ಎಲ್ಲಾ ಕಡೆ ಒಳ ಉಡುಪು ಹಾಕಿದ್ದೆ, ನಿಮಗೆ ಕಾಣಿಸ್ಲಿಲ್ಲ: ಸಮಜಾಯಿಷಿ ಕೊಟ್ಟು ಮತ್ತೆ ಎಡವಟ್ಟು ಮಾಡಿಕೊಂಡ ಪೂನಂ ಪಾಂಡೆ !

Published : Dec 13, 2024, 12:05 PM ISTUpdated : Dec 13, 2024, 12:20 PM IST
ಎಲ್ಲಾ ಕಡೆ ಒಳ ಉಡುಪು ಹಾಕಿದ್ದೆ, ನಿಮಗೆ ಕಾಣಿಸ್ಲಿಲ್ಲ: ಸಮಜಾಯಿಷಿ ಕೊಟ್ಟು ಮತ್ತೆ ಎಡವಟ್ಟು ಮಾಡಿಕೊಂಡ ಪೂನಂ ಪಾಂಡೆ !

ಸಾರಾಂಶ

ದಿವ್ಯಾ ಅಗರ್ವಾಲ್ ಹುಟ್ಟುಹಬ್ಬದಲ್ಲಿ ಪೂನಂ ಪಾಂಡೆ ಒಳ ಉಡುಪು ಧರಿಸದೆ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದೆ. ಈ ಘಟನೆಗೆ ಸಮಜಾಯಿಷಿ ನೀಡಲು ಯತ್ನಿಸಿದರೂ, ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ. ಪ್ರಚಾರಕ್ಕಾಗಿಯೇ ಈ ರೀತಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.  

 ಹಾಟೆಸ್ಟ್​ ನಟಿ, ಮಾದಕ ತಾರೆ ಎಂದೇ ಖ್ಯಾತಿ ಪಡೆದ, ಸದಾ ತಮ್ಮ ಬಟ್ಟೆಗಳಿಂದಲೇ ವಿವಾದದಲ್ಲಿಯೂ ಇರೋ ಬಾಲಿವುಡ್​​ ನಟಿ  ಪೂನಂ ಪಾಂಡೆಯ ಮತ್ತೊಂದು ಅಶ್ಲೀಲತೆಯ ವಿಡಿಯೋ ನಿನ್ನೆ ವೈರಲ್‌ ಆಗಿತ್ತು.  ನಟಿ ದಿವ್ಯಾ ಅಗರ್ವಾಲ್‌ ಅವರ ಹುಟ್ಟುಹಬ್ಬಕ್ಕೆ ಹೋಗಿದ್ದ ನಟಿ ಕೆಳಗಿನ ಒಳ ಉಡುಪು ಧರಿಸದೇ ಇರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಪೂನಂ ಪಾಂಡೆಯನ್ನು ಕಂಡು ಖುಷಿಯಿಂದ ದಿವ್ಯಾ ತಬ್ಬಿಕೊಂಡಾಗ, ಬಟ್ಟೆ ಮೇಲೆ ಹೋಗಿದೆ. ಆಗ ಕೆಳಗಿನ ಒಳ ಉಡುಪು  ಧರಿಸದೇ ಇರುವುದು ಕಂಡು ಬಂದಿದೆ. ಇನ್ನು ಪಾಪರಾಜಿಗಳಿಗೆ ಕೇಳಬೇಕಾ? ಜೋರಾಗಿ ಕೂಗಿದ್ದಾರೆ. ಆ ಸಂದರ್ಭದಲ್ಲಿ ನಟಿ ಹಿಂಬದಿ ಕೈಯಿಟ್ಟು ಅದನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಏನೂ ಆಗಿಲ್ಲ ಎನ್ನುವಂತೆ ನಗುತ್ತಿರುವುದನ್ನು ಕೂಡ ಈ ವಿಡಿಯೋದಲ್ಲಿ ನೋಡಬಹುದಾಗಿದೆ!

