ಬೆಂಗಳೂರಿಗೆ ಬಂದ್ರೆ ಈಗಲೂ ಲವರ್ ಹುಡುಕುವ ರಜನಿಕಾಂತ್; ನಿರ್ಮಲಾ ಸಿಗ್ತಾರಾ?

By Shriram Bhat  |  First Published Dec 13, 2024, 5:28 PM IST

ಅಂದು ಬಸ್ ಕಂಡಕ್ಟರ್ ಆಗಿದ್ದ ಶಿವಾಜಿಗೆ ಬೆಂಗಳೂರಿನಲ್ಲಿ ಎಂಬಿಬಿಎಸ್ ಸ್ಟೂಡೆಂಟ್ ಆಗಿದ್ದ ನಿರ್ಮಲಾ ಎಂಬವರ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು. ಇಬ್ಬರಿಗೂ ಪರಸ್ಪರ ಲವ್ ಆಗಿದ್ದರೂ ಅವರಿಬ್ಬರಲ್ಲಿ ಯಾರೂ ಬಾಯಿ ಬಿಟ್ಟು ಅದನ್ನು ಹೇಳಿಕೊಂಡಿರಲಿಲ್ಲ. ಶಿವಾಜಿ ರಾವ್ ಅವರಿಗೆ ನಾಟಕ-ನಟನೆ ಹುಚ್ಚು ಇದೆ..


ಇಂದಿನ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ಅಂದು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು ಅಂತ ಬಹಳಷ್ಟು ಜನರಿಗೆ ಗೊತ್ತೇ ಇದೆ. ನಾಟಕಗಳಲ್ಲಿ ನಟನೆ ಮಾಡುತ್ತ, ಬಸ್ ನಿರ್ವಾಹಕರಾಗಿ ಜೀವನ ನಡೆಸುತ್ತಿದ್ದ ಶಿವಾಜಿ ರಾವ್ ಗಾಯಕವಾಡ್ (ರಜನಿಕಾಂತ್) ಅವರಿಗೆ ಆಗೊಂದು ಲವ್ ಆಗಿಹೋಗಿತ್ತು. ಆದರೆ, ಅದು ಲವ್ ಎಂಬುದು ಸ್ವತಃ ಶಿವಾಜಿಗೂ (Shivaji Rao Gaikwad) ಅಂದು ಗೊತ್ತಿರಲಿಲ್ಲ ಎನ್ನಬಹುದು. ಕಾರಣ, ಆ ವಯಸ್ಸೇ ಹಾಗೆ.. ಯಾವುದು ಲವ್, ಯಾವುದು ಕ್ರಶ್ ಎಂಬುದು ತಕ್ಷಣಕ್ಕೆ ಗೊತ್ತಾಗಲ್ಲ..!

ಹೌದು, ಅಂದು ಬಸ್ ಕಂಡಕ್ಟರ್ ಆಗಿದ್ದ ಶಿವಾಜಿಗೆ ಬೆಂಗಳೂರಿನಲ್ಲಿ ಎಂಬಿಬಿಎಸ್ (MBBS) ಸ್ಟೂಡೆಂಟ್ ಆಗಿದ್ದ ನಿರ್ಮಲಾ ಎಂಬವರ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು. ಇಬ್ಬರಿಗೂ ಪರಸ್ಪರ ಲವ್ ಆಗಿದ್ದರೂ ಅವರಿಬ್ಬರಲ್ಲಿ ಯಾರೂ ಬಾಯಿ ಬಿಟ್ಟು ಅದನ್ನು ಹೇಳಿಕೊಂಡಿರಲಿಲ್ಲ. ಶಿವಾಜಿ ರಾವ್ ಅವರಿಗೆ ನಾಟಕ-ನಟನೆ ಹುಚ್ಚು ಇದೆ ಎಂಬುದನ್ನು ನಿರ್ಮಲಾ ಅವರು ಅರ್ಥ ಮಾಡಿಕೊಂಡಿದ್ದರು. ನಿರ್ಮಲಾ-ಶಿವಾಜಿ ಇಬ್ಬರೂ ಬಸ್ಸಿನಲ್ಲಿ ಸಿಕ್ಕಾಗ ಒಂದೇ ಕಡೆ ಕುಳಿತು ಪರಸ್ಪರ ಮಾತನ್ನಾಡಿಕೊಳ್ಳುತ್ತಿದ್ದರು. 

