ಮಾತಾಡಲು ಭಯವಾಗ್ತಿದೆ, ಕುಟುಂಬವನ್ನು ನಿಂದಿಸುತ್ತಾರೆ, ಮಗಳನ್ನು..: ಆತಂಕ ಹೊರ ಹಾಕಿದ ಸುನಿಲ್ ಶೆಟ್ಟಿ

Published : Apr 23, 2023, 04:33 PM IST
ಮಾತಾಡಲು ಭಯವಾಗ್ತಿದೆ, ಕುಟುಂಬವನ್ನು ನಿಂದಿಸುತ್ತಾರೆ, ಮಗಳನ್ನು..: ಆತಂಕ ಹೊರ ಹಾಕಿದ ಸುನಿಲ್ ಶೆಟ್ಟಿ

ಸಾರಾಂಶ

ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಇಂದಿನ ಸಾಮಾಜಿಕ ಜಾಲತಾಣ ಸೃಷ್ಟಿಸಿದ ಭಯದ ಬಗ್ಗೆ ಮಾತನಾಡಿದ್ದಾರೆ. ಮಾತನಾಡಲು ಹೆದರಿಕೆ ಆಗುತ್ತೆ ಎಂದು ಹೇಳಿದ್ದಾರೆ. 

ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಸಾಮಾಜಿಕ ಜಾಲತಾಣದ ಬಗ್ಗೆ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣವು ಎಷ್ಟು ಒಳ್ಳೆಯದು ಅಷ್ಟೇ ಕೆಟ್ಟದ್ದು ಕೂಡ ಹೌದು. ಸಾಮಾಜಿಕ ಜಾಲತಾಣದಿಂದ ಒಬ್ಬರ ಜೀವನವನ್ನು ಹೇಗೆ ನಾಶಪಡಿಸುತ್ತದೆ ಎಂದು ಸುನಿಲ್ ಶೆಟ್ಟಿ ಬಹಿರಂಗ ಪಡಿಸಿದರು. ಕೆಲವೊಮ್ಮೆ ಮಾತನಾಡಲು ಕೂಡ ಭಯವಾಗುತ್ತದೆ ಎಂದು ಸುನಿಲ್ ಶೆಟ್ಟಿ ಹೇಳಿದ್ದಾರೆ. ಕುಟುಂಬವನ್ನು ನಿಂದಿಸಿದಾಗ ತುಂಬಾ ನೋವಾಗುತ್ತದೆ ಎಂದು ಸುನಿಲ್ ಶೆಟ್ಟಿ ಬಹಿರಂಗ ಪಡಿಸಿದರು. ಇತ್ತೀಚೆಗಷ್ಟೆ ನಟ ಸುನಿಲ್ ಶೆಟ್ಟಿ ರಣ್ವೀರ್ ಶೋನಲ್ಲಿ ಭಾಗಿಯಾಗಿದ್ದರು. ಆಗ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.   

'ಇಂದಿನ ಸಾಮಾಜಿಕ ಮಾಧ್ಯಮದ ಕಾಲದಲ್ಲಿ ಯಾವುದೇ ಖಾಸಗಿತನವಿಲ್ಲ, ಅದು ನಿಮ್ಮ ಜೀವನವನ್ನು ನಾಶಪಡಿಸುತ್ತದೆ. ಒಂದು ವಾಕ್ಯವನ್ನು 15 ವಿಧಗಳಲ್ಲಿ ಎಡಿಟ್ ಮಾಡಬಹುದು. 15 ವಿಭಿನ್ನ ರೀತಿಯಲ್ಲಿ ಹೊರಬರುತ್ತೆ ಅದು ನಮ್ಮ ಜೀವನವನ್ನು ನಾಶಪಡಿಸುತ್ತದೆ. ಅದು ಅಸಾಧ್ಯವೆಂದು ನಿಮಗೆ ತಿಳಿದಿದೆ. ಹಾಗಾಗಿ ನನಗೆ ಮಾತನಾಡಲು ಭಯವಾಗುತ್ತದೆ' ಎಂದು ಹೇಳಿದ್ದಾರೆ. 

