ಭಾರತೀಯ ಸಿನಿರಂಗದ ಅತ್ಯದ್ಭುತ ನಟರು ರಜನಿಕಾಂತ್ ಮತ್ತು ಕಮಲ್ ಹಾಸನ್. ಜಗತ್ತಿನಾದ್ಯಂತ ಕೋಟಿ ಕೋಟಿ ಅಭಿಮಾನಿಗಳನ್ನ ಹೊಂದಿರುವ ಈ ಮಾಸ್ ಅಪೀಲ್ ನಟರು ತಮಿಳು ಸಿನಿಮಾವನ್ನ ವಿಶ್ವಕ್ಕೆ ಪರಿಚಯಿದ ಸೂಪರ್ ಸ್ಟಾರ್‌ಗಳು ಎನ್ನಬಹುದು. ದಕ್ಷಿಣದ ಲೆಜೆಂಡ್ ನಟರು ಭೇಟಿ ಮಾಡಿರುವುದು ಜಗತ್ತಿನ ಗಮನವನ್ನು ಸೆಳೆದಿದೆ.
ದಕ್ಷಿಣ ಭಾರತದ ನಟರಾದ ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರ ನಡುವೆ ಎಂತಹ ಸ್ನೇಹ ಇದೆ ಅಂತಾ ಇಡೀ ಜಗತ್ತಿಗೆ ಗೊತ್ತು. ಅದ್ರಲ್ಲೂ ಇಬ್ಬರೂ ನಟರು ಒಂದು ಕಾಲದಲ್ಲಿ ಒಟ್ಟಿಗೆ ದಕ್ಷಿಣದ ಸಿನಿಮಾ ಜಗತ್ತನ್ನು ಆಳಿದ್ದವರು. ಇಬ್ಬರೂ ಒಂದೇ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು. ಆದರೆ ಇದೀಗ ಬರೋಬ್ಬರಿ 21 ವರ್ಷಗಳ ನಂತರ ಮತ್ತೆ ಅವರಿಬ್ಬರೂ ಒಂದೇ ಜಾಗದಲ್ಲಿ ಮೀಟ್ ಆಗಿದ್ದಾರೆ. ರಜನಿಕಾಂತ್ 'ತಲೈವರ್ 170' ಹಾಗೂ ಕಮಲ್ ಹಾಸನ್ ಅವರ 'ಇಂಡಿಯನ್ 2' ಸಿನಿಮಾ ಶೂಟಿಂಗ್ ಒಂದೇ ಸ್ಟುಡಿಯೋದಲ್ಲಿ ನಡೆಯುತ್ತಿದೆ.
ಭಾರತೀಯ ಸಿನಿರಂಗದ ಅತ್ಯದ್ಭುತ ನಟರು ರಜನಿಕಾಂತ್ ಮತ್ತು ಕಮಲ್ ಹಾಸನ್. ಜಗತ್ತಿನಾದ್ಯಂತ ಕೋಟಿ ಕೋಟಿ ಅಭಿಮಾನಿಗಳನ್ನ ಹೊಂದಿರುವ ಈ ಮಾಸ್ ಅಪೀಲ್ ನಟರು ತಮಿಳು ಸಿನಿಮಾವನ್ನ ವಿಶ್ವಕ್ಕೆ ಪರಿಚಯಿದ ಸೂಪರ್ ಸ್ಟಾರ್‌ಗಳು ಎನ್ನಬಹುದು. ದಕ್ಷಿಣದ ಲೆಜೆಂಡ್ ನಟರು ಭೇಟಿ ಮಾಡಿರುವುದು ಜಗತ್ತಿನ ಗಮನವನ್ನು ಸೆಳೆದಿದೆ. ಈ ಸಮಯದಲ್ಲೇ ಅಭಿಮಾನಿಗಳಿಗೂ ಅವರು ಸರ್ಪ್ರೈಸ್ ಕೊಟ್ಟಿದ್ದಾರೆ. ಇನ್ನು 2002ರಲ್ಲಿ ರಜನಿಕಾಂತ್ ಹಾಗೂ ಕಮಲ್ ಹಾಸನ್ ಹೀಗೆ ಒಟ್ಟಿಗೆ ಒಂದೇ ಸ್ಟುಡಿಯೋದಲ್ಲಿ ಮೀಟ್ ಮಾಡಿದ್ದರು.
