ಎಂಟು ವರ್ಷದವಳಿದ್ದಾಗ ವರುಣ್ ಧವನ್ ಮೇಲೆ ಕ್ರಷ್ ಹೊಂದಿದ್ದ ಶ್ರದ್ಧಾ ಕಪೂರ್ ಪ್ರೀತಿ ನಿವೇದನೆಯ ಕುತೂಹಲದ ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ.
ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಡೇವಿಡ್ ಧವನ್ ಅವರ ಪುತ್ರ ವರುಣ್ ಧವನ್ ಇಂದು ಬಾಲಿವುಡ್‌ನ ದೊಡ್ಡ ಸ್ಟಾರ್ ಎಂದು ಪರಿಗಣಿಸಲ್ಪಟ್ಟಿದ್ದಾರೆ. ವರುಣ್ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಆಲಿಯಾ ಭಟ್ ಜೊತೆ ಸಿನಿಮಾ ಪ್ರಯಾಣ ಆರಂಭಿಸಿದರು. ಇದಾದ ನಂತರ ವರುಣ್ ಅನೇಕ ಅದ್ಭುತ ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ತೋರಿಸಿದರು. ವರುಣ್ ಅವರ ಬಾಲ್ಯದ ಜೀವನವೂ ತುಂಬಾ ಅದ್ಭುತವಾಗಿದೆ. ಬಾಲಿವುಡ್‌ನ ಖ್ಯಾತ ನಟಿಯೊಬ್ಬರು ಬಾಲ್ಯದಲ್ಲಿ ವರುಣ್ಗೆ ಪ್ರಪೋಸ್ ಮಾಡಿದ್ದರು. ಆದರೆ ಆಕೆಯ ಇಂಗ್ಲಿಷ್ ಕೇಳಿ ಅರ್ಥವಾಗದೇ ಹೆದರಿ ವರುಣ್ ಓಡಿಹೋಗಿದ್ರಂತೆ. ಆ ನಟಿಯೇ ಶ್ರದ್ಧಾ ಕಪೂರ್. ಶ್ರದ್ಧಾ ಕಪೂರ್ ಮತ್ತು ವರುಣ್ ಧವನ್ 'ಎಬಿಸಿಡಿ 2' ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ತುಂಬಾ ಒಳ್ಳೆಯ ಸ್ನೇಹಿತರು, ಆದರೆ ಶ್ರದ್ಧಾ ಕಪೂರ್ ತನ್ನ ಬಾಲ್ಯದಲ್ಲಿ ವರುಣ್ ಧವನ್ ಮೇಲೆ ಕ್ರಶ್ ಹೊಂದಿದ್ದರು. ಅಷ್ಟೇ ಅಲ್ಲ, ನಟಿ ವರುಣ್ ಬಳಿಯೂ ತಮ್ಮ ಭಾವನೆಗಳನ್ನು ಹೇಳಿಕೊಂಡಿದ್ದರು. ಈ ರಹಸ್ಯವನ್ನು ಸ್ವತಃ ಶ್ರದ್ಧಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ನಾನು ವರುಣ್ ಮೇಲೆ ಚಿಕ್ಕಂದಿನಿಂದಲೇ ಕ್ರಶ್ ಹೊಂದಿದ್ದೆ. ಆತನಿಗೆ ಪ್ರೀತಿಯ ವಿಷಯ ತಿಳಿಸಬೇಕು ಅಂದುಕೊಂಡಿದ್ದೆ. ಈ ಪ್ರೀತಿಯಿಂದ ಒಮ್ಮೆ ವರುಣನನ್ನು ಮಲೆನಾಡಿನತ್ತ ಕರೆದುಕೊಂಡು ಹೋಗಿದ್ದೆ. ವರುಣ್ ಜೊತೆ ಆಟವಾಡಿದ್ದೆ. ನಂತರ ಐ ಲವ್ ಯೂ ಹೇಳೋಣ ಅಂದುಕೊಂಡೆ. ಆದರೆ ಆಗಿನ್ನೂ ನನಗೆ 8 ವರ್ಷ ವಯಸ್ಸಾಗಿತ್ತಷ್ಟೇ. ವರುಣ್ಗೂ ಅಷ್ಟೇ ವಯಸ್ಸಾಗಿತ್ತು. ಆದರೆ ನನಗೆ ಹೇಗೆ ಪ್ರೀತಿಯ ವಿಷಯ ಹೇಳುವುದು ತಿಳಿಯಲಿಲ್ಲ. ಅದಕ್ಕಾಗಿಯೇ ರೀವರ್ಸ್ ಹೇಳಲು ಇಚ್ಛಿಸಿದೆ ಎಂದು ನೆನಪು ಮಾಡಿಕೊಂಡಿದ್ದಾರೆ ಶ್ರದ್ಧಾ ಕಪೂರ್. ಹಾಗೆಯೇ ಮಾಡಿದ ನಾನು ಐ ಲವ್ ಯೂ ಅನ್ನು ರಿವರ್ಸ್‌ನಲ್ಲಿ ಹೇಳಲು ಯೋಚಿಸಿ ಯೂ ಲವ್ ಐ ಎಂದೆ.