Tap to resize

Latest Videos

ದರ್ಶನ್‌ಗೆ ಬೇಲ್ ಸಿಕ್ಕ ಬೆನ್ನಲ್ಲಿಯೇ ದೇವರಿಗೆ ಹೂ ಅರ್ಪಿಸಿದ ಪತ್ನಿ ವಿಜಯಲಕ್ಷ್ಮಿ!

ಹೀಗಿರುವಾಗ, ಚೆನ್ನೈನಲ್ಲಿರುವ ನಟನಾ ತರಬೇತಿ ಸಂಸ್ಥೆಗೆ ತಮ್ಮ ಹೆಸರಲ್ಲಿ ಅರ್ಜಿ ಹಾಕಿ, ಅಲ್ಲಿಗೆ ರಜನಿಕಾಂತ್ ಅವರು ಹೋಗುವಂತೆ ಮಾಡಿದ್ದಾರೆ ನಿರ್ಮಲಾ. ಗೆಳತಿ ಸಲಹೆಯಂತೆ ಅವರು ಕೊಟ್ಟ 500 ರೂಪಾಯಿ ಹಿಡಿದುಕೊಂಡು ಶಿವಾಜಿ ರಾವ್ ಅವರು ಚೆನ್ನೈಗೆ ಹೋಗಿ ಅಲ್ಲಿ ಆಕ್ಟಿಂಗ್ ಸ್ಕೂಲ್ ಸೇರಿಕೊಂಡಿದ್ದಾರೆ. ಆಗ ಈಗಿನಂತೆ ಎಲ್ಲರ ಬಳಿ ಫೋನ್ ಇರಲಿಲ್ಲ. ಅಪರೂಪಕ್ಕೆ ಲ್ಯಾಂಡ್‌ಲೈನ್ ಕೂಡ ಇರಲಿಲ್ಲ. ಹೀಗಾಗಿ ಎಲ್ಲದಕ್ಕೂ ಪತ್ರವೇ ಗತಿ ಎಂಬಂತಿತ್ತು. ಹೀಗಾಗಿ ಅವರಿಬ್ಬರ ಭೇಟಿ, ಕಾಂಟಾಕ್ಟ್ ತಪ್ಪಿ ಹೋಗಿತ್ತು. 

undefined

ಸ್ವಲ್ಪ ಕಾಲದ ಬಳಿಕ, ಅದೊಂದು ದಿನ ಬೆಂಗಳೂರಿಗೆ ಬಂದ ಶಿವಾಜಿ ರಾವ್ ತಮ್ಮ ಗೆಳತಿ ನಿರ್ಮಲಾರನ್ನು ಹುಡುಕಿಕೊಂಡು ಅವರ ಹನುಮಂತನಗರದ ಮನೆ ಬಳಿಗೆ ಹೋದರೆ, ಅಲ್ಲಿ ಅವರು ಇರಲೇ ಇಲ್ಲ. ಎಲ್ಲಿಗೆ ಹೋಗಿದ್ದಾರೆ ಎಂಬುದು ಕೂಡ ಗೊತ್ತಾಗಲಿಲ್ಲ. ನೋವಿನಲ್ಲೇ ಶಿವಾಜಿರಾವ್ ವಾಪಸ್ ಹೋಗಿದ್ದಾರೆ. ಆದರೆ, ಬೆಂಗಳೂರಿಗೆ ಬಂದಾಗಲೆಲ್ಲ ಅವರ ಕಣ್ಣು ನಿರ್ಮಲಾರಿಗಾಗಿ ಹುಡುಕುತ್ತಾ ಇರುತ್ತದೆ ಎನ್ನಲಾಗಿದೆ. ಆದರೆ, ಅವರಿನ್ನೂ ಮತ್ತೆ ಸಿಕ್ಕಿಲ್ಲ. ಈಗಲೂ ಹುಡುಕಾಟ ಮುಂದುವರಿದಿದೆ. 

ಹುಟ್ಟುಹಬ್ಬದ ಸಂಭ್ರಮದಲ್ಲಿ ಸೂಪರ್​ಸ್ಟಾರ್ ರಜನಿ ! 74ರ ಹರೆಯದಲ್ಲೂ ಫುಲ್ ಜೋಶ್‌!