'ಡ್ಯಾಡೀಸ್ ಲಿಟಲ್ ಗರ್ಲ್' ಗುಟ್ಟು ರಟ್ಟು ಮಾಡಿದ ನಟಿ ಪ್ರಿಯಾಂಕಾ ಚೋಪ್ರಾ; ಅಬ್ಬಾ ಇಂಥ ನಟಿಯೇ ಈಕೆ!
2002ರಲ್ಲಿ ರಜನಿಕಾಂತ್ ಅವರ 'ಬಾಬಾ' ಸಿನಿಮಾ ಮತ್ತು ಕಮಲ್ ಹಾಸನ್ ಅವರ 'ಪಂಚತಂತಿರಂ' ಶೂಟಿಂಗ್ ಒಂದೇ ಕಡೆ ನಡೆಯವಾಗ ಭೇಟಿ ಮಾಡಿದ್ದರು. ಆದ್ರೆ ಇದೀಗ ಈ ಸ್ಟಾರ್‌ಗಳು ಮತ್ತೆ ಭೇಟಿಯಾಗಿದ್ದಾರೆ. ನಿಮ್ಮೆಲ್ಲಾ ಗೊತ್ತಿರುವಂತೆ ಕಮಲ್ ಹಾಸನ್ ಅವರ 'ಇಂಡಿಯನ್-2' ಸಿನಿಮಾ ಸೌಂಡ್‌ಗೆ ವೇದಿಕೆ ಸಜ್ಜಾಗಿದೆ. 1996 ರಲ್ಲಿ ನಟ ಕಮಲ್ ಹಾಸನ್ 'ಇಂಡಿಯನ್ 1' ಮೂಲಕ ಇಟ್ಟಿದ್ದ ಹವಾ ಇಂದಿಗೂ ಕಡಿಮೆ ಆಗಿಲ್ಲ. ಹೀಗಿದ್ದಾಗ 'ಇಂಡಿಯನ್ 2' ಮೂಲಕ ಹೊಸ ಇತಿಹಾಸ ನಿರ್ಮಿಸೋಕೆ ಸಜ್ಜಾಗಿದ್ದಾರೆ ಕಮಲ್. ಅಲ್ಲದೇ, ತಮ್ಮ ಶೂಟಿಂಗ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಆದರೆ ಇದೇ ಸಮಯದಲ್ಲಿ 21 ವರ್ಷಗಳ ಬಳಿಕ ಶೂಟಿಂಗ್ ಜಾಗದಲ್ಲಿ ಗೆಳೆಯನ ತಬ್ಬಿ, ಪ್ರೀತಿ ಹಂಚಿಕೊಂಡಿದ್ದಾರೆ.
ಅಷ್ಟಕ್ಕೂ 'ಅಪೂರ್ವ ರಾಗಂಗಳ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ರಜನಿಕಾಂತ್ & ಕಮಲ್ ಮುಂದೆ ಬೇರೆ ಬೇರೆ ಗುರಿ ಹಿಡಿದು ಹೊರಟರು. ಬರೋಬ್ಬರಿ 21 ವರ್ಷಗಳ ಬಳಿಕ ಸೂಪರ್ ಸ್ಟಾರ್‌ಗಳಿಬ್ಬರು ಒಟ್ಟಿಗೆ ಕೆಲವೊತ್ತು ಸಿನಿಮಾ ಸೆಟ್‌ನಲ್ಲಿ ಕಾಲ ಕಳೆದಿದ್ದಾರೆ. ಇವರಿಬ್ಬರ ಸ್ನೇಹ ತಮ್ಮ ಮೊದಲ ಸಿನಿಮಾದಿಂದಲೇ ಶುರುವಾಗಿತ್ತು. ಇವರಿಬ್ಬರ ಗುರಿ ಒಂದೆಯಾಗಿತ್ತು. ಇವರಿಬ್ಬರ ಗುರು ಒಬ್ಬರೇ ಆಗಿದ್ರು. ಅವರೇ ಕೆ. ಬಾಲಚಂದರ್ ಅವರು. ಕೆ. ಬಾಲಚಂದರ್ ಅವರು ಮಾಡಿದ 3 ಸಿನಿಮಾಗಳಲ್ಲಿ ರಜನಿಕಾಂತ್ ಮತ್ತು ಕಮಲ್ ಹಾಸನ್ ನಟಿಸಿ ದೊಡ್ಡ ಹೆಸರು ತಂದು ಕೊಟ್ಟಿತ್ತು. ಅದಾದ ನಂತರ ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರ ಜೋಡಿಯ 10 ಸಿನಿಮಾಗಳು ಸೂಪರ್ ಹಿಟ್ ಆಗೋಕೆ ಶುರು ಮಾಡಿದ್ದವು.