ಇಷ್ಟೆಯಲ್ಲದೇ ನಾವು ಡಿಪ್ಲಮ್ಯಾಟಿಕ್ ಆಗಿ ಒತ್ತಾಯಿಸಲ್ಪಟ್ಟಿದ್ದೇವೆ ಏಕೆಂದರೆ ನಾನು ಮಾಡದ ಯಾವುದೋ ವಿಷಯಕ್ಕಾಗಿ ನನ್ನನ್ನು ಕೇಳಲಾಗುತ್ತೆ. ಯಾರೆಂದು ನನಗೆ ಗೊತ್ತಿಲ್ಲ ಟ್ವಿಟರ್‌ನಲ್ಲಿ ಅಥವಾ ಫೇಸ್‌ಬುಕ್‌ನಲ್ಲಿ, ನನ್ನನ್ನು, ನನ್ನ ಕುಟುಂಬವನ್ನು ನಿಂದಿಸುವುದು, ನನ್ನ ಮಗಳನ್ನು ಬಿ**ಚ್ ಎಂದು ಕರೆಯುವುದು, ನನ್ನ ತಾಯಿಯನ್ನು ಕೆಟ್ಟದಾಗಿ ಕರೆಯುವುದು, ಯಾವುದಕ್ಕಾಗಿ? ನನಗೆ ಅದು ನೋವುಂಟುಮಾಡುತ್ತದೆ' ಎಂದು ಹೇಳಿದ್ದಾರೆ.

ಮಗಳ ಡೇಟಿಂಗ್ ವಿಚಾರ ಗೊತ್ತಾದಾಗ ಅಚ್ಚರಿಯಾಗಿತ್ತು: ರಾಹುಲ್ ಜೊತೆಗಿನ ಮೊದಲ ಭೇಟಿ ಬಿಚ್ಚಿಟ್ಟ ಸುನಿಲ್ ಶೆಟ್ಟಿ

'ನಾನು ಶೆಟ್ಟಿ ಹುಡುಗ ಎಂದು ನಿಮಗೆ ತಿಳಿದಿದೆ. ನಾನು ಎಂದಿಗೂ ಮೌನವಾಗಿರುವುದಿಲ್ಲ. ಇಂದು ಅವರು ಹೇಳುತ್ತಾರೆ, ಅವನು ತನ್ನ ಶಕ್ತಿಯನ್ನು ಬಳಸುತ್ತಿದ್ದಾರೆ. ಇತರ ವ್ಯಕ್ತಿಯು ನನಗೆ ಎಷ್ಟು ಹಾನಿ ಮಾಡಿದ್ದಾನೆ ಮತ್ತು ನನ್ನನ್ನು ನೋಯಿಸಿದ್ದಾನೆಂದು ತಿಳಿದಿರುವುದಿಲ್ಲ' ಎಂದು ಸುನಿಲ್ ಶೆಟ್ಟಿ ಬೇಸರ ಹೊರಹಾಕಿದರು. 

ಸಿನಿಮಾ ವಿಚಾರಕ್ಕೆ ಬರುವುದಾರೆ ಸುನಿಲ್ ಶೆಟ್ಟಿ ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಹಂಟರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸದ್ಯ ಅಕ್ಷಯ್ ಕುಮಾರ್, ಪರೇಶ್ ರಾವಲ್ ಮತ್ತು ಸಂಜಯ್ ದತ್ ಜೊತೆ ಹೇರಾ ಫೆರಿ 3 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 

ಆಥಿಯಾ ಶೆಟ್ಟಿ, ಕೆಎಲ್ ರಾಹುಲ್ ಮದುವೆಯ ದುಬಾರಿ ಗಿಫ್ಟ್‌ ಬಗ್ಗೆ ಸುನೀಲ್ ಶೆಟ್ಟಿ ಹೇಳಿದ್ದೇನು?

ಇನ್ನೂ ಇತ್ತೀಚೆಗಷ್ಟೆ ಸುನಿಲ್ ಶೆಟ್ಟಿ ಮಗಳು ಆತಿಯಾ ಶೆಟ್ಟಿ ಮದುವೆ ನೆರವೇರಿಸಿದರು. ಕ್ರಿಕೆಟಿಗ ಕೆಎಲ್ ರಾಹುಲ್ ಜೊತೆ ಆತಿಯಾ ದಾಂಪತ್ಯಕ್ಕೆ ಕಾಲಿಟ್ಟರು. ಜನವರಿ 23ರಂದು ಇಬ್ಬರೂ ಅದ್ದೂರಿಯಾಗಿ ವಿವಾಹವಾದರು. ವಿವಾಹ ಮಹೋತ್ಸವದಲ್ಲಿ ಅನೇಕ ಗಣ್ಯರು ಮತ್ತು ಆಪ್ತರು ಭಾಗಿಯಾಗಿದ್ದರು. ಸುನಿಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ಇಬ್ಬರೂ ಹಸೆಮಣೆ ಏರಿದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?