'ದಂತದ ಬೊಂಬೆ' ಶಾರುಖ್​ ಪುತ್ರಿ ಸುಹಾನಾಳ ದೇಹದ ಯಾವ್ಯಾವ ಭಾಗಕ್ಕೆ ಕತ್ತರಿ ಬಿದ್ದಿದೆ ನೋಡಿ...

By Suchethana D  |  First Published Jan 11, 2025, 1:43 PM IST


'ದಂತದ ಬೊಂಬೆ' ಎಂದೇ ಬಿಂಬಿತ ಆಗಿರೋ ಶಾರುಖ್​ ಪುತ್ರಿ ಸುಹಾನಾ ಖಾನಳ  ದೇಹದ ಯಾವ್ಯಾವ ಭಾಗಕ್ಕೆ ಕತ್ತರಿ ಬಿದ್ದಿದೆ ಗೊತ್ತಾ? 
 


ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್  ಅದ್ಭುತ ನೋಟಕ್ಕಾಗಿ ಆಗಾಗ್ಗೆ ಸುದ್ದಿಯಾಗುತ್ತಾರೆ. ಈ ಸ್ಟಾರ್ ಕಿಡ್ ಇನ್ನೂ ಬಾಲಿವುಡ್‌ಗೆ ಪದಾರ್ಪಣೆ ಮಾಡಿಲ್ಲ, ಆದರೆ  ಜನಪ್ರಿಯತೆಗೆ ಯಾವುದೇ ಕಮ್ಮಿಯಿಲ್ಲ. ನೋಡಿದವರು ಆಹಾ! ದಂತದ ಬೊಂಬೆ ಎನ್ನುತ್ತಾರೆ.  ಸುಹಾನಾ ಖಾನ್​ಗೆ ಈಗ 23 ವರ್ಷ ವಯಸ್ಸು. ಇದಾಗಲೇ ಬಿಕಿನಿ ಡ್ರೆಸ್​ ತೊಟ್ಟು ಭಾರಿ ಸುದ್ದಿಯಾಗಿರೋ ಸುಹಾನಾ ಖಾನ್​  ಮತ್ತು  ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ (Agastya Nanda) ಡೇಟಿಂಗ್ ಮಾಡುತ್ತಿದ್ದಾರೆಯೇ ಎಂಬ ಸುದ್ದಿ ಹಳೆಯದ್ದಾಗಿದೆ. ಅಗಸ್ತ್ಯ ಕೂಡ 23 ವರ್ಷದವನೇ. ಹಾಗೆ ನೋಡಿದರೆ ಸುಹಾನಾ ಅಗಸ್ತ್ಯನಿಂದ ಆರು ತಿಂಗಳು ದೊಡ್ಡವರು. ಸುಹಾನಾ 2000ನೇ ಸಾಲಿನ ಮೇ ತಿಂಗಳಿನಲ್ಲಿ ಹುಟ್ಟಿದ್ದರೆ, ಅಗಸ್ತ್ಯ ಹುಟ್ಟಿರುವುದು ಅದೇ ಸಾಲಿನ ನವೆಂಬರ್​ನಲ್ಲಿ.  

 ಇದೀಗ ಈ ದಂತದ ಬೊಂಬೆ ಸುಹಾನ್​ ಖಾನ್​ ಅವರ ಹಳೆಯ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಇಂದು ಸಿನಿ ತಾರೆಯರನ್ನು ದಂತದ ಬೊಂಬೆ, ಬ್ಯೂಟಿ ಕ್ವೀನ್​, ಆ ದೇವರು ಪುರುಸೊತ್ತಿನಲ್ಲಿ ನಿನ್ನನ್ನು ಕೆತ್ತಿದ್ದಾನೆ... ಹೀಗೆ ಏನೆಲ್ಲಾ ವರ್ಣನೆ ಮಾಡುವುದು ಇದೆ. ಆದರೆ ಅವರ ಈ ಬ್ಯೂಟಿಯ ಹಿಂದೆ ದೇವರ ಕೈವಾಡ ಅಲ್ಲ, ಬದಲಿಗೆ ಪ್ಲಾಸ್ಟಿಕ್​ ಸರ್ಜರಿ ತಜ್ಞರ ಕೈವಾಡ ಇರುವುದೇ ಹೆಚ್ಚು. ಬಹುತೇಕ ನಟಿಯರು ಎಲ್ಲಾ ಭಾಗಗಳಿಗೂ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡವರೇ. ಈ ಬಗ್ಗೆ ಖುದ್ದು ನಟಿ ಕಂಗನಾ ರಣಾವತ್​ ಕೂಡ ಈ ಹಿಂದೆ ಟೀಕಿಸಿದ್ದು ಉಂಟು. ಈ ಪ್ಲಾಸ್ಟಿಕ್​ ಸರ್ಜರಿ ಬ್ಯೂಟಿಯರ ಸಾಲಿಗೆ ಸೇರುವವರು ಶಾರುಖ್​ ಪುತ್ರಿ ಸುಹಾನಾ ಖಾನ್​. 