ಸೂಪರ್ ಸ್ಟಾರ್ ಶ್ರೀದೇವಿಗೆ ಅಮೆರಿಕಾದಲ್ಲಿ ಅನ್ಯಾಯ; ಭಾರೀ ಪರಿಹಾರ ಕೊಡಿಸಿದ್ದ ಅಧ್ಯಕ್ಷ ಬಿಲ್ ಕ್ಲಿಂಟನ್
ಅದೊಂದು ದಿನ ಕಮಲ್ ಹಾಸನ್ ಅವರು ನೀನು ಸೆಪರೆಟ್ ಸಿನಿಮಾ ಮಾಡು, ನಾನು ಸೆಪರೇಟ್ ಸಿನಿಮಾ ಮಾಡ್ತಿನಿ, ಆಗ ಇಬ್ಬರಿಂದ 2 ಸಿನಿಮಾ ಮಾಡಿದಂತಾಗುತ್ತೆ, ಇಬ್ಬರಿಗೂ ಬೇರೆ ಬೇರೆ ಸಂಭಾವನೆ ಬರತ್ತೆ ಅಂತ ಹೇಳಿದ್ರಂತೆ. ಅಂದಿನಿಂದ ಕಮಲ್ ಹಾಸನ್ ಮತ್ತು ರಜನಿಕಾಂತ್ ಬೇರೆ ಬೇರೆ ಸಿನಿಮಾಗಳನ್ನ ಮಾಡಿ ಮತ್ತಷ್ಟು ಫೇಮಸ್ ಆಗಿಬಿಟ್ಟರು. 2013ರಲ್ಲಿ ಕಮಲ್ ಹಾಸನ್ ಅವರ ವಿಶ್ವರೂಪಂ ಸಿನಿಮಾ ರಿಲೀಸ್ಗೆ ರೆಡಿಯಾಗಿತ್ತು. ಆದ್ರೆ ತಮಿಳುನಾಡಿನ ಸಿಎಂ ಆಗಿದ್ದ ಜಯಲಲಿತಾ ಸಿನಿಮಾ ರಿಲೀಸ್ ಆಗದಂತೆ ಮದ್ರಾಸ್ ಕೋರ್ಟ್ನಿಂದ ಸ್ಟ್ರೇ ತಂದಿದ್ರು.
ಮಧ್ಯರಾತ್ರಿ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಎಸ್ಕೇಪ್
ಅಂದು ಸಿನಿಮಾ ರಿಲೀಸ್ ಬಗ್ಗೆ ದೊಡ್ಡ ಗಲಾಟೆಯಾಗಿತ್ತು. ಆಗ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಸ್ನೇಹಿತನ ಬೆನ್ನಿಗೆ ನಿಂತು, ಸಿಎಂ ಜಯಲಲಿತಾಗೆ ಒಂದೇ ಮಾತು ಹೇಳಿದ್ರಂತೆ. ವಿಶ್ವರೂಪಂ ಸಿನಿಮಾ ರಿಲೀಸ್ ಆಗ್ಲಿಲ್ಲ ಅಂದ್ರೆ ರಜನಿಕಾಂತ್ ಬೀದಿಗಿಳಿತಾನೆ ಅಂತ ಅಂದಿದ್ರಂತೆ. ಆಗ ಜಯಲಲಿತಾ ಅವರು 'ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುತ್ತೆ. ಆದ್ರಿಂದ ಸಿನಿಮಾ ರಿಲೀಸ್ ಮಾಡಿ' ಅಂದ್ರಿದ್ರಂತೆ.. ಹೀಗೆ ರಜನಿಕಾಂತ್ ಮತ್ತು ಕಮಲ್ ಹಾಸನ್ ಸ್ನೇಹ ಅಂದಿನಿಂದ ಇಂದಿನವರೆಗೂ ಗಟ್ಟಿಯಾಗಿದೆ. ಈಗ ಈ ಇಬ್ಬರೂ ನಟರೂ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.