ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಬಿಡುಗಡೆಯಾಗಿದೆ. ಈಗಾಗಲೇ ಚಿತ್ರದ ಟ್ರೈಲರ್, ಕಾವಾಲಿ ಹಾಡು ಸಖತ್ ಮೋಡಿ ಮಾಡಿದೆ. ಮೊದಲ ದಿನ ಮೊದಲ ಶೋ ನೋಡಲು ಅಭಿಮಾನಿಗಳು ಫುಲ್ ಮುಗಿಬಿದ್ದಿದ್ದಾರೆ. ರಜನೀಕಾಂತ್‌ರನ್ನು ಬರೋಬ್ಬರಿ ಎರಡು ವರ್ಷದ ಬಳಿಕ ಬಿಗ್ ಸ್ಕ್ರೀನ್ ನಲ್ಲಿ ನೋಡಲು ಜನ ಥಿಯೇಟರ್ ನತ್ತ ಹರಿದು ಬರುತ್ತಿದ್ದಾರೆ. ಮುಂಜಾನೆಯಿಂದಲೇ ಹೆಚ್ಚಿನ ಥಿಯೇಟರ್‌ಗಳು ಹೌಸ್‌ಫುಲ್ ಆಗಿದ್ದವು. ರಜನಿಕಾಂತ್ ಅವರ ಅಭಿಮಾನಿಗಳು ಯಾವುದೇ ಗಡಿಗಳನ್ನು ಹೊಂದಿಲ್ಲ ಮತ್ತು ಅವರ ಇತ್ತೀಚಿನ ಬಿಡುಗಡೆಯಾದ 'ಜೈಲರ್' ಕ್ರೇಜ್ ಅದನ್ನು ಸಾಬೀತುಪಡಿಸುತ್ತದೆ.
ಚೆನ್ನೈ ಹಾಗೂ ಬೆಂಗಳೂರಿನ ಕೆಲ ಕಚೇರಿಗಳಲ್ಲಿ ಜೈಲರ್ ಸಿನಿಮಾ ವೀಕ್ಷಣೆಗೆ ರಜೆ (Holiday) ಘೋಷಿಸಲಾಗಿದೆ. ಈಗಾಗಲೇ ದೇಶಾದ್ಯಂತ 8.2 ಕೋಟಿ ರು. ಬೆಲೆಯ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲಾಗಿದೆ. ನೆಲ್ಸನ್ ದಿಲೀಪ್‌ಕುಮಾರ್ ಚಿತ್ರವನ್ನು ನಿರ್ದೇಶಿಸಿದ್ದು, ಸಿನಿಮಾದಲ್ಲಿ ರಜನೀಕಾಂತ್ ನಿವೃತ್ತ ಪೊಲೀಸ್ ಅಧಿಕಾರಿಯ (Police officer) ಪಾತ್ರ ನಿರ್ವಹಿಸಿದ್ದಾರೆ. ಜೈಲರ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಸಣ್ಣ ಪಾತ್ರದಲ್ಲಿ ಶಿವರಾಜ್ ಕುಮಾರ್ ಕೂಡ ರಜನಿಕಾಂತ್ ಜೊತೆ ಕಾಣಿಸಿಕೊಂಡಿದ್ದರೆ.
ಅಯ್ಯೋ! ಬೆಂಗಳೂರಿನಲ್ಲಿ ಜೈಲರ್ ಸಿನಿಮಾಗೆ 2200 ರೂ.; ಕನ್ನಡ ಚಿತ್ರಕ್ಕೆ ಬೆಲೆ ಇಲ್ಲ, ಕನ್ನಡಿಗರು ಗರಂ
'ರಜಿನಿ' ಕ್ರೇಜ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸೂಪರ್‌ಸ್ಟಾರ್ ರಜನೀಕಾಂತ್‌ಗೆ ರಾಜ್ಯವನ್ನು ಮೀರಿ, ದೇಶ-ವಿದೇಶಗಳಲ್ಲೂ ಕೋಟ್ಯಾಂತರ ಅಭಿಮಾನಿಗಳಿದ್ದಾರೆ (Fans). ರಜಿನಿ ಸ್ಟೈಲ್, ಮ್ಯಾನರಿಸಂನ್ನು ಕಾಪಿ ಮಾಡೋಕೆ ಟ್ರೈ ಮಾಡ್ತಾರೆ. ಆದರೆ ತಲೈವಾ ಸಿನಿಮಾ ನೋಡೋಕೆ ದಂಪತಿ ಜಪಾನ್‌ನಿಂದ ಚೆನ್ನೈಗೆ ಬಂದಿದ್ರು ಅಂದ್ರೆ ನೀವ್ ನಂಬ್ತೀರಾ? ಅಂಥಹದ್ದೊಂದು ಘಟನೆ ನಡೆದಿದೆ
ಜಪಾನ್ ಮೂಲದ ದಂಪತಿಗಳು (Japanese couple) ರಜಿನಿಕಾಂತ್ ಅವರ ಜೈಲರ್ ಸಿನಿಮಾವನ್ನು ನೋಡಲು ಚೆನ್ನೈಗೆ ಬಂದಿದ್ದಾರೆ. ಜಪಾನ್ ನ ಒಸಾಕಾದಿಂದ ಚೆನ್ನೈಗೆ ಯಸುದಾ ಹಿಡೆತೋಶಿ ದಂಪತಿ ಬಂದಿದ್ದು, ಜೈಲರ್ ಸಿನಿಮಾವನ್ನು ವೀಕ್ಷಿಸಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ, ಅಲ್ಲಿ ಜಪಾನಿನ ದಂಪತಿಗಳು ಇತರ ಅಭಿಮಾನಿಗಳೊಂದಿಗೆ ಥಿಯೇಟರ್‌ನಲ್ಲಿ ರಜನಿಕಾಂತ್ ಅವರ ಚಿತ್ರವನ್ನು ವೀಕ್ಷಿಸುವ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. 'ನಾವು ಜೈಲರ್ ಸಿನಿಮಾ ನೋಡಲು ಜಪಾನ್ ನಿಂದ ಚೆನ್ನೈಗೆ ಬಂದಿದ್ದೇವೆ. ನಾನು ರಜನಿಕಾಂತ್ ಅವರ ದೊಡ್ಡ ಅಭಿಮಾನಿ. ಮೊದಲಿನಿಂದಲೂ ಅವರ ಸಿನಿಮಾವನ್ನು ನೋಡುತ್ತಾ ಬೆಳೆದಿದ್ದೇನೆ' ಎಂದು ತಿಳಿಸಿದ್ದಾರೆ.