Tap to resize

Latest Videos

 ನನಗೆ 8 ಮಕ್ಕಳು ಬೇಕಿತ್ತು... ಆದ್ರೆ... ನಟಿ ಪ್ರಿಯಾಂಕಾ ಉಪೇಂದ್ರ ರಿವೀಲ್​ ಮಾಡಿದ ಗುಟ್ಟೇನು?

 ಸುಹಾನಾ ಖಾನ್​  ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದಾರೆ. ಬಿಳಿ ಬಣ್ಣದ ತ್ವಚೆಗಾಗಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ಮೈಬಣ್ಣ ಅಂದಗೊಳಿಸಿಕೊಳ್ಳಲು ಕೆಲವೊಂದು ಚಿಕಿತ್ಸೆ ಮೊರೆ ಹೋಗಿದ್ದಾರೆ. ಬೋಟೊಕ್ಸ್​ ಮತ್ತು ಫಿಲ್ಲರ್ಸ್​  ಇಂಜೆಕ್ಷನ್​ ಚುಚ್ಚಿಸಿಕೊಂಡಿದ್ದಾರೆ. ಬಳಕುವ ಬಳ್ಳಿಯಂತಿರುವ ಸುಹಾನಾ ದೇಹದ ಮೇಲೂ ಹಲವರ ಕಣ್ಣು ಹೋಗಿದ್ದು ಇದೆ. ಆ ಭಾಗಕ್ಕೂ ಈಕೆ ಚಿಕಿತ್ಸೆ ಮಾಡಿಸಿಕೊಂಡಿರಲು ಸಾಕು ಎಂದು ಹೇಳುವುದು ಉಂಟು. ಆದರೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಟ್ಟಿನಲ್ಲಿ ಈ ದಂತದ ಬೊಂಬೆಯ ಹಿಂದಿರುವುದು ಪ್ಲಾಸ್ಟಿಕ್​ ಸರ್ಜರಿ ಕಮಾಲ್​ ಎನ್ನುವುದು ಅಂತೂ ದಿಟ ಆಗಿದೆ. 

 ಅಂದಹಾಗೆ ಅಗಸ್ತ್ಯ, ಅಮಿತಾಭ್​ ಬಚ್ಚನ್ ಅವರ ಮಗಳು ಶ್ವೇತಾ ಬಚ್ಚನ್ ಅವರ ಮಗ. ತಾನಿಯಾ ಶ್ರಾಫ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ  ಹಲವು ಸ್ಟಾರ್ಸ್​ ಹಾಗೂ ಸ್ಟಾರ್​ ಕಿಡ್​ಗಳು ಆಗಮಿಸಿದ್ದರು. ಆರ್ಯನ್ ಖಾನ್, ಸಂಜಯ್ ಕಪೂರ್, ಮಹೀಪ್ ಕಪೂರ್ ಅವರ ಪುತ್ರಿ ಶನಾಯಾ ಕಪೂರ್ ಕೂಡ ಭಾಗಿಯಾಗಿದ್ದರು. ವರುಣ್ ಧವನ್ ಅವರ ಸೊಸೆ ಅಂಜಿನಿ ಧವನ್, ಬೋನಿ ಕಪೂರ್ ಮತ್ತು ಶ್ರೀದೇವಿ ಪುತ್ರಿ ಖುಷಿ ಕಪೂರ್ ಕೂಡ ಭಾಗಿಯಾಗಿದ್ದರು. ಆದರೆ ಈಗ ಬಚ್ಚನ್ ಮತ್ತು ಶಾರುಖ್  ಕುಟುಂಬಗಳು ಸಿನಿಮಾದಲ್ಲಿ ಮಾತ್ರವಲ್ಲದೇ ಜೀವನದಲ್ಲೂ ಸಂಬಂಧಿಗಳಾಗ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ಈ ಎರಡು ಫ್ಯಾಮಿಲಿ ಮಕ್ಕಳು ಇದೀಗ ಪ್ರೀತಿಯಲ್ಲಿ ಬಿದ್ದಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.

ಅರಿಶಿಣ ಶಾಸ್ತ್ರವೋ, ಮೊದಲ ರಾತ್ರಿಯೊ? ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸಿದ ನಟ ಅನುರಾಗ್​ ಕಶ್ಯಪ್​ ಪುತ್ರಿ ವಿಡಿಯೋ!

click me!