ಇದು ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದಾರೆ ಪೂನಂ ಪಾಂಡೆ. ಒಳ್ಳೆಯ ವಿಡಿಯೋಗಳು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುವುದು ತುಂಬಾ ಕಮ್ಮಿ. ಆದರೆ ಇಂಥ ವಿಡಿಯೋಗಳು ಮಾತ್ರ ಕ್ಷಣ ಮಾತ್ರದಲ್ಲಿ ವಿಶ್ವಾದ್ಯಂತ ವೈರಲ್‌ ಆಗುವುದೂ ಇದೆ. ಇಷ್ಟು ವೈರಲ್‌ ಆಗುತ್ತಿದ್ದಂತೆಯೇ ತಾವು ಒಳ ಉಡುಪು ಧರಿಸಿರುವುದಾಗಿ ಸಮಜಾಯಿಷಿ ಕೊಡಲು ವಿಡಿಯೋ ಮಾಡಿರುವ ನಟಿ, 'ನಿನ್ನೆಯ ವಿಡಿಯೋ ಸಾಕಷ್ಟು ವೈರಲ್‌ ಆಗಿವೆ. ಅಲ್ಲಿದ್ದ ಕ್ಯಾಮೆರಾಮೆನ್‌ಗಳು ದಿಖ್‌ಗಯಾ ದಿಖ್‌ಗಯಾ (ಕಂಡೇ ಬಿಡ್ತು, ಕಂಡೇ ಬಿಟ್ಟಿತು) ಎಂದು ಕೂಗಿದ್ದಾರೆ. ಈ ಸಂದರ್ಭದಲ್ಲಿ ನನಗೆ ನೆನಪಾಗುವುದು ಒ೦ದು ಮೀಮ್ಸ್‌, ಅದೇನೆಂದ್ರೆ ಯಾವ ಬಣ್ಣದ ಚೆಡ್ಡಿ ಧರಿಸಿದ್ದಿ, ಎಂದು ಹೇಳಿದ್ದಾರೆ. ಈ ಮೂಲಕ, ತಾವು ಚೆಡ್ಡಿಯನ್ನು ಧರಿಸಿರುವುದಾಗಿ ಸಮಜಾಯಿಷಿ ಕೊಡಲು ಹೋಗಿದ್ದಾರೆ! 

ಸ್ನೇಹಿತೆ ಎತ್ತಿದ ರಭಸಕ್ಕೆ ಕಾಣಬಾರದ್ದೆಲ್ಲಾ ಕಂಡೋಯ್ತು! ವೈರಲ್‌ ವಿಡಿಯೋ ಝೂಮ್‌ ಮಾಡಿ ಮಾಡಿ ನೋಡ್ತಿರೋ ನೆಟ್ಟಿಗರು!

ಆದರೆ ಟ್ರೋಲಿಗರು ಕೇಳಬೇಕೆ? ಎಲ್ಲವನ್ನೂ ನೋಡಿಯಾಗಿದೆ. ಇನ್ನೇನೂ ನೋಡುವುದು ಬಾಕಿ ಇಲ್ಲ. ಮೇಲಿಂದೆಲ್ಲಾ ಪ್ರತಿದಿನವೂ ಪ್ರದರ್ಶನ ಮಾಡುತ್ತಲೇ ಇರುತ್ತಿ, ಇದೀಗ ಕೆಳಗಿನ ದರ್ಶನವೂ ಆಗಿದೆ. ಈಗ ಸಮಜಾಯಿಷಿ ಕೊಟ್ಟು ಏನೂ ಪ್ರಯೋಜನ ಇಲ್ಲ ಎಂದು ಹಲವರು ಹೇಳಿದ್ದಾರೆ. ಮತ್ತೆ ಕೆಲವರು, ಈ ವಿಡಿಯೋ ನೋಡಿದ ಮೇಲೆ ಆ ವಿಡಿಯೋ ಅನ್ನು ನೋಡಲಿ ಎನ್ನುವ ಕಾರಣಕ್ಕೆ ಸಮಜಾಯಿಷಿ ಕೊಡಲು ಬಂದಿದ್ದಾಳೆ ಅಷ್ಟೇ, ಒಟ್ಟಿನಲ್ಲಿ ಈಕೆಗೆ ಪ್ರಚಾರದಲ್ಲಿ ಇರಬೇಕು. ಅದು ಸಿಕ್ಕಿದೆ ಎಂದಿದ್ದಾರೆ. ಒಳ ಉಡುಪು ಧರಿಸದೇ ಬಂದಿರುವ ಕಾರಣವೂ ಪ್ರಚಾರವೇ ಆಗಿದೆ. ಅದು ಇನ್ನಷ್ಟು ಪ್ರಚಾರ ಆಗಬೇಕು ಎನ್ನುವ ಕಾರಣಕ್ಕೆ ಮತ್ತೊಂದು ವಿಡಿಯೋ ಮಾಡುತ್ತಿದ್ದಾಳೆ ಎಂದು ಟ್ರೋಲ್‌ ಮಾಡುತ್ತಿದ್ದಾರೆ. 