ಅದಿರಲಿ, ಅಲ್ಲಿ ಚೆನ್ನೈನಲ್ಲಿ ತರಬೇತಿ ಪಡೆದ ಶಿವಾಜಿ ರಾವ್ ಅವರು ಬಳಿಕ ರಜನಿಕಾಂತ್ ಹೆಸರಿನಿಂದ ಸೂಪರ್ ಸ್ಟಾರ್ ಆಗಿ ಬೆಳೆದಿದ್ದು ಈಗ ಎಲ್ಲರಿಗೂ ಗೊತ್ತಿದೆ. ಆದರೆ ಅಂದು, ಗೆಳತಿ ನಿರ್ಮಲಾ ಹಾಗು ಆ ಬಸ್ಸಿನ ಡ್ರೈವರ್ ಆಗಿದ್ದ ರಾವ್ ಬಹಾದ್ದೂರ್ ಹೆಸರಿನ ವ್ಯಕ್ತಿ ಇಬ್ಬರೂ ಸಹಾಯ ಮಾಡದಿದ್ದರೆ ಬಹುಶಃ ಶಿವಾಜಿ ರಾವ್ ಅವರು ಈಗ ಏನಾಗಿರುತ್ತಿದ್ದರೋ ಏನೋ! ಆದರೆ, ಅವರಿಬ್ಬರ ಸಹಾಯವೇನೋ ಸಿಕ್ಕಿತು, ಸ್ಟಾರ್ ಆಗಿದ್ದೂ ಆಯ್ತು. ಆದರೆ, ಗೆಳತಿಯೇ ನಾಪತ್ತೆ ಆಗಿದ್ದಾರೆ!

ಇಂದಿಗೂ ಕೂಡ ನಟ ರಜನಿಕಾಂತ್ ಅವರಿಗೆ ತಮ್ಮ ಹಳೆಯ ಗೆಳತಿ-ಪ್ರೇಯಸಿಯನ್ನು ಮರೆಯಲು ಆಗುತ್ತಿಲ್ಲವಂತೆ. ಅಂದು ತಮ್ಮಿಬ್ಬರ ಮಧ್ಯೆ ಇದ್ದ ಆತ್ಮೀಯತೆ, ನಿರ್ಮಲಾ ಮಾಡಿದ್ದ ಸಹಾಯವನ್ನು ನೆನೆದು ಈಗಲೂ ನಟ ರಜನಿಕಾಂತ್ ಅವರು ಕಣ್ಣೀರು ಹಾಕುತ್ತಾರೆ. ಆ ಬಳಿಕ ಅವರು ನಟಿ ಶ್ರೀದೇವಿಯವರನ್ನು ಇಷ್ಟಪಟ್ಟಿದ್ದರು. ಅವರು ರಜನಿಗೆ ಸಿಗಲಿಲ್ಲ, ಬಳಿಕ ಲತಾ ಅವರನ್ನು ಪ್ರೀತಿಸಿ ಮದುವೆಯಾಗಿ ಸಂಸಾರವನ್ನು ಈಗಲೂ ಮಾಡಿಕೊಂಡಿದ್ದಾರೆ. 

ಸಬ್ಸಿಡಿ ಹಣ, ರಾಜ್ಯ ಪ್ರಶಸ್ತಿಗಾಗಿ ರೂಪಾ ಅಯ್ಯರ್ ಹೋರಾಟ; ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

ಆದರೂ ತಮ್ಮ ಫಸ್ಟ್ ಲವ್ ಮರೆಯಲು ಆಗುತ್ತಿಲ್ಲ. ಇದನ್ನು ಸ್ವತಃ ರಜನಿಕಾಂತ್ ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಇನ್ನೂ ಸಿಕ್ಕಿಲ್ಲ, ಮುಂದೆ ಸಿಗ್ತಾರಾ? ಯಾರಿಗೆ ಗೊತ್ತು? ಅಂದಹಾಗೆ, ನಟ ರಜನಿಕಾಂತ್ ಅವರು ತಮ್ಮ ಹುಟ್ಟುಹಬ್ಬವನ್ನು ನಿನ್ನೆ (12 December) ಆಚರಿಸಿಕೊಂಡಿದ್ದಾರೆ. ಈಗಲೂ ಸೂಪರ್ ಸ್ಟಾರ್ ರಜನಿ ಅವರು ಎನರ್ಜಿಟಿಕ್ ಆಗಿದ್ದಾರೆ. 

click me!