶ್ವರ್ಯ ಅವರು ಪತ್ರ ಸ್ವೀಕರಿಸಿದರು. ಸಮಾರಂಭದ ಫೋಟೋವನ್ನು ಹಂಚಿಕೊಂಡ ಐಶ್ವರ್ಯ, ಹೆಚ್ಚಿನ ಮತ್ತು ತ್ವರಿತ ತೆರಿಗೆದಾರರ ಹೆಮ್ಮೆಯ ಮಗಳು. ಎಂದು ಬರೆದುಕೊಂಡಿುದ್ದಾರೆ. #incometaxday2022 #onbehalfofmyfather ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಇನ್ನು ಅಪ್ಪನನ್ನು ಗೌರವಿಸಿದ್ದಕ್ಕಾಗಿ ತಮಿಳುನಾಡು ಮತ್ತು ಪುದುಚೇರಿಯ ಆದಾಯ ತೆರಿಗೆ ಇಲಾಖೆಗೆ ತುಂಬಾ ಧನ್ಯವಾದಗಳು ಎಂದಿದ್ದಾರೆ. 

ರಜನಿಕಾಂತ್‌ಗೆ ಅಂದು ಹೇಗೆಲ್ಲಾ ಅವಮಾನ ಆಗಿತ್ತು ಗೊತ್ತಾ? ಅವರೇ ಹೇಳ್ತಾರೆ

ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಸೂಪರ್ ಸ್ಟಾರ್ ಕೊನೆಯದಾಗಿ ನಿರ್ದೇಶಕ ಸಿರುತೈ ಶಿವ ಅವರ ಅಣ್ಣಾತ್ತೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಸೂಪರ್ ಸ್ಟಾರ್ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರ 'ಜೈಲರ್‌' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, ಚಿತ್ರವು ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಸನ್ ಪಿಕ್ಚರ್ಸ್ ಈ ದೊಡ್ಡ-ಬಜೆಟ್ ಕಮರ್ಷಿಯಲ್ ಎಂಟರ್ಟೈನರ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಅನಿರುದ್ಧ್ ರವಿಚಂದ್ರನ್ ಸಂಗೀತ ಸಂಯೋಜಿಸುತ್ತಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಕನ್ನಡದ ಸ್ಟಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಶಿವಣ್ಣ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಬ್ಬರ ಕಾಂಬಿನೇಷನ್ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.   

'ಜೈಲರ್' ನಲ್ಲಿ ಶಿವಣ್ಣ- ರಜನಿ, ಹೇಗಿರಲಿದೆ ಕಾಂಬಿನೇಷನ್..?

ಕಳೆದ 5 ವರ್ಷಗಳಲ್ಲಿ ಅಕ್ಷಯ್ ಕುಮಾರ್ ಬಾಲಿವುಡ್ ಚಿತ್ರರಂಗದ (Bollywood Industry) ಗರಿಷ್ಠ ತೆರಿಗೆ ಪಾವತಿದಾರರಾಗಿದ್ದಾರೆ. ಪ್ರತಿ ವರ್ಷವೂ ಅಕ್ಷಯ್(Akshay Kumar) ಅತೀ ಹೆಚ್ಚು ಮೊತ್ತವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿ ಮಾಡುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ವರ್ಷದಲ್ಲಿ ಅಕ್ಷಯ್ ಕುಮಾರ್ 4 ರಿಂದ 5 ಚಿತ್ರದಲ್ಲಿ ನಟಿಸುತ್ತಾರೆ. ಅತೀ ವೇಗದಲ್ಲಿ ಶೂಟಿಂಗ್ ಮುಗಿಸುವ ಹೆಗ್ಗಳಿಕೆಯೂ ಅಕ್ಷಯ್ ಕುಮಾರ್‌ಗಿದೆ. ಅಕ್ಷಯ್ ಕುಮಾರ್ ಬಹುತೇಕ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡಿದಿದೆ. ಪ್ರತಿ ಚಿತ್ರದಿಂದ ಅಕ್ಷಯ್ ಅತೀ ಹೆಚ್ಚಿನ ಆದಾಯವನ್ನೂ ಪಡೆಯುತ್ತಿದ್ದಾರೆ. ಹೀಗಾಗಿ ಅಕ್ಷಯ್ ಗರಿಷ್ಠ ಮೊತ್ತವನ್ನು ಆದಾಯ ತೆರಿಗೆ (Income tax payer) ರೂಪದಲ್ಲಿ ಪಾವತಿ ಮಾಡುತ್ತಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!
ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?