ಅಷ್ಟಕ್ಕೂ, ಪೂನಂ ಪಾಂಡೆ ಸದಾ ವಿವಾದದಲ್ಲಿ ಇರುವ ನಟಿಯೇ.  ಕೆಲ ತಿಂಗಳ ಹಿಂದೆ ಇವರ ಸಾವಿನ ಸುದ್ದಿ ಅಭಿಮಾನಿಗಳನ್ನು ಇನ್ನಿಲ್ಲದಂತೆ ಕಾಡಿತ್ತು.  ಈಕೆ ಸತ್ತರೆಂಬ ಸುದ್ದಿ ಇಂಡಸ್ಟ್ರಿಗೆ ಬರಸಿಡಿಲು ಬಡಿದಿತ್ತು. ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ ಎಂಬ ಸುದ್ದಿ ಬಂತು. ಗರ್ಭಕಂಠದ ಕ್ಯಾನ್ಸರ್​ ಅವರನ್ನು ಬಲಿ ತೆಗೆದುಕೊಂಡಿತು ಎನ್ನಲಾಗಿತ್ತು.  ಇದಕ್ಕೆ ಕಾರಣ, ಪೂನಂ ತಂಗಿ ಹೇಳಿದ ಮಾತು.  ಅಕ್ಕ ಗರ್ಭಕಂಠ ಕ್ಯಾನ್ಸರ್​ ಸತ್ತಿದ್ದಾಗಿ ಹೇಳಿದ್ದರು. ಆದರೆ ಆಕೆಯ ಮೃತದೇಹ ಸಿಗದ ಕಾರಣ ಹಾಗೂ ಕುಟುಂಬಸ್ಥರ ಫೋನ್​ಗಳು ಸ್ವಿಚ್​ ಆಫ್​ ಆಗಿದ್ದರಿಂದ ಅನುಮಾನ ಹುಟ್ಟಿದ ಬೆನ್ನಲ್ಲೇ ನಟಿ ಖುದ್ದು ವಿಡಿಯೋ ಮೂಲಕ ತಾನು ಸತ್ತಿಲ್ಲ ಎಂದು ಹೇಳಿದ್ದರು. ಆಗ ನಟಿಯ ವಿರುದ್ಧ ಎಲ್ಲರೂ ಗರಂ ಆಗಿದ್ದರೂ,   ನಟಿಯ ವರ್ಚಸ್ಸಿಗೆ ಏನೂ ಕಡಿಮೆ ಇಲ್ಲ. ಇವೆಲ್ಲಾ ಸುದ್ದಿಗಳ ಬಳಿಕವೂ ಸೋಷಿಯಲ್​ ಮೀಡಿಯಾದಲ್ಲಿ ಹಾಟ್​ ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇದ್ದಾರೆ. ಜಾಹೀರಾತು ಕಂಪೆನಿಗಳಿಂದಲೂ ಒಳ್ಳೆಯ ಆಫರ್​ಗಳು ಬರುತ್ತಲೇ ಇವೆ. ಇದೀಗ ನದಿ ತೀರದಲ್ಲಿ ಬಿಕಿನಿ ತೊಟ್ಟು ವಿಡಿಯೋ ಶೂಟ್​ ಮಾಡಿಸಿಕೊಂಡಿದ್ದಾರೆ. ಆದರೆ ಬಹುತೇಕ ನಟಿಯರು ಬಿಕಿನಿ ಧರಿಸಲು ಪೈಪೋಟಿ ಬಿದ್ದವರಂತೆ ಕಾಣುತ್ತಿದ್ದರಿಂದಲೋ ಏನೋ, ಎಲ್ಲರಿಗಿಂತ ಭಿನ್ನವಾಗಿ ಇರುವ ಹಂಬಲದಿಂದ ನಟಿ, ಈಗ ಈ ರೀತಿ ಮಾಡಿದ್ದಾರೆ ಎಂದೇ ಅಂದುಕೊಳ್ಳಲಾಗುತ್ತಿದೆ. 

ಮನೆಯವರನ್ನು ವಿರೋಧಿಸಿ ಮದ್ವೆಯಾದ್ವಿ: ಆದ್ರೆ ಕೊನೆಗೆ ಸಾಯುವ ಹಂತಕ್ಕೆ ಬಂದೆ... ಕಿರಿಕಿ ಕೀರ್ತಿ ಓಪನ್‌ ಮಾತು...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಿದ ವಿದೇಶಿ ನಟಿಯರು ಯಾರ್ಯಾರು? ಒಬ್ಬರು ಚೀನಾದಿಂದ ಬಂದವರು!
'ಮದುವೆಯಾಗಲು ವಯಸ್ಸಿದ್ದರೆ ಸಾಲದು.. ಬೇಕಾಗಿರುವುದು ಅದೇ'.. ನಟಿ ಪ್ರಗತಿ ಹೇಳಿಕೆ ವೈರಲ್