ಅಮೃತವರ್ಷಿಣಿ ನಟ ಶರತ್ ಬಾಬು ಸ್ಥಿತಿ ಗಂಭೀರ; ICUನಲ್ಲಿ ಚಿಕಿತ್ಸೆ

Published : Apr 23, 2023, 10:45 AM ISTUpdated : Apr 24, 2023, 04:30 PM IST
ಅಮೃತವರ್ಷಿಣಿ ನಟ ಶರತ್ ಬಾಬು ಸ್ಥಿತಿ ಗಂಭೀರ; ICUನಲ್ಲಿ ಚಿಕಿತ್ಸೆ

ಸಾರಾಂಶ

ಅಮೃತವರ್ಷಿಣಿ ಖ್ಯಾತಿಯ ನಟ ಶರತ್ ಬಾಬು ಸ್ಥಿತಿ ಗಂಭೀರವಾಗಿದ್ದು ICUನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.  

ಕನ್ನಡದ ಅಮೃತವರ್ಷಿಣಿ ಸೇರಿದಂತೆ ದಕ್ಷಿಣ ಭಾರತದ ಅನೇಕ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ಶರತ್ ಬಾಬು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಶರತ್ ಬಾಬು ಅವರನ್ನು ವಾರದ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊಂಚ ಚೇತರಿಸಿಕೊಂಡಿದ್ದ ಶರತ್ ಬಾಬು ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾದ ಕಾರಣ ಹೈದರಾಬಾದ್​ನ ಗಚ್ಚಿಬೌಲಿಯಲ್ಲಿನ ಎಐಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಐಸಿಯುಗೆ ಶಿಫ್ಟ್ ಮಾಡಲಾಗಿದೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರು ಅಥವಾ ಆಸ್ಪತ್ರೆ ವತಿಯಿಂದ ಮತ್ತು ಕುಟುಂಬದವರಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಆಂಧ್ರಪ್ರದೇಶದ ಅಮದಾಲವಲಸದಲ್ಲಿ ಸತ್ಯಂ ಬಾಬು ದೀಕ್ಷಿತುಲು ಎಂಬ ಹೆಸರಿನಿಂದ ಜನಿಸಿದ ಶರತ್ ಬಾಬು 1973 ರಲ್ಲಿ ತೆಲುಗು ಸಿನಿಮಾರಂಗ ಪ್ರವೇಶ ಮಾಡಿದರು.  ಚಿತ್ರರಂಗದಲ್ಲಿ 40 ವರ್ಷಗಳನ್ನು ಪೂರೈಸಿರುವ ಶರತ್ ಬಾಬು 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು ಮತ್ತು ತಮಿಳು ಸಿನಿಮಾರಂಗದಲ್ಲಿ ಜನಪ್ರಿಯ ನಟನಾಗಿರುವ ಶರತ್ ಬಾಬು ನಾಯಕನಾಗಿ ಪೋಷಕ ನಟನಾಗಿ ಕಾಣಿಸಿಕೊಂಡಿದ್ದಾರೆ. ರಜನೀಕಾಂತ್​ ಜೊತೆಗೆ ಮುತ್ತು, ಅರುಣಾಚಲಂ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಶರತ್ ಬಾಬು ನಟಿಸಿದ್ದಾರೆ. 

Summer Health Tips: ಬೇಸಿಗೆಯಲ್ಲಿ ಎಲೆಕ್ಟ್ರೋಲೈಟ್ ವಾಟರ್ ಕುಡೀರಿ ಅನ್ನೋದ್ಯಾಕೆ?

ಕೇವಲ ತಮಿಳು ಮತ್ತು ತೆಲುಗು ಮಾತ್ರವಲ್ಲದೇ ಕನ್ನಡದ ಹಲವು ಸಿನಿಮಾಗಳಲ್ಲಿ ಶರತ್ ಬಾಬು ನಟಿಸಿದ್ದಾರೆ. ತುಳಸಿದಳ, ರಣಚಂಡಿ, ಶಕ್ತಿ, ಕಂಪನ, ಗಾಯ, ಹೃದಯ-ಹೃದಯ, ನೀಲ, ನಮ್ಮೆಜಮಾನ್ರು, ಅಮೃತವರ್ಷಿಣಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.  ಅಮೃತವರ್ಷಿಣಿ ಸಿನಿಮಾದ ಪಾತ್ರವನ್ನು ಕನ್ನಡ ಚಿತ್ರಪ್ರೇಮಿಗಳು ಮರೆಯಲು ಸಾಧ್ಯವೇ ಇಲ್ಲ. ಸಿನಿಮಾ ಮಾತ್ರವಲ್ಲದೇ ಕನ್ನಡದ ಪ್ರೀತಿಗಾಗಿ ಧಾರಾವಾಹಿಯಲ್ಲಿಯೂ ಶರತ್ ಬಾಬು ನಟಿಸಿದ್ದರು. 

ಇತ್ತೀಚೆಗೆ ಶರತ್ ಬಾಬು ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಕೊನೆಯದಾಗಿ ಶರತ್ ಬಾಬು ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 1974ರಲ್ಲಿ ರಮಾ ಪ್ರಭ ಜೊತೆ ವಿವಾಹವಾಗಿದ್ದ ಶರತ್ ಬಾಬು 1988ರಲ್ಲಿ ವಿಚ್ಛೇದನ ಪಡೆದು ದೂರ ಆದರು. ಬಳಿಕ 1990ರಲ್ಲಿ ಸ್ನೇಹ ನಂಬಿಯಾರ್ ಜೊತೆ 2ನೇ ವಿವಾಹವಾದರು. ಆದರೆ 2011ರಲ್ಲಿ ಸ್ನೇಹ ಅವರಿಂದನೂ ದೂರ ಆದರು. ಒಂಟಿಯಾಗಿದ್ದ ಶರತ್ ಬಾಬು ಇತ್ತೀಚೆಗಷ್ಟೆ ಪತ್ರಕರ್ತೆಯೊಬ್ಬರನ್ನು ಮದುವೆಯಾಗಿದ್ದಾರೆ ಎಂಬ ಸುದ್ದಿಯೂ ಇದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?