JAILER ಚಿತ್ರಕ್ಕೆ ರಜನಿಕಾಂತ್ ಈ ಪರಿ ಸಂಭಾವನೆನಾ? ಶಿವರಾಜ್ಕುಮಾರ್, ತಮನ್ನಾ ಪಡೆದದ್ದೆಷ್ಟು?
'ಮುತ್ತು' (1998) ಸಿನಿಮಾದಿಂದ ಆರಂಭವಾದ ದಂಪತಿಯ ರಜನಿ ಅಭಿಮಾನ ಇದುವರೆಗೂ ಮುಂದುವರೆದಿದೆ. ಮುತ್ತು ಜಪಾನ್ ನಲ್ಲಿ 100 ದಿನ ಓಡಿತ್ತು. 2002 ರಲ್ಲಿ ಮೊದಲ ಬಾರಿ ರಜಿನಿಕಾಂತ್ ಅವರನ್ನು ಹಿಡೆತೋಶಿ ಭೇಟಿಯಾಗಿದ್ದರು. ಹಿಡೆತೋಶಿ ಜಪಾನ್‌ನಲ್ಲಿ ರಜಿನಿಕಾಂತ್ ಅಭಿಮಾನಿಗಳ ಸಂಘದ ನಾಯಕರಾಗಿದ್ದಾರೆ. ಜೈಲರ್‌ನಲ್ಲಿ ನನ್ನ ಮೆಚ್ಚಿನ ಡೈಲಾಗ್ಸ್ ʼಹುಕುಂ ಟೈಗರ್ ಕಾ ಹುಕುಂ ಎಂದು ಹಿಡೆತೋಶಿ ಹೇಳುತ್ತಾರೆ.
ಜೈಲರ್ ಸಿನಿಮಾ ಬಿಡುಗಡೆಗೂ ಮೊದಲು ಹಿಮಾಲಯಕ್ಕೆ ತೆರಳಿದ ರಜನಿಕಾಂತ್!
ಭಾರಿ ಕುತೂಹಲ ಕೆರಳಿಸಿರುವ ಜೈಲರ್ ಸಿನಿಮಾ ಬಹು ತಾರಾಗಣಗಳನ್ನು ಹೊಂದಿದೆ. ಹೀಗಾಗಿ ನಿರೀಕ್ಷೆಗಳು ಹೆಚ್ಚಾಗಿದೆ. ಆದರೆ ಬಿಡುಗಡೆಗೂ ಒಂದು ದಿನ ಮೊದಲೇ ರಜನಿಕಾಂತ್ ಹಿಮಾಲಯ ಪ್ರವಾಸ ಮಾಡಿದ್ದಾರೆ. ಕೋವಿಡ್ ಕಾರಣಗಳಿಂದ ಕಳೆದ ನಾಲ್ಕು ವರ್ಷಗಳಿಂದ ರಜನಿಕಾಂತ್ ಹಿಮಾಲಯ ಪ್ರಯಾಣ ಮಾಡಿರಲಿಲ್ಲ. ಇದೀಗ ಜೈಲರ್ ಸಿನಿಮಾ ಬಿಡುಗಡೆಗೂ ಮೊದಲೇ ಹಿಮಾಲಯ ಪ್ರವಾಸ ಮಾಡಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ರಜನಿಕಾಂತ್, ಹೌದು ಹಿಮಾಲಯ ಪ್ರವಾಸ ಮಾಡುತ್ತಿದ್ದೇನೆ. ಕೋವಿಡ್ ಕಾರಣಗಳಿಂದ ಕಳೆದ ನಾಲ್ಕು ವರ್ಷ ಹಿಮಾಲಯ ಪ್ರವಾಸ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇದೀಗ ಮಾಡುತ್ತಿದ್ದೇನೆ ಎಂದರು. ಇನ್ನು ಜೈಲರ್ ಸಿನಿಮಾ ಹೇಗಿದೆ ಅನ್ನೋ ಪ್ರಶ್ನೆಗೆ, ಅದನ್ನು ನೀವು ವೀಕ್ಷಿಸಿ ಹೇಳಬೇಕು ಎಂದು ರಜನಿಕಾಂತ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.