ಮಾಜಿ ಭಾವಿ ಪತಿಯೇ ಬೇರೆ, ಮದ್ವೆಯಾಗಿದ್ದೇ ಬೇರೆಯವರನ್ನಾ? ಏನಿದು ಆಮೀರ್ ಖಾನ್ ಪುತ್ರಿಯ ಹೊಸ ವಿಷ್ಯ?
ನಾನು ಒಂದು ಮಾತು ಹೇಳುತ್ತೇನೆ. ಅದು ತಪ್ಪು ಆಗಿರುತ್ತದೆ. ನೀನು ಅದನ್ನು ಸರಿಯಾಗಿ ಎಚ್ಚರಿಕೆಯಿಂದ ಆಲಿಸಬೇಕು ಎಂದಿದ್ದೆ. ನಂತರ ಯೂ ಲವ್ ಐ ಎಂದೆ. ಆ ಚಿಕ್ಕ ವರುಣ್ಗೆ ಅದೇನು ಅರ್ಥವಾಯ್ತೋ, ಇಲ್ಲವೋ ಒಟ್ಟಿನಲ್ಲಿ ಲವ್ ಎನ್ನೋದಷ್ಟೇ ಗೊತ್ತಾಯ್ತು ಅನಿಸತ್ತೆ. ಏನು ಹೇಳಿದೆ ಎಂದೂ ಕೇಳುವ ಗೋಜಿಗೆ ಹೋಗದೆ ಇಲ್ಲಾ ಎಂದು ಹೇಳಿ ಅಲ್ಲಿಂದ ಓಡೇ ಹೋದ ಎಂದಿದ್ದಾರೆ ನಟಿ ಶ್ರದ್ಧಾ.
ಅಂದಹಾಗೆ ವರುಣ್ ಧವನ್ ಮತ್ತು ಶ್ರದ್ಧಾ ಕಪೂರ್ 'ಎಬಿಸಿಡಿ 2' ಮತ್ತು 'ಸ್ಟ್ರೀಟ್ ಡ್ಯಾನ್ಸರ್ 3D' ಚಿತ್ರಗಳಲ್ಲಿ ಒಟ್ಟಿಗೆ ತಮ್ಮ ನಟನೆಯ ಮ್ಯಾಜಿಕ್ ತೋರಿಸಿದ್ದಾರೆ. ಇಬ್ಬರ ನಡುವೆ ತುಂಬಾ ಗಾಢವಾದ ಸ್ನೇಹವಿದೆ. ವರುಣ್ ಧವನ್ ತನ್ನ ಗೆಳತಿ ನತಾಶಾ ದಲಾಲ್ ಜೊತೆ ಹಲವು ಬಾರಿ ಡೇಟಿಂಗ್ ಮಾಡಿದ್ದಾರೆ. ಮದುವೆಯಾಗುವ ಮೊದಲು ಇಬ್ಬರೂ ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ನತಾಶಾ ಮತ್ತು ವರುಣ್ 24 ಜನವರಿ 2021 ರಂದು ವಿವಾಹವಾದರು. ಶ್ರದ್ಧಾ ಕಪೂರ್ ಇನ್ನೂ ಅವಿವಾಹಿತೆ. ಅಂದಹಾಗೆ ವರುಣ್ ಮತ್ತು ಶ್ರದ್ಧಾ ಇಬ್ಬರಿಗೂ ಈಗ 36 ವರ್ಷ ವಯಸ್ಸು.
ಮಿಸ್ಟರಿ ಮ್ಯಾನ್ ಜೊತೆ ನಟಿ ಕಂಗನಾ ರಣಾವತ್! ಕೈಕೈಹಿಡಿದು ನಡೆದ ಈ ವಿದೇಶಿಗ ಯಾರು?