ನಾನು ನನ್ನ (ಮಾಲ್ಡೀವ್ಸ್) ಟಿಕೆಟ್‌ಗಳನ್ನು ರದ್ದುಗೊಳಿಸಿದ್ದೇನೆ ಮತ್ತು ಮುಂದಿನ ವಾರ ಲಕ್ಷದ್ವೀಪಕ್ಕೆ ಹೋಗಲು ಎದುರು ನೋಡುತ್ತಿದ್ದೇನೆ ಎಂದೂ ನಟ ನಾಗಾರ್ಜುನ ಅಕ್ಕಿನೇನಿ ಹೇಳಿದ್ದಾರೆ.
ದೆಹಲಿ (ಜನವರಿ 14, 2024): ಭಾರತದ ವಿರುದ್ಧ ಹಾಗೂ ಪ್ರಧಾನಿ ಮೋದಿ ವಿರುದ್ಧ ಮಾಲ್ಡೀವ್ಸ್ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ ಬಳಿಕ ಭಾರತದಲ್ಲಿ #BoycottMaldives ಅಭಿಯಾನ ಸದ್ದು ಮಾಡಿತು. ಅನೇಕ ಭಾರತೀಯರು ತಮ್ಮ ಮಾಲ್ಡೀವ್ಸ್ ಪ್ರವಾಸ ಕ್ಯಾನ್ಸಲ್ ಮಾಡಿ, ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದರು. ಅದೆ ರೀತಿ, ಬಾಲಿವುಡ್ ನಟ - ನಟಿಯರು ಸಹ ಮಾಲ್ಡೀವ್ಸ್ ಬದಲು ಭಾರತದ ದ್ವೀಪಗಳಿಗೆ ತೆರಳಿ ಎಂದು ಕರೆ ನೀಡಿದ್ದರು.
ಇದೇ ರೀತಿ, ಈಗ ದಕ್ಷಿಣ ಭಾರತದ ಖ್ಯಾತ ನಟ ನಾಗಾರ್ಜುನ ಅಕ್ಕಿನೇನಿ ತಮ್ಮ ಕುಟುಂಬದೊಂದಿಗೆ ಹೊರಟಿದ್ದ ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿರೋದಾಗಿ ಹೇಳಿಕೊಂಡಿದ್ದಾರೆ. ನನ್ನ ಕುಟುಂಬದೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಸಾಧ್ಯವಾಗದ ಕಾರಣ ನಾನು ಜನವರಿ 17 ರಂದು ರಜೆಗಾಗಿ ಮಾಲ್ಡೀವ್ಸ್‌ಗೆ ಹೋಗಬೇಕಿತ್ತು. ನಾನು ಬಿಗ್ ಬಾಸ್ ಮತ್ತು ನಾ ಸಾಮಿ ರಂಗಕ್ಕಾಗಿ 75 ದಿನಗಳ ಕಾಲ ವಿರಾಮವಿಲ್ಲದೆ ಕೆಲಸ ಮಾಡುತ್ತಿದ್ದೆ ಎಂದು ನಟ ನಾಗಾರ್ಜುನ ಅಕ್ಕಿನೇನಿ ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನು ಓದಿ: ನಟಿ ಆಶಿಕಾ ತೆಲುಗು ಸಿನಿಮಾ ರಿಲೀಸ್‌ಗೆ ರೆಡಿ; ಬಿಂದಾಸ್ ಡ್ಯಾನ್ಸ್ ಮಾಡಿದ ಚೆಲುವೆ!
ಸಂಗೀತ ಸಂಯೋಜಕ ಎಂ ಎಂ ಕೀರವಾಣಿ ಸಹ ನಾಗಾರ್ಜುನ ಅವರೊಂದಿಗೆ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಮಾಲ್ಡೀವ್ಸ್ ಪ್ರವಾಸ ಕ್ಯಾನ್ಸಲ್ ಮಾಡುವ ಮೂಲಕ ನಟ ನಾಗಾರ್ಜುನ Boycott Maldives ಅಭಿಯಾನ ಬೆಂಬಲಿಸಿದ್ದಾರೆ. ಈಗ, ನಾನು ನನ್ನ (ಮಾಲ್ಡೀವ್ಸ್) ಟಿಕೆಟ್‌ಗಳನ್ನು ರದ್ದುಗೊಳಿಸಿದ್ದೇನೆ ಮತ್ತು ಮುಂದಿನ ವಾರ ಲಕ್ಷದ್ವೀಪಕ್ಕೆ ಹೋಗಲು ಎದುರು ನೋಡುತ್ತಿದ್ದೇನೆ ಎಂದೂ ನಟ ನಾಗಾರ್ಜುನ ಅಕ್ಕಿನೇನಿ ಹೇಳಿದ್ದಾರೆ.
ಮಾಲ್ಡೀವ್ಸ್‌ನ ಸುಂದರವಾದ ಕಡಲತೀರಗಳಿಗೆ ಈ ಹಿಂದೆ ಕೆಲವು ಬಾರಿ ಮಾಲ್ಡೀವ್ಸ್‌ಗೆ ಹೋಗಿದ್ದೆ, ಆದರೆ ಈ ಬಾರಿ ನಾನು ಅಲ್ಲಿಗೆ ಹೋಗದಿರಲು ನಿರ್ಧರಿಸಿದ್ದೇನೆ ಎಂದೂ ತೆಲುಗು ನಟ ಹಾಗೂ ನಟ ನಾಗ ಚೈತನ್ಯ ಹಾಗೂ ಅಖಿಲ್ ಅಕ್ಕಿನೇನಿ ತಂದೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ನಮ್ಮ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಲ್ಡೀವ್ಸ್ ಮಂತ್ರಿಗಳ ಕಾಮೆಂಟ್‌ಗಳು ಕೆಟ್ಟ ಅಭಿರುಚಿಯಲ್ಲಿವೆ ಮತ್ತು ಅವರು ಇದಕ್ಕೆ ಬೆಲೆ ತೆರಲಿದ್ದಾರೆ. ಪ್ರಧಾನಿ ಮೋದಿ 150 ಕೋಟಿ ಜನರ ನಾಯಕ ಮತ್ತು ಪ್ರಪಂಚದಾದ್ಯಂತ ಹೆಚ್ಚು ಗೌರವಾನ್ವಿತರಾಗಿದ್ದಾರೆ ಎಂದೂ ವಿಡಿಯೋದಲ್ಲಿ ನಾಗಾರ್ಜುನ ಅಕ್ಕಿನೇನಿ ಹೇಳಿದ್ದಾರೆ.
ಮಾಲ್ಡೀವ್ಸ್ ಬುಕ್ಕಿಂಗ್ ಕ್ಯಾನ್ಸಲ್ ಬಳಿಕ ‘ದೇಶ ಮೊದಲು ವ್ಯಾಪಾರ ನಂತರ’ ಎಂಬ ಸಂದೇಶ ಕಳಿಸಿದ Ease My Trip
ನಟ ನಾಗಾರ್ಜುನ ಅವರ ಗ್ರಾಮೀಣ ಭಾಗವನ್ನು ಕೇಂದ್ರೀಕರಿಸಿದ ಚಿತ್ರ 'ನಾ ಸಾಮಿ ರಂಗ' ಇಂದು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್ ಪಟಾಕಿ ಪೋರಿ ಆಶಿಕಾ ರಂಗನಾಥ್ ಸಹ ನಟಿಸಿದ್ದಾರೆ.
ಮಾಲ್ಡೀವ್ಸ್ ಬಗ್ಗೆ ಹಸ್ತಕ್ಷೇಪ ಸಲ್ಲ: ಮುಯಿಜು ಭೇಟಿ ಬೆನ್ನಲ್ಲೇ ಭಾರತಕ್ಕೆ ಚೀನಾ ಪರೋಕ್ಷ ಟಾಂಗ್