ಕೈಯಲ್ಲಿ ಕೋಟಿ ಬೆಲೆ ಬಾಳುವ ವಾಚ್​, ಕಾಲಲ್ಲಿ ಹರಿದ ಶೂಸ್​: ಇದ್ಯಾವ ಅವತಾರ ಅಂತಿದ್ದಾರೆ ಸಲ್ಲು ಫ್ಯಾನ್ಸ್​!

By Suvarna News  |  First Published Nov 24, 2023, 6:06 PM IST

ಟೈಗರ್​-3 ಪ್ರಮೋಷನ್​ಗೆ ಬಂದ ಸಲ್ಮಾನ್​ ಖಾನ್​  ಹರಿದ ಶೂಸ್​ ಧರಿಸಿ ಜನರ ಗಮನ ಸೆಳೆದಿದ್ದಾರೆ. ನೆಟ್ಟಿಗರಿಂದ ಪರ-ವಿರೋಧದ ನಿಲುವು ವ್ಯಕ್ತವಾಗುತ್ತಿದೆ. 
 


ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್​ ಅಭಿನಯದ ಟೈಗರ್ 3 ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡುತ್ತಿದೆ. 300 ಕೋಟಿ ರೂಪಾಯಿ ಬಜೆಟ್​ನಲ್ಲಿ ತಯಾರಿಸಲಾಗಿರುವ ಈ ಚಿತ್ರ ಇದೇ 12ರಂದು ಬಿಡುಗಡೆಯಾಗಿದೆ.  ಚಿತ್ರವು ಬಿಡುಗಡೆಯಾದ ಮೊದಲ  ಎರಡೇ ದಿನಗಳಲ್ಲಿ ಚಿತ್ರ 100 ಕೋಟಿ ಕ್ಲಬ್ ಸೇರಿದೆ. ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರ ಭರ್ಜರಿಯಾಗಿ ಓಡುತ್ತಿದೆ. ಟೈಗರ್ 3 ಸಿನಿಮಾ  ಆ್ಯಕ್ಷನ್ ಸಿನಿಮಾ ಆಗಿದೆ. ಕತ್ರಿನಾ ಕೈಫ್​ ಅವರ ತುಂಡು ಟವಲ್​ನಲ್ಲಿ ನಡೆಸಿದ ಫೈಟಿಂಗ್​ ಸೀನ್​, ಚಿತ್ರ ಬಿಡುಗಡೆಗೂ ಮುನ್ನವೇ ಸಕತ್​ ಹವಾ ಸೃಷ್ಟಿಸಿತ್ತು. ಚಿತ್ರದಲ್ಲಿಯೂ ಕತ್ರಿನಾ ಅವರ ಆ್ಯಕ್ಷನ್ ದೃಶ್ಯಗಳನ್ನು ಪ್ರೇಕ್ಷಕರು ಮೆಚ್ಚಿದ್ದಾರೆ.  ಇಮ್ರಾನ್ ಹಶ್ಮಿ ವಿಲನ್ ಆಗಿ ನಟಿಸಿದ್ದು,  ಹಿಂದೆಂದೂ ನೋಡಿರದ ಅವತಾರ ಕಂಡು ಫ್ಯಾನ್ಸ್​ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  

 ಇದೇ ಖುಷಿಯಲ್ಲಿ ಸಲ್ಮಾನ್​ ಖಾನ್​ ಸಕ್ಸಸ್​ ಮೀಟ್​ಗೆ ಬಂದಿದ್ದರು. ಆ ಸಂದರ್ಭದಲ್ಲಿ ಅವರ ಶೂಸ್​ ಎಲ್ಲರ ಗಮನ ಸೆಳೆದಿದೆ. ಆ ಶೂಸ್​ ಹರಿದು ಹೋಗಿತ್ತು. ಅಷ್ಟಕ್ಕೂ ಚಿತ್ರ ತಾರೆಯರು ಪಬ್ಲಿಸಿಟಿಗಾಗಿ ಏನು ಬೇಕಾದರೂ ಮಾಡಲು ರೆಡಿ ಇರುತ್ತಾರೆ. ಅದರಲ್ಲಿಯೂ ಸಲ್ಮಾನ್​ ಖಾನ್ ಹೇಳುವುದೇ ಬೇಡ. ಮೊನ್ನೆಯಷ್ಟೇ ಪತ್ರಕರ್ತೆಯೊಬ್ಬರಿಗೆ ಕಿಸ್​ ಕೊಟ್ಟ ಸಕತ್​ ಸುದ್ದಿಯಾಗಿದ್ದರು. ಬಾಲಿವುಡ್​ನ ಮೋಸ್ಟ್​ ಎಲಿಬಿಜಲ್​ ಬ್ಯಾಚುಲರ್​ ಎನಿಸಿಕೊಂಡಿರುವ ಸಲ್ಲು ಭಾಯಿಯ ವಿರುದ್ಧ ಇದಾಗಲೇ ಹಲವು ನಟಿಯರು ಕಿರುಕುಳದ ಆರೋಪ ಮಾಡಿದ್ದೂ ಇದೆ. ಅದೇನೇ ಆದರೂ ಇವರು ತಮ್ಮ ವರ್ಚಸ್ಸನ್ನು ಮಾತ್ರ ಬಿಟ್ಟು ಕೊಡುತ್ತಿಲ್ಲ. ಇದೀಗ ಟೈಗರ್​-3 ಚಿತ್ರದ ಪ್ರಮೋಷನ್​ನಲ್ಲಿಯೂ ಭರ್ಜರಿ ಲುಕ್​ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಹರಿದ ಶೂಸ್​ ಮಾತ್ರ ಎಲ್ಲರ ಗಮನ ಸೆಳೆದಿದೆ. 

Tap to resize

Latest Videos

ಗಂಡ ಹೊರಗಿದ್ದಾನೆ, ಸಲ್ಮಾನ್​ ಖಾನ್​ ಇಲ್ಲೇ ಇದ್ದಾನೆ! ಕತ್ರಿನಾ ಕೈಫ್​ ಉತ್ತರಕ್ಕೆ ಫ್ಯಾನ್ಸ್​ ಸುಸ್ತು...

ಇದಕ್ಕೆ ಪರ-ವಿರೋಧದ ನಿಲುವು ವ್ಯಕ್ತವಾಗುತ್ತಿದೆ. ಸಲ್ಮಾನ್​ ಖಾನ್​ ಫ್ಯಾನ್ಸ್​ ಇವರ ಪರವಾಗಿ ಹೇಳುತ್ತಿದ್ದಾರೆ. ಸಲ್ಲು ಭಾಯಿ  ಸಿಂಪ್ಲಿಸಿಟಿಗೆ  ಹೆಸರಾದವರು. ಶೂಸ್​ ಹರಿದು ಹೋಗಿದ್ದರೂ ಅದನ್ನು ಹಾಕಿಕೊಂಡೇ ಪ್ರಮೋಷನ್​ಗೆ ಬಂದಿದ್ದಾರೆ ಎಂದು ತಮ್ಮ ನಾಯಕನನ್ನು ಹಾಡಿ ಹೊಗಳಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಕೂಡ ಇವರ ಈ ಫೋಟೋಗೆ ಸಕತ್​ ಪಾಸಿಟಿವ್​ ಕಮೆಂಟ್​ ಮಾಡಿದೆ. ಇದೇ  ಕಾರಣಕ್ಕೆ ತಮಗೆ ಸಲ್ಮಾನ್​ ಖಾನ್​ ಇಷ್ಟ ಎಂದಿದ್ದಾರೆ. 

ಆದರೆ ಇದು ಪಬ್ಲಿಸಿಟಿಯ ಪರಮಾವಧಿ ಎಂದು ಇನ್ನಿಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೈಯಲ್ಲಿ ಕೋಟಿ ಬೆಲೆ ಬಾಳುವ ವಾಚ್​ ಧರಿಸಿ, ಕಾಲಲ್ಲಿ ಪಬ್ಲಿಸಿಟಿಗಾಗಿ ಹರಿದ ಶೂಸ್​ ಧರಿಸಿರುವುದು ಯಾವ ಅವತಾರ ಎಂದು ಪ್ರಶ್ನಿಸುತ್ತಿದ್ದಾರೆ. ಬಡವನೊಬ್ಬ ಹರಿದ ಬಟ್ಟೆ ಧರಿಸಿದರೆ ಜನರು ಛೀ ಥೂ ಎನ್ನುತ್ತಾರೆ, ಇಂಥ ಸೆಲೆಬ್ರಿಟಿಗಳು ಪ್ರಚಾರಕ್ಕಾಗಿ ಹೀಗೆಲ್ಲಾ ಮಾಡಿದರೆ ತಲೆ ಮೇಲೆ ಇಟ್ಟುಕೊಂಡು ಕುಣಿದಾಡುತ್ತಾರೆ, ಎಂಥ ಸಮಾಜವಯ್ಯಾ ಎಂದು ಹಲವರು ಹೇಳುತ್ತಿದ್ದಾರೆ. ಒಂದು ವೇಳೆ ಶೂಸ್​ ಹರಿದೇ ಹೋಗಿದ್ದರೂ ಚಿಟಿಕೆ ಹೊಡೆಯುವಷ್ಟರಲ್ಲಿ ಹೊಸ ಶೂಸ್​ ತಂದುಕೊಡಲು ಜನರು ಇರುವಾಗ ಕೇವಲ ಪ್ರಚಾರದ ಗಿಮಿಕ್​ಗಾಗಿ ಹೀಗೆಲ್ಲಾ ವರ್ತಿಸುತ್ತಾರೆ. ಅದಕ್ಕೂ ಫ್ಯಾನ್ಸ್​ ಭೇಷ್​ ಭೇಷ್​ ಎನ್ನುತ್ತಾರೆ ಎಂದು ಹಲವರು ಟೀಕಿಸುತ್ತಿದ್ದಾರೆ. ಫೊಟೋದಲ್ಲಿ ನಟ ಕತ್ರೀನಾ ಕೈಫ್ ಹಾಗೂ ಅಭಿಮಾನಿಯೊಬ್ಬರ ಜೊತೆ ಪೋಸ್ ಕೊಟ್ಟಿದ್ದಾರೆ. ಅವರ ಕ್ಲೋಸಪ್ ಫೋಟೋ ವೈರಲ್ ಆಗಿದೆ.  

ತೆಂಗಿನಕಾಯಿ ತಟ್ಟೆಯಲ್ಲಿನ ಮಾಂಗಲ್ಯವನ್ನು ಆಶೀರ್ವದಿಸುವ ಭಾಗ್ಯ ನನ್ನದಾಗಲಿ: ರೇಪ್​ ಸೀನ್​ ಹೇಳಿಕೆಗೆ ಕ್ಷಮೆ ಕೋರಿದ ನಟ ಖಾನ್​!